ಬೆನವಳ್ಳಿ : ನರೇಗಾ ಕಾಮಗಾರಿಗೆ ತಡರಾತ್ರಿ ಟ್ರ್ಯಾಕ್ಟರ್ ಬಳಕೆ : ಗ್ರಾಮಸ್ಥರ ತಡೆ

ರಿಪ್ಪನ್‌ಪೇಟೆ : ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆನವಳ್ಳಿ ಸರ್ಕಾರಿ ಪಾಠಶಾಲೆಯ ಆಟದ ಮೈದಾನ ಸಮತಟ್ಟು ಕಾಮಗಾರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ಮಂಜಾರಾಗಿದ್ದು ಕಳೆದ ಒಂದು ತಿಂಗಳಿಂದ ಕೂಲಿಗಳ ಮೂಲಕ ಕಾಮಗಾರಿ ನಿರ್ವಹಿಸಲಾಗುತ್ತಿತ್ತು. ಆದರೆ ಸೋಮವಾರ ಮಧ್ಯರಾತ್ರಿಯಲ್ಲಿ ಏಕಾಏಕಿ ಟ್ರ್ಯಾಕ್ಟರ್ ತಂದು ನರೇಗ ಕಾಮಗಾರಿ ನಿರ್ವಹಿಸುವುದನ್ನು ಖಂಡಿಸಿ ಅಧಿಕಾರಿಗಳು ಬರುವವರೆಗೂ ಟ್ರ್ಯಾಕ್ಟರ್ ಹೊರ ಬಿಡದೇ ಪಟ್ಟು ಹಿಡಿದು ಬೆನವಳ್ಳಿಯ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಸುಮಾರು 15 ರಿಂದ 20 ಜನ ಮಹಿಳಾ…

Read More

ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ : ಬೈಕ್‌ ಸವಾರ ಸ್ಥಳದಲ್ಲೇ ಸಾವು

  ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೊರಬ ತಾಲೂಕಿನ ಉಳವಿ ಮತ್ತು ಮಳಲಗದ್ದೆ ಗ್ರಾಮದ ನಡುವೆ ಗುರುವಾರ ರಾತ್ರಿ ಸಂಭವಿಸಿದೆ. ಅವಲಗೋಡು ಗ್ರಾಮದ ಯುವರಾಜ್ ಗಣಪತಿ (38) ಮೃತ ಬೈಕ್ ಸವಾರ. ಉಳುವಿಯಿಂದ ಅವಲಗೋಡು ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ಗೆ ಸೊರಬದಿಂದ ಸಾಗರ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಬೈಕಿಗೆ ಡಿಕ್ಕಿ ಹೊಡೆದ  ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ…

Read More

ಅ.16ಕ್ಕೆ ತಳಲೆಯಲ್ಲಿ ಜಿಲ್ಲೆಯಲ್ಲಿಯೇ ಮೊದಲ ಬಹುಸೇವಾ ವಾಣಿಜ್ಯ ಸಂಕೀರ್ಣ ಉದ್ಘಾಟನೆ |Ripponpet

ರಿಪ್ಪನ್‌ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಬಾರ್ಡ್ ಯೋಜನೆಯಿಂದ ನಿರ್ಮಾಣಗೊಂಡ ಜಿಲ್ಲೆಯಲ್ಲಿಯೇ ಪ್ರಥಮ ಬಹುಸೇವಾ ವಾಣಿಜ್ಯ ಸಂಕೀರ್ಣ ಗೋದಾಮು ಅಕ್ಟೋಬರ್ 16 ರ ಭಾನುವಾರ ಬೆಳಿಗ್ಗೆ 11 ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ  ಹೆಚ್.ಎಸ್. ದಿನೇಶ್‌ಗೌಡ ಹೇಳಿದರು. ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಸುಮಾರು 70 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತವಾದ ಬಹುಮಹಡಿ ಸಂಕೀರ್ಣವನ್ನು ನಿರ್ಮಿಸಲಾಗಿದೆ. ನಬಾರ್ಡ್ ಯೋಜನೆಯಂತೆ…

Read More

ಶಿವಮೊಗ್ಗ ಚಾಕು ಇರಿತ ಪ್ರಕರಣದ ಆರೋಪಿಗೆ ಭಯೋತ್ಪಾದಕರ ಲಿಂಕ್ ಬಹಿರಂಗ : ಆರಗ ಜ್ಞಾನೇಂದ್ರ

ಶಿವಮೊಗ್ಗ : ಗಾಂಧಿ ಬಜಾರ್ ನಲ್ಲಿ ಪ್ರೇಮ್​ ಸಿಂಗ್ ಯುವಕನಿಗೆ ಚಾಕು ಇರಿದ ಪ್ರಕರಣ ಸಂಬಂಧಿತ ಆರೋಪಿಗೆ ಜಬೀವುಲ್ಲಾ ಲಿಂಕ್‌ ಭಯಾನಕವಾಗಿದೆ.  ಭಯೋತ್ಪಾದಕರ ಜೊತೆ ಲಿಂಕ್‌ ಇರೋದು ಬಹಿರಂಗವಾಗಿದೆ. ಸದ್ಯದಲ್ಲೇ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುತ್ತೇವೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ವೀರ್ ಸಾವರ್ಕರ್ ಫೋಟೋ ಹಾಕುವ ವಿಚಾರದಲ್ಲಿ ಎಸ್​ಡಿಪಿಐ ಬೆಂಬಲದಲ್ಲಿ ಕೆಲವರು ಹಿಂಸಾಚಾರ ನಡೆಸಿದ್ದರು. ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದಿದ್ದ ಪ್ರಕರಣ ನಡೆದಿತ್ತು. ಪ್ರಕರಣದ ಆರೋಪಿಗೆ ‘ಭಯೋತ್ಪಾದಕರ ಲಿಂಕ್‌ ಭಯಾನಕ’ವಾಗಿದೆ…

Read More

SAGARA | ಶ್ವಾನ ಪ್ರದರ್ಶನ ವೇಳೆ ಪ್ರೇಕ್ಷಕರ ಮೇಲೆ ನಾಯಿ ದಾಳಿ : ಓರ್ವ ವ್ಯಕ್ತಿಗೆ ಗಂಭೀರ ಗಾಯ

SAGARA | ಶ್ವಾನ ಪ್ರದರ್ಶನ ವೇಳೆ ಪ್ರೇಕ್ಷಕರ ಮೇಲೆ ನಾಯಿ ದಾಳಿ : ಓರ್ವ ವ್ಯಕ್ತಿಗೆ ಗಂಭೀರ ಗಾಯ ಶ್ವಾನ ಪ್ರದರ್ಶನದ ವೇಳೆಯಲ್ಲಿ ಪ್ರೇಕ್ಷಕದ ಮೇಲೆ ರಾಟ್ ವೀಲರ್  ನಾಯಿಯು ಮನಸೋ ಇಚ್ಛೆ ದಾಳಿ ನಡೆಸಿರುವ ಘಟನೆ ನಡೆದಿದೆ. ಈ ವೇಳೆ ಗಂಭೀರವಾಗಿ ಗಾಯ ಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ವಾನ ಪ್ರದರ್ಶನ ವೇಳೆ ಪ್ರೇಕ್ಷಕರ ಮೇಲೆ ನಾಯಿ ದಾಳಿ ನಡೆಸಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದ ಘಟನೆ ಯಾಗಿದೆ. ರಾಟ್ ವಿಲರ್ ಜಾತಿಯ ನಾಯಿಯಿಂದ…

Read More

RIPPONPETE | ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ; ಯುವಕನಿಗೆ ಗಂಭೀರ ಗಾಯ, ಶಿವಮೊಗ್ಗಕ್ಕೆ ರವಾನೆ

RIPPONPETE | ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ; ಯುವಕನಿಗೆ ಗಂಭೀರ ಗಾಯ, ಶಿವಮೊಗ್ಗಕ್ಕೆ ರವಾನೆ A head-on collision between two motorcycles near Jyothi Mangalya Mandir on Thirthahalli Road in Ripponpet left a youth seriously injured. The victim was shifted to McGann Hospital, Shivamogga for advanced treatment. ರಿಪ್ಪನ್ ಪೇಟೆ, ಜೂನ್ 1: ಪಟ್ಟಣದ ತೀರ್ಥಹಳ್ಳಿ ರಸ್ತೆಯ ಜ್ಯೋತಿ ಮಾಂಗಲ್ಯ ಮಂದಿರದ ಸಮೀಪ…

Read More

ಶರಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ ಪಶುವೈದ್ಯಾಧಿಕಾರಿ ನೀರುಪಾಲು

A senior veterinary officer, Dr. Sunil (38), drowned while swimming in the Sharavathi backwaters near Sagara in Shivamogga district on January 11. ಸಾಗರ | ಜನವರಿ 11: ಶರಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಪಶುವೈದ್ಯಾಧಿಕಾರಿಯೊಬ್ಬರು ಆಕಸ್ಮಿಕವಾಗಿ ನೀರುಪಾಲಾಗಿ ಮೃತಪಟ್ಟ ದಾರುಣ ಘಟನೆ ಸಾಗರ ತಾಲೂಕಿನ ಹಕ್ರೆಯ ಬಾಳೇಗೆರೆ ಗ್ರಾಮದ ಸಮೀಪ ಭಾನುವಾರ (ಜನವರಿ 11) ನಡೆದಿದೆ. ಮೃತರನ್ನು ಡಾ. ಸುನೀಲ್ (38) ಎಂದು ಗುರುತಿಸಲಾಗಿದ್ದು, ಇವರು ಮಾಸೂರಿನಲ್ಲಿ ಹಿರಿಯ…

Read More

Thirthahalli | ಮೇಲಿನ ಕುರುವಳ್ಳಿ ವ್ಯಾಪ್ತಿಯಲ್ಲಿ ಹುಲಿ ಪ್ರತ್ಯಕ್ಷ – ಬೆಚ್ಚಿಬಿದ್ದ ಸ್ಥಳೀಯರು

ತೀರ್ಥಹಳ್ಳಿ : ಪಟ್ಟಣದ ಸಮೀಪದ ಮೇಲಿನ ಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿಠಲನಗರದ ಲೇಔಟ್ ಹಿಂಭಾಗದ ಕಾಡಿನಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದೆ. ಸ್ಥಳೀಯರು ಭಾನುವಾರ ಸಂಜೆ ಕಟ್ಟಿಗೆ ಕಡಿಯಲು ಹೋದಾಗ ಹುಲಿಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಕಳೆದ ನಾಲ್ಕೈದು ದಿನದ ಹಿಂದೆ ರಾತ್ರಿಯ ವೇಳೆ ಲೇಔಟ್ ಸಮೀಪದಲ್ಲಿ ಹುಲಿ ಕೂಗಿದ ಘರ್ಜನೆ ಕೇಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಂದೆ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತು ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Read More

ಪ್ರಿಯಕರನಿಂದ ಪ್ರೇಯಸಿಗೆ ಚೂರಿ ಇರಿತ : ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ : ಪ್ರೇಮಿಗಳು ಇಬ್ಬರು ಗಂಭೀರ…!

ಉಡುಪಿ : ನಗರದ ಅಂಬಾಗಿಲು ಸಂತೆಕಟ್ಟೆ ಪೆಟ್ರೋಲ್ ಪಂಪ್ ಬಳಿ ಯುವಕನೋರ್ವ ತನ್ನ ಪ್ರೇಯಸಿಗೆ ಚೂರಿ ಇರಿದು ನಂತರ ತಾನೂ ಚೂರಿ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಸಂಜೆ ನಡೆದಿದೆ. ಯುವ ಜೋಡಿಗಳು ಬೈಕಿನಲ್ಲಿ ಬಂದು ನಂತರ ಜಗಳವಾಡಿ ಚೂರಿಯಲ್ಲಿ ಇರಿದು ಕೊಂಡಿದ್ದಾರೆ ಎನ್ನಲಾಗಿದೆ. ಯುವತಿಯು ಸ್ಥಳೀಯ ಅಂಬಾಗಿಲು ಕಕ್ಕುಂಜೆ ನಿವಾಸಿ ಸೌಮ್ಯಶ್ರೀ ಎಂದು ತಿಳಿಯಲಾಗಿದೆ.ಯುವಕನು ಘಟನಾ ಸ್ಥಳಕ್ಕೆ ಬಂದ ಬೈಕ್ ಐಡಿಯಲ್ ಮೆಡಿಕಲ್ ರೇಫ್ ನದ್ದು ಎಂದು ತಿಳಿದು ಬಂದಿದೆ,ಯವಕನ ವಿವರಗಳು ಇನ್ನಷ್ಟು ತಿಳಿದುಬರಬೇಕಿದೆ….

Read More

ಅಬಕಾರಿ ದಾಳಿ : ಲಕ್ಷಾಂತರ ರೂ ಮೌಲ್ಯದ ಅಕ್ರಮ ಮದ್ಯ ವಶ

ಅಬಕಾರಿ ಇಲಾಖೆ ದಾಳಿ : ಲಕ್ಷಾಂತರ ರೂ ಮೌಲ್ಯದ ಅಕ್ರಮ ಮದ್ಯ ವಶ ಶಿವಮೊಗ್ಗ ನಗರದ ಸವಳಂಗ ರಸ್ತೆಯ ಫ್ಲೆ ಓವರ್‌ನ ಅಂಡರ್ ಪಾಸ್‌ನಲ್ಲಿ ಡಿ.30 ರಂದು ಅಬಕಾರಿ ದಾಳಿ ನಡೆಸಿ 180 ಮಿ.ಲಿ.ನ ಮ್ಯಾಕ್‌ಡೋವೆಲ್ಸ್ ನಂ-1 ವಿಸ್ಕಿಯ 170 ಬಾಟಲಿಗಳು ಅಂದಾಜು ಮೌಲ್ಯ ರೂ.1,35,000 ದ ಒಟ್ಟು 30,600 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ದಾವಣಗೆರೆ ವಿಭಾಗ, ದಾವಣಗೆರೆ ಹಾಗೂ ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಇವರ…

Read More