Headlines

ಅಬಕಾರಿ ಅಧಿಕಾರಿಗಳ ದಾಳಿ – ಗಾಂಜಾ ಸಮೇತ ಮೂವರ ಬಂಧನ | excise raid

ಅಬಕಾರಿ ಅಧಿಕಾರಿಗಳ ದಾಳಿ – ಗಾಂಜಾ ಸಮೇತ ಮೂವರ ಬಂಧನ

ಶಿವಮೊಗ್ಗದ ಅಬಕಾರಿ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಿದೆ. ಸಿಕ್ಕ ಮಾಹಿತಿ ಅನ್ವಯ ಗಾಂಜಾ ಸಾಗಿಸುತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿ ಗಾಂಜಾವನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ.

ಅಬಕಾರಿ ಜಂಟಿ ಆಯುಕ್ತರು , ಮಂಗಳೂರು ವಿಭಾಗ ಮತ್ತು ಸುಮಿತ  ಕೆ ಕೆ ಅಬಕಾರಿ ಉಪ ಆಯುಕ್ತರು,  ಶಿವಮೊಗ್ಗ ಜಿಲ್ಲೆ ಇವರುಗಳ ನಿರ್ದೇಶನದಲ್ಲಿ ನೌಶಾದ್ ಅಹಮದ್ ಖಾನ್,  ಉಪ ಅಧಿಕ್ಷಕರು ಉಪ ವಿಭಾಗ ಶಿವಮೊಗ್ಗ ಇವರ ಮಾರ್ಗದರ್ಶನ ದಲ್ಲಿ ದಿನಾಂಕ: 12-12-23 ರಂದು ನಗರದಲ್ಲಿ ಈ ದಾಳಿ ನಡೆಸಲಾಗಿದೆ. 

ಶಿವಮೊಗ್ಗ ತಾಲ್ಲೂಕಿನ ಅನುಪಿನ ಕಟ್ಟೆ ಗ್ರಾಮದ ಪುರುದಾಳ್ ಕಡೆಗೆ ಹೋಗುವ ಬೈ ಪಾಸ್ ರಸ್ತೆಯಲ್ಲಿ ಮೂವರು ಆರೋಪಿಗಳು ರಂಜಿತ್ , ಕಾರ್ತಿಕ್ &  ಚೇತನ್  ಎರಡು  ಪ್ಯಾಶನ್ ಪ್ರೊ ಬೈಕ್​ನಲ್ಲಿ 330 ಗ್ರಾಂ ಒಣಗಾಂಜಾ ಸಾಗಿಸ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿ ಅನ್ವಯ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಒಣ ಗಾಂಜಾ ಹಾಗೂ ದ್ವಿಚಕ್ರ ವಾಹನಗಳನ್ನು ಜಪ್ತು ಪಡಿಸಿಕೊಂಡು ಆರೋಪಿಗಳನ್ನು  ದಸ್ತಗಿರಿ ಮಾಡಿ ಆರೋಪಿಗಳ ವಿರುದ್ದ ಎನ್ ಡಿ ಪಿ ಎಸ್ ಕಾಯ್ದೆ 1985 ರ ಕಲಂ 27(ಬಿ) & 8(ಸಿ), ರಡಿಯಲ್ಲಿ ಮೊಕದ್ದಮೆಯನ್ನು ದಾಖಲಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. 

ಈ ಪ್ರಕರಣದಲ್ಲಿನ ಮಾಹಿತಿ ಮೇರೆಗೆ ಅನಿಲ್ ಎಂಬಾತನ ವಿರುದ್ಧ ಗಾಂಜಾ ಸೇವನೆ ಮಾಡಿರುವುದು ದೃಢವಾದ ಕಾರಣ ಅರೋಪಿತನ ವಿರುದ್ಧ ಇದೇ  ಕಾಯ್ದೆ ಕಲಂ 27(ಬಿ) ರಂತೆ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದ್ದಾರೆ. 

Leave a Reply

Your email address will not be published. Required fields are marked *