Bankapura | ರಸ್ತೆ ಮೇಲೆ ಕೊಳಚೆ ನೀರು – ಸಾರ್ವಜನಿಕರ ಪರದಾಟ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಶಹಬಜಾರ್ ಮಾರ್ಕೇಟ್ ರಸ್ತೆಯಲ್ಲಿ ಮಳೆ ಬಂದರೆ ನಳದ ನೀರು, ಚರಂಡಿ ನೀರು ಕೂಡಾ ರಸ್ತೆ ಮೇಲೆ ಹರಿದು ನಾಗರಿಕರಿಗೆ ತೊಂದರೆ ಉಂಟು ಮಾಡುತ್ತಿದೆ.
ಪುರಸಭೆಯ ಅಧೀನದಲ್ಲಿರುವ ಶಹಬಜಾರ್ ಮಾರ್ಕೆಟ್ ನಲ್ಲಿ ಬಂಕಾಪುರದ ಸುತ್ತಮುತ್ತಲಿನ ಓಣಿಯ ಗಟಾರಗಳು ಒಂದೇ ಕಲೆಕ್ಷನ್ ಗಟಾರಿಗೆ ನೀಡಿದ್ದು,ಇದು ಸಾರ್ವಜನಿಕರು ಹೆಚ್ಚಾಗಿ ವಹಿವಾಟು ನಡೆಸುವ ಸ್ಥಳವಾಗಿದ್ದು. ಈ ಸ್ಥಳದಲ್ಲಿ ಗಟಾರುಗಳು ತುಂಬಿಕೊಂಡು ಅಂಗಡಿ ಮತ್ತು ಮಳಿಗೆಗಳ ಒಳಭಾಗಕ್ಕೆ ನೀರು ಹರಿದು ಬಂದು ಹಲವಾರು ಪ್ರಮಾಣದ ವಸ್ತುಗಳು ನಾಶವಾಗಿದ್ದು ಅಂಗಡಿ ಮಳಿಗೆಗಳ ಮಾಲೀಕರು ಎಲ್ಲರೂ ಸೇರಿಕೊಂಡು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ .
ಈ ಮಾರ್ಗಗಳಲ್ಲಿ ವಾಹನಗಳು ಬಂದಾಗ ತಗ್ಗುನಲ್ಲಿ ನಿಂತಿದ್ದ ನೀರು ದಾರಿ ಹೋಗುವರ ಮೇಲೆ ಸಿಡಿಯುತ್ತಿದ್ದು ಅವರ ಬಟ್ಟೆಗಳು ಹೊಲಸಾಗುತ್ತಿವೆ. ಈ ರಸ್ತೆಯಲ್ಲಿ ನಾಜುಕಿನಿಂದ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನಗಳು ಬಂದರೆ ದೂರು ಸರಿದು ನಿಲ್ಲುವಂತಾಗಿದೆ.
ಪುರಸಭೆ, ಜಿಪಂ ಮತ್ತು ಲೋಕೋಪಯೋಗಿ ಇಲಾಖೆಗಳಿಗೆ ಈ ರಸ್ತೆಗಳು ಒಳಪಡುತ್ತವೆ. ಒಳ ಚರಂಡಿ ಯೋಜನೆ ಕಾಮಗಾರಿ ಈ ರಸ್ತೆಗಳನ್ನು ಇನ್ನಷ್ಟು ಹದಗೆಡಿಸಿದೆ. ಮಳೆ ಬಂದರೆ ಸಾಕು ಚರಂಡಿಗಳು ತುಂಬಿ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತದೆ. ಆಗಂತೂ ಪರಿಸ್ಥಿತಿ ಹೇಳತೀರದು ಮತ್ತು ಮೂಗು ಮುಚ್ಚಿಕೊಂಡೆ ಇಲ್ಲಿ ತಿರುಗಾಡಬೇಕು ಇದು ಅನಿವಾರ್ಯ.
ಇಲ್ಲಿ ವ್ಯವಹಾರ ಮಾಡುವ ಅಂಗಡಿ ಕಾರರೆಲ್ಲ ಸೇರಿಕೊಂಡು ಪುರಸಭೆಗೆ ಮನವಿ ಸಲ್ಲಿಸಿದರು ಸಹ ಪುರಸಭೆಯ ಗಮನವಹಿಸದೆ ನಿರ್ಲಕ್ಷೆಯಿಂದ, ದುರಾಡಳಿತದಿಂದ ಸಾಗುತ್ತಿದೆ. ಅಧಿಕಾರಿಗಳು ಕೈ ಕಟ್ಟಿ ಕುಳಿತುಕೊಂಡಿದ್ದಾರೆ.
ಈ ರಸ್ತೆಗಳಲ್ಲಿರುವ ತಗ್ಗು ಗುಂಡಿಗಳನ್ನು ಮುಚ್ಚಬೇಕು. ನಲ್ಲಿ ನೀರು ರಸ್ತೆಗೆ ಹರಿ ಬೀಡದಂತೆ ನಾಗರಿಕರಿಗೆ ಸೂಚಿಸಬೇಕು. ಚರಂಡಿಗಳನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸುರಿದ ಭಾರಿ ಮಳೆಯಿಂದ ಗಟಾರಗಳು ತುಂಬಿ ಮಲೀನಗೊಂಡ ನೀರು ರಸ್ತೆಗೆ ಹರೆಯುತ್ತಿದೆ. ಪುರಸಭೆ ನಿರ್ಲಕ್ಷೆಯಿಂದ ನಮಗೆಲ್ಲರಿಗೂ ತೊಂದರೆ ಆಗುತ್ತಿದೆ. ಸಾರ್ವಜನಿಕರು ಓಡಾಡಲು ತೊಂದರೆಯಾಗುತ್ತಿದೆ. ವ್ಯವಹಾರ ಮಾಡುವ ತಾಣವಾದ ಈ ಬಂಕಾಪುರದಲ್ಲಿ ಸುತ್ತಮುತ್ತ ಹಳ್ಳಿಯ ಜನರಲ್ಲಿ ಸೇರುವ ಸ್ಥಳವಾಗಿದೆ.
ಬಂಕಾಪುರದಲ್ಲಿ ಅಧಿಕಾರಿಗಳು ನಿರ್ಲಕ್ಷಯಿಂದ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದನ್ನು ನಮ್ಮ ಅಳಲು ಕೇಳುವವರ್ಯಾರು. ಪುರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಬಂದಿಲ್ಲ.
ಶ್ರೀಪಾದ್ ಸಂಕಣ್ಣವರ್
ಮಾಲೀಕರು ಚಿದಂಬರ್ ಮೆಡಿಕಲ್
ವರದಿ: ನಿಂಗರಾಜ್ ಕೂಡಲ್ ,ಹಾವೇರಿ ಜಿಲ್ಲೆ ( ಬಂಕಾಪುರ).