ಹರತಾಳು ಗ್ರಾಪಂ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿ ಉಪಾಧ್ಯಕ್ಷೆ ಸೇರಿದಂತೆ 7 ಜನ ಸದಸ್ಯರು ಕೆಡಿಪಿ ಸಭೆಗೆ ಗೈರು :

ಹರತಾಳು ಗ್ರಾಮ ಪಂಚಾಯ್ತಿಯಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಗ್ರಾಪಂ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿ ಉಪಾಧ್ಯಕ್ಷರು ಮತ್ತು 6 ಜನ ಸದಸ್ಯರು ಗೈರಾಗಿದ್ದರು.

8 ಸದಸ್ಯ ಬಲದ ಹರತಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಲ್ಲಿ ಯೋಗೇಂದ್ರಪ್ಪ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಹಮ್ಮಿಕೊಳ್ಳಲಾಗಿತ್ತು 

ಅಧ್ಯಕ್ಷರಾದ ಕಲ್ಲಿ ಯೋಗೇಂದ್ರಪ್ಪ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ವಸತಿ ಮನೆ ಹಂಚಿಕೆಯಲ್ಲಿ ತಾರತಮ್ಯ ಮಾಡುವ ಮೂಲಕ ಸದಸ್ಯ ಸ್ಥಾನಕ್ಕೆ ಹಕ್ಕು ಚ್ಯುತಿ ತರುವ ಪ್ರಯತ್ನ ಮಾಡಿದ್ದಾರೆ .ನರೇಗಾ ಯೋಜನೆ ಮತ್ತು ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ ಅಲ್ಲದೆ ಕೆಡಿಪಿ ಸಭೆ ನಿಗದಿ ಪಡಿಸುವ ಸಂಬಂಧ ಮುಂಚಿತವಾಗಿ ಸಾಮಾನ್ಯ ಸಭೆಯಲ್ಲಿ ಚರ್ಚಿಸದೆ ಏಕಾಏಕಿ ಸಭೆ ಗೊತ್ತು ಮಾಡಿದ್ದಾರೆ ಎಂದು ಸದಸ್ಯರು ಆರೋಪಿಸಿ ಸಭೆಗೆ ಗೈರಾಗಿದ್ದಾರೆ.

8ಸದಸ್ಯ ಬಲದ ಹರತಾಳು ಗ್ರಾಮ ಪಂಚಾಯಿತಿನಲ್ಲಿ 5 ಜನ ಹೊಸ ಸದಸ್ಯರಿದ್ದಾರೆ. ಸದಸ್ಯರಿಗೆ ಕೆಡಿಪಿ ಸಭೆ ಸೇರಿದಂತೆ ಗ್ರಾಮ ಪಂಚಾಯಿತಿ ಕಾರ್ಯವೈಖರಿ ಇನ್ನಷ್ಟೆ ತಿಳಿಯಬೇಕಿದೆ. ಕೆಡಿಪಿ ಸಭೆಯಲ್ಲಿ ಯಾರು ಭಾಗವಹಿಸುತ್ತಾರೆ ? ನಮ್ಮ ವಾರ್ಡ್ ನ ಕುಂದುಕೊರತೆ ಏನು? ಯಾವ ಕುಂದುಕೊರತೆಯನ್ನು ಸಭೆಯಲ್ಲಿ ಪ್ರಸ್ತಾಪಿಸಬಹುದು ? ಈ ಎಲ್ಲದರ ಬಗ್ಗೆ ಮುಂಚಿತವಾಗಿ ಚರ್ಚಿಸಬೇಕಿತ್ತು ಆದರೆ ಅಧ್ಯಕ್ಷರು ಅದಕ್ಕೆ ಅವಕಾಶ ನೀಡಿಲ್ಲ ಸದಸ್ಯರಿಗೆ ಗೌರವ ಸಿಗದ ಹಿನ್ನಲೆಯಲ್ಲಿ ಗೈರಾಗಿದ್ದೇವೆ ಎಂದು ಸದಸ್ಯರು ಸ್ಪಷ್ಟಪಡಿಸಿದ್ದಾರೆ.


ಅಧ್ಯಕ್ಷರಾದ ಕಲ್ಲಿ ಯೋಗೇಂದ್ರಪ್ಪ, ಪಿಡಿಒ ಚೇತನ್ ದೇವಾಂಗ, ಸಿಡಿಪಿಒ ನಸೀಮಾಬಾನು, ತೋಟಗಾರಿಕೆ ಅಧಿಕಾರಿ ಚಂದ್ರಶೇಖರ್, ಕೃಷಿ ಅಧಿಕಾರಿ ಸೈಯದ್, ಗ್ರಾಮಲೆಕ್ಕಾಧಿಕಾರಿ ಶೋಭಾ, ಸಿಆರ್ ಪಿ ಸುಧಾಕರ್ ಸಭೆಯಲ್ಲಿ ಭಾಗವಹಿಸಿದ್ದರು.

8 ಸದಸ್ಯ ಬಲ ಇರುವ ಹರತಾಳು ಗ್ರಾಪಂ ನಲ್ಲಿ ಉಪಾಧ್ಯಕ್ಷೆ ನಾಗರತ್ನ ವಾಸುದೇವ, ಸದಸ್ಯರಾದ ಸಾಕಮ್ಮ ಮನೋಹರ್, ನಾರಿ ರವಿ, ಕಣಕಿ ನಾರಾಯಣಪ್ಪ, ಪ್ರೇಮ ಪುರುಷೋತ್ತಮ, ಸತ್ಯವತಿ ಚಂದ್ರಪ್ಪ, ಶಿವಮೂರ್ತಿ ಗೈರಾಗಿದ್ದರು.


                                                                                                                   ರವಿ. ಹರತಾಳು ಗ್ರಾಪಂ ಸದಸ್ಯ

Leave a Reply

Your email address will not be published. Required fields are marked *