Shivamogga | 76 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢ
ಶಿವಮೊಗ್ಗ: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಂಗಳೂರಿನ ಗಾಂಧಿನಗರದ ವ್ಯಕ್ತಿಯೊರ್ವಲ್ಲಿ ಕೋವಿಡ್ ಪತ್ತೆಯಾಗಿದ್ದು, ಇದರ ಬೆನ್ನಲ್ಲೇ ಹಾವೇರಿಯಲ್ಲಿಯೂ ವ್ಯಕ್ತಿಯೋರ್ವರಲ್ಲಿ ಸೋಂಕು ದೃಢಪಟ್ಟಿದೆ.
ಹಾವೇರಿಯ 76 ವರ್ಷದ ವೃದ್ಧರೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಸೋಂಕಿತ ವ್ಯಕ್ತಿ ಮೇ 19ರಂದು ಹೃದಯಸಂಬಂಧಿ ಕಾಯಿಲೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದ ಅವರು ಮೇ 25ರಂದು ಮನೆಗೆ ಹಿಂತಿರುಗಿದ್ದರು.
ಬಳಿಕ ಅವರು ತೀವ್ರ ಕಫದಿಂದ ಬಳಲುತ್ತಿದ್ದರು. ಈ ವೇಳೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ವರದಿಯಲ್ಲಿ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಹಾವೇರಿ ಡಿಹೆಚ್ ಒ ಈ ಪ್ರಕರಣವನ್ನು ಸೂಚಿಸಿದ್ದಾರೆ. ವ್ಯಕ್ತಿ ಹಾವೇರಿ ಜಿಲ್ಲೆಯವರಾಗಿದ್ದರೂ ಅವರಿಗೆ ಕೋವಿಡ್ ಪತ್ತೆಯಾಗಿದ್ದು ಶಿವಮೊಗ್ಗದಲ್ಲಿ ಎನ್ನಲಾಗಿದೆ. ಸದ್ಯ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ಹೆಚ್ಚಳ : ಶಾಲಾ ಮಕ್ಕಳಿಗೆ ರಜೆ ಕೊಡಲು ಸಿಎಂ ಸೂಚನೆ
ದಿನೇ ದಿನೇ ಕೊರೊನಾ ಪ್ರಕರಣಗಳು ಏರಿಕೆಯಾಗ್ತಾ ಇದಾವೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿಯೇ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜನರಲ್ಲಿ ಆತಂಕ ಕೀಡ ಜಾಸ್ತಿಯಾಗಿದೆ. ಅತ್ತ ಸರ್ಕಾರದಿಂದ ಮುಂಜಾಗ್ರತ ಕ್ರಮದ ಬಗ್ಗೆ ಕಾಳಜಿ ಕೂಡ ವಹಿಸಲಾಗಿದೆ. ಜಾಗೃತಿಯನ್ನು ಮೂಡಿಸಲಾಗಿದೆ.
ಕೊರೊನಾ ವೈರಸ್ ವಿಚಾರಕ್ಕೆ ಹೊಸ ಆದೇಶವನ್ನು ಹೊರಡಿಸಿದ್ದಾರೆ. ಈಗಾಗಲೇ ಶಾಲೆಗಳು ಆರಂಭಗೊಂಡಿವೆ. ಮೇ ಅಂತ್ಯದ ವೇಳೆಗೆ ರೆಗ್ಯುಲರ್ ಆಗಲಿವೆ. ಇದೇ ಸಮಯದಲ್ಲಿ ಹೀಗೆ ಕೊರೊನಾ ಜಾಸ್ತಿಯಾಗ್ತಾ ಇರೋದಕ್ಕೆ ಪೋಷಕರು ಆತಂಕಗೊಂಡಿದ್ದಾರೆ. ಯಾಕಂದ್ರೆ ಈ ಕೊರೊನಾ ವೈರಸ್ ಹೆಚ್ಚು ಕಾಡುವುದೇ ಮಕ್ಕಳನ್ನು. ಹೀಗಾಗಿ ಶಾಲೆಗೆ ಬರುವ ಮಕ್ಕಳಲ್ಲಿ ಜ್ವರ, ನೆಗಡಿಯಂತಹ ರೋಗ ಲಕ್ಷಣಗಳು ಕಂಡು ಬಂದರೆ ಅಂಥಹ ಮಕ್ಕಳಿಗೆ ಸ್ವಲ್ಪ ದಿನ ರಜೆ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಶಾಲಾ ಮಕ್ಕಳ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಕೆಮ್ಮು, ಜ್ಚರ, ನೆಗಡಿ ಇರುವ ಮಕ್ಕಳನ್ನ ಶಾಲೆಗಳಿಗೆ ಪೋಷಕರು ಕಳುಹಿಸಬಾರದು. ಈ ವೇಳೆ ಮನೆಯಲ್ಲೇ ಮಕ್ಕಳನ್ನ ಉಳಿಸಿಕೊಳ್ಳಬೇಕು. ಜೊತೆಗೆ ವಿದ್ಯಾಸಂಸ್ಥೆಗಳು ಕೂಡ ಮಕ್ಕಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದ್ದಾರೆ. ಈಗಾಗಲೇ ಲಸಿಕೆಗೆ ಸಂಬಂಧಿಸಿದಂತೆ ಕೇಂಧರ ಸರ್ಕಾರದ ಬಳಿಯೂ ದಿನೇಶ್ ಗುಂಡೂರಾವ್ ಅವರು ಚರ್ಚೆ ನಡೆಸಿದ್ದಾರೆ. ಆದರೆ ಸದ್ಯಕ್ಕೆ ಲಸಿಕೆ ಇಲ್ಲ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಜನರೇ ಮುಂಜಾಗ್ರತೆ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ.