w
Headlines

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್|BSY

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್ ನೀಡಲು ಕೆಳದಿ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾನಿಲಯ ತೀರ್ಮಾನಿಸಲಾಗಿದೆ. ಜುಲೈ 21 ರಂದು ( ನಾಳೆ ) ನೆಡೆಯುವ 8ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.‌

Read Full News

ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯ – ಕಿಮ್ಮನೆ ರತ್ನಾಕರ್|Press Day

ಹೊಸನಗರ,ಜು.೧೯: ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯವಾಗಿದೆ. ಹಿಂಸೆಯನ್ನು ಪ್ರಚೋದಿಸುವ ವರದಿಗಾರಿಕೆಯಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕವು ಇಲ್ಲಿನ ಈಡಿಗರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ,ಮಾದಕ ವ್ಯಸನ ಜಾಗೃತ ಅಭಿಯಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ರಂಜನೆಗಿಂತ ವಾಸ್ತವಕ್ಕೆ ಆದ್ಯತೆ ನೀಡಬೇಕು. ಪತ್ರಿಕೆ ಒಮ್ಮೆ ಮುದ್ರಣಗೊಂಡು ಹೊರಬಿದ್ದರೆ ಅದು ಸಾರ್ವಜನಿಕ ಸ್ವತ್ತಾಗುತ್ತದೆ…

Read Full News

ಹೊಸನಗರ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿಗಳ ಆಕ್ರೋಶಕ್ಕೆ ಮಣಿದ ಪದವಿ ಶಿಕ್ಷಣ ಇಲಾಖೆ – ಪ್ರಾಂಶುಪಾಲರ ಪದಚ್ಯುತಿ!!|kodachadri

ಹೊಸನಗರದ ಕೊಡಚಾದ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದರು. ಕೊಡಚಾದ್ರಿ ಕಾಲೇಜಿನ ಪ್ರಾಂಶುಪಾಲ ಅಂಜನ್ ಕುಮಾರ್ ಕಾರ್ಯವೈಖರಿಯನ್ನು ಪ್ರಶ್ನಿಸಿ ಈಚೆಗೆ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಲು ಜಂಟಿ ನಿರ್ದೇಶಕರು ಕಾಲೇಜಿಗೆ ಆಗಮಿಸಿದ ವೇಳೆ ವಿದ್ಯಾರ್ಥಿಗಳಿಂದ ದಿಡೀರ್ ಪ್ರತಿಭಟನೆ ನಡೆಯಿತು.ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ದ ಧಿಕ್ಕಾರ ಕೂಗಿದ ಪ್ರಸಂಗವು ನಡೆಯಿತು. ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೆ ಟಿಸಿ…

Read Full News

ನಾಳೆ(19-07-2023) ಹೊಸನಗರದಲ್ಲಿ ಪತ್ರಿಕಾ ದಿನಾಚರಣೆ ; ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ

ಹೊಸನಗರ ಪಟ್ಟಣದ ಆರ್ಯ ಈಡಿಗರ ಸಭಾಭವನದಲ್ಲಿ ಜುಲೈ 19 ರಂದು ಬೆಳಿಗ್ಗೆ 11ಗಂಟೆಯಿಂದ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹೊಸನಗರ ಶಾಖೆಯ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಅಭಿಯಾನವನ್ನು ಏರ್ಪಡಿಸಲಾಗಿದೆ ಎಂದು ಹೊಸನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ಕೆ ವೆಂಕಟೇಶ್‌ಮೂರ್ತಿಯವರು ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಉದ್ಘಾಟಿಸಲಿದ್ದು, ಸಮಕಾಲಿನ ಪತ್ರಿಕಾ ಮಾಧ್ಯಮದ ಜವಾಬ್ದಾರಿಗಳು ಎಂಬ ವಿಷಯವಾಗಿ…

Read Full News

ರಾಜಕಾರಣಿ ಹಾಗೂ ಅಧಿಕಾರಿಗಳ ಗೈರಿನಲ್ಲಿ ಸರ್ಕಾರಿ ಯೋಗ ಮಂದಿರವನ್ನು ಅರೆಬೆತ್ತಲೆಯಾಗಿ ಉದ್ಘಾಟಿಸಿದ ಹೋರಾಟಗಾರ ಟಿ ಆರ್ ಕೃಷ್ಣಪ್ಪ|TRK

ರಾಜಕಾರಣಿ ಹಾಗೂ ಅಧಿಕಾರಿಗಳ ಗೈರಿನಲ್ಲಿ ಸರ್ಕಾರಿ ಯೋಗ ಮಂದಿರವನ್ನು ಅರೆಬೆತ್ತಲೆಯಾಗಿ ಉದ್ಘಾಟಿಸಿದ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಗೈರಿನಲ್ಲಿ ಸರ್ಕಾರಿ ಯೋಗ ಮಂದಿರವನ್ನು ಜನಪರ ಹೋರಾಟಗಾರನೊಬ್ಬ ಅರೆ ಬೆತ್ತಲೆಯಾಗಿ ಉದ್ಘಾಟನೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಶಿವಮೊಗ್ಗ ರಸ್ತೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿತಿ ಕೇಂದ್ರದವರು ಅನುಷ್ಟಾನಗೊಳಿಸಿದ 6 ಲಕ್ಷ…

Read Full News

ಶಾಲಾ ಮೈದಾನದಲ್ಲಿ ಜೂಜಾಟ – ಹತ್ತು ಮಂದಿ ವಶಕ್ಕೆ|arrested

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಸರ್ಕಾರಿ ಶಾಲೆಯ ಮೈದಾನದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ, ಜೂಜಿನಲ್ಲಿ ತೊಡಗಿದ್ದ ಆರೋಪದ ಮೇರೆಗೆ 10 ಜನರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಬಂಧಿತರಿಂದ 25,300 ರೂ.ಹಾಗೂ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಡಿವೈಎಸ್ಪಿ ಗಜಾನನ ವಾಮನ ಸುತಾರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಗಳಾದ ರಂಗನಾಥ್, ಗಾದಿ ಲಿಂಗಪ್ಪ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು….

Read Full News

ಶರಾವತಿ ಸಂತ್ರಸ್ಥ ಕುಟುಂಬಗಳ ಬೇಡಿಕೆಗಳ ಕುರಿತ ಪರಿಶೀಲನಾ ಸಭೆ|sharavathi

ಇಂದು ಬೆಂಗಳೂರಿನಲ್ಲಿ ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆಯ ಸಂತ್ರಸ್ತರು ಹಾಗೂ ಅರಣ್ಯ ಹಕ್ಕು ಭೂ ಮಂಜೂರಾತಿ ಸೇರಿದಂತೆ ಈ ಭಾಗದಲ್ಲಿ ಬಹಳ ವರ್ಷದಿಂದ ಬಾಕಿ ಇರುವ ಸಂತ್ರಸ್ಥ ಕುಟುಂಬಗಳ ಬೇಡಿಕೆಗಳ ಕುರಿತ ಪರಿಶೀಲನಾ ಸಭೆಯನ್ನು ನಡೆಸಲಾಯಿತು.  ಜಿಲ್ಲೆಯ ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆಯ ಸಂತ್ರಸ್ತರು ಹಾಗೂ ಅರಣ್ಯ ಹಕ್ಕು ಭೂ ಮಂಜೂರಾತಿ, 94 ಸಿ, 94 ಸಿಸಿ ಸೇರಿ ಮಲೆನಾಡು ಭಾಗದ ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಆಯಾ ಇಲಾಖೆಗಳ ಸಂಪುಟ…

Read Full News

ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ನಡೆದ ಯುವತಿಯ ಅಪಹರಣ ಪ್ರಕರಣ – ಯುವಜೋಡಿಯ ಪೂರ್ವನಿಯೋಜಿತ ಕೃತ್ಯ|kidnap

ಶಿವಮೊಗ್ಗ : ರಾಜ್ಯಾದ್ಯಂತ ಸಂಚಲನ ಸೃಷ್ಠಿ ಮಾಡಿದ್ದ ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ಯುವತಿಯನ್ನ ಅಪಹರಿಸಲಾದ ಪ್ರಕರಣ ಪೊಲೀಸ್ ಠಾಣೆಯಲ್ಲಿ ಸುಖಾಂತ್ಯಗೊಂಡಿದೆ. ಘಟನೆ ಹಿನ್ನಲೆ ಏನು?  ಸೋಮವಾರ ಬೆಳಗ್ಗೆ ತಾಯಿಯೊಂದಿಗೆ ಸಾಗರಕ್ಕೆ ಪೂಜೆಗೆಂದು ಶಿವಮೊಗ್ಗ ಬಸ್ ನಿಲ್ದಾಣದ ಬಳಿ ತಾಯಿ ಮಗಳು ನಡೆದುಕೊಂಡು ಹೋಗುತ್ತಿದ್ದ ವೇಳೆ ಇನ್ನೋವಾ ಕಾರೊಂದರಲ್ಲಿ ಬಂದ ಪತಿ ತನ್ನ ಪತ್ನಿಯನ್ನೇ ಅಪಹರಣ ಮಾಡಿದ್ದಾನೆ ಎಂಬ ಸುದ್ದಿ ಎಲ್ಲಡೆ ಹರಡಿತ್ತು. ಈ ವಿಚಾರವಾಗಿ ದೊಡ್ಡಪೇಟೆ ಠಾಣೆ ಮೆಟ್ಟಿಲು ಹತ್ತಿದ ತಾಯಿ ಪ್ರಕರಣ ದಾಖಲಿಸಿದ್ದರು. ಈ…

Read Full News

ಆನಂದಪುರದ ಬಳಿ ಮಧ್ಯ ರಸ್ತೆಯಲ್ಲಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್ |Fire

ಕೆಟ್ಟು ನಿಂತಿದ್ದ ಖಾಸಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ಬಸ್ ಸುಟ್ಟು ಹೋಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಆನಂದಪುರ ಬಳಿ ಘಟನೆ ಸಂಭವಿಸಿದೆ. ಖಾಸಗಿ ಬಸ್ ಕೆಟ್ಟು ರಸ್ತೆ ಬದಿ ನಿಂತಿತ್ತು. ಇವತ್ತು ರಿಪೇರಿ ಕೆಲಸ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದೆ ಎಂದು ಹೇಳಲಾಗುತ್ತಿದೆ. ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿಕೊಂಡಿದೆ. ಕಳೆದ ಎರಡು ದಿನಗಳಿಂದ ಸಾಗರದ ಗಜಾನನ ಸಾರಿಗೆ ಬಸ್ ಆನಂದಪುರದ ರೈಲ್ವೆ ಗೇಟ್ ಹತ್ತಿರ ಕೆಟ್ಟು ನಿಂತಿತ್ತು.ಸೋಮವಾರ ಬೆಳಗಿನ ಜಾವ…

Read Full News

ಮೇಗರವಳ್ಳಿ ಬಳಿ ಬಸ್-ಕಾರು ಆಫಘಾತ – ಓರ್ವನಿಗೆ ಗಂಭೀರ ಗಾಯ|accident

ಮೇಗರವಳ್ಳಿ ಬಳಿ ಬಸ್-ಕಾರು ಆಫಘಾತ – ಓರ್ವನಿಗೆ ಗಂಭೀರ ಗಾಯ ತೀರ್ಥಹಳ್ಳಿ: ತಾಲೂಕಿನ ಮೇಗರವಳ್ಳಿ ಸಮೀಪದ ಕೊಳಿಗೆ ಬಳಿ ಸೋಮವಾರ ಬೆಳಗ್ಗೆ ಖಾಸಗಿ ಬಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ.  ಘಟನೆಯಲ್ಲಿ ಕಾರು ಚಾಲಕನಿಗೆ ಗಂಭೀರ ಗಾಯವಾಗಿದೆ. ಹಾಲಾಡಿ ಮೂಲ ಕುಟುಂಬ ಶಿವಮೊಗ್ಗ ಆಸ್ಪತ್ರೆಗೆ ಕಾರಿನಲ್ಲಿ ಹೋಗುತ್ತಿರುವಾಗ ತೀರ್ಥಹಳ್ಳಿಯಿಂದ ಬಿದಿರು ಗೋಡು ಕಡೆಗೆ ಹೋಗುತ್ತಿರುವ ಖಾಸಗಿ ಬಸ್ ಕಾರಿಗೆ ಹೊಡೆದಿದೆ. ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಇಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ ಅವರನ್ನ ತೀರ್ಥಹಳ್ಳಿ…

Read Full News

ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ಮೂಲಕ ಹೃದಯ ಸಂಬಂಧಿ ಮಗು ರವಾನೆ!!!|zero traffic

ಶಿವಮೊಗ್ಗ :  ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೂರು ದಿನದ ಹಸುಗೂಸು ಮಗುವನ್ನು ಬೆಂಗಳೂರಿಗೆ ಜೀರೋ ಟ್ರಾಫಿಕ್ ಮೂಲಕ ರವಾನೆ ಮಾಡಲಾಗಿದೆ. ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ್ದ ಮಗುವಿಗೆ ಹೃದಯ ಸಂಬಂಧಿ ಕಾಯಿಲೆಯಿದ್ದು ಮಗುವಿನ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ  ಮೂರು ದಿನದ ಮಗುವಿಗೆ ತೆರೆದ ಹೃದಯದ ಆಪರೇಶನ್ ಮಾಡುವ ಅವಶ್ಯಕತೆ ಇದ್ದ ಕಾರಣ ಬೆಂಗಳೂರಿನ ಎನ್ ಎಚ್ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಶಿವಮೊಗ್ಗದ ಗಾಂಧಿ ಬಜಾರ್‌ ನ ನಿಲೇಶ್ ಜೈನ್ ಮತ್ತು ಮೋನಿಕಾ ದಂಪತಿಗಳ ಮಗುವಿಗೆ…

Read Full News

ಆಗುಂಬೆ ಘಾಟಿಯಲ್ಲಿ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದ ವ್ಯಕ್ತಿ – ಜೀವದ ಹಂಗು ತೊರೆದು ರಕ್ಷಿಸಿದ ಯುವಕರು|agumbe

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಘಾಟಿಯ 7 ನೇ ತಿರುವಿನಲ್ಲಿ ಗುಜರಿ ಫ್ಯಾಕ್ಟರಿ ಮಾಲಿಕನೊಬ್ಬ ಆಕಸ್ಮಿಕವಾಗಿ 30 ಅಡಿ ಪ್ರಪಾತಕ್ಕೆ ಬಿದ್ದ ಘಟನೆ ಭಾನುವಾರ ಸಂಜೆ ವೇಳೆ ನೆಡೆದಿದೆ. ಮಹಮ್ಮದ್ ಪಾಷಾ ಎಂಬಾತ ರಸ್ತೆ ಬದಿಯಲ್ಲಿದ್ದ ನಿಂತಿದ್ದ ವೇಳೆ ಪ್ರಪಾತಕ್ಕೆ ಬಿದ್ದಿದ್ದಾರೆ. ಸ್ಕ್ರಾಪ್ ಗಾಡಿಯನ್ನು ಟ್ರ್ಯಾಕ್ಟರ್‌ ಟೋಯಿಂಗ್ ಮಾಡ್ತಿದ್ದ ವೇಳೆ ಗಾಡಿ ಬ್ರೇಕ್ ಫೇಲ್ ಆದ ಹಿನ್ನೆಲೆ ಮಹಮ್ಮದ್ ಪಾಷಾ ಅವರಿಗೆ ಗುದ್ದಿದ ಕಾರಣ ಈ ಅವಘಡ ಸಂಭವಿಸಿದೆ. ಆಗುಂಬೆ ಘಾಟ್ ನಿಂದ 25 ರಿಂದ 30…

Read Full News

ಖಾಕಿಯೊಳಗಿನ ಮಾನವೀಯತೆ – ಇದು ರಿಪ್ಪನ್‌ಪೇಟೆ ಪೊಲೀಸ್ ಸ್ಟೋರಿ |ಮಗಳ ಆರೈಕೆಗೆ ಲಕ್ಷ ಲಕ್ಷ ಸುರಿದು ಸಾಲದ ಸುಳಿಗೆ ಸಿಲುಕಿದ ವೃದ್ಧ ಆಟೋ ಚಾಲಕ|help desk

ರಿಪ್ಪನ್‌ಪೇಟೆ : 36 ವರ್ಷಗಳಿಂದ ನರ ದೌರ್ಬಲ್ಯದಿಂದ ಬಳಲುತ್ತಿರುವ ಮಗಳ ಆರೈಕೆಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿರುವ ಗವಟೂರಿನ ಬಡ ಕುಟುಂಬದ ನೋವಿಗೆ ಪಟ್ಟಣದ ಖಾಕಿಗಳು ಹೆಗಲು ಕೊಟ್ಟಿದ್ದಾರೆ. ಪಟ್ಟಣದ ಗವಟೂರು ನಿವಾಸಿ ಆಟೋ ದೇವಪ್ಪಗೌಡ ರವರು 36 ವರ್ಷಗಳಿಂದ ನರದೌರ್ಬಲ್ಯದಿಂದ ಬುದ್ಧಿಮಾಂದ್ಯಕ್ಕೆ ಒಳಗಾದ ಮಗಳು ಅನಿತಾಳ ಆರೈಕೆ ಮಾಡುತ್ತಿದ್ದು,ಚಿಕಿತ್ಸೆ ನೀಡಿದರೆ ಗುಣಮುಖಳಾಗುವ ಆಶಾವಾದದಿಂದ ಲಕ್ಷ ಲಕ್ಷ ಖರ್ಚು ಮಾಡಿದ ಬಡಕುಟುಂಬ ಇಂದು ಸಾಲದ ಸುಳಿಗೆ ಸಿಲುಕಿತ್ತು.ಸೂಕ್ತ ಚಿಕಿತ್ಸೆ ನೀಡದೇ ಮಗಳ ಅನಾರೋಗ್ಯವು ಮತ್ತಷ್ಟು ಉಲ್ಬಣಗೊಂಡಿತ್ತು. ಈ ಬಗ್ಗೆ…

Read Full News

ರಿಪ್ಪನ್‌ಪೇಟೆ : ಜು.22ರಂದು ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ರಿಪ್ಪನ್‌ಪೇಟೆ : ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ  ರಿಪ್ಪನ್‌ಪೇಟೆ;-ಇಲ್ಲಿನ ರೋಟರಿ ಕ್ಲಬ್ ಕಳೆದ ಸಾಲಿನಲ್ಲಿ ಮಹಿಳೆಯರು ಅಧ್ಯಕ್ಷ  ಕಾರ್ಯದರ್ಶಿಯಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಪುರಷರಿಗಿಂತ ನಾವುಗಳು ಏನು ಕಮ್ಮಿ ಎಂಬಂತೆ ಹಿಡಿದ ಸಮಾಜಮುಖಿ ಕಾರ್ಯದೊಂದಿಗೆ ರೋಟರಿಯ ದೇಯವಾಕ್ಯದಂತೆ  ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೋಟರಿ ಕ್ಲಬ್ ಅಧ್ಯಕ್ಷೆ ಪ್ರಮೀಳ ಎಲ್.ಗೌಡ ಮತ್ತು ಕಾರ್ಯದರ್ಶಿ ಸವಿತಾ ರಾಧಾಕೃಷ್ಣ ರೋಟರಿ ಅತ್ಯುತ್ತಮ ಕಾರ್ಯದಲ್ಲಿ ಸಾರ್ವಜನಿಕರ ಪ್ರಶಂಸೆಗಳಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಲಕ್ಷö್ಮಣಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. ರಿಪ್ಪನ್‌ಪೇಟೆಯ…

Read Full News

ರಿಯಲ್ ಎಸ್ಟೇಟ್ ನಡೆಸುತ್ತಿರುವ ಶಿಕ್ಷಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಮಧು ಬಂಗಾರಪ್ಪ|MB

ರಾಜ್ಯದ ಕೆಲವು ಕಡೆ ಶಿಕ್ಷಕರು ಪಾಠ ಮಾಡದೆ ಖಾಸಗಿ ವ್ಯವಹಾರ, ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದು, ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನ ಸಭೆ ನಡೆಸಿದ ಅವರು, ರಾಜ್ಯದ ಕೆಲವು ಕಡೆ ಶಿಕ್ಷಕರ ಕಾರ್ಯವೈಖರಿ ಕುರಿತಾಗಿ ದೂರುಗಳು ಕೇಳಿ ಬಂದಿವೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮೇಲುಸ್ತುವಾರಿ ನೋಡಿಕೊಳ್ಳುವ ಬಿ.ಆರ್.ಸಿ. ಮತ್ತು ಸಿ.ಆರ್.ಪಿ.ಗಳ ಕಾರ್ಯನಿರ್ವಹಣೆ ಕೂಡ ತೃಪ್ತಿಕರವಾಗಿಲ್ಲವೆಂಬ ದೂರು…

Read Full News

ಶಾಲೆಯಲ್ಲಿ ಬಿಸಿಯೂಟ ತಯಾರಿಸುವಾಗ ಬಳೆ ತೆಗೆಯಬೇಕಾ??? ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು???|madhu bangarappa

ಶಾಲೆಗಳಲ್ಲಿ ಬಿಸಿ ಊಟ ತಯಾರಿಸುವಾಗ ಮಹಿಳೆಯರು ಬಳೆ ತೆಗೆಯಬೇಕು ಎಂಬ ವಿಚಾರವಾಗಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ.  ಶಾಲೆಗಳಲ್ಲಿ ಬಿಸಿ ಊಟ ತಯಾರಿಸುವಾಗ ಮಹಿಳೆಯರು ಬಳೆ ತೆಗೆಯಬೇಕು ಎಂಬ ಮಾತು ಕೇಳಿ ಬಂದಿದೆ.ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ಆದೇಶ ಮಾಡಿರಬಹುದು, ಮಕ್ಕಳಿಗೆ ಅಡುಗೆ ಮಾಡುವಾಗ ಅಡುಗೆಯಲ್ಲಿ ಗಾಜಿನ ಚೂರುಗಳು ಬೀಳಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ…

Read Full News

ವಿಚಾರಣಾಧೀನ ಖೈದಿಗೆ ಗಾಂಜಾ ಪೂರೈಕೆಗೆ ಯತ್ನ – ಯುವಕನ ಬಂಧನ|arrested

ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಸಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಸೋಗಾನೆ ಗ್ರಾಮದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಕಾರಾಗೃಹದಲ್ಲಿರುವವನಿಗೆ ಬೇಕರಿ ಪದಾರ್ಥಗಳನ್ನು ನೀಡುವ ನೆಪದಲ್ಲಿ ಗಾಂಜಾ ಪೂರೈಕೆ ಮಾಡಲು ಯತ್ನಿಸಿದ ಯುವಕರು. ಈ ಪೈಕಿ ಒಬ್ಬ ಸಿಕ್ಕಿಬಿದ್ದಿದ್ದು ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಎರಡು ವಾರದ ಹಿಂದೆ ಸಾಗರದಲ್ಲಿ ಗಾಂಜಾದೊಂದಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ ಅಲ್ತಾಫ್ ಎಂಬುವನಿಗೆ ಗಾಂಜಾ ನೀಡಲು ಬಂದಿದ್ದ ಯುವಕರು. ಕೈದಿಯ ಸ್ನೇಹಿತರೇ ಆಗಿರುವ ಶಿವಮೊಗ್ಗ ಗೋಪಾಳದ ಮುಸ್ತಫಾ ಮತ್ತು ಕಾಶೀಪುರದ ದಿಲೀಪ ಕೆಲವು…

Read Full News

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ – 22 ವರ್ಷದ ಯುವಕನಿಗೆ 10 ವರ್ಷ ಶಿಕ್ಷೆ,ಒಂದೂವರೆ ಲಕ್ಷ ದಂಡ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ ನಡೆದಿದ್ದ, ಅಪ್ರಾಪ್ತೆ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧ ಶಿವಮೊಗ್ಗ ಕೋರ್ಟ್​ 10 ವರ್ಷ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ. 2022ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ 22 ವರ್ಷದ ವ್ಯಕ್ತಿಯೊಬ್ಬನು, 17  ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಅಡಿ ಕೇಸ್​ ದಾಖಲಾಗಿತ್ತು. ಈ ಸಂಬಂಧ , ಹಿರಿಯ ಸಹಾಯಕ  ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ತನಿಖೆ ಕೈಗೊಂಡಿದ್ದು, ಚಾರ್ಜ್​ಶೀಟ್ ಸಲ್ಲಿಸಿದ್ದರು.   ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ರವರು…

Read Full News

ಚಾಲಕನ ನಿಯಂತ್ರಣ ತಪ್ಪಿ ಎರಡು ಕಾರುಗಳಿಗೆ ಡಿಕ್ಕಿಯಾದ ಬಸ್|ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟ ಮಾಂಸದ ಮೂಟೆ|

ಚಾಲಕನ ನಿಯಂತ್ರಣ ತಪ್ಪಿ ಎರಡು ಕಾರುಗಳಿಗೆ ಡಿಕ್ಕಿಯಾದ ಬಸ್|ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟ ಅಪಘಾತವಾದ ಕಾರಿನಲ್ಲಿದ್ದ ಮಾಂಸದ ಮೂಟೆ| ಸಾಗರ : ಐಗಿನ ಬೈಲ್​ ಬಳಿಯಲ್ಲಿ ಖಾಸಗಿ ಬಸ್​ವೊಂದು ಅಪಘಾತಕ್ಕೀಡಾಗಿದ್ದು, ಎರಡು ಕಾರುಗಳಿಗೆ ಬಸ್ ಡಿಕ್ಕಿ ಹೊಡೆದಿದೆ.  ಬೆಂಗಳೂರು ಹೊನ್ನಾವರ ರಸ್ತೆಯಲ್ಲಿ ಸಾಗರದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಜಿಆರ್​ಬಿ ಬಸ್​ ಚಾಲಕನ ನಿಯಂತ್ರಣ ತಪ್ಪಿ ಶಿವಮೊಗ್ಗದಿಂದ ಬರುತ್ತಿದ್ದ ಎರಡು ಕಾರುಗಳಿಗೆ ಡಿಕ್ಕಿಯಾಗಿದೆ. ಈ ಪೈಕಿ ಒಂದು ಕಾರಿನಲ್ಲಿ  ನ್ಯಾಯಾದೀಶರೊಬ್ಬರು  ಶಿವಮೊಗ್ಗದಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಕ್ಕೆ ಹೋಗುತ್ತಿದ್ದಾಗ ಈ…

Read Full News

ಆ್ಯಪ್ ಮೂಲಕ ಸಾಲ ಪಡೆದ ಯುವಕನಿಗೆ ಪೊಲೀಸರ ಹೆಸರಿನಲ್ಲಿ ಕಿರುಕುಳ|loan app

ಆ್ಯಪ್ ಮೂಲಕ ಸಾಲ ಪಡೆದ ಯುವಕನಿಗೆ ಪೊಲೀಸರ ಹೆಸರಿನಲ್ಲಿ ಕಿರುಕುಳ ಶಿವಮೊಗ್ಗ : ಆ್ಯಪ್ ಮೂಲಕ ಸಾಲ ಪಡೆದ ಯುವಕನಿಗೆ ಪೊಲೀಸರ ಹೆಸರಿನಲ್ಲಿ ಕಿರುಕುಳ ನೀಡಿರುವ ಘಟನೆ ನಡೆದಿದೆ. ಹೌದು ಜಿಲ್ಲೆಯ ಭದ್ರಾವತಿ ತಾಲೂಕಿನ ಉಕ್ಕುಂದ ನಿವಾಸಿ, ಆಟೋ ಚಾಲಕ ಸತೀಶ್ ಆ್ಯಪ್ ವೊಂದರ ಮೂಲಕ ಕಳೆದ 4 ತಿಂಗಳ ಹಿಂದೆ 06 ಸಾವಿರ ಸಾಲ ಪಡೆದಿದ್ದರು. ಆದರೆ ಈ ವೇಳೆ ಸತೀಶನ ಕೈಗೆ ಸಿಕ್ಕಿದ್ದ ನಾಲ್ಕುವರೆ (4,500)  ಸಾವಿರ ಮಾತ್ರ. ಪಡೆದ ಲೋನ್ ಹಣಕ್ಕೆ ಸತೀಶ್…

Read Full News

ಬೈಕ್ ನಲ್ಲಿ ಬಂದು ಮಾಂಗಲ್ಯ ಸರ ಅಪಹರಿಸಿದ ಕಳ್ಳರು – ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ|theft

ಬೈಕ್ ನಲ್ಲಿ ಬಂದು ಮಾಂಗಲ್ಯ ಸರ ಅಪಹರಿಸಿದ ಕಳ್ಳರು – ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಶಿವಮೊಗ್ಗ : ವಾಯುವಿಹಾರಕ್ಕೆ ಹೋಗಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸರಗಳ್ಳರು ಕಿತ್ತುಕೊಂಡು ಹೋಗಿರುವ ಘಟನೆ ಇಂದು ನಡೆದಿದ್ದು ಕಳ್ಳರ ಚಲನ ವಲನಗಳು  ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಲತಾ ಎಂಬ 50 ವರ್ಷದ ಮಹಿಳೆ ಚಿಕ್ಕಲ್ ನ ಪಾರ್ಕ್ ನಲ್ಲಿ ವಾಕ್ ಗೆ ಹೋಗುವ ವೇಳೆ ಹಿಂಬದಿ ಬೈಕ್ ನಲ್ಲಿ ಬಂದ ಇಬ್ಬರು ಸರಗಳ್ಳರು ಮಹಿಳೆಯ ಮಾಂಗಲ್ಯ ಸರಕ್ಕೆ ಕೈ‌ಹಾಕಿದ್ದಾರೆ….

Read Full News

ಆರೋಗ್ಯ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ|job

2023-24 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್.ಹೆಚ್.ಎಂ & ಎನ್ಯುಹೆಚ್‌ಎಂ) ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಜಿಲ್ಲೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಆರೋಗ್ಯ ಸಂಸ್ಥೆಗಳಿಗೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಇಎನ್ಟಿ ಸರ್ಜನ್, ಜನರಲ್ ಫಿಸಿಷಿಯನ್, ಸೈಕಿಯಾಟ್ರಿ ಹಾಗೂ ವೈದ್ಯರ ಹುದ್ದೆಗಳಿಗೆ ದಿ: 15-07-2023 ರಂದು ಹಾಗೂ ನೇತ್ರ ಸಹಾಯಕರು, ಆಡಿಯೋಮೆಟ್ರಿಕ್ ಅಸಿಸ್ಟೆಂಟ್, ತಾಲ್ಲೂಕು ಮೇಲ್ವಿಚಾರಕರು, ಕಿ.ಮ.ಆ ಸಹಾಯಕಿಯರು, ಶುಶ್ರೂಷಕಿಯರು, ಕಿ.ಪು.ಆ.ಸಹಾಯಕರ ಹುದ್ದೆಗಳಿಗೆ ದಿ: 18-07-2023 ರಂದು ಬೆಳಿಗ್ಗೆ 10.30…

Read Full News

ಶಿವಮೊಗ್ಗದಿಂದ ವಿಮಾನ ಹಾರಾಟ ಪ್ರಾರಂಭ – ಜುಲೈ 20 ರಿಂದ ಟಿಕೆಟ್ ಬುಕ್ಕಿಂಗ್ ಆರಂಭ|ಯಾವೆಲ್ಲಾ ಮಾರ್ಗ..??

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ದಿನಗಣನೆ ಆರಂಭವಾಗಿದೆ. ವಿಮಾನ ಹಾರಾಟ ಆರಂಭಕ್ಕೆ 21 ದಿನಗಳ ಮುಂಚಿತವಾಗಿಯೇ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ. ಆಗಸ್ಟ್ 11ರಂದು ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಜುಲೈ 20ರಿಂದ ವಿಮಾನ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯ ಹುಬ್ಬಳ್ಳಿಯ ಮುಖ್ಯಸ್ಥ ಮನೋಜ್ ಪ್ರಭು ತಿಳಿಸಿದ್ದಾರೆ. ವಿಮಾನ ಪ್ರತಿದಿನ ಬೆಳಿಗ್ಗೆ 9ಕ್ಕೆ ಬೆಂಗಳೂರಿನಿಂದ ಹೊರಡಲಿದ್ದು, ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ 10:30ಕ್ಕೆ ಬರಲಿದೆ. ಮಧ್ಯಾಹ್ನ 12ಕ್ಕೆ ವಾಪಸ್…

Read Full News

ರಿಪ್ಪನ್‌ಪೇಟೆ : ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಗಂಭೀರ|accident

ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಆಸ್ಪತ್ರೆಗೆ ದಾಖಲು ರಿಪ್ಪನ್‌ಪೇಟೆ : ಬೈಕ್ ಗಳ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ತೀರ್ಥಹಳ್ಳಿ ರಸ್ತೆಯ ಜ್ಯೋತಿ ಮಾಂಗಲ್ಯ ಮಂದಿರದ ಬಳಿ ನಡೆದಿದೆ‌. ಜ್ಯೋತಿ ಮಾಂಗಲ್ಯ ಮಂದಿರದ ಬಳಿಯ ತಿರುವಿನಲ್ಲಿ ಈ ಘಟನೆ ನಡೆದಿದ್ದು ಗರ್ತಿಕೆರೆ ನಿವಾಸಿ ನವೀನ್ ಎಂಬಾತನಿಗೆ ಗಂಭೀರ ಪೆಟ್ಟಾಗಿದೆ. ಗರ್ತಿಕೆರೆಯಿಂದ ರಿಪ್ಪನ್‌ಪೇಟೆ ಕಡೆಗೆ ತೆರಳುತಿದ್ದ ಬಜಾಜ್ ಪಲ್ಸರ್ ಮತ್ತು ರಿಪ್ಪನ್‌ಪೇಟೆ ಕಡೆಯಿಂದ ಜ್ಯೋತಿ ಮಾಂಗಲ್ಯ ಮಂದಿರದ ಕಡೆಗೆ ತೆರಳುತಿದ್ದ…

Read Full News

ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ʻಚಂದ್ರಯಾನ-3ʼ ನೌಕೆ : ಆಗಸ್ಟ್‌ನಲ್ಲಿ ಚಂದ್ರನ ಅಂಗಳಕ್ಕೆ

ಭಾರತೀಯರ ಹೆಮ್ಮೆಯ ಪ್ರತೀಕವಾದ ಬಹು‌ನಿರೀಕ್ಷಿತ ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿದೆ. ಇಂದು ಮಧ್ಯಾಹ್ನ 2.35ಕ್ಕೆ ಸರಿಯಾಗಿ ಚಂದ್ರಯಾನ ಉಡಾವಣೆ ಮಾಡಲಾಯಿತು. ಉಡಾವಣೆ ಯಶಸ್ವಿಯಾಗುತ್ತಲೇ ಇಸ್ರೋ ವಿಜ್ಞಾನಿಗಳು ಹಾಗೂ ನೆರೆದಿದ್ದ ಸಾವಿರಾರು ಮಂದಿಯಿಂದ ಸಂಭ್ರಮದ ಹರ್ಷೋದ್ಘಾರ, ಭರ್ಜರಿ ಕರತಾಡನ ಕೇಳಿಬಂದಿದೆ‌. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದ್ರಯಾನ-3 ಉಡಾವಣೆ ಮಾಡಲಾಯಿತು. ಯಶಸ್ವಿ ಲ್ಯಾಂಡಿಂಗ್ ಆದರೆ ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಈ ಸಾಧನೆಯನ್ನು ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಚಂದ್ರಯಾನ-3ನ್ನು 615 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಲ್ಯಾಂಡರ್…

Read Full News

ರಿಪ್ಪನ್‌ಪೇಟೆ : ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಅಂಗಡಿ ಮೇಲೆ ಪೊಲೀಸರ ದಾಳಿ – ಇಬ್ಬರು ವಶಕ್ಕೆ|excise

ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಮಾದಾಪುರ ಹಾಗೂ ಬಾಳೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಮಾದಾಪುರ ಗ್ರಾಮದ ಅಂಗಡಿಯೊಂದರ ಮುಂಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿ ವಿಜಯ್ ಎಂಬಾತನನ್ನು ವಶಕ್ಕೆ ಪಡೆದು ಅಕ್ರಮ ಮದ್ಯವನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. ಬಾಳೂರು ಗ್ರಾಮದ ಕಿರಾಣಿ ಅಂಗಡಿಯೊಂದರ ಮುಂಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ದಾಳಿ…

Read Full News

ತೀರ್ಥಹಳ್ಳಿ ತಲ್ವಾರ್ ದಾಳಿ ಪ್ರಕರಣ : ಚೋರ್ ಸಮೀರ್ ಸೇರಿ 6 ಮಂದಿ ಅರೆಸ್ಟ್|arrested

ತೀರ್ಥಹಳ್ಳಿ : ಕುಡಿದ ನಶೆಯಲ್ಲಿ ಸೋಮವಾರ ಸಂಜೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭಿಸಿ ನಂತರ ತಲ್ವಾರ್ ಹಿಡಿದು ಹಲ್ಲೆ ನೆಡೆಸಿದ್ದ ಪ್ರಕರಣ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣದಲ್ಲಿ ಸಫನ್, ಚೋರ್ ಸಮೀರ್ ಮತ್ತು ಇತರೆ ನಾಲ್ವರ ವಿರುದ್ಧ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಈಗಾಗಲೇ ಆರೋಪಿಗಳನ್ನ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ. ಗಲಾಟೆಗೆ ಕಾರಣವೇನು? ಜೀವಿತ್ , ಅಪ್ರೋಜ್, ಸಾದಿಕ್ ಮತ್ತು ರಾಘವೇಂದ್ರ ಎಂಬ ಯುವಕರು ತಮ್ಮ ಸ್ನೇಹಿತನೊಬ್ಬ ಮೈಲುತುತ್ತ ಸೇವಿಸಿ ಅಸ್ವಸ್ಥನಾಗಿದ್ದಕ್ಕೆ ಆತನನ್ನ ಅಸ್ಪತ್ರೆಗೆ ದಾಖಲಿಸಿ…

Read Full News

ಸಾಗರ : ಪಾನ್ ಕಾರ್ಡ್ ಅಪ್‌ಡೇಟ್ ನೆಪದಲ್ಲಿ ವ್ಯಕ್ತಿಯ ಖಾತೆಯಲ್ಲಿದ್ದ 7.25 ಲಕ್ಷ ರೂ ವಂಚನೆ

ಸಾಗರ : ಬ್ಯಾಂಕ್‌ನಿಂದ ಪಾನ್ ಅಪ್‌ಡೇಟ್‌ಗೆ ಬಂದ ವಾಟ್ಸ್‌ಅಪ್ ಸಂದೇಶವೆಂದು ನಂಬಿ ಬ್ಯಾಂಕ್ ಗ್ರಾಹಕರೊಬ್ಬರು ತಮ್ಮ ಪಾನ್ ಹಾಗೂ ಆಧಾರ್ ಲಿಂಕ್ ಎಂದು ಭಾವಿಸಿ ಮಾಹಿತಿಗಳನ್ನು ತುಂಬಿದ ಹಿನ್ನೆಲೆಯಲ್ಲಿ ಅವರ ಬ್ಯಾಂಕ್ ಓವರ್ ಡ್ರಾಫ್ಟ್ ಖಾತೆಯಿಂದ 7.25 ಲಕ್ಷ ರೂ.ಗಳನ್ನು ಖದೀಮರು ವಂಚಿಸಿದ ಪ್ರಕರಣ ನಡೆದಿದೆ. ನಗರದ ಕೆನರಾ ಬ್ಯಾಂಕ್‌ನ ಗ್ರಾಹಕರಾಗಿರುವ ಉದ್ಯಮಿ ಮಹಮ್ಮದ್ ಶರೀಫ್‌ರ ಮೊಬೈಲ್‌ಗೆ ಜುಲೈ 11 ರಂದು ಮಧ್ಯಾಹ್ನದ ವೇಳೆ ಎರಡೆರಡು ಸಂಖ್ಯೆಯಿಂದ ಪಾನ್ ಕಾರ್ಡ್ ಐಡಿಯ ಅಪ್‌ಡೇಟ್ ಮಾಡಲು ವಾಟ್ಸ್‌ಅಪ್ ಸಂದೇಶ…

Read Full News

ಆನ್ಲೈನ್​ನಲ್ಲಿ ಲೋನ್ ಪಡೆಯುವ ಮುನ್ನ ಹುಷಾರ್!!! ಲೋನ್ ಕಟ್ಟಿಲ್ಲವೆಂದು ಟಾರ್ಚರ್, ನೇಣಿಗೆ ಶರಣಾದ ವಿದ್ಯಾರ್ಥಿ|Loan app

ಈ ಡಿಜಿಟಲ್ APP ಗಳ ಮೂಲಕ ಸಾಲ ನೀಡುವ ಅಕ್ರಮ ಕಂಪನಿಗಳು ಜನರಿಗೆ ಕಿರುಕುಳ ನೀಡಿವೆ. ಈ ಕಂಪನಿಗಳು ಸಾಲ ನೀಡಿ ಜನರನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತಿವೆ. ಸಾಲಬಾಧೆ ತಾಳಲಾರದೆ ಆತ್ಮಹತ್ಯೆಯಂತಹ ಹೆಜ್ಜೆ ಇಡಲು ಯತ್ನಿಸಿದಂತಹ ಅನೇಕ ಪ್ರಕರಣಗಳು ಮುನ್ನೆಲೆಗೆ ಬಂದಿವೆ. ರಾಜಧಾನಿಯಲ್ಲಿ 2023ರಲ್ಲಿ ಲೋನ್‌ APP ಕಂಪೆನಿಗಳ ಕಿರುಕುಳದ ಸಂಬಂಧ 900 ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಒಂದೇ ಪ್ರಕರಣದಲ್ಲಿ 15 ಲೋನ್‌ APP ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಸೈಬರ್‌ ಪೊಲೀಸರು ದೂರು ದಾಖಲಿಸಿದ್ದಾರೆ. ಪ್ರಕರಣ…

Read Full News

ಪ್ರೀತ್ಸೆ, ಪ್ರೀತ್ಸೆ ಅಂತಾ ಕಾಡಿದ ಯುವಕ – ಮನನೊಂದು ವಿಷ ಸೇವಿಸಿದ್ದ ಯುವತಿ ಸಾವು|crime news

ಸಾಗರ : ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾಗರದ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಓದುತ್ತಿದ್ದ 19ವರ್ಷದ ಭವ್ಯಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸೊರಬ ತಾಲೂಕಿನ ಪ್ರದೀಪ್ ಎಂಬಾತನ ವಿರುದ್ಧ ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರದೀಪನಿಗೆ ಭವ್ಯಾಳ ಪರಿಚಯವಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಪದೇ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.