ತೀರ್ಥಹಳ್ಳಿ : ಪಟ್ಟಣದ ಸಮೀಪದ ಮೇಲಿನ ಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿಠಲನಗರದ ಲೇಔಟ್ ಹಿಂಭಾಗದ ಕಾಡಿನಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದೆ.
ಸ್ಥಳೀಯರು ಭಾನುವಾರ ಸಂಜೆ ಕಟ್ಟಿಗೆ ಕಡಿಯಲು ಹೋದಾಗ ಹುಲಿಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಕಳೆದ ನಾಲ್ಕೈದು ದಿನದ ಹಿಂದೆ ರಾತ್ರಿಯ ವೇಳೆ ಲೇಔಟ್ ಸಮೀಪದಲ್ಲಿ ಹುಲಿ ಕೂಗಿದ ಘರ್ಜನೆ ಕೇಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮುಂದೆ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತು ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.