Headlines

ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ | ಮೆಗ್ಗಾನ್ ಗೆ ದೌಡಾಯಿಸಿದ ಬಿಜೆಪಿ ನಾಯಕರು | Shivamogga

ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ | ಮೆಗ್ಗಾನ್ ಗೆ ದೌಡಾಯಿಸಿದ ಬಿಜೆಪಿ ನಾಯಕರು – ಘಟನೆ ಕುರಿತು ಬಿ ಸಿ ಪಾಟೀಲ್ ಹೇಳಿದ್ದೇನು ಮಾಜಿ ಸಚಿವ ಬಿಸಿ ಪಾಟೀಲ್‌ ರವರ ಅಳಿಯ ಪ್ರತಾಪ್ ಕುಮಾರ ಕೆ ಜಿ (41) ವಿಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ವಿಷಕುಡಿದಿದ್ದ ಅವರನ್ನ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.  ಮೆಗ್ಗಾನ್ ಶವಾಗಾರದಲ್ಲಿ ಅವರ ಮೃತದೇಹ ಇರಿಸಲಾಗಿದೆ.  ಶಿವಮೊಗ್ಗ ಹರಿಹರ ಹೆದ್ದಾರಿಯಲ್ಲಿ…

Read More

ರಿಪ್ಪನ್‌ಪೇಟೆಯಲ್ಲಿ ನಡೆದ ಅದ್ದೂರಿ ಆಳ್ವಾಸ್ ನುಡಿಸಿರಿ ಹಬ್ಬ – ಕಲಾರಸಿಕರನ್ನು ಮನೋರಂಜಿಸಿದ ಅಳ್ವಾಸ್ ವಿದ್ಯಾರ್ಥಿಗಳು|Alvas

ರಿಪ್ಪನ್‌ಪೇಟೆ;-ಆಳ್ವಾಸ್ ನುಡಿಸಿರಿ ವಿರಾಸತ್ ಮತ್ತು ಕಲಾಕೌಸ್ತುಭ ಕನ್ನಡ ಸಂಘ ಇವರ ಸಹಯೋಗದಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ಅಯೋಜಿಸಲಾದ `ಆಳ್ವಾಸ್ ಸಾಂಸ್ಕೃತಿಕ ವೈಭವ’’ಮಲೆನಾಡಿನ ಕಲಾರಸಿಕರನ್ನು ಮನೋರಂಜಿಸಿತು. ಈ ಕಾರ್ಯಕ್ರಮಕ್ಕೆ ಶಾಸಕ ಹರತಾಳು ಹಾಲಪ್ಪ ಚಾಲನೆ ನೀಡಿ ಮಾತನಾಡಿ ನಶಿಸುತ್ತಿರುವ ಭಾರತೀಯ ಜಾನಪದ ಸಂಸ್ಕೃತಿಯನ್ನು  ಉಳಿಸಿ ಪ್ರೋತ್ಸಾಹಿಸುವ ಮೂಲಕ ಇಂದಿನ ಯುವಪೀಳಿಗೆಯಲ್ಲಿ ಜಾನಪದದ ಜಾಗೃತಿಯನ್ನು ಮೂಡಿಸುವ ಮಹಾರ್ತ್ಕಾಯದಲ್ಲಿ ಅಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಡಾ.ಎಂ ಮೋಹನ್ ಆಳ್ವರ ಕಾರ್ಯ ಪ್ರಶಂಸನೀಯವಾಗಿದೆ ಎಂದರು. ಭಾರತೀಯ ಕಲೆ ಸಾಹಿತ್ಯ ಭರತನಾಟ್ಯ…

Read More

ಮೂರು ಮುತ್ತು ನಾಟಕದ ಕೀಕೀ ರಮನಾಥ ಪಾತ್ರಧಾರಿ ಅಶೋಕ್ ಶಾನಭಾಗ್ ನಿಧನ | mooru mutthu

ಮೂರು ಮುತ್ತು ನಾಟಕದ ಕೀಕೀ ರಮನಾಥ ಪಾತ್ರಧಾರಿ ಅಶೋಕ್ ಶಾನಭಾಗ್ ನಿಧನ ಕುಂದಾಪುರದ ರೂಪಕಲಾ ನಾಟಕ ತಂಡದ ಮೂರು ಮುತ್ತು ಖ್ಯಾತಿಯ ಅಶೋಕ್ ಶಾನಭಾಗ್ ರವರು ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರು ಮೂರು ಮುತ್ತು, ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮ ಕೃಷ್ಣ ಗೋವಿಂದ ಸೇರಿದಂತೆ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಮೂರು ಮುತ್ತು ಎಂಬ ನಾಟಕದ ಮುಖಾಂತರ ರಿಪ್ಪನ್‌ಪೇಟೆ, ಹೊಸನಗರ ,ತೀರ್ಥಹಳ್ಳಿ ಸೇರಿದಂತೆ ಕರ್ನಾಟಕದದ್ಯಾಂತ…

Read More

ಮದ್ಯಪಾನ ಮಾಡಬೇಡಿ ಎಂಬ ಪತ್ನಿಯ ಬುದ್ಧಿಮಾತಿಗೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪತಿ

ವಿಪರೀತ ಕುಡಿತದ ದಾಸನಾಗಿದ್ದ ಪತಿಗೆ ಪತ್ನಿ ಬುದ್ದಿ ಮಾತು ಹೇಳಿದ್ದಾಳೆ. ಇದನ್ನೆ ಮನಸ್ಸಿಗೆ ಹಚ್ಚಿಕೊಂಡ ಪತಿರಾಯ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಾಗರ ತಾಲೂಕಿನ ಅಡೂರು ಗ್ರಾಮದ 40 ವರ್ಷದ ಸುಬ್ರಹ್ಮಣ್ಯನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು,ಈ ಸಂಬಂಧ ಮೃತನ ಪತ್ನಿ ಯಶೋಧ ಸಾಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  ಯಶೋಧ ತನ್ನ ಗಂಡ ಸುಬ್ರಹ್ಮಣ್ಯನಿಗೆ ಕುಡಿಯೋದನ್ನು ಬಿಟ್ಟು ಬಿಡು ಎಂದು ಬುದ್ದಿ ಮಾತು ಹೇಳಿದ್ದಾಳೆ.ಪತ್ನಿ ಬುದ್ದಿ ಮಾತಿಗೆ ಮನನೊಂದ ಸುಬ್ರಹ್ಮಣ್ಯ, ಮನೆಯಲ್ಲಿ ಯಾರು…

Read More

ಮಳೆಹಾನಿ ಪ್ರದೇಶಗಳಿಗೆ ಇಂದು ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ

ಭಾರಿ ಗಾಳಿ ಮಳೆಗೆ ಮನೆ ಹಾನಿ – ಸ್ಥಳಕ್ಕೆ ತಹಶಿಲ್ದಾರ್ ಭೇಟಿ ಮಳೆಹಾನಿ ಪ್ರದೇಶಗಳಿಗೆ ಇಂದು ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ಹೊಸನಗರ : ಪಟ್ಟಣದ ವ್ಯಾಪ್ತಿಯಲಿ ವಿವಿಧೆಡೆ ಭಾರಿ ಗಾಳಿ ಮಳೆಗೆ ಮರಗಳು ಧರೆಗುರುಳಿ ಅಪಾರ ಪ್ರಮಾಣದ  ಹಾನಿಯಾಗಿದ್ದು ಸದರಿ ಮಳೆಹಾನಿಯಾದ ಪ್ರದೇಶಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಸಂಜೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಪೂರ್ವ ನಿಗದಿತ ಕಾರ್ಯಕ್ರಮದ ಹಿನ್ನಲೆಯಲ್ಲಿ ಬೆಂಗಳೂರಿಗೆ ತೆರಳಿದ್ದ ಶಾಸಕರು ಬೆಂಗಳೂರಿನಿಂದ ಇಂದು ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು ಅಲ್ಲಿಂದ…

Read More

ಹಲಾಲ್ – ಜಟ್ಕಾ ಹೆಸರಿನಲ್ಲಿ ಸಮಾಜ ಒಡೆಯುವ ಕುತಂತ್ರ ನಡೆಯುತ್ತಿದೆ : ಸಚಿವ ಕೆ ಎಸ್ ಈಶ್ವರಪ್ಪ

ಹಲಾಲ್‌ ಅಥವಾ ಜಟ್ಕಾ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕುತಂತ್ರ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಭಾನುವಾರ ಕಾರ್ಕಳ ತಾಲ್ಲೂಕಿನ ನಿಟ್ಟೆಯಲ್ಲಿ ಎಂಆರ್‌ಎಫ್‌ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವರು, ‘ಹಲಾಲ್ ಹಾಗೂ ಜಟ್ಕಾ ವಿವಾದ ಸೃಷ್ಟಿಸಿರುವುದು ಕೆಲವು ವ್ಯಕ್ತಿಗಳು ಹಾಗೂ ಪಕ್ಷಗಳು. ಯಾರು ಯಾವ ಪದ್ಧತಿಯನ್ನು ಅನುಸರಿಸುತ್ತಿದ್ದಾರೋ ಅದನ್ನೇ ಮುಂದುವಸಿಕೊಂಡು ಹೋಗಲಿ’ ಎಂದು ಹೇಳಿದರು. ‘ಹಲಾಲ್‌ ಹಾಗೂ ಜಟ್ಕಾ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಚುನಾವಣೆಯಲ್ಲಿ ತೊಡೆ ತಟ್ಟಿ, ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗೋಣ’…

Read More

ನಿಟ್ಟೂರಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ

ನಿಟ್ಟೂರಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ನಿಟ್ಟೂರು: ಪ್ರಜ್ಞಾಭಾರತಿ ವಿದ್ಯಾ ಕೇಂದ್ರದ ಆಶ್ರಯದಲ್ಲಿ ನಗರ ಹೋಬಳಿ ವ್ಯಾಪ್ತಿಯ 17 ವರ್ಷದೊಳಗಿನ ವಯೋಮಿತಿಯ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕ್ರೀಡಾಕೂಟ ಇಂದು ನಿಟ್ಟೂರಿನ ಕಾಲೇಜು ಮೈದಾನದಲ್ಲಿ ಭವ್ಯವಾಗಿ ಆರಂಭವಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹೊಸನಗರ ತಾಲೂಕು ಕೆ.ಡಿ.ಪಿ ಸದಸ್ಯೆ ಸುಮಾ ಸುಬ್ರಹ್ಮಣ್ಯ ಅವರು ನೆರವೇರಿಸಿ ನಂತರ ಮಾತನಾಡಿ“ವಿದ್ಯಾರ್ಥಿಗಳ ಉನ್ನತಿಗಾಗಿ ಶ್ರಮಿಸುತ್ತಿರುವ ಪೋಷಕರಿಗೆ ಗೌರವ ನೀಡಬೇಕು, ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಬೇಕು,” ಎಂದು ಹಾರೈಸಿದರು. ಕ್ರೀಡೆ ದೈಹಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ಅನನ್ಯವಾದ ಪಾತ್ರವಹಿಸುತ್ತದೆ…

Read More

ಅಬಕಾರಿ ಅಧಿಕಾರಿಗಳ ದಾಳಿ – ಗಾಂಜಾ ಸಮೇತ ಮೂವರ ಬಂಧನ | excise raid

ಅಬಕಾರಿ ಅಧಿಕಾರಿಗಳ ದಾಳಿ – ಗಾಂಜಾ ಸಮೇತ ಮೂವರ ಬಂಧನ ಶಿವಮೊಗ್ಗದ ಅಬಕಾರಿ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಿದೆ. ಸಿಕ್ಕ ಮಾಹಿತಿ ಅನ್ವಯ ಗಾಂಜಾ ಸಾಗಿಸುತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿ ಗಾಂಜಾವನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ. ಅಬಕಾರಿ ಜಂಟಿ ಆಯುಕ್ತರು , ಮಂಗಳೂರು ವಿಭಾಗ ಮತ್ತು ಸುಮಿತ  ಕೆ ಕೆ ಅಬಕಾರಿ ಉಪ ಆಯುಕ್ತರು,  ಶಿವಮೊಗ್ಗ ಜಿಲ್ಲೆ ಇವರುಗಳ ನಿರ್ದೇಶನದಲ್ಲಿ ನೌಶಾದ್ ಅಹಮದ್ ಖಾನ್,  ಉಪ ಅಧಿಕ್ಷಕರು ಉಪ ವಿಭಾಗ ಶಿವಮೊಗ್ಗ ಇವರ ಮಾರ್ಗದರ್ಶನ ದಲ್ಲಿ…

Read More

ಸಾಹಿತ್ಯ ಪರಿಷತ್ತಿನ ಸಂಘಟನೆಗೆ ಒತ್ತು ನೀಡಲು ತೀರ್ಮಾನ :

ಹೊಸನಗರ : ಹೊಸನಗರ ತಾಲೂಕಿನಲ್ಲಿ ಸಾಹಿತ್ಯ ಪರಿಷತ್ತಿನ ಸಂಘಟನೆಗೆ ಒತ್ತು ನೀಡಲು ಕಸಾಪ ತಾಲೂಕು ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ತೀರ್ಮಾನಿಸಿದೆ. ಜನವರಿ 21 ನೇ ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ತಾಲೂಕು ಅಧ್ಯಕ್ಷ ತ.ಮ. ನರಸಿಂಹ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಈ ತೀರ್ಮಾನ ಕೈಗೊಂಡಿದೆ.  ಜಿಲ್ಲಾಧ್ಯಕ್ಷ  ಡಿ ಮಂಜುನಾಥ್ ರವರ ನಿರ್ದೇಶನದಂತೆ ಪರಿಷತ್ತಿನ ಸಂಘಟನೆಗೆ ಪೂರಕವಾಗಿ ಹೋಬಳಿ ಸಮಿತಿಗಳ ರಚನೆ, ಮತ್ತು ಸಂಪನ್ಮೂಲ ಕ್ರೂಢೀಕರಣ, ಹಾಗೂ ದತ್ತಿನಿಧಿ ಕಾರ್ಯಕ್ರಮ ಮತ್ತು ಸದಸ್ಯತ್ವ…

Read More

ರಿಪ್ಪನ್‌ಪೇಟೆ : ಚಲಿಸುತ್ತಿದ್ದ ಟ್ರಾಕ್ಟರ್ ನಿಂದ ಆಯತಪ್ಪಿ ಕೆಳಗೆ ಬಿದ್ದು ವ್ಯಕ್ತಿ ಸಾವು

ರಿಪ್ಪನ್‌ಪೇಟೆ: ಚಲಿಸುತಿದ್ದ ಟ್ರ್ಯಾಕ್ಟರ್ ನಿಂದ ಆಯತಪ್ಪಿ ಕೆಳಕ್ಕೆ  ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಹಿರೇಮೈಥೆ ಗ್ರಾಮದಲ್ಲಿ ಗುರುವಾರ ನಡೆದಿದೆ. ಹಿರೇಮೈಥೆ ಗ್ರಾಮದ ವಾಸಿ ರಾಘವೇಂದ್ರ (43) ಮೃತ ದುರ್ದೈವಿಯಾಗಿದ್ದಾನೆ.  ಮನೆ ಕೆಲಸಕ್ಕೆ ಬೇಕಾಗಿದ್ದ ಮರಳು ತರಲು ಬಾಡಿಗೆ ಕೆಎ-15-TA-9879 ಟ್ರ್ಯಾಕ್ಟರ್ ನಲ್ಲಿ ಮನೆ ಸಮೀಪವಿರುವ ಹಳ್ಳದಿಂದ ಮರಳು ತುಂಬಿಸಿಕೊಂಡು ಬರುತ್ತಿರುವಾಗ   ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದ ರಾಘವೇಂದ್ರ ಕೆಳಗೆ ಬಿದ್ದು ಹೊಟ್ಟೆ ಭಾಗಕ್ಕೆ ತೀವ್ರ ಗಾಯವಾಗಿದೆ ತಕ್ಷಣ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ…

Read More