Headlines

ಅಕ್ಕಿ ಕಳ್ಳತನದ ಆರೋಪಿಗಳ ಬಂಧನ|arrested

ಶಿವಮೊಗ್ಗ ನಗರದ ಸಾಗರ ರಸ್ತೆ ಎಪಿಎಂಸಿ ಮಾರ್ಕೇಟ್ ನಲ್ಲಿನ ಎನ್.ಬಿ.ಎಂ ಎಂಟರ್ ಪ್ರೈಸಸ್ ನಲ್ಲಿನ ಮಳಿಗೆಯಲ್ಲಿ ಸೆ.04 ರಂದು ಅಕ್ಕಿ ಪಾಕೇಟ್ ಗಳು ಕಳ್ಳತನವಾದ ಬಗ್ಗೆ  ಮಂಜುನಾಥ ಬಿ ಎಂ, ಎಂಬುವರು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಮತ್ತು ಅಡಿಷನಲ್‌ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುರೇಶ್ ಎಂ ಡಿ. ಪ್ರಭಾರ ಪ್ರೊಬೇಷನರಿ ಐಪಿಎಸ್  ಕುಮಾರಿ ಬಿಂದುಮಣಿ ಆರ್.ಎನ್  ನೇತೃತ್ವದಲ್ಲಿ ಪಿಎಸ್ ಐ  ಸುನಿಲ್ ಬಿ.ಸಿ  ಮತ್ತು ಸಿಬ್ಬಂದಿಗಳಾದ ಸಿಪಿಸಿ ರಾಜು, ಚಂದ್ರಾನಾಯ್ಕ್, ಮಲ್ಲಪ್ಪ ಮತ್ತು ಅರುಣಕುಮಾರ್ ರವರುಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.‌

ಸದರಿ ತನಿಖಾ ತಂಡವು ನಿನ್ನೆ  ಆರೋಪಿತರಾದ 1) ಮೇಲಿನ ತುಮಗನಗರದ ಕುಮಾರ್ ಕೆ, ಮತ್ತು 2) ಅಣ್ಣನಗರದ ನಿವಾಸಿ ಜಯಣ್ಣರನ್ನ ಬಂಧಿಸಲಾಗಿದೆ. ಆರೋಪಿತರಿಂದ ಅಂದಾಜು ಮೌಲ್ಯ 1,07,800/- ರೂಗಳ ತಲಾ 26 ಕೆ.ಜಿ. ತೂಕದ 77 ಚೀಲಗಳಲ್ಲಿದ್ದ 20 ಕ್ವಿಂಟಾಲ್‌ ತೂಕದ ಅಕ್ಕಿ ಮತ್ತು ಅಂದಾಜು ಮೌಲ್ಯ 1,50,000/- ರೂಗಳ ಕೃತ್ಯಕ್ಕೆ ಉಪಯೋಗಿಸಿದ ಪ್ಯಾಸೆಂಜರ್ ಆಟೋವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.‌

Leave a Reply

Your email address will not be published. Required fields are marked *