ಸೊರಬ ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಜ್ಜು:

ಸೊರಬ: ಅಚ್ಚರಿಯ ಬೆಳವಣಿಗೆಯಲ್ಲಿ ಜಿಲ್ಲೆಯ ಸೊರಬ ಪುರಸಭೆ ಸದಸ್ಯರು ಪುರಸಭೆಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಿಲೇರಿದ್ದಾರೆ. ಸೊರಬ ಪುರಸಭ ಅಧ್ಯಕ್ಷ ಎಂ.ಡಿ.ಉಮೇಶ್ ಅವರ ನಡುವಳಿಕೆಯಿಂದ ಬೇಸತ್ತು ಇಂದು ಪುರಸಭೆಯ 11 ಜನ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿಯ ಬಾಗಿಲು ತಟ್ಟಿದ್ದಾರೆ. 12 ಜನ ಸದಸ್ಯರಿರುವ ಸೊರಬ ಪುರಸಭೆಯಲ್ಲಿ 6 ಜನ ಸದಸ್ಯರು ಬಿಜೆಪಿ ಪಕ್ಷದ ಸದಸ್ಯರಿದ್ದು 4 ಜನ ಕಾಂಗ್ರೆಸ್, ಒಬ್ಬರು ಜೆಡಿಎಸ್ ಒಬ್ಬರು ಪಕ್ಷೇತರರಿದ್ದಾರೆ. ವಿಪಕ್ಷ ನಾಯಕ…

Read More

ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಕಲ್ಯಾಣಿಗೆ ಬಿದ್ದು ಯುವಕ ಸಾವು

ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಕಲ್ಯಾಣಿಗೆ ಬಿದ್ದು ಯುವಕ ಸಾವು ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಕಲ್ಯಾಣಿಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಕ್ಕಮಹಾದೇವಿ ಜನ್ಮಸ್ಥಳ ಉಡತಡಿ ಗ್ರಾಮದಲ್ಲಿ ನಡೆದಿದೆ. ಹೌದು ಕಲ್ಯಾಣಿ ಬಳಿ ಪೋಟೋ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಕ್ಕಮಹಾದೇವಿ ಜನ್ಮಸ್ಥಳ ಉಡತಡಿ ಗ್ರಾಮದಲ್ಲಿ ನಡೆದಿದೆ. ಶಿರಾಳಕೊಪ್ಪದ ಗಂಡಗದಕೇರಿಯ ನಿವಾಸಿ ತಾಹೀರ್(21) ಮೃತ ಯುವಕ. ಸ್ನೇಹಿತರೊಂದಿಗೆ ಅಕ್ಕಮಹಾದೇವಿ ಜನ್ಮಸ್ಥಳ…

Read More

ರಿಪ್ಪನ್‌ಪೇಟೆ : ಉತ್ತಮ ಶಿಕ್ಷಕಿಯರಿಗೆ ಗ್ರಾಪಂ ವತಿಯಿಂದ ಸನ್ಮಾನ|honour

ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ ಗ್ರಾಪಂ ಸಭಾಂಗಣದಲ್ಲಿ ತಾಲೂಕ್ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದ ಇಬ್ಬರು ಶಿಕ್ಷಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆಂಚನಾಲ ಗ್ರಾಮ ಪಂಚಾಯತ್ ನಲ್ಲಿ ಸೋಮವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ತಾಲೂಕ್ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗ್ರಾಪಂ ವ್ಯಾಪ್ತಿಯ ಚಂದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಾಜುನ್ ಬಿ ಹಾಗೂ ಕೆಂಚನಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಭಾಗ್ಯಲಕ್ಷ್ಮಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಕೆಂಚನಾಲ ಗ್ರಾಪಂ ಅಧ್ಯಕ್ಷರಾದ ಉಬೇದುಲ್ಲಾ ಷರೀಫ್…

Read More

ರಿಪ್ಪನ್ ಪೇಟೆ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ 77ನೇ ಸ್ವಾತಂತ್ರ್ಯೋತ್ಸವ ಆಚರಣೆ – ಸಾವಿರಾರು ವಿದ್ಯಾರ್ಥಿಗಳಿಂದ ಭಾರತ ಮಾತೆಗೆ ಜೈಕಾರ

ರಿಪ್ಪನ್ ಪೇಟೆ ಪಟ್ಟಣದಲ್ಲಿ  ಸಡಗರ ಸಂಭ್ರಮದಿಂದ 77ನೇ ಸ್ವಾತಂತ್ರ್ಯೋತ್ಸವ ಆಚರಣೆ-ಸಾವಿರಾರು ವಿದ್ಯಾರ್ಥಿಗಳಿಂದ ಭಾರತ ಮಾತೆಗೆ ಜೈಕಾರ  ರಿಪ್ಪನ್‌ಪೇಟೆ: ಪಟ್ಟಣದ ವಿವಿಧೆಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು  ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಗ್ರಾಮ ಪಂಚಾಯತಿ, ನಾಡಕಛೇರಿ, ಪೊಲೀಸ್‌ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ರೈತಸಂಪರ್ಕ ಕೇಂದ್ರ, ಸರ್ಕಾರಿ ಬಿಸಿಎಂ ವಸತಿ ನಿಲಯ, ಪ್ರಥಮದರ್ಜೆ, ಪದವಿಪೂರ್ವ ಕಾಲೇಜು, ಪ್ರೌಢಶಾಲೆ, ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಹಿರಿಯ, ಕಿರಿಯ ಶಾಲೆ, ಮೆಸ್ಕಾಂ, ಪಶುವೈದ್ಯಕೀಯ ಆಸ್ಪತ್ರೆ,  ಬ್ಯಾಂಕ್‌ಗಳು, ಅರಣ್ಯ…

Read More

ಮೈಕ್ರೋ ಫೈನಾನ್ಸ್ ನವರಿಂದ ಬಡವರಿಗೆ ಕಿರುಕುಳ ತಡೆಗಟ್ಟಲು ಪೊಲೀಸರಿಗೆ ವಿಶೇಷ ಅಧಿಕಾರ : ಗೃಹ ಸಚಿವ

ಮೈಕ್ರೋ ಫೈನಾನ್ಸ್ ನವರಿಂದ ಬಡವರಿಗೆ ಕಿರುಕುಳ ತಡೆಗಟ್ಟಲು ಪೊಲೀಸರಿಗೆ ವಿಶೇಷ ಅಧಿಕಾರ : ಗೃಹ ಸಚಿವ ತುಮಕೂರು : ಮೈಕ್ರೋ ಫೈನಾನ್ಸ್​ನವರಿಂದ ಬಡವರ ಮೇಲಾಗುತ್ತಿರುವ ಕಿರುಕುಳ ತಪ್ಪಿಸಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲು, ಕಾನೂನು ರಚಿಸುವ ಸಲುವಾಗಿ ರಾಜ್ಯಪಾಲರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು. ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್​ ಕುರಿತು ಸಿಎಂ, ಡಿಸಿಎಂ, ಕಾನೂನು ಸಚಿವರು ಹಾಗೂ ನಾನು ಚರ್ಚೆ ಮಾಡಿದ್ದೇವೆ. ಆರ್​ಬಿಐ ಪ್ರತಿನಿಧಿಗಳು, ಮೈಕ್ರೋ…

Read More

ಕರ್ತವ್ಯದಲ್ಲಿದ್ದ ಪಿಎಸ್‌ಐ ಮೇಲೆ ಹಲ್ಲೆ ಪ್ರಕರಣ , ಇಬ್ಬರಿಗೆ ಶಿಕ್ಷೆ ಪ್ರಕಟ : ಮಂಡಘಟ್ಟದಲ್ಲಿ ನಡೆದ ಕೃತ್ಯಕ್ಕೆ ತೀರ್ಪು

Two brothers convicted for attacking a Police Sub-Inspector during a ganja case investigation in Shivamogga. Court sentences them to two years jail, imposes fine and orders compensation to the PSI and witnesses. ಕರ್ತವ್ಯದಲ್ಲಿದ್ದ ಪಿಎಸ್‌ಐ ಮೇಲೆ ಹಲ್ಲೆ ಪ್ರಕರಣ , ಇಬ್ಬರಿಗೆ ಶಿಕ್ಷೆ ಪ್ರಕಟ : ಮಂಡಘಟ್ಟದಲ್ಲಿ ನಡೆದ ಕೃತ್ಯಕ್ಕೆ ತೀರ್ಪು ಶಿವಮೊಗ್ಗ: ಗಾಂಜಾ ಪ್ರಕರಣದ ವಿಚಾರಣೆಗೆ ಆರೋಪಿಯನ್ನು ಕರೆದುಕೊಂಡು ಹೋಗುವ ವೇಳೆ ಪಿಎಸ್‌ಐ…

Read More

ಸೊರಬ: ಬಿಜೆಪಿ ಕೈ ತಪ್ಪಿದ ಪುರಸಭೆ ಅಧ್ಯಕ್ಷ ಸ್ಥಾನ : ಶಾಸಕ ಕುಮಾರ್ ಬಂಗಾರಪ್ಪಗೆ ತೀವ್ರ ಮುಖಭಂಗ

ಶಿವಮೊಗ್ಗ: ಸೊರಬ ಪುರಸಭೆ ಅಧ್ಯಕ್ಷ ಅಧ್ಯಕ್ಷ ಎಂ.ಡಿ.ಉಮೇಶ್ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಗೆಲುವು ಲಭಿಸಿದೆ. ಪರಿಣಾಮ ಸೊರಬ ಪುರಸಭೆ ಅಧ್ಯಕ್ಷ ಸ್ಥಾನ ಬಿಜೆಪಿ ಕೈ ತಪ್ಪಿದೆ. ಇಂದು ಸೊರಬ ಪುರಸಭೆ ಉಪಾಧ್ಯಕ್ಷೆ ಮಧುರಾ ಜಿ.ಶೇಟ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ನಡೆದ ಅವಿಶ್ವಾಸ ನಿರ್ಣಯದ ಪರ 11 ಮತಗಳು ಲಭ್ಯವಾಗಿದೆ. 12 ಜನ ಸದಸ್ಯರಿರುವ ಪುರಸಭೆಯಲ್ಲಿ ಬಿಜೆಪಿ 6, ಕಾಂಗ್ರೆಸ್​​ 4, ಜೆಡಿಎಸ್​ ಹಾಗೂ ಪಕ್ಷೇತರ ಸದಸ್ಯರು ತಲಾ 1 ಸ್ಥಾನ ಲಭಿಸಿದ್ದು,…

Read More

ಹೊಸನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನಾಗೋಡಿ ವಿಶ್ವನಾಥ್ ಹಾಗೂ ಉಬೇದುಲ್ಲಾ ಷರೀಫ್ ನೇಮಕ

ಶಿವಮೊಗ್ಗ: ಜಿಲ್ಲೆಯ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರನ್ನಾಗಿ ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯ, ಯುವ ಮುಖಂಡ ನಾಗೋಡಿ ವಿಶ್ವನಾಥ್ ಹಾಗೂ ಕೆಂಚನಾಲ ಗ್ರಾಪಂ ಮಾಜಿ ಅಧ್ಯಕ್ಷ ಉಬೇದುಲ್ಲಾ ಷರೀಫ್ ಅವರನ್ನು ನೇಮಕ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ( KPCC) ಆದೇಶಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಶಿಫಾರಸ್ಸಿನ ಮೇರೆಗೆ ಹೊಸನಗರ ಬ್ಲಾಕ್…

Read More

ಹಿಂದೂ ಧಾರ್ಮಿಕ ಕ್ಷೇತ್ರದ ಬಗ್ಗೆ ಷಡ್ಯಂತ್ರ ಮಾಡುವವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ – ಆದರ್ಶ ಗೋಖಲೆ

ಹಿಂದೂ ಧಾರ್ಮಿಕ ಕ್ಷೇತ್ರದ ಬಗ್ಗೆ ಷಡ್ಯಂತ್ರ ಮಾಡುವವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ – ಆದರ್ಶ ಗೋಖಲೆ ಧಾರ್ಮಿಕ ಕ್ಷೇತ್ರಗಳ ವಿರುದ್ಧ ದಬ್ಬಾಳಿಕೆ ಶತ-ಶತಮಾನಗಳಿಂದಲ್ಲೂ ನಡೆಯುತ್ತ ಬಂದಿದ್ದು ಹಿಂದುಗಳು ಪೂಜಿಸುವ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಷಡ್ಯಂತ್ರ ಮಾಡುವವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ ಎಂದು ಮಂಗಳೂರಿನ ಪ್ರಖ್ಯಾತ ಅಂಕಣ ಬರಹಗಾರರು ಮತ್ತು ಹಿಂದೂ ವಾಗ್ಮಿ ಆದರ್ಶ ಗೋಖಲೆ ಹೇಳಿದರು. ಹೊಸನಗರದಲ್ಲಿ ಹಿಂದೂ ಮಹಾ ಧರ್ಮಸ್ಥಳ ಭಕ್ತಾಧಿಗಳು ವೇದಿಕೆಯಿಂದ ಕೊಟ್ಯಂತರ ಹಿಂದುಗಳ ಪವಿತ್ರ ಕ್ಷೇತ್ರ ಶ್ರೀಧರ್ಮಸ್ಥಳ ಮಂಜುನಾಥ ಸ್ವಾಮಿ ಪುಣ್ಯ ಸನ್ನಿಧಿಗೆ ಕಳಂಕ ತಂದಿರುವವರ…

Read More

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರು ಸಾವು|accident

ತೀರ್ಥಹಳ್ಳಿ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದ ಇಬ್ಬರು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ತೀರ್ಥಹಳ್ಳಿ ತಾಲೂಕು ದೇವಂಗಿ ಬಳಿ ಭಾನುವಾರ ನಡೆದಿದೆ. ತೀರ್ಥಹಳ್ಳಿ ಮತ್ತು ಕೊಪ್ಪ ಮಾರ್ಗದ ದೇವಂಗಿ ವಾಟಿಗಾರು ಬಳಿ ಮಾರುತಿ ಸ್ವಿಫ್ಟ್ ಹಾಗೂ ಫಿಗೋ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಎರಡು ಕಾರಿನಲ್ಲಿದ್ದ ತಲಾ ಮೂವರು ಗಂಭೀರ ಗಾಯಗೊಂಡಿದ್ದರು.  ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ  ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಡಾಕಪ್ಪ ಗೌಡ(70), ಶ್ರೀನಿವಾಸ್ ಗೌಡ ಶಿರೂರು…

Read More