ಕಳೂರು ಸಹಕಾರ ಸಂಘ ಚುನಾವಣೆ – ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ ಜಿ ನಾಗರಾಜ್ ಗೆ ಸೋಲು , 12 ಸ್ಥಾನ ಗೆದ್ದು ಗೆಲುವಿನ ನಗೆ ಬೀರಿದ ಹಾಲಿ ಅಧ್ಯಕ್ಷ ದುಮ್ಮ ವಿನಯ್ ಗೌಡ

ಕಳೂರು ಸಹಕಾರ ಸಂಘ ಚುನಾವಣೆ – ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ ಜಿ ನಾಗರಾಜ್ ಗೆ ಸೋಲು , 12 ಸ್ಥಾನ ಗೆದ್ದು ಗೆಲುವಿನ ನಗೆ ಬೀರಿದ ಹಾಲಿ ಅಧ್ಯಕ್ಷ ದುಮ್ಮ ವಿನಯ್ ಗೌಡ

ಹೊಸನಗರ : ಇಲ್ಲಿನ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ  ಕೃಷಿ  ಪತ್ತಿನ ಸಹಕಾರ  ಸಂಘ ಚುನಾವಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಬಿ ಜಿ ನಾಗರಾಜ್ 10 ಮತಗಳ ಅಂತರದಿಂದ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಸಾಲಗಾರ ರಲ್ಲದ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಬಿ ಜಿ ನಾಗರಾಜ್ 164 ಮತಗಳನ್ನು ಪಡೆದರೆ ಎದುರು ಸ್ಪರ್ಧಿ ಶ್ರೀನಿವಾಸ ಹೆಚ್ 174 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಇನ್ನೂ ಸಾಲಗಾರರ ಕ್ಷೇತ್ರದಲ್ಲಿ ರವಿ ಜಿ ಎಸ್ 239 ಮತಗಳನ್ನು ಪಡೆದರೆ ವಿನಯ್ ಕುಮಾರ ಡಿ ಆರ್  244 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಇಂದಿನ ಕಳೂರು ರಾಮೇಶ್ವರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದು ಕ್ಲೀನ್ ಸ್ವೀಪ್ ಅನ್ನು ಹಾಲಿ ಅಧ್ಯಕ್ಷ ದುಮ್ಮಾ ವಿನಯ್ ಗೌಡ ಮಾಡಿದ್ದಾರೆ.

ಸಾಲಗಾರ ರಲ್ಲದ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳು

1). ನಾಗರಾಜ ಬಿ.ಜಿ 164 ಮತಗಳು
2). ವಿಶ್ವೇಶ್ವರಯ್ಯ 07 ಮತಗಳು
3). ಶ್ರೀನಿವಾಸ ಹೆಚ್ 174 ಮತಗಳು – ಗೆಲುವು

ಸಾಲಗಾರ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳು

1). ಈಶ್ವರಪ್ಪ ಕೆ ಆರ್ 66 ಮತಗಳು
2). ರವಿ ಜಿ ಎಸ್ 239 ಮತಗಳು
3). ವಿನಯ್ ಕುಮಾರ ಡಿ ಆರ್ 244 ಮತಗಳು – ಗೆಲುವು

Leave a Reply

Your email address will not be published. Required fields are marked *