Headlines

ನೀಲಕಂಠೇಶ್ವರ ಸಹಕಾರ ಸಂಘ ಚುನಾವಣೆ – ಗೆದ್ದು ಬೀಗಿದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ನೇತ್ರತ್ವದ ಬಣ | ಹಾಲಗದ್ದೆ ಉಮೇಶ್ ಬಣಕ್ಕೆ ಸೋಲು

ನೀಲಕಂಠೇಶ್ವರ ಸಹಕಾರ ಸಂಘ ಚುನಾವಣೆ – ಗೆದ್ದು ಬೀಗಿದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ನೇತ್ರತ್ವದ ಬಣ | ಹಾಲಗದ್ದೆ ಉಮೇಶ್ ಬಣಕ್ಕೆ ಸೋಲು

ಹೊಸನಗರ : ತಾಲೂಕಿನ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ  ಸಂಘ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ನೇತ್ರತ್ವದಲ್ಲಿ ಏಳು ಸ್ಥಾನಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.

12 ಸ್ಥಾನಗಳನ್ನು ಹೊಂದಿರುವ ನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ನೇತ್ರತ್ವದಲ್ಲಿ ಏಳು ಸ್ಥಾನಗಳನ್ನು ಪಡೆದು ಆಡಳಿತ ಮಂಡಳಿ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ನಗರ(ಮೂಡುಕೊಪ್ಪ) ನೀಲಕಂಠೇಶ್ವರ ಸಹಕಾರ ಚುನಾವಣೆಯಲ್ಲಿ ಹಾಲಗದ್ದೆ ಉಮೇಶ್ ನೇತ್ರತ್ವದ ಬಣ ಐದು ಸ್ಥಾನಗಳನ್ನು ಪಡೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮೂಡುಗೊಪ್ಪದಲ್ಲಿ ಇರುವಂತ ನೀಲಕಂಠೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ ಭಾನುವಾರ ನಡೆಯಿತು. ಈ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ನ ಭರವಸೆಯ ಯುವ ಮುಖಂಡ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ನೇತೃತ್ವದ ತಂಡಕ್ಕೆ ಭರ್ಜರಿ ಜಯ ಸಾಧಿಸಿದೆ.

ಭಾನುವಾರ ನಡೆದ ನಿಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಗರ ಹೋಬಳಿಯ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಅವರ ಸಾರಥ್ಯದ ಕಾಂಗ್ರೆಸ್ ಬೆಂಬಲಿತ 7 ಸದಸ್ಯರು ಆಯ್ಕೆಯಾಗಿದ್ದಾರೆ. ಈ ಮೂಲಕ ಆಡಳಿತ ಚುಕ್ಕಾಣಿ ಹಿಡಿಯುವತ್ತ ಹೆಜ್ಜೆ ಇರಿಸಿದ್ದಾರೆ.

ಗೆದ್ದ ಕ್ಷೇತ್ರವಾರು ಅಭ್ಯರ್ಥಿಗಳು

1. ಅಂಡಗ ದೂದೂರು

ಆದರ್ಶ ಹೆರಟೆ
ಗಗನ್ ಗೌಡ ಬೇಳೂರು

2. ಅರಮನೆ ಕೊಪ್ಪ

1. ಗುರುರಾಜ್
2. ಸುವರ್ಣ
3. ಕರಿಮನೆ
4. ಅಂಬರೀಶ್ (ಗುಂಡಪ್ಪ)
5. ವಿಶ್ವನಾಥ್

3. ನಗರ (ಮೂಡುಗೊಪ್ಪ)

ಗೋಪಾಲ್ ಶೆಟ್ಟಿ
ಮಂಜಾದ್ರಿ ಗೌಡ
ಶ್ರೀವಿತೋಭಾ
ಸರೋಜಾ ಸತೀಶ್
ಬಸವರಾಜ್

ಈ ಸಂದರ್ಭದಲ್ಲಿ  ಮಾದ್ಯಮದವರೊಂದಿಗೆ ಮಾತನಾಡಿದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಅವರು ನಗರ ಹೋಬಳಿಯ ಜನತೆ ನಮ್ಮ ಮೇಲೆ ಇಟ್ಟ ವಿಶ್ವಾಸದ ಪ್ರತೀಕವಾಗಿ ಈ ಗೆಲುವು ಸಾಧ್ಯವಾಗಿದೆ. ನಮ್ಮ ನಾಯಕರಾಗಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಸಹಕಾರಿ ಧುರೀಣ ಆರ್ ಎಂ ಮಂಜುನಾಥ ಗೌಡರ ಸಂಪೂರ್ಣ ಆಶೀರ್ವಾದದಿಂದ ಹಾಗೂ ಜನತೆಯ ಪ್ರೀತಿ ವಿಶ್ವಾಸದಿಂದ ಈ ಗೆಲುವು ಸಾಧ್ಯವಾಗಿದೆ‌. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆ ಮಾಡುವ ಮೂಲಕ ಜನತೆಯ ಋಣ ತೀರಿಸುತ್ತೇವೆ. ನಿರಂತರವಾಗಿ ನಮ್ಮ ಮೇಲೆ ಆಶೀರ್ವಾದವಿರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿರುವ ಕರುಣಾಕರ ಶೆಟ್ಟಿ, ಪವನ್ ಕುಮಾರ್, ಕಾಂಗ್ರೆಸ್ ಮುಖಂಡರಾಗಿರುವ ಕಣಿಕಿ ಮಹೇಶ್, ಚಂದ್ರ ಶೆಟ್ಟಿ ದೇವಗಂಗೆ, ಹಲಸಿನಹಳಿ ರಮೇಶ್, ಬೈಸೆ ಮಹೇಶ್, ವಿನಾಯಕ ಚಕ್ಕಾರು, ಸತೀಶ್ ಗೌಡ ಕುಮಾರ ಹಿಲ್ಕುಂಜಿ ಹಾಗೂ ಹಾಗೂ ಎಲ್ಲಾ ಗ್ರಾಮ ಪಂಚಾಯ್ತಿಯ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *