Anandapura | ಭಾರಿ ಮಳೆಗೆ ಮನೆಯ ಮೇಲ್ಚಾವಣಿ ಕುಸಿತ – ಅಪಾಯದಿಂದ ಪಾರಾದ ಕುಟುಂಬ
ಕಳೆದ ನಾಲ್ಕು ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಆನಂದಪುರ(Anandapura) ಸುತ್ತಮುತ್ತಲ ಪ್ರದೇಶಗಳಲ್ಲಿ ಮನೆ ಹಾಗೂ ದನದ ಕೊಟ್ಟಿಗೆಗಳು ಬಿದ್ದು ಹಾನಿ ಸಂಭವಿಸಿದೆ.
ಆಚಾಪುರ ಗ್ರಾಮ ಪಂಚಾಯಿತಿಯ, ಮುರುಘಾ ಮಠ ಗ್ರಾಮದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆ(Heavy rain)ಯಿಂದಾಗಿ ಮೈದ್ದೀನ್ ಸಾಬ್ ಎಂಬುವರ ವಾಸದ ಮನೆಯ ಮೇಲ್ಛಾವಣಿ ಮಧ್ಯರಾತ್ರಿ ಕುಸಿದಿದ್ದು ಮನೆಯಲ್ಲಿದ್ದ ಮೂರು ಮಕ್ಕಳು ಸೇರಿದಂತೆ, ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.
ಮೇಲ್ಛಾವಣಿ ಕುಸಿತ ಸಂದರ್ಭದಲ್ಲಿ ಕುಟುಂಬದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮಧ್ಯರಾತ್ರಿ ಮನೆ ಕುಸಿದ ತಕ್ಷಣ ವಿಷಯ ತಿಳಿದ ಗ್ರಾಮಸ್ಥರು ಧಾವಿಸಿದ್ದು. ಮನೆಯೊಳಗಿದ್ದ ಕುಟುಂಬದವರನ್ನು ಹೊರಗಡೆ ಕರೆತಂದು ಬೇರೆ ಮನೆಯಲ್ಲಿ ಆಶಯ ನೀಡಲಾಯಿತು. ಮನೆಯ ಯಜಮಾನ ಮೈದ್ದೀನ್ ಸಾಬ್ ಎಂಬುವರ ಮೇಲೆ ಹಂಚುಗಳು ಬಿದ್ದಿದ್ದು ಆನಂದಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ವಿಷಯ ತಿಳಿದ ಕಂದಾಯ ಇಲಾಖೆಯ ಪ್ರಭಾರಿ ಉಪ ತಹಸಿಲ್ದಾರ್ ಕವಿರಾಜ್, ಗ್ರಾಮ ಲೆಕ್ಕಾಧಿಕಾರಿ ಚಂದ್ರಮೌಳಿ, ಗ್ರಾಮ ಪಂಚಾಯತ್ ಅಧ್ಯಕ್ಷ ಕಲೀಮುಲ್ಲಾ ಖಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ ಸ್ಥಳಕ್ಕೆ ಭೇಟಿ ನೀಡಿದ್ದರು.