ಮಹಿಳೆಯೊಬ್ಬರ ಮೊಬೈಲ್ ಗೆ ಅಶ್ಲೀಲ ಚಿತ್ರ ರವಾನೆ ಮಾಡಿದ ಆರೋಪಿಯನ್ನು ಬಂಧಿಸಿದ ರಿಪ್ಪನ್‌ಪೇಟೆ ಪೊಲೀಸರು :
ರಿಪ್ಪನ್‌ಪೇಟೆಯ ಮಹಿಳೆಯೋರ್ವರ ಮೊಬೈಲ್ ಗೆ ಅಶ್ಲೀಲ ವಿಡಿಯೋ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಪ್ರಕರಣದ ಆರೋಪಿಯ ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ರಿಪ್ಪನ್‌ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ದೇವಳ್ಳಿ ಗ್ರಾಮದ ಬಾಬು ಬೈರುಗವಳಿ ಬಿನ್ ಬೈರುಗವಳಿ ಎಂಬ (22) ವರ್ಷದ ಆರೋಪಿಯನ್ನು ರಿಪ್ಪನ್‌ಪೇಟೆ ಪಿಎಸ್ ಐ ಶಿವಾನಂದ ಕೋಳಿ ನೇತ್ರತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಿಪ್ಪನ್‌ಪೇಟೆಯ ಗವಟೂರು ಗ್ರಾಮದ ನಿವಾಸಿಯಾಗಿರುವ ಮಹಿಳೆಯೊಬ್ಬರ ಮೊಬೈಲ್ ಗೆ ಮೇ.10 ರಂದು ಅಶ್ಲೀಲ ವಿಡಿಯೋಗಳನ್ನ ಎರಡು ಅಪರಿಚಿತ…