Headlines

ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು, ಆಕೆಯ ಮೃತದೇಹದ ಮೇಲೆ ನಿಂತು ನೇಣಿಗೆ ಶರಣಾದ ತಾಯಿ

ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು, ಆಕೆಯ ಮೃತದೇಹದ ಮೇಲೆ ನಿಂತು ನೇಣಿಗೆ ಶರಣಾದ ತಾಯಿ

ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆಯ ನರ್ಸಿಂಗ್ ಕ್ವಾಟ್ರಸ್‌ನಲ್ಲಿ ನಡೆದ ದಾರುಣ ಘಟನೆ ಮಲೆನಾಡನ್ನು ಬೆಚ್ಚಿಬೀಳಿಸುವಂತಿದೆ.ಹೌದು ಸ್ವಂತ ತಾಯಿಯೇ ತನ್ನ ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆರನೇ ತರಗತಿಯಲ್ಲಿ ಓದುತ್ತಿದ್ದ ಪುತ್ರಿ ಪೂರ್ವಿಕಾಳ(12) ತಲೆಗೆ ತಾಯಿ ಶೃತಿ (38) ಮಚ್ಚಿನಿಂದ ಹೊಡೆದು ಕೊಲೆಮಾಡಿದ್ದಾರೆ. ಬಳಿಕ ಮಗಳ ಶವವನ್ನು ಪ್ಯಾನ್ ಕೆಳಗೆ ಎಳೆದು ತಂದು ಅದೇ ಶವದ ಮೇಲೆ ನಿಂತು ಪ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶೃತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂಬುದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಘಟನೆಯ ಸಮಯದಲ್ಲಿ ಗಂಡ ಆಸ್ಪತ್ರೆಯಲ್ಲಿ ನೈಟ್ ಶಿಫ್ಟ್ ಕರ್ತವ್ಯದಲ್ಲಿದ್ದು, ಬೆಳಿಗ್ಗೆ ಮನೆಗೆ ಬಂದು ನೀಡಿದಾಗ ವಿಷಯ ತಿಳಿದುಬಂದಿದೆ.

ತಾಯಿ-ಮಗಳ ಮೃತದೇಹವನ್ನು ಒಂದೇ ಮನೆಯಲ್ಲಿ ಪಕ್ಕಪಕ್ಕದಲ್ಲಿ ಕಂಡ ನೆರೆಹೊರೆಯವರ ಕುಟುಂಬಸ್ಥರ ನೋವು ಹೇಳಲು ಶಬ್ದಗಳೇ ಸಾಲದಂತಿದೆ..

ಈ ಘಟನೆ ಮೆಗ್ಗಾನ್ ಕ್ವಾಟ್ರಸ್ ಮಾತ್ರವಲ್ಲ, ಸಂಪೂರ್ಣ ಶಿವಮೊಗ್ಗದ ಹೃದಯವನ್ನು ನಡುಗಿಸಿದೆ. ಬದುಕಿನ ಒತ್ತಡ, ಮಾನಸಿಕ ನೋವು ಹೇಗೆ ಜೀವಗಳನ್ನು ಕಸಿದುಕೊಳ್ಳುತ್ತದೆ ಎಂಬುದಕ್ಕೆ ಇದು ಕರುಣಾಜನಕ ಸಾಕ್ಷಿಯಾಗಿದೆ.