Anandapura | ಬೈಕ್ ಗೆ ಜೆಸಿಬಿ ಡಿಕ್ಕಿ – ಓರ್ವ ಸಾವು ಇನ್ನೋರ್ವ ಗಂಭೀರ
ಸಾಗರ ತಾಲೂಕಿನ ಆನಂದಪುರದಲ್ಲಿ ಬೈಕ್ ಗೆ ಜೆಸಿಬಿ ಡಿಕ್ಕಿಯಾದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದು ಇನ್ನೋರ್ವನ ಪರಿಸ್ಥಿತಿ ಗಂಭೀರವಾಗಿದೆ.
ಆನಂದಪುರದ ಕೆರೆ ಏರಿ ಸಮೀಪ ಯುವಕರು ಬೈಕ್ ನಲ್ಲಿ ಚಲಿಸುತ್ತಿದ್ದಾಗ ಹೆದ್ದಾರಿ ರಸ್ತೆಗೆ ಜೆಸಿಬಿ ಚಾಲಕ ಏಕಾಏಕಿ ಬಂದ ಹಿನ್ನಲೆಯಲ್ಲಿ ಜೆಸಿಬಿಯ ಮುಂಭಾಗ ಚಲಿಸುತ್ತಿದ್ದ ವಾಹನ ಸವಾರರಿಗೆ ತಿವಿದಿದ್ದು ಇಬ್ಬರು ಸವಾರರ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ತಕ್ಷಣ ಸ್ಥಳೀಯರು ಆನಂದಪುರದ ಆಸ್ಪತ್ರೆಗೆ ಸಾಗಿಸಿದರು.
ಹೊಟ್ಟೆ ಭಾಗಕ್ಕೆ ತೀವ್ರ ಪ್ರಮಾಣದ ಗಾಯವಾಗಿದ್ದ ಕಾರಣ ತಕ್ಷಣ ಅವರನ್ನು ಆನಂದಪುರದ ಆಂಬುಲೆನ್ಸ್ ನಲ್ಲಿ ಶಿವಮೊಗ್ಗಕ್ಕೆ ಸಾಗಿಸಲಾಗುತ್ತಿತ್ತು, ದುರಾದೃಷ್ಟವಶಾತ್ ಸೈಯದ್ ಹುಸೇನ್(ನೈಮೂ) ಎಡೆಹಳ್ಳಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಗಂಭೀರ ಗಾಯಗೊಂಡ ಮುಬಾರಕ್ ಎಂಬುವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.