w
Headlines
Home » ಗಾಂಜಾ ಮಾರಾಟ ಮಾಡಲು ಬೈಕ್ ಕಳ್ಳತನಗೈದಿದ್ದ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು

ಗಾಂಜಾ ಮಾರಾಟ ಮಾಡಲು ಬೈಕ್ ಕಳ್ಳತನಗೈದಿದ್ದ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು

GridArt 20250216 222006508.jpg

ಗಾಂಜಾ ಮಾರಾಟ ಮಾಡಲು ಬೈಕ್ ಕಳ್ಳತನಗೈದಿದ್ದ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು

ಬಂಕಾಪುರ : ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ನ್ನು ಕಳ್ಳತನಗೈದು ಗಾಂಜಾ ಮಾರಾಟ ಮಾಡುತಿದ್ದ ಮೂವರು ಆರೋಪಿಗಳನ್ನು ಒಂದೇ ದಿನದಲ್ಲಿ ಹೆಡೆಮುರಿ ಕಟ್ಟುವಲ್ಲಿ ಬಂಕಾಪುರ ಪಿಎಸ್‌ಐ ನಿಂಗರಾಜ್ ಕೆ ವೈ ನೇತೃತ್ವದ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಕಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 15-02-2025 ರಂದು ಮೊಹ್ಮದ್ ಅಕ್ಬರ್ ಎಂಬುವವರು ತಮ್ಮ ಮನೆಯ ಮುಂದೆ ನಿಲ್ಲಿಸಿದ ಬಜಾಜ್ ಪ್ಲಾಟಿನಾ ಬೈಕ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ದೂರು ದಾಖಲಾಗಿತ್ತು.

ಕಳ್ಳತನ ಮಾಡಿಕೊಂಡು ಹೋದ ಆರೋಪಿಗಳ ಪತ್ತೆ ಮಾಡಲು ಎಸ್ ಪಿ ಡಾ: ಅಂಶುಕುಮಾರ ಐ.ಪಿ.ಎಸ್ ಮಾರ್ಗದರ್ಶನದಲ್ಲಿ  ನಿಂಗರಾಜ ಕರಕಣ್ಣನವರ, ಎಸ್ ಎಮ್ ವನಹಳ್ಳಿ ಪಿಐಎಸ್‌ಗಳ ನೇತೃತ್ವದಲ್ಲಿ ತಂಡವು ಮೊಟರ್ ಸೈಕಲ್ ಕಳ್ಳತನ ಮಾಡಿದ ಆರೋಪಿತರ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿತ್ತು.

ದಿನಾಂಕ:16-02-2025 ರಂದು ಪ್ರಕರಣದ ತನಿಖೆ ಕೈಕೊಂಡು ಬಂಕಾಪೂರ ಟೋಲ್ ಗೇಟ್ ಹತ್ತಿರ ಹಾವೇರಿ ಕಡೆಯಿಂದ ಟಾಟಾ ಏಸ್ ವಾಹನದಲ್ಲಿ ಬೈಕ್ ಒಂದನ್ನು ಹೇರಿಕೊಂಡು ಹೊರಟಿದ್ದನ್ನು ತನಿಖೆ ಒಳಪಡಿಸಿದಾಗ ಬೈಕ್ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡ ಆರೋಪಿಗಳಾದ ಸಿದ್ದೇಶ್ ,  ಪವನಕುಮಾರ , ವಿರೇಶ್ , ಬಸಪ್ಪ ರವರನ್ನು ದಸ್ತಗೀರ ಮಾಡಿ ವಿಚಾರಣೆ ಮಾಡುವಾಗ ಕಳ್ಳತನ ಮಾಡಿದ ಮೋಟಾರ್ ಸೈಕಲ್‌ ನ್ನು ಅಕ್ರಮ ಗಾಂಜಾ ಮಾರಾಟ ಮಾಡಲು ತೆಗೆದುಕೊಂಡು ಹೊರಟ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ಆರೋಪಿತರು ಕಳ್ಳತನಕ್ಕೆ ಉಪಯೋಗಿಸಿದ ಒಂದು ಟಾಟಾ ಏಸ್ ವಾಹನ ಕೆಎ27 ಸಿ 7439 , ಕಳ್ಳತನ ಮಾಡಿದ ಮೋಟರ್ ಸೈಕಲ್ , 02 ಮೊಬೈಲ್ ಪೋನಗಳು ,ನಗದು 1000/- ರೂಗಳು , ಒಟ್ಟು 353 ಗ್ರಾಂ ಅಕ್ರಮ ಗಾಂಜಾ ಒಟ್ಟು 446500/- ರೂಗಳ ವಸ್ತುಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡು ಆರೋಪಿತರಿಗೆ ನ್ಯಾಯಾಂಗದ ಬಂಧನಕ್ಕೆ ಹಾಜರು ಪಡಿಸಲಾಗಿದೆ.

ಈ ಪ್ರಕರಣದಲ್ಲಿ ವಿಶೇಷ ಕಾರ್ಯಾಚರಣೆ ಕೈಕೊಂಡ ಪತ್ತೆ ಮಾಡಿ ಒಂದೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ ಪಿಎಸ್‌ಐ ನಿಂಗರಾಜ್ ಕೆ ವೈ ಪಿಎಸ್‌ಐ2 ಎಸ್ ಎಮ್ ವನಹಳ್ಳಿ ಹಾಗೂ ಪತ್ತೆ ಕಾರ್ಯದಲ್ಲಿ ತೊಡಗಿದ ತಂಡದ ರಜನಿ ಮಎಎಸ್‌ಐ, 2]  ಎ ಕೆ ನದಾಪ, ಹೆಡ್ ಕಾನಸ್ಟೆಬಲ್, ಹಾಗೂ ಕಾನಸ್ಟೆಬಲ್‌ಗಳಾದ ವೆಂಕಟೇಶ ಲಮಾಣಿ, ಗೊವಿಂದ ಲಮಾಣಿ, ಕರಬಸಪ್ಪ ಹಾವಣಗಿ , ಜಬೀವುಲಾ ದೊಡ್ಡಮನಿ, ನೇದವರಿಗೆ ಮಾನ್ಯ ಪೊಲೀಸ ಅಧೀಕ್ಷಕರು ಹಾವೇರಿ ಜಿಲ್ಲೆ ರವರು ಪ್ರಕರಣದಲ್ಲಿ ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.