January 11, 2026

ಎರಡು ವರ್ಷದ ಪುಟಾಣಿ ಆರ್ಯನ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ

ಎರಡು ವರ್ಷದ ಪುಟಾಣಿ ಆರ್ಯನ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾ.ಪಂ. ವ್ಯಾಪ್ತಿಯ ನಾಗರಹಳ್ಳಿಯ ಒಂದು ವರ್ಷದ ಹನ್ನೊಂದು ತಿಂಗಳಿನ ಪುಟಾಣಿ ಆರ್ಯನ್ ಇಂಡಿಯಾ ಬುಕ್ ಆಫ಼್ ರೆಕಾರ್ಡ್ ಗೆ ಸೇರ್ಪಡೆಯಾಗಿದ್ದಾನೆ.

ಹುಂಚ ಗ್ರಾಪಂ ನ ನಾಗರಹಳ್ಳಿ ನಿವಾಸಿ ಚೇತನ್ ಕುಮಾರ್ ಮತ್ತು ದಿವ್ಯ ಅವರ ಪುತ್ರ 1.11 ವರ್ಷದ ಪುಟಾಣಿ ಆರ್ಯನ್ ಎನ್.ಸಿ. 38 ವಿವಿಧ ಬಗೆಯ ವಿಷಯಗಳನ್ನು ಗುರುತಿಸಿ ಜ್ಞಾಪಕ ಶಕ್ತಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ ಆಗಿದ್ದಾನೆ.

25 ತರಕಾರಿಗಳನ್ನು ಗುರುತಿಸುತ್ತಾನೆ. 8 ಗ್ರಹಗಳು, 23 ದೇಶಗಳ ಧ್ವಜಗಳು 11 ಬಣ್ಣಗಳು, 21 ವೃತ್ತಿಪರರು, 8 ಕೀಟಗಳು, 8 ಪುಸ್ತಕಗಳು, 9 ಸಮುದ್ರ ಪ್ರಾಣಿಗಳು, 10 ಸಂಗೀತ ವಾದ್ಯಗಳು, 24 ಕಾರು ಲೋಗೋಗಳು, 11 ದೇಹದ ಆಂತರಿಕ ಭಾಗಗಳು, 24 ಸ್ವಾತಂತ್ರ್ಯ ಹೋರಾಟಗಾರರು, 25 ಹಣ್ಣು, 30 ವಾಹನಗಳು, 7 ದೇವತೆಗಳು, 14 ಗಣಿತ ಚಿಹ್ನೆಗಳು ಹೀಗೆ 38 ವಿವಿಧ ಬಗೆಯ ವಿಷಯಗಳನ್ನು ಗುರುತಿಸಿ ಅದನ್ನೂ ಹೇಳುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ದಾಖಲೆ ಮಾಡಿ ವಿಶಿಷ್ಟವಾದ ಕಿರಿಯ ಮಗು ಅನ್ನೋ ಸಾಧನೆ ಮಾಡಿ ಐಬಿಆರ್ ಸಾಧಕ ಬಿರುದು ಪಡೆದಿದ್ದಾನೆ‌.

About The Author

Leave a Reply

Your email address will not be published. Required fields are marked *