RIPPONPETE | ಅಪ್ರಾಪ್ತೆಯೊಂದಿಗೆ ವಿವಾಹ – ಯುವಕನ ವಿರುದ್ಧ ಫೋಕ್ಸೋ ಪ್ರಕರಣ ದಾಖಲು

ಅಪ್ರಾಪ್ತೆಯೊಂದಿಗೆ ವಿವಾಹ – ಯುವಕನ ವಿರುದ್ಧ ಫೋಕ್ಸೋ ಪ್ರಕರಣ ದಾಖಲು ರಿಪ್ಪನ್ ಪೇಟೆ ; ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಬಾಲಕಿಯೊಂದಿಗೆ ಯುವಕನೊಬ್ಬ ಬಾಲ್ಯವಿವಾಹವಾಗಿದ್ದು ಈ ಹಿನ್ನಲೆಯಲ್ಲಿ ಯುವಕನ ವಿರುದ್ದ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕದರಮಂಗಳ ಗ್ರಾಮದ ಮೋಹನ್‌ಕುಮಾರ್ ಎಂಬುವರು ಅಪ್ರಾಪ್ತೆಯೊಂದಿಗೆ ವಿವಾಹವಾಗಿರುವ ಘಟನೆ ಬಹಿರಂಗವಾಗಿ, ಕಾನೂನು ಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕಿಯೊಂದಿಗೆ ಕಳೆದ ಆಗಸ್ಟ್ 29ರಂದು ದೇವಸ್ಥಾನವೊಂದರಲ್ಲಿ ವಿವಾಹ…

Read More

ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಬೈಕ್ ಗೆ ಬೆಂಕಿ ಹಚ್ಚಿದ ಯುವಕ

ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಬೈಕ್ ಗೆ ಬೆಂಕಿ ಹಚ್ಚಿದ ಯುವಕ ದೂರು ಸಲ್ಲಿಸಲು ತೆರಳಿದ್ದ ತನ್ನ ತಾಯಿಗೆ ಪೊಲೀಸರು ಬೈದಿದ್ದಾರೆ ಎಂಬ ಕೋಪಕ್ಕೆ ತನ್ನ ಬೈಕ್‌ಗೆ ಯುವಕನೊಬ್ಬ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ವಿಧಾನಸೌಧದ ಬಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮೂಲದ ಪೃಥ್ವಿರಾಜ್ ಎಂಬಾತ ಕೃತ್ಯವೆಸಗಿದ್ದಾನೆ. ಬೆಂಗಳೂರಿನ ವಿಧಾನಸೌಧ ಹಾಗು ಹೈಕೋರ್ಟ್ ನಡುವಿನ ರಸ್ತೆಯಲ್ಲಿ ಬೈಕ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಬೆಂಕಿ ಹಚ್ಚಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರೋ ಪೃಥ್ವಿರಾಜ್ ನಾನು…

Read More

ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜ ಬ್ಯಾಂಕ್ ಜನಾರ್ಧನ್ ನಿಧನ

ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜ ಬ್ಯಾಂಕ್ ಜನಾರ್ಧನ್ ನಿಧನ ಕನ್ನಡದ ಹಿರಿಯ ಹಾಸ್ಯ ನಟ ಬ್ಯಾಂಕ್‌ ಜನಾರ್ಧನ್‌ (76) ಅವರು ನಿಧನರಾಗಿದ್ದಾರೆ. ಎ.13 ರ ರವಿವಾರ ಮಧ್ಯರಾತ್ರಿ ಸುಮಾರು 2.30ಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕುಟುಂಬಸ್ಥರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. 1965 ರಲ್ಲಿ ಅಂದು ಜಯಲಕ್ಷ್ಮಿ ಬ್ಯಾಂಕ್ ನಲ್ಲಿ 50 ರೂಪಾಯಿಗೆ ಕೆಲಸಕ್ಕೆ ಸೇರಿದ್ದರು. ರಾತ್ರಿ ವೇಳೆ ಮಲ್ಲಿಕಾರ್ಜುನ ಟೂರಿಂಗ್ ಟಾಕೀಸ್ ನಲ್ಲಿ ಅಸಿಸ್ಟೆಂಟ್…

Read More

ಡಿನೋಟಿಫಿಕೇಷನ್ ರದ್ದುಗೊಳಿಸಿದ ರಾಜ್ಯ ಸರ್ಕಾರ : ಅತಂತ್ರಗೊಂಡ ಶರಾವತಿ ಮುಳುಗಡೆ ಸಂತ್ರಸ್ತರ ಬದುಕು|Sharavathi

ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಕನಸು ಮತ್ತೆ ಕಮರಿ‌ ಹೋಗಿದೆ.ನ್ಯಾಯಾಂಗ ನಿಂದನೆ ಭಯದಿಂದ‌ ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ರದ್ದುಗೊಳಿಸಿದೆ. ಈ ಮೂಲಕ ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿರುವ ಮುಳುಗಡೆ ಸಂತ್ರಸ್ತರನ್ನು ಸರ್ಕಾರ ಮತ್ತೊಮ್ಮೆ ಅನಾಥರನ್ನಾಗಿಸಿದೆ. ಹೌದು, ವಿದ್ಯುತ್ ಉತ್ಪಾದನೆ ಸಲುವಾಗಿ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಶಿವಮೊಗ್ಗದ ಸಾಗರ, ಹೊಸನಗರ ತಾಲೂಕಿನ 166 ಗ್ರಾಮಗಳ 6,177 ಕುಟುಂಬಗಳನ್ನು ಎತ್ತಂಗಡಿ ಮಾಡಲಾಗಿತ್ತು. ಅಂದಿನ‌ ರಾಜ್ಯ ಸರ್ಕಾರ 1962 ರಲ್ಲಿಯೇ ಪುನರ್ವಸತಿಗಾಗಿ ಅರಣ್ಯ ಭೂಮಿಯನ್ನ…

Read More

ಜೋಗ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಮಹಿಳೆ ಕಾಲುಜಾರಿ ಬಿದ್ದು ಸಾವು :

ಜೋಗ ಪ್ರವಾಸಕ್ಕೆ ಬಂದಿದ್ದ ಮಹಿಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ಜೋಗದಲ್ಲಿ ನಡೆದಿದೆ. ಬೆಂಗಳೂರು ಮೂಲದ ನಿಶಾ(24) ಮೃತ ದುರ್ಧೈವಿಯಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯಷ್ಟೇ ನಾಗೇಶ್ ಎಂಬುವವರ ಜೊತೆ ವಿವಾಹವಾಗಿದ್ದ ನಿಶಾ, ಪತಿ ನಾಗೇಶ್​ ಅವರೊಂದಿಗೆ ಜೋಗ ಜಲಪಾತ ವೀಕ್ಷಿಸಲು ಬಂದಿದ್ದರು.  ಜೋಗದ ಜಂಗಲ್ ರೆಸಾರ್ಟ್ ಸಮೀಪದ ಹಿನ್ನೀರಿನ ಬಳಿ ನಿಶಾ ಕಾಲು ಜಾರಿ ಬಿದ್ದಿದ್ದು, ತಕ್ಷಣವೇ ಸ್ಥಳೀಯರ ಸಹಾಯದಿಂದ ನಾಗೇಶ್​ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರಾದೃಷ್ಟವಶಾತ್​ ನಿಶಾ ಸಾವನ್ನಪ್ಪಿದ್ದಾರೆ. ನಿಶಾ…

Read More

ಕೋಣಂದೂರು ಸಮೀಪ ರಸ್ತೆ ಅಪಘಾತ : ಚಾಲಕರ ನಡುವಿನ ಗಲಾಟೆಯಲ್ಲಿ ಮೂರನೇ ವ್ಯಕ್ತಿಯಿಂದ ಚಿನ್ನದ ಸರ ಕಳವು

ತೀರ್ಥಹಳ್ಳಿ : ಕಾರು ಹಾಗೂ ಬೈಕ್ ನಡುವಿನ ಅಪಘಾತ ನೆಡಿದಿದ್ದು ಅಪಘಾತ ನೆಡದ ಸ್ಥಳದಲ್ಲಿ ಗಲಾಟೆ ನೆಡೆದು ಆ ಸಂದರ್ಭದಲ್ಲಿ ಚಿನ್ನದ ಸರ ಕಳ್ಳತನ ನೆಡೆದಿರುವ ವಿಚಿತ್ರ ಘಟನೆ ತಾಲೂಕಿನ ಕೋಣಂದೂರು ಸಮೀಪ ನೆಡೆದಿದೆ.  KA – 14 M 4592 ಸಂಖ್ಯೆಯ ಕಾರೊಂದು ಹಿರೇಬೈಲಿನಿಂದ ಹೆಗ್ಗಡಿಗೆರೆಗೆ ಹೋಗುವಾಗ ಮಲ್ಲಿಗೆಕಟ್ಟೆಯಲ್ಲಿ ಬೈಕ್ ಅಡ್ಡ ಬಂದು ಅಪಘಾತವಾಗಿದೆ.  ಕಾರು ಹಾಗೂ ಬೈಕ್ ಚಾಲಕನ ಮಧ್ಯೆ ಗಲಾಟೆ ನೆಡೆಯುವಾಗ ಮೂರನೇ ವ್ಯಕ್ತಿಯೊಬ್ಬ ಬಂದು ಹಲ್ಲೆ ನೆಡೆಸಿ ಕಾರಿನ ಚಾಲಕನ ಕೊರಳಲ್ಲಿ…

Read More

ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮ: ಎಂ ಎನ್ ಸುಧಾಕರ್.

ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮ: ಎಂ ಎನ್ ಸುಧಾಕರ್ ಹೊಸನಗರ: ಯಾವುದೇ ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ ಈ ನಿಟ್ಟಿನಲ್ಲಿ ಹೊಸನಗರ ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆ ರಾಷ್ಟ್ರೀಯ ತರಬೇತುದಾರರಾದ ದಿವಂಗತ ಜಾನ್ ವಿಲ್ಸನ್ ಗೋನ್ ಸಾಲ್ವಿಸ್ ಅವರು ಸ್ಮರಣಾರ್ಥ ಈ ಒಂದು ವಾಲಿಬಾಲ್ ತರಬೇತಿ ಶಿಬಿರವನ್ನ ಹಮ್ಮಿಕೊಳ್ಳಲಾಗಿದೆ ಎಂದು ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಎಂ ಎನ್ ಸುಧಾಕರ್ ತಿಳಿಸಿದರು. ಉಚಿತ ವಾಲಿಬಾಲ್ ತರಬೇತಿ ಶಿಬಿರಕ್ಕೆ…

Read More

ಸಾಗರ ತಾಲ್ಲೂಕು ಬಿಜೆಪಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಬೈಕ್ ಅಪಘಾತದಲ್ಲಿ ಸಾವು :

ಸಾಗರ ತಾಲೂಕಿನ ಯಳವರಸಿಯ ರೈಲ್ವೆ ಗೇಟ್ ಬಳಿ ಚಲಿಸುತ್ತಿದ್ದ ಬೈಕ್​ನಿಂದ ಬಿದ್ದು ಹಿಂಬದಿ ಸವಾರ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.  ತ್ಯಾಗರ್ತಿ ನಿವಾಸಿ ಹಾಗೂ ಬಿಜೆಪಿ ತಾಲ್ಲೂಕು S.C ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಪರಶುರಾಮ್ ಇಂದು ಬೈಕ್ ಅಪಘಾತದಲ್ಲಿ ಮೃತಪಟ್ಟ ದುರ್ಧೈವಿಯಾಗಿದ್ದಾರೆ.  ಬೈಕ್ ಚಲಾಯಿಸುತ್ತಿದ್ದ ಬೈಕ್ ಚಾಲಕ ಮಂಜುಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಾಯಾಳುವಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಂಜು ಹಾಗೂ ಪರಾಶುರಾಮ್ ಬೈಕ್ ನಲ್ಲಿ ಸಾಗರಕ್ಕೆ ಬರುತ್ತಿದ್ದಾಗ ರೈಲ್ವೆ ಗೇಟ್ ಬಳಿ…

Read More

HOSANAGARA | ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಬಿ.ಜಿ. ಚಂದ್ರಮೌಳಿ ನೇಮಕ

ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಬಿ.ಜಿ. ಚಂದ್ರಮೌಳಿ ಅವರನ್ನು ನೇಮಕ ಮಾಡಲಾಗಿದೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಯಲ್ಲಿ ಬರುವ ಸಾಗರ ವಿಧಾನಸಭೆ ಕ್ಷೇತ್ರದ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಜಿ.ಬಿ. ಚಂದ್ರಮೌಳಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. ಜಿ.ಬಿ. ಚಂದ್ರಮೌಳಿ ಅವರು ತಕ್ಷಣ ಹೊಸನಗರ ಬ್ಲಾಕ್ ಕಾಂಗ್ರೆಸ್‌ನ ಅಧಿಕಾರ ವಹಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಕಾರ್ಯೋನ್ಮುಖರಾಗಬೇಕೆಂದು ಸೂಚಿಸಲಾಗಿದೆ….

Read More

ಅಕಾಲಿಕ ಮಳೆಗೆ ಬ್ಯಾಡರಕೊಪ್ಪದಲ್ಲಿ ಬಿದ್ದ ಮನೆಗೆ ಶಾಸಕ ಹೆಚ್ ಹರತಾಳು ಹಾಲಪ್ಪ ಭೇಟಿ. ತತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ !!

ರಾಜ್ಯದಲ್ಲಿ ಅಕಾಲಿಕ ಮಳೆಗೆ ಇದೀಗ ರಾಜ್ಯವೇ ತತ್ತರಿಸಿದೆ. ಮಳೆಯ ಅವಾಂತರ ಸೃಷ್ಟಿಸಿದ ಅವಾಂತರ ಒಂದೆರಡಲ್ಲ.  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹೊಸೂರು ಗ್ರಾ.ಪಂ ಬ್ಯಾಡರಕೊಪ್ಪದ ಹನುಮಮ್ಮ ರಂಗೇಗೌಡ ಇವರ ಮನೆ ಕುಸಿದು ಹಾನಿಗೊಳಗಾಗಿದ್ದು.ಸಂಪೂರ್ಣ ಕುಟುಂಬವೇ ಪರಿತಪಿಸುವಂತಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಹಾಲಪ್ಪ ನವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸರ್ಕಾರದಿಂದ ಪರಿಹಾರ ಕಲ್ಪಿಸಿಕೊಡುವ ಭರವಸೆ ನೀಡಿದರು.ಕೂಡಲೇ ಸಂಬಂದ ಪಟ್ಟ ಅಧಿಕಾರಿಗಳಿಗೆ ಸ್ಥಳದಿಂದಲೇ ಕರೆ ಮಾಡಿದ…

Read More