w
Headlines
Home » ಸಹೋದರಿಯ ಗೆಲುವಿಗಾಗಿ ಒಂದಾಗ್ತಾರ ಕುಮಾರ್‌ ಬಂಗಾರಪ್ಪ-ಮಧು ಬಂಗಾರಪ್ಪ | ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ ಈ ಪೋಟೋ..!!|Election News

ಸಹೋದರಿಯ ಗೆಲುವಿಗಾಗಿ ಒಂದಾಗ್ತಾರ ಕುಮಾರ್‌ ಬಂಗಾರಪ್ಪ-ಮಧು ಬಂಗಾರಪ್ಪ | ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ ಈ ಪೋಟೋ..!!|Election News

ಸಹೋದರಿಯ ಗೆಲುವಿಗಾಗಿ ಒಂದಾಗ್ತಾರ ಕುಮಾರ್‌ ಬಂಗಾರಪ್ಪ-ಮಧು ಬಂಗಾರಪ್ಪ | ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ ಈ ಪೋಟೋ..!!


ಶಿವಮೊಗ್ಗ ರಾಜಕಾರಣ ನಿಂತಿರೋದು ಇಬ್ಬರು ಮಾಜಿ ಸಿಎಂಗಳ ಕುಟುಂಬಗಳ ಮೇಲೆ.. ಒಂದು ಕಾಲಕ್ಕೆ ಮಾಜಿ ಸಿಎಂ ಬಂಗಾರಪ್ಪ ಕುಟುಂಬಕ್ಕೆ ಸಾಟಿಯೇ ಇಲ್ಲದಂತಿತ್ತು.. ಈಗ ಯಡಿಯೂರಪ್ಪ ಕುಟುಂಬದ ರಾಜಕೀಯ ಒಂದು ಕೈ ಮೇಲಾಗಿದೆ.. ಇದಕ್ಕೆ ಕಾರಣವೂ ಇಲ್ಲದಿಲ್ಲ… ಬಂಗಾರಪ್ಪ ಕುಟುಂಬ ಎರಡು ಹೋಳಾಗಿರುವುದು… ಮಧು ಬಂಗಾರಪ್ಪ ಕಾಂಗ್ರೆಸ್‌ನಲ್ಲಿದ್ದರೆ, ಕುಮಾರ್‌ ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ… ಚುನಾವಣೆಯಲ್ಲಿ ಇಬ್ಬರೂ ಪರಸ್ಪರ ಎದುರಾಳಿಗಳು ಕೂಡಾ…

ಯಾವುದೋ ಕೌಟುಂಬಿಕ ಕಾರಣಕ್ಕೆ ಕಿತ್ತಾಡಿಕೊಂಡಿದ್ದ ಈ ಇಬ್ಬರು ಸಹೋದರರು ಗೀತಾಕ್ಕ ರವರಿಗಾಗಿ ಒಂದಾದರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ ಇದಕ್ಕೆ ಕಾರಣ  ಕುಮಾರ್ ಬಂಗಾರಪ್ಪ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಈ ಪೋಟೋ..

ತಂದೆ-ಸಹೋದರನ ಜೊತೆಗಿನ ಫೋಟೋ ಫೋಸ್ಟ್‌;


 ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ಸಹೋದರ ಮಧು ಬಂಗಾರಪ್ಪ ವಿರುದ್ಧ ಕುಮಾರ್‌ ಬಂಗಾರಪ್ಪ ಸೋಲನುಭವಿಸಿದ್ದರು.. ಇದಾದ ಮೇಲೆ ಕುಮಾರ್‌ ಬಂಗಾರಪ್ಪ ಸಂಪೂರ್ಣವಾಗಿ ಸೈಲೆಂಟ್‌ ಆಗಿಬಿಟ್ಟಿದ್ದರು.. ಎಲ್ಲರೂ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿಲ್ಲ.. ಈ ನಡುವೆ ಕುಮಾರ್‌ ಬಂಗಾರಪ್ಪ ಅವರನ್ನೇ ಕಾಂಗ್ರೆಸ್‌ಗೆ ಕರೆತಂದು ಲೋಕಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆದ್ರೆ ಅದು ಸಾಧ್ಯವಾಗಿಲ್ಲ. ಬದಲಾಗಿ, ಅವರ ಸಹೋದರಿಗ ಗೀತಾ ಶಿವರಾಜ್‌ ಕುಮಾರ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಲಾಗಿದೆ.. ಸಹೋದರಿ ಗೀತಾ ಶಿವರಾಜ್‌ ಕುಮಾರ್‌ ಪ್ರಚಾರಕ್ಕೆ ಸಜ್ಜಾಗುತ್ತಿದ್ದಂತೆ, ಕುಮಾರ್‌ ಬಂಗಾರಪ್ಪ ಅವರು ಫೋಟೋವೊಂದನ್ನು ಫೇಸ್‌ ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ತಂದೆ ಬಂಗಾರಪ್ಪ ಹಾಗೂ ಸಹೋದರ ಮಧು ಬಂಗಾರಪ್ಪ ಜೊತೆ ಡೊಳ್ಳು ಬಾರಿಸುತ್ತಿರುವ ಹಳೆಯ ಫೋಟೋ ಅದು… ಈ ಫೊಟೋ ಲೋಕಸಭಾ ಚುನಾವಣೆಗಾಗಿ ಬಂಗಾರಪ್ಪರ ಇಬ್ಬರೂ ಪುತ್ರರೂ ಒಂದಾಗುತ್ತಿರುವ ಸಂದೇಶವನ್ನು ರವಾನಿಸುವಂತಿದೆ…


ಕುಮಾರ್‌ ಬಂಗಾರಪ್ಪ ಅವರು ಈ ಫೋಟೋ ಪೋಸ್ಟ್‌ ಮಾಡಿದ ಕೆಲ ಹೊತ್ತಿನಲ್ಲೇ ನೂರಾರು ಬೆಂಬಲಿಗರು ಕಮೆಂಟ್‌ ಮಾಡಿದ್ದಾರೆ. ಏನೇ ಭಿನ್ನಾಭಿಪ್ರಾಯಗಳಿರಲಿ, ಸಹೋದರರಿಬ್ಬರೂ ಒಂದಾಗಬೇಕು ಎಂದಿದ್ದಾರೆ.. ಎಲ್ಲರೂ ಕೂಡಾ ಖುಷಿಯಿಂದ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.. ಬಂಗಾರಪ್ಪ ಕುಟುಂಬ ಒಂದಾಗಬೇಕು ಎಂಬುದೇ ನಮ್ಮ ಆಸೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದನ್ನು ನೋಡುತ್ತಿದ್ದರೆ, ಲೋಕಸಭಾ ಚುನಾವಣೆ ಕಾರಣ ಇಟ್ಟುಕೊಂಡು ಬಂಗಾರಪ್ಪ ಕುಟುಂಬ ಒಂದಾಗುತ್ತಿರುವ ಬಗ್ಗೆ ಮುನ್ಸೂಚನೆ ಕೊಟ್ಟಂತೆ ಕಾಣುತ್ತಿದೆ…

ಗೀತಾ ಶಿವರಾಜ್‌ ಕುಮಾರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.. ಅಂದು ಬಂಗಾರಪ್ಪ ಅವರನ್ನು ಸೋಲಿಸಿದ್ದ ರಾಘವೇಂದ್ರ ಅವರೇ ಬಿಜೆಪಿ ಅಭ್ಯರ್ಥಿಯಾಗುತ್ತಿದ್ದಾರೆ.. ಇಂತಹ ಸಂದರ್ಭದಲ್ಲಿ ಬಂಗಾರಪ್ಪ ಕುಟುಂಬ ಒಂದಾಗಬೇಕು ಎಂದು ಎಲ್ಲರೂ ಬಯಸುತ್ತಿದ್ದಾರೆ.. ಬಂಗಾರಪ್ಪ ಕುಟುಂಬ ಒಂದಾದರೆ ಮಾತ್ರ ರಾಘವೇಂದ್ರ ವಿರುದ್ಧ ಗೆಲ್ಲೋದಕ್ಕೆ ಹರಸಾಹಸ ಮಾಡಬಹುದು.. ಬಂಗಾರಪ್ಪ ಅಭಿಮಾನಿಗಳೆಲ್ಲಾ ಇಬ್ಬರೂ ಸಹೋದರರು ಒಂದಾಗುವುದನ್ನು ಬಯಸುತ್ತಿದ್ದಾರೆ. ಆದ್ರೆ ಕುಮಾರ್‌ ಬಂಗಾರಪ್ಪ ಯಾವ ಕಾರಣಕ್ಕೆ ಈ ಫೋಟೋ ಹಾಕಿದ್ದಾರೋ ಗೊತ್ತಿಲ್ಲ.. ಆದ್ರೆ, ಆ ಫೋಟೋ ಕಾರಣದಿಂದ ಬಂಗಾರಪ್ಪ ಕುಟುಂಬ ಒಂದಾಗಬಹುದು ಅನ್ನೋ ಚರ್ಚೆ ಶುರುವಾಗಿದೆ.. ಜೊತೆಗೆ ಒಂದಾಗಲಿ ಎಂದು ನೂರಾರು ಮನಸ್ಸು ಬಯಸುವಂತಾಗಿದೆ..

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.