ಹೊಸನಗರ : ಹೊಸನಗರ ತಾಲೂಕಿನಲ್ಲಿ ಸಾಹಿತ್ಯ ಪರಿಷತ್ತಿನ ಸಂಘಟನೆಗೆ ಒತ್ತು ನೀಡಲು ಕಸಾಪ ತಾಲೂಕು ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ತೀರ್ಮಾನಿಸಿದೆ. ಜನವರಿ 21 ನೇ ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ತಾಲೂಕು ಅಧ್ಯಕ್ಷ ತ.ಮ. ನರಸಿಂಹ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಈ ತೀರ್ಮಾನ ಕೈಗೊಂಡಿದೆ.
ಜಿಲ್ಲಾಧ್ಯಕ್ಷ ಡಿ ಮಂಜುನಾಥ್ ರವರ ನಿರ್ದೇಶನದಂತೆ ಪರಿಷತ್ತಿನ ಸಂಘಟನೆಗೆ ಪೂರಕವಾಗಿ ಹೋಬಳಿ ಸಮಿತಿಗಳ ರಚನೆ, ಮತ್ತು ಸಂಪನ್ಮೂಲ ಕ್ರೂಢೀಕರಣ, ಹಾಗೂ ದತ್ತಿನಿಧಿ ಕಾರ್ಯಕ್ರಮ ಮತ್ತು ಸದಸ್ಯತ್ವ ಅಭಿಯಾನ ಇವುಗಳ ಬಗ್ಗೆ ಮಹತ್ವ ನೀಡಲು ತೀರ್ಮಾನಿಸಲಾಯಿತು. ಸಭೆಯ ಮೊದಲಲ್ಲಿ ಕೆ. ಸುರೇಶ್ ಕುಮಾರ್ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಹೆಚ್ ಆರ್ ಪ್ರಕಾಶ್ ಸರ್ವರನ್ನು ಸ್ವಾಗತಿಸಿದರು. ಪ್ರಥಮ ಕಾರ್ಯಕಾರಿ ಸಮಿತಿಯನ್ನು ದೀಪ ಬೆಳೆಸುವುದರ ಮುಖಾಂತರ ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಕೆ.ಇಲಿಯಾಸ್ ಹಾಗೂ ಹಿರಿಯ ಸಾಹಿತಿಗಳಾದ ಡಾ. ಶಾಂತರಾಮ್ ಪ್ರಭುಗಳು ಹಾಗೂ ನಾಗರಕೊಡಿಗೆ ಗಣೇಶಮೂರ್ತಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸದಸ್ಯರುಗಳಾದ ಮಂಜುನಾಥ ಕಾಮತ್, ಶ್ರೀಮತಿ ವಸುಧ,
ಡಾ.ಸೌಮ್ಯ,ಕುಕಳಲೆ ಈಶ್ವರಪ್ಪ ಗೌಡ, ಆರ್. ಕುಬೇಂದ್ರಪ್ಪ,
ರವಿ ರಿಪ್ಪನ್ ಪೇಟೆ, ಹೆಚ್ಆರ್ ಸುರೇಶ್, ರಾಮಚಂದ್ರ ನಿಟ್ಟೂರು, ಡಾ.ಸುಧಾಕರ್ ನಗರ ವಿಶೇಷ ಆಹ್ವಾನಿತರಾದ ದೊಡ್ಮನೆ ಲಕ್ಷ್ಮಿನಾರಾಯಣ್ ಉಪಸ್ಥಿತರಿದ್ದರು. ಕೊನೆಯಲ್ಲಿ ಗೌರವ ಕೋಶಾಧ್ಯಕ್ಷ ಎಸ್. ಹೆಚ್. ಲಿಂಗಮೂರ್ತಿ ವಂದಿಸಿದರು. ಕಾರ್ಯಕ್ರಮವನ್ನು ಗೌರವ ಕಾರ್ಯದರ್ಶಿ ಎಂ.ಕೆ. ವೆಂಕಟೇಶಮೂರ್ತಿ ನಿರ್ವಹಿಸಿದರು.