Headlines

ಕೆಇಬಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ಹಣ ಪಡೆದು ವಂಚನೆ – ಆರೋಪಿಯ ಬಂಧನ|arrested

ಕೆಇಬಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ಹಣ ಪಡೆದು ವಂಚನೆ – ಆರೋಪಿಯ ಬಂಧನ

ಹೊಸನಗರ : ಕೆಇಬಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ ಹಣ ಪಡೆದು ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ನಿವಾಸಿ ಜೈಭೀಮ್ ಪಡಕೋಣೆ ಬಂಧಿತ ಆರೋಪಿಯಾಗಿದ್ದಾನೆ.

ಘಟನೆಯ ಹಿನ್ನಲೆ :

ಮ್ಯಾಟ್ರಿಮೊನಿಯಲ್ಲಿ ಹೊಸನಗರ ಮೂಲದ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು ಕೆಇಬಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ತೋರಿಸಿ ಲಕ್ಷಾಂತರ ರೂ ಹಣವನ್ನು ಪಡೆದು ವಂಚಿಸಿದ್ದಾನೆ.ಈ ಬಗ್ಗೆ ಹಣ ಕಳೆದುಕೊಂಡವರು ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಬೆನ್ನತ್ತಿದ ಹೊಸನಗರ ಪಿಎಸ್‌ಐ ಶಿವಾನಂದ್ ಕೆ ನೇತ್ರತ್ವದ ತಂಡ ಆರೋಪಿಯನ್ನು ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಆರೋಪಿಯಿಂದ ಎರಡೂವರೆ ಲಕ್ಷ ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.


ಶಿವಮೊಗ್ಗ ಎಸ್ ಪಿ ಜಿ ಕೆ ಮಿಥುನ್ ಕುಮಾರ್ ,ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಎಸ್ ಭೂಮರೆಡ್ಡಿ ,ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ ಮಾರ್ಗದರ್ಶನದಲ್ಲಿ ಹೊಸನಗರ ಸಿಪಿಐ ಗುರಣ್ಣ ಡಿ ಹೆಬ್ಬಾಳ್ ನೇತ್ರತ್ವದಲ್ಲಿ ಪಿಎಸ್‌ಐ ಶಿವಾನಂದ್ ವೈ ಕೆ,ಸಿಬ್ಬಂದಿಗಳಾದ ಗಿರೀಶ್ ,ಪ್ರಕಾಶ್ ,ಗಂಗಪ್ಪ ಬಟೋಲಿ ,ಸುನೀಲ್, ಸಂದೀಪ್ , ಮಹೇಶ್ ಹಾಗೂ ಗಿರಿಪ್ರಸಾದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *