Ripponpete | ಭಾರಿ ಗಾಳಿ ಮಳೆಗೆ ಕೊಟ್ಟಿಗೆ ಕುಸಿದು ಎಮ್ಮೆ ಸಾವು

Ripponpete | ಭಾರಿ ಗಾಳಿ ಮಳೆಗೆ ಕೊಟ್ಟಿಗೆ ಕುಸಿದು ಎಮ್ಮೆ ಸಾವು  ಭಾರಿ ಮಳೆ ಮತ್ತು ಗಾಳಿಗೆ ಜಾನುವಾರು ಕೊಟ್ಟಿಗೆ ಕುಸಿದು ಬಿದ್ದು ಒಂದು ಎಮ್ಮೆ ಸಾವನ್ನಪ್ಪಿ ಇನ್ನೆರಡು ಎಮ್ಮೆಗಳಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಕೆರೆಹಳ್ಳಿಯಲ್ಲಿ ನಡೆದಿದೆ.  ಕೆರೆಹಳ್ಳಿ ಗ್ರಾಮದ ಶಿವಾಜಿರಾವ್ ಎಂಬುವವರ ಮನೆಯ ಹಿಂಭಾಗದ ಕೊಟ್ಟಿಗೆ ಭಾರಿ ಮಳೆ ಗಾಳಿಗೆ ಕುಸಿದು ಬಿದ್ದು ಎಮ್ಮೆಯೊಂದು ಸಾವನ್ನಪೊಇರುವ ಘಟನೆ ನಡೆದಿದೆ.  ಶನಿವಾರ ಬೆಳಗಿನಜಾವ ನಾಲ್ಕು ಗಂಟೆಗೆ ಈ ಘಟನೆ ಸಂಭವಿಸಿದ್ದು…

Read More

ಕೇಂದ್ರ ಗೃಹ ಸಚಿವರಿಗೆ ಶಿವಮೊಗ್ಗದಿಂದ ‘ಬಳೆ’ ಪೋಸ್ಟ್‌ ಮಾಡಿದ ಮಹಿಳೆಯರು

ಕೇಂದ್ರ ಗೃಹ ಸಚಿವರಿಗೆ ಶಿವಮೊಗ್ಗದಿಂದ ‘ಬಳೆ’ ಪೋಸ್ಟ್‌ ಮಾಡಿದ ಮಹಿಳೆಯರು ಶಿವಮೊಗ್ಗ: ದೇಶದಲ್ಲಿ ಪದೇ ಪದೆ ದಾಳಿಯಾಗುತ್ತಿದ್ದರೂ ಉಗ್ರರ ಅಟ್ಟಹಾಸ ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಷಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಅಂಚೆ ಕಚೇರಿ ಮುಂಭಾಗ ನಗರ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 2019ರಲ್ಲಿ 800 ಕೆ.ಜಿ ಸ್ಪೋಟಕ ಹೊತ್ತು ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ಪುಲ್ವಾಮಾದಲ್ಲಿ ದಾಳಿಯಾಗಿತ್ತು. 2025ರಲ್ಲಿ ಕಾಶ್ಮೀರದಲ್ಲಿ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ 26 ನಾಗರಿಕರ ಹತ್ಯೆ ಮಾಡಲಾಗಿತ್ತು….

Read More

ರಿಪ್ಪನ್ ಪೇಟೆಯ ರಿಂಗ್ ಸುಧಾಕರ್ ಹೃದಯಾಘಾತದಿಂದ ನಿಧನ.

ರಿಪ್ಪನ್ ಪೇಟೆ : ಪಟ್ಟಣ ಸೇರಿದಂತೆ ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ  ಕಳೆದ ಕೆಲವು ದಶಕಗಳಿಂದ ರಿಂಗ್ ಬಾವಿ ನಿರ್ಮಾಣದಿಂದ ಖ್ಯಾತರಾಗಿದ್ದ ರಿಂಗ್ ಸುಧಾಕರ್ ರವರು ಇಂದು ಮಧ್ಯಾಹ್ನ ಕೇರಳದ ಕೊಲ್ಲಂ ಜಿಲ್ಲೆಯ ಅವರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇರಳ ಮೂಲದ ರಿಂಗ್ ಸುಧಾಕರ್ ಅವರು ಮೂರು ದಶಕಗಳಿಂದ ರಿಪ್ಪನ್  ಪೇಟೆಯಲ್ಲಿ ನೆಲೆ ನಿಂತು ರಿಂಗ್ ಬಾವಿ ನಿರ್ಮಾಣ ಮಾಡುವುದರ ಮೂಲಕ ರಿಂಗ್ ಸುಧಾಕರ ಎಂದು ಜನಪ್ರಿಯರಾಗಿದ್ದರು. ವಿವಿಧ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದ ಅವರು ವಿವಿಧ ಸಂಘ ಸಂಸ್ಥೆಗಳಿಗೆ…

Read More

ತಮ್ಮ ಕಾರ್ಯಕ್ಷೇತ್ರದ ಅಭಿವೃದ್ಧಿಗೆ ಸೇವಾ ಪ್ರೀತಿಯಿಂದ ಸೇವಾ ಪ್ರತಿನಿಧಿಯಾಗಿ ಹೊರ ಹೊಮ್ಮಬೇಕು : ಡಾ. ಡಿ ವೀರೇಂದ್ರ ಹೆಗ್ಗಡೆ

ಹುಂಚ : ತಮ್ಮ ಕಾರ್ಯಕ್ಷೇತ್ರದ ಅಭಿವದ್ಧಿಗೆ ಸೇವಾ ಪ್ರೀತಿಯಿಂದ ಸೇವಾ ಪ್ರತಿನಿಧಿಯಾಗಿ ಹೊರಹೊಮ್ಮಬೇಕು ಎಂದು ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು. ಹುಂಚ ಗ್ರಾಮದಲ್ಲಿ ಹೊಸನಗರ ತಾಲ್ಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾರ್ಗದರ್ಶನ ನೀಡಿದ ಅವರು ಹೊಸನಗರ ತಾಲ್ಲೂಕಿನಲ್ಲಿ ಬಡವರ ಆರ್ಥಿಕ ಅಭಿವೃದ್ಧಿಗೆ ಯೋಜನೆಯ ಮುಖೇನ ಸ್ವಸಹಾಯ ಸಂಘದ ಚಳುವಳಿ ಬಹಳ ಅರ್ಥಪೂರ್ಣವಾಗಿ ಸಾಗುತ್ತಿದೆ ಇದರೊಂದಿಗೆ ಈ ಭಾಗದ ಕೃಷಿ ಮತ್ತು ಕೃಷಿಯೇತರ…

Read More

ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು, ಆಕೆಯ ಮೃತದೇಹದ ಮೇಲೆ ನಿಂತು ನೇಣಿಗೆ ಶರಣಾದ ತಾಯಿ

ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು, ಆಕೆಯ ಮೃತದೇಹದ ಮೇಲೆ ನಿಂತು ನೇಣಿಗೆ ಶರಣಾದ ತಾಯಿ ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆಯ ನರ್ಸಿಂಗ್ ಕ್ವಾಟ್ರಸ್‌ನಲ್ಲಿ ನಡೆದ ದಾರುಣ ಘಟನೆ ಮಲೆನಾಡನ್ನು ಬೆಚ್ಚಿಬೀಳಿಸುವಂತಿದೆ.ಹೌದು ಸ್ವಂತ ತಾಯಿಯೇ ತನ್ನ ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆರನೇ ತರಗತಿಯಲ್ಲಿ ಓದುತ್ತಿದ್ದ ಪುತ್ರಿ ಪೂರ್ವಿಕಾಳ(12) ತಲೆಗೆ ತಾಯಿ ಶೃತಿ (38) ಮಚ್ಚಿನಿಂದ ಹೊಡೆದು ಕೊಲೆಮಾಡಿದ್ದಾರೆ. ಬಳಿಕ ಮಗಳ ಶವವನ್ನು ಪ್ಯಾನ್ ಕೆಳಗೆ ಎಳೆದು ತಂದು…

Read More

ಹೊಸನಗರ : ಮೇಯಲು ಹೋದ ಹಸುವಿನ ಕಾಲು ಕಡಿದ ದುಷ್ಕರ್ಮಿಗಳು – ದೂರು ದಾಖಲು|hosanagara

ಹೊಸನಗರ ತಾಲೂಕಿನ ನಿಟ್ಟೂರಿನ ಗೌರಿಕೆರೆ  ಬಳಿಯಲ್ಲಿ ಹಸುವೊಂದರ ಕಾಲನ್ನು ಕಡಿದು ಹಾಕಿರುವ ಬಗ್ಗೆ ವರದಿಯಾಗಿದೆ.  ದುಷ್ಕರ್ಮಿಗಳ ಕೃತ್ಯ ಇದಾಗಿದ್ದು, ಸಿಡ್ಲಕುಣಿ ಸುಭಾಷ್ ಎಂಬುವವರಿಗೆ ಸೇರಿದ ಹಸುವು ಕಾಲಿಗೆ ಕತ್ತಿಯಿಂದ ಏಟು ತಿಂದು ನಡೆಯಲಾಗದೇ ನರಳಾಡುತ್ತಿದೆ. ಘಟನೆಯಲ್ಲಿ ಕಾಲಿನ ನರ ಕಟ್ ಆಗಿದ್ದರಿಂದ ದನ ನೆಲದಿಂದ ಏಳುತ್ತಿಲ್ಲ.  ಮಲೆನಾಡಲ್ಲಿ ರಾಸುಗಳನ್ನ ಬೆಳಗ್ಗೆ ಹೊರಗೆ ಅಟ್ಟಲಾಗುತ್ತದೆ. ಅವುಗಳು ಮೇವು ಮುಗಿಸಿ ಸಂಜೆ ಮನೆಗಳಿಗೆ ವಾಪಸ್ ಆಗುತ್ತವೆ.ಸಂಜೆಯಾದರು ಹಸು ಹಟ್ಟಿಗೆ ವಾಪಾಸು ಬರದ ಹಿನ್ನೆಲೆಯಲ್ಲಿ ಸುಭಾಷ್​ರವರು ಅದನ್ನು ಹುಡುಕಿಕೊಂಡು ಹೋಗಿದ್ದಾರೆ. ಈ…

Read More

ಲಾರಿ ಹರಿದು ಮೂರು ವರ್ಷದ ಬಾಲಕ ಸಾವು

ಲಾರಿ ಹರಿದು ಮೂರು ವರ್ಷದ ಬಾಲಕ ಸಾವು ಅಂಗನವಾಡಿಯಲ್ಲಿದ್ದ ಬಾಲಕ ಅಜ್ಜಿಯನ್ನು ಕಂಡು ರಸ್ತೆ ದಾಟುತ್ತಿರುವ ವೇಳೆ ಘಟನೆ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಬಾಲಕನ ಸಾವಿಗೆ ಕಾರಣ ಎಂದು ಮೃತ ಬಾಲಕನ ಅಜ್ಜಿ ನಸೀಮಾ  ಬಾನು ದೂರಿದ್ದಾರೆ.. ಸೊರಬ: ರಸ್ತೆ ದಾಟುವಾಗ ಲಾರಿಯೊಂದು ಬಾಲಕನ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ  ಸೋಮವಾರ ನಡೆದಿದೆ. ಶಿರಸಿಯ ಅತಾವುಲ್ಲಾ ಖಾನ್ ಹಾಗೂ ಫರೀನಾ ಬೇಗಂ ಅವರ…

Read More

ಕೆಂಚನಾಲ : ಬಸ್ ಅಡ್ಡಗಟ್ಟಿ ವಿದ್ಯಾರ್ಥಿಯ ಮೇಲೆ ನಾಲ್ವರು ಯುವಕರಿಂದ ಹಲ್ಲೆ – ದೂರು ದಾಖಲು|assault

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಕೆದಲುಗುಡ್ಡೆ ಗ್ರಾಮದಲ್ಲಿ ಚಲುಸುತಿದ್ದ ಬಸ್ ನ್ನು ಅಡ್ಡ ಹಾಕಿ ನಾಲ್ವರು ಯುವಕರು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪಟ್ಟಣದ ಸರ್ಕಾರಿ ಪ್ರೌಡ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಗಾಳಿಬೈಲ್ ಗ್ರಾಮದ ನಿವಾಸಿ ರಿಫಾಯತ್(17) ಇಂದು ಸಂಜೆ ವಿಶೇಷ ತರಗತಿ ಮುಗಿಸಿಕೊಂಡು‌ ತನ್ನ ಊರಾದ ಕೆಂಚನಾಲಕ್ಕೆ ಬಸ್ ನಲ್ಲಿ ಹಿಂದಿರುತಿದ್ದಾಗ ನಾಲ್ಕು ಜನ ಯುವಕರು ಬೈಕ್ ನಲ್ಲಿ ಹಿಂಬಾಲಿಸಿ ಕೆದಲುಗುಡ್ಡೆ ಗ್ರಾಮದ ಬಳಿ ಬಸ್…

Read More

ಹೊಸನಗರ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆ : ಎಂ.ಬಿ ಲಕ್ಷ್ಮಣಗೌಡ ನೇತ್ರತ್ವದ ತಂಡಕ್ಕೆ ಭರ್ಜರಿ ಗೆಲುವು

ರಿಪ್ಪನ್ ಪೇಟೆ : ಹೊಸನಗರ ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ರಿಪ್ಪನ್ ಪೇಟೆಯ ಎಂ. ಬಿ ಲಕ್ಷ್ಮಣಗೌಡ ನೇತ್ರತ್ವದ ತಂಡಕ್ಕೆ  ಭರ್ಜರಿ ಗೆಲುವು ದೊರೆತಿದೆ. 15 ಜನ ನಿರ್ದೇಶಕರನ್ನು ಹೊಂದಿರುವ ಹೊಸನಗರ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಗರ್ತಿಕೆರೆ, ಹೆದ್ದಾರಿಪುರ, ಗುಬ್ಬಿಗ ಮತ ಕ್ಷೇತ್ರದಿಂದ ಮೂರು ಜನ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ 12 ಸ್ಥಾನಗಳಿಗಾಗಿ 27 ಜನ ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿದ್ದರು. ಹೊಸನಗರ ತಾಲೂಕು ಒಕ್ಕಲಿಗರ ಸಂಘಕ್ಕೆ ಇದು ಪ್ರಥಮ ಚುನಾವಣೆ : ಈ…

Read More

ಹೊಸನಗರದಲ್ಲಿ ಈಡಿಗ ಸಮುದಾಯದ ಬಹುದಿನಗಳ ಕನಸು ನನಸು: ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಡಿ.26ರಂದು ಶಂಕುಸ್ಥಾಪನೆ

The long-held dream of the Ediga community in Hosanagara is coming true: Foundation stone for the student hostel building to be laid on December 26th ಹೊಸನಗರದಲ್ಲಿ ಈಡಿಗ ಸಮುದಾಯದ ಬಹುದಿನಗಳ ಕನಸು ನನಸು: ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಡಿ.26ರಂದು ಶಂಕುಸ್ಥಾಪನೆ The long-held dream of the Ediga community in Hosanagara is coming true: Foundation stone for the student hostel building…

Read More