ಅಕ್ರಮ ಗಾಂಜಾ ಮಾರಾಟ – ಮಾಲು ಸಮೇತ ಇಬ್ಬರು ಆರೋಪಿಗಳ ಬಂಧನ
ಆನವಟ್ಟಿ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತಿದ್ದ ಆರೋಪಿಗಳನ್ನು ಪಿಎಸ್‌ಐ ರಾಜು ರೆಡ್ಡಿ ನೇತ್ರತ್ವದ ಸಿಬ್ಬಂದಿಗಳ ತಂಡ ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಸೊರಬ ತಾಲ್ಲೂಕಿನ ಆನವಟ್ಟಿ ಟೌನ್ ತಿಮ್ಲಾಪುರ ಗುಡ್ಡದ ರಸ್ತೆ ಕ್ರಾಸ್ ನ ಬಳಿ ಇಬ್ಬರು ಆಸಾಮಿಗಳು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ 1) ಸುಹೇಲ್ ಮೆಹಬೂಬ್ ಅಲಿ ಮುಲ್ಲನ್ನವರ್, 27 ವರ್ಷ, ಗುಡ್ಡದ ಮಲ್ಲಾಪುರ, ಬ್ಯಾಡಗಿ ತಾಲ್ಲೂಕು ಹಾವೇರಿ ಮತ್ತು 2) ಗೌಸ್ ಮೊಹಿದ್ದೀನ್ ಶಾ, 26 ವರ್ಷ, ತಿಳುವಳ್ಳಿ ಗ್ರಾಮ ಹಾವೇರಿ ಇವರನ್ನು ಬಂಧಿಸಲಾಗಿದೆ, ಆರೋಪಿತರಿಂದ ಅಂದಾಜು ಮೌಲ್ಯ 40,000/- ರೂಗಳ 980 ಗ್ರಾಂ ತೂಕದ ಒಣ ಗಾಂಜಾವನ್ನು, ಗಾಂಜಾ ಮಾರಾಟ ಮಾಡಿ ಗಳಿಸಿದ ರೂ 600/- ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ, ಕಾರಿಯಪ್ಪ ಎ.ಜಿ, ಮಾರ್ಗದರ್ಶನದಲ್ಲಿ ಶಿಕಾರಿಪುರ ಡಿವೈಎಸ್ಪಿ ಕೇಶವ್ ಹಾಗೂ ಸೊರಬ ಸಿಪಿಐ ಬಾಲಚಂದ್ರ ನಾಯಕ್, ಮೇಲ್ವಿಚಾರಣೆಯಲ್ಲಿ, ಆನವಟ್ಟಿ ಪಿಎಸ್ಐ ರಾಜು ರೆಡ್ಡಿ ಬೆನ್ನೂರು ಪಿಎಸ್ಐ, ನೇತೃತ್ವದ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ.
ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಖಡಕ್ ಪಿಎಸ್‌ಐ ರಾಜುರೆಡ್ಡಿ ಲೋಕಸಭಾ ಚುನಾವಣೆಯ ನಿಮಿತ್ತ ಹೊಸನಗರ ಪಟ್ಟಣದಲ್ಲಿ ನಾಲ್ಕು ತಿಂಗಳು ಕಾರ್ಯನಿರ್ವಹಿಸಿದ್ದು ಈ ಸಂಧರ್ಭದಲ್ಲಿ ತಾಲೂಕ್ ವ್ಯಾಪ್ತಿಯಲ್ಲಿ ಅಕ್ರಮ ಮರಳು , ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಗಾಂಜಾ ಗಿರಾಕಿಗಳಿಗೆ ಸಿಂಹಸ್ವಪ್ನವಾಗಿದ್ದರು