ಬುಲೆಟ್ ಬೈಕ್ ನಲ್ಲಿ ಅವಿತು ಕುಳಿತ ಬುಸ್ ಬುಸ್ ನಾಗಪ್ಪ|snake
ಶಿವಮೊಗ್ಗದ ದುರ್ಗಿಗುಡಿ ಸಮೀಪ ಇರುವ ವೈಭವಲಕ್ಷ್ಮೀ ವೈನ್ ಸ್ಟೋರ್ ಬಳಿಯಲ್ಲಿ ನಾಗರಹಾವೊಂದು ಕಾಣಿಸಿಕೊಂಡಿತ್ತು ಇಲ್ಲಿನ , ದಿ ಫ್ಯಾಕ್ಟರಿ ಔಟ್ ಲೆಟ್ ಬಳಿ ನಿಲ್ಲಿಸಲಾಗಿದ್ದ ಬುಲೆಟ್ವೊಂದರಲ್ಲಿ ನಾಗರ ಹಾವೊಂದು ಸೇರಿಕೊಂಡಿತ್ತು. ನೋಡನೋಡುತ್ತಿದ್ದಂತೆ ಬುಲೆಟ್ನ ಹೆಡ್ಲೈಟ್ವೊಳಗೆ ಸೇರಿಕೊಂಡಿದ್ದ ನಾಗರ ಹಾವನ್ನ ನೋಡಿದ ಜನರು ಸ್ನೇಕ್ ಕಿರಣ್ ಗೆ ಫೋನಾಯಿಸಿದ್ದಾರೆ. ತಕ್ಷಣ ಅವರು ಸಹ ಸ್ಥಳಕ್ಕೆ ಬಂದಿದ್ಧಾರೆ. ಹೆಡ್ಲೈಟ್ ಬಿಚ್ಚಿ ಹಾವನ್ನ ಹಿಡಿಯಬೇಕು ಎನ್ನುವಷ್ಟರಲ್ಲಿ ಹೆಡ್ಲೈಟ್ ಮೇಲೆ ಬಂದು, ಹೆಡೆಯೆತ್ತಿದ ನಾಗರಾಜ ಸುತ್ತಮುತ್ತ ನೋಡುತ್ತಾ ಬುಸುಗುಡಲು ಆರಂಭಿಸಿದ್ದ. ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ…