ವರದಕ್ಷಿಣೆಗಾಗಿ ಪತ್ನಿಯ ಬೆತ್ತಲೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ : ನಾಲ್ವರ ವಿರುದ್ಧ ಪ್ರಕರಣ ದಾಖಲು

ರಿಪ್ಪನ್ ಪೇಟೆ : ವರದಕ್ಷಿಣೆಗಾಗಿ ಬೆತ್ತಲೆ ವಿಡಿಯೋ ತೆಗೆದು ಬೆದರಿಕೆ ಹಾಕುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ, ಅತ್ತೆ-ಮಾವ ಸೇರಿದಂತೆ ನಾಲ್ವರ ವಿರುದ್ಧ ಮಹಿಳೆಯೊಬ್ಬರು ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶಂಗೇರಿಯ ವೆಲ್ ಕಮ್ ಗೇಟ್‌ನ ಸಂತ್ರಸ್ತೆಯ ಪತಿ ಸಲ್ಮಾನ್, ಅತ್ತೆ ಸಾಹೀರಾ, ಮಾವ ಶೌಕತ್ ಖಾನ್ ಮತ್ತು ನಾದಿನಿ ಸಮೀನಾ ವಿರುದ್ಧ ಪ್ರಕರಣ ದಾಖಲಾಗಿದೆ. ಹೊಸನಗರ ತಾಲೂಕಿನ ಹುಂಚ ಹೋಬಳಿಯ ಗ್ರಾಮವೊಂದರ ಸಂತ್ರಸ್ತೆಗೆ ಮತ್ತು ಶೃಂಗೇರಿ ವೆಲೆ ಕಮ್ ಗೇಟ್‌ನ ಸಲ್ಮಾನ್ ಜೊತೆ ವಿವಾಹ…

Read More

ಭಾರತ್ ಜೋಡೋ ಯಾತ್ರೆಯಲ್ಲಿ ಮೃತಪಟ್ಟಿದ್ದ ಸಾಗರದ ಕಾರ್ಯಕರ್ತನ ಮನೆಗೆ ಡಿ ಕೆ ಶಿವಕುಮಾರ್ ಭೇಟಿ – 10 ಲಕ್ಷ ನೆರವಿನ ಚೆಕ್ ವಿತರಣೆ|KPCC

ಭಾರತ್ ಜೋಡೋ ಯಾತ್ರೆಗೆ ತೆರಳಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿಯ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದರು.ಆ ಕಾರ್ಯಕರ್ತನ ಮನೆಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಿ, 10 ಲಕ್ಷ ನೆರವಿನ ಚೆಕ್ ವಿತರಿಸಿದರು. ಭಾರತ್ ಜೋಡೋ ಯಾತ್ರೆ ವೇಳೆ ಹಿರಿಯೂರು ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತ್ಯಾಗರ್ತಿ ಹೋಬಳಿ ಹುತ್ತದಿಂಬ ಗ್ರಾಮದ ರಮೇಶ್ ಅವರ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು…

Read More

ಮಂಗನ ಖಾಯಿಲೆ(KFD) ಬಗ್ಗೆ ಆತಂಕ ಬೇಡ – ಶಾಸಕ ಹರತಾಳು ಹಾಲಪ್ಪ

ಮಂಗನ ಖಾಯಿಲೆ ಬಗ್ಗೆ ಆತಂಕ ಬೇಡ – ಶಾಸಕ ಹರತಾಳು ಹಾಲಪ್ಪ ರಿಪ್ಪನ್‌ಪೇಟೆ : ಸಮೀಪದ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಇತ್ತೀಚಿಗೆ ವ್ಯಕ್ತಿಯೋರ್ವನಿಗೆ ಮಂಗನ ಖಾಯಿಲೆ ಕಂಡುಬಂದಿದ್ದು ಜನರಲ್ಲಿ ಆತಂಕ ಮೂಡಿದ್ದ ಹಿನ್ನಲೆಯಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಅಧಿಕಾರಿಗಳೊಂದಿಗೆ ಸಮಾಲೋಚನ ಸಭೆ ನಡೆಸಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಮಂಗನ ಖಾಯಿಲೆ ಬಗ್ಗೆ ಗ್ರಾಮೀಣ ಪ್ರದೇಶದ ನಾಗರೀಕರು ಆತಂಕ ಪಡುವ ಅವಶ್ಯಕತೆಯಿಲ್ಲ ಈಗಾಗಲೇ ಆರೋಗ್ಯ ,ಕಂದಾಯ ಹಾಗೂ…

Read More

ಮಕ್ಕಳ ಸಮಗ್ರ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆ – ಪಿಇಎಸ್ ಪಬ್ಲಿಕ್ ಸ್ಕೂಲ್‌ನ ಸಮಗ್ರ ಶಿಕ್ಷಣಕ್ಕೆ ಮಾದರಿ

ಮಕ್ಕಳ ಸಮಗ್ರ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆ – ಪಿಇಎಸ್ ಪಬ್ಲಿಕ್ ಸ್ಕೂಲ್‌ನ ಸಮಗ್ರ ಶಿಕ್ಷಣಕ್ಕೆ ಮಾದರಿ ರಿಪ್ಪನ್ ಪೇಟೆಯಿಂದ ಪ್ರತಿ ನಿತ್ಯ ಶಾಲಾ ಬಸ್ ವ್ಯವಸ್ಥೆ PES Public School, Shivamogga offers CBSE-based holistic education with NEP & NCF guidelines, smart classrooms, AI, coding, robotics, and Allen coaching. Admissions open for 2026-27. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಕೇವಲ ಪಾಠಪುಸ್ತಕ ಜ್ಞಾನ ಮಾತ್ರವಲ್ಲ, ಜೀವನ ಕೌಶಲ್ಯಗಳೂ…

Read More

ಅಕ್ರಮ ಗಾಂಜಾ ಮಾರಾಟ – ಮಾಲು ಸಮೇತ ಇಬ್ಬರು ಆರೋಪಿಗಳ ಬಂಧನ| Crime News

ಅಕ್ರಮ ಗಾಂಜಾ ಮಾರಾಟ – ಮಾಲು ಸಮೇತ ಇಬ್ಬರು ಆರೋಪಿಗಳ ಬಂಧನ ಆನವಟ್ಟಿ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತಿದ್ದ ಆರೋಪಿಗಳನ್ನು ಪಿಎಸ್‌ಐ ರಾಜು ರೆಡ್ಡಿ ನೇತ್ರತ್ವದ ಸಿಬ್ಬಂದಿಗಳ ತಂಡ ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಸೊರಬ ತಾಲ್ಲೂಕಿನ ಆನವಟ್ಟಿ ಟೌನ್ ತಿಮ್ಲಾಪುರ ಗುಡ್ಡದ ರಸ್ತೆ ಕ್ರಾಸ್ ನ ಬಳಿ ಇಬ್ಬರು ಆಸಾಮಿಗಳು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಗಾಂಜಾ ಮಾರಾಟ…

Read More

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂದು ಮರುನಾಮಕರಣ: ಲಕ್ಷಣ ಸವದಿ

ಬೆಂಗಳೂರು: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂದು ಮರುನಾಮಕರಣ ಮಾಡುವುದಾಗಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಈ ಆದೇಶ ತಕ್ಷಣದಿಂದಲೇ ಅನ್ವಯವಾಗಲಿದ್ದು, ಇನ್ನುಮುಂದೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು (North Eastern Karnataka Road Transport Corporation) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂದು ಕರೆಯುವುದಾಗಿ ಮಾಹಿತಿ ನೀಡಿದ್ದಾರೆ. ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣವಾದ ನಂತರ ಈಶಾನ್ಯ ಸಾರಿಗೆಗೂ…

Read More

ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆದಿದ್ದಕ್ಕೆ ಮಸೀದಿ ಅಧ್ಯಕ್ಷ ಸ್ಥಾನದಿಂದ ವಜಾ : ಜಾತ್ಯಾತೀತತೆ ಎಂಬ ಮಾತು ಕೇವಲ ಬಾಯಿ ಮಾತಿಗೆ ಸೀಮಿತವಾಗಿದೆಯಾ ?????

ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆದಿದ್ದಕ್ಕೆ ಮಸೀದಿ ಅಧ್ಯಕ್ಷರನ್ನು ಸ್ಥಾನದಿಂದ ವಜಾ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಸಿ.ಎನ್.ಅಕ್ಮಲ್ ಜಾಮಿಯಾ ಮಸೀದಿಯ ಅಧ್ಯಕ್ಷ ಸ್ಥಾನದಿಂದ ವಜಾಗೊಂಡವರು. ಅಕ್ಮಲ್ ಅವರು ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಕೂಡ. ಇತ್ತೀಚೆಗೆ ನಗರದ ರಾಮನಹಳ್ಳಿಯಲ್ಲಿ ನೂತನವಾಗಿ ಆರಂಭಗೊಂಡ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗ್ರಾಮಸ್ಥರ ಮನವಿ ಮೇರೆಗೆ ಅನ್ನದಾನ ಏರ್ಪಡಿಸಿದ್ದರು. ಈ ವೇಳೆ ಅಕ್ಮಲ್ ಅವರು ದೇವಸ್ಥಾನಕ್ಕೂ ಹೋಗಿದ್ದರು. ಅಲ್ಲಿ ಪೂಜೆ ಬಳಿಕ ಮಂಗಳಾರತಿ ಪಡೆದಿದ್ದರು. ಈ ಕಾರಣಕ್ಕೆ ಅವರನ್ನು ಜಾಮೀಯ ಮಸೀದಿ ಅಧ್ಯಕ್ಷ ಸ್ಥಾನದಿಂದ…

Read More

ಸಚಿವ ಮಧು ಬಂಗಾರಪ್ಪಗೆ ಅಹಂ ಜಾಸ್ತಿ ಆಗಿ ಅಧಿಕಾರದ ಪಿತ್ತ ನೆತ್ತಿಗೇರಿದೆ – ಶಾಸಕ ಬೇಳೂರು ಕಿಡಿ | GKB

ಸಚಿವ ಮಧು ಬಂಗಾರಪ್ಪಗೆ ಅಹಂ ಜಾಸ್ತಿ ಆಗಿ ಅಧಿಕಾರದ ಪಿತ್ತ ನೆತ್ತಿಗೇರಿದೆ – ಶಾಸಕ ಬೇಳೂರು ಕಿಡಿ ಸಚಿವ ಮಧು ಬಂಗಾರಪ್ಪ ರವರಿಗೆ ಅಹಂ ಜಾಸ್ತಿ ಆಗಿ ಅಧಿಕಾರದ ಪಿತ್ತ ನೆತ್ತಿಗೇರಿದೆ ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ, ಎಲ್ಲಾ ಉಸ್ತುವಾರಿ ಸಚಿವರು ಸರಿ ಇದ್ದಾರೆ ಆದರೆ ನಮ್ಮ ಉಸ್ತುವಾರಿ ಸಚಿವರಿಗೆ ಅಹಂ ಜಾಸ್ತಿ ಆಗಿದೆ‌. ಎಲ್ಲಾ ವಿಚಾರದಲ್ಲಿ ಮೂಗು ತೂರಿಸುತ್ತಾರೆ….

Read More

ಅರಸಾಳು ಹುಸೇನ್ ಸಾಬ್ ನಿಧನ

ಅರಸಾಳು ಹುಸೇನ್ ಸಾಬ್ ನಿಧನ ರಿಪ್ಪನ್ ಪೇಟೆ : ಇಲ್ಲಿನ ಅರಸಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡರಾಗಿದ್ದ ಹುಸೇನ್ ಸಾಬ್(69) ನಿಧನರಾಗಿದ್ದಾರೆ. ಇತ್ತೀಚಿನ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಹುಸೇನ್ ಸಾಬ್ ಇಂದು ಬೆಳಿಗ್ಗೆ ಅರಸಾಳಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಮೂವರು ಹೆಣ್ಣು ಮಕ್ಕಳು , ಓರ್ವ ಮಗ ಹಾಗೂ ಅಪಾರ ಬಂಧ ಬಳಗವನ್ನು ಅಗಲಿದ್ದಾರೆ.

Read More

ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್ ಸ್ಥಾಪಿಸುವಂತೆ ಒತ್ತಾಯಿಸಿ ನಾಳೆ ರಸ್ತೆ ತಡೆ :

ಹೊಸನಗರ ವಿಧಾನಸಭೆ ಕ್ಷೇತ್ರ ಪುನರ್ ಸ್ಥಾಪಿಸುವ ಹೋರಾಟಕ್ಕೆ ಮತ್ತೆ ಕಹಳೆ ಮೊಳಗಿದ್ದು,ನಾಳೆ ಹೊಸನಗರದ ಹಳೆ ಕೋರ್ಟ್ ಸರ್ಕಲ್ ನಲ್ಲಿ ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ. ಹೊಸನಗರ ವಿಧಾನಸಭಾ ಕ್ಷೇತ್ರ ಕಳೆದುಕೊಂಡು ಹಲವು ವರುಷಗಳೇ ಕಳೆದು ಹೋಗಿದೆ. ಹೊಸನಗರ ಕ್ಷೇತ್ರ ರಾಜ್ಯದ ಅತಿ ದೊಡ್ಡ ಕ್ಷೇತ್ರವಾಗಿದೆ. 175 ಕಿ.ಮೀ. ಉದ್ದವಿರುವ ಈ ಕ್ಷೇತ್ರ ಈಗ ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರಗಳಿಗೆ ಹಂಚಿ ಹೋಗಿದ್ದರಿಂದ ಹೊಸನಗರ ತಾಲೂಕು ಅನಾಥವಾಗಿ ಪರಿಣಮಿಸಿದೆ. 2001 ರ ಕುಲದೀಪ್ ಸಿಂಗ್ ಕಮಿಟಿ ವರದಿ ಪ್ರಕಾರ ಜನಸಂಖ್ಯಾ…

Read More