Headlines

ಅಕ್ಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವಕನಿಗೆ ವಾರ್ನಿಂಗ್ ನೀಡಿದ್ದ ತಮ್ಮನನ್ನು ಕಾರು ಹಾಯಿಸಿ ಕೊಲೆ|crime news

ಅಕ್ಕನ ಸಂಸಾರ ಉಳಿಸಿಕೊಳ್ಳಲು ಹೋದ ಸಹೋದರನು ತನ್ನ ಪ್ರಾಣ ಕಳೆದುಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.

ನಡೆದಿದ್ದೇನು..???? ;

ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ಗ್ರಾಮದ ಚಂದ್ರಾ ನಾಯ್ಕ ಮತ್ತು ಈತನ ಭಾವ ಶಂಕರ್ ನಾಯ್ಕ ಇಬ್ಬರು ಆಗಸ್ಟ್​ 27 ರ ರಾತ್ರಿ ಬೈಕ್ ಮೇಲೆ ಶಿಕಾರಿಪುರ ಪಟ್ಟಣಕ್ಕೆ ತೆರಳಿದ್ದರು. ಬಳಿಕ ಪಟ್ಟಣದಿಂದ ಸುಮಾರು 10 ರಿಂದ 15 ಕಿ.ಮೀ ದೂರದ ತೋಗರ್ಸಿ ಬಳಿ ವಾಪಾಸ್​ ಬರುತ್ತಿದ್ದಾಗ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದು, ಇಬ್ಬರ ಮೇಲೆ ಕಾರು ಹರಿದಿದೆ. ಇಬ್ಬರು ರಕ್ತಸಿಕ್ತವಾಗಿ ಆ ರಾತ್ರಿಯಲ್ಲಿ ಒದ್ದಾಡುತ್ತಿದ್ದರು. ಈ ನಡುವೆ ಸ್ವಲ್ಪ ದೂರದಲ್ಲಿ ಹೋದ ಕಾರ್ ಮತ್ತೆ ವಾಪಸ್ ಬಂದಿದೆ. ಮತ್ತೆ ಬೈಕ್ ಸವಾರ ಚಂದ್ರಾ ನಾಯ್ಕ ಮೇಲೆ ಕಾರ್ ಹರಿಸಿದ್ದಾನೆ. ಚಂದ್ರಾ ನಾಯ್ಕ ಒದ್ದಾಡಿ ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ಇತನ ಬಲಿ ಪಡೆದ ಕಾರ್ ಚಾಲಕ ಮಂಜಾ ನಾಯ್ಕ ಎಂಬಾತ ಅಲ್ಲಿಂದ ಕಾರ್ ಸಮೇತ ಎಸ್ಕೇಪ್ ಆಗಿದ್ದನು. ಅಲ್ಲಿದ್ದವರಿಗೆ ಇದೊಂದು ಅಪಘಾತವೆನ್ನುವಂತೆ ಕಂಡು ಬಂದಿತ್ತು. ಗಂಭೀರವಾಗಿ ಗಾಯಗೊಂಡ ಶಂಕರ್ ನಾಯ್ಕ್​ನನ್ನು ಸ್ಥಳೀಯ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಶಂಕರ್ ಚೇತರಿಸಿಕೊಂಡಿದ್ದನು. ಈ ಘಟನೆ ಕುರಿತು ಪೊಲೀಸರು ಆತನ ಬಳಿ ಮಾಹಿತಿ ಕೇಳಿದಾಗ ಇದೊಂದು ಅಪಘಾತವಲ್ಲ. ಉದ್ದೇಶ ಪೂರ್ವಕವಾಗಿ ನಡೆದ ಮರ್ಡರ್ ಎನ್ನುವುದು ಗೊತ್ತಾಗುತ್ತದೆ. ಬಳಿಕ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ಚರುಕುಗೊಳಿಸುತ್ತಾರೆ.

ಅಪಘಾತದಲ್ಲಿ ಇಬ್ಬರನ್ನು ಮರ್ಡರ್ ಮಾಡಲು ಮಂಜಾ ನಾಯ್ಕ ಸ್ಕೇಚ್ ಹಾಕಿದ್ದನು. ಆದ್ರೆ ಗುರಿ ತಪ್ಪಿ ಚಂದ್ರಾ ನಾಯ್ಕ ಮಾತ್ರ ಕೊಲೆಯಾಗಿ, ಶಂಕರ್ ನಾಯ್ಕ ಬಚಾವ್ ಆಗಿದ್ದ. ಆತನ ಬಲಗಾಲಿನ ಮೂಳೆ ಪುಡಿ ಪುಡಿಯಾಗಿದ್ದು, ವೈದ್ಯರು ಆತನ ಕಾಲಿಗೆ ಆಪರೇಶನ್ ಮಾಡಿದ್ದಾರೆ. ಈ ನಡುವೆ ಭಾವ ಶಂಕರ್ ನಾಯ್ಕ ಅಪಘಾತದ ನೋವಿನಲ್ಲಿ ಎರಡನೇ ಬಾರಿ ಚಂದ್ರಾ ನಾಯ್ಕ ಮೇಲೆ ಕಾರ್ ಹತ್ತಿಸುವ ವೇಳೆ ಕಾರ್ ಓಡಿಸುತ್ತಿದ್ದ ಮಂಜಾ ನಾಯ್ಕ ಮುಖವನ್ನು ನೋಡಿದ್ದನು. ಇದನ್ನು ಪೊಲೀಸರು ಬಳಿ ಹೇಳಿದ್ದಾನೆ.

ಕೊಲೆಗೆ ಕಾರಣವಾಯಿತಾ ಅನೈತಿಕ ಸಂಬಂಧ?

ಅಷ್ಟಕ್ಕೂ ಈ ಮಂಜಾ ನಾಯ್ಕ, ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ಗ್ರಾಮದ ನಿವಾಸಿ. ಇತನಿಗೆ ತಂದೆ ತಾಯಿ ಯಾರು ಇಲ್ಲ. ತಾಯಿ ಸಾವು ಮತ್ತು ಸಹೋದರನ ಆತ್ಮಹತ್ಯೆ ಬಳಿಕ ಒಂದಿಷ್ಟು ಇನ್ಸೂರೆನ್ಸ್ ಹಣ ಮತ್ತು ಆಸ್ತಿ ಪಾಸ್ತಿ ಕೈಗೆ ಸಿಕ್ಕಿದೆ. ಎಣ್ಣೆ ಹೊಡಕೊಂಡು ಮೋಜು ಮಸ್ತಿ ಮಾಡಿಕೊಂಡು ಮಂಜಾ ನಾಯ್ಕ ಗ್ರಾಮದವರಿಗೆ ಬೇಸರವಾಗಿದ್ದನು. ಈ ನಡುವೆ ಮಂಜಾ ನಾಯ್ಕನ ಅಕ್ಕ ಚಂದ್ರಾ ನಾಯ್ಕ ಎಂಬುವವರ ಮೇಲೆ ಕಣ್ಣು ಬೀಳುತ್ತದೆ. ಪದೇ ಪದೆ ಅವಳ ಹಿಂದೆ ಬಿದ್ದು, ಅವಳ ಜೊತೆ ಸಲೀಗೆಯನ್ನು ಬೆಳೆಸಿಕಕೊಂಡಿದ್ದನು. ಇಬ್ಬರ ನಡುವೆ ಅನೈತಿಕ ಸಂಬಂಧ ವಿಚಾರವಾಗಿ ಕುಟುಂಬದಲ್ಲಿ ಗಲಾಟೆ ಶುರುವಾಗಿತ್ತು.

ಅಕ್ಕನ ಜೀವನ ಹಾಳಾಗುತ್ತಿದೆ. ಅದಕ್ಕೆ ತನ್ನ ಅಕ್ಕನ ತಂಟೆಗೆ ಬರಬೇಡ ಎಂದು ಮಂಜಾ ನಾಯ್ಕಗೆ ವಾರ್ನಿಂಗ್ ಮಾಡಿದ್ದನು. ಆದ್ರೆ, ಇದಕ್ಕೆ ಮಂಜಾ ನಾಯ್ಕ ಬಗ್ಗಲಿಲ್ಲ. ಅಕ್ಕನ ಜೊತೆ ಈತ ಸಂಬಂಧ ಮುಂದುವರೆಸಿದ್ದನು. ಒಂದು ವಾರದ ಹಿಂದೆ ಚಂದ್ರಾ ನಾಯ್ಕ ಕೋಪಗೊಂಡು ಮಂಜಾ ನಾಯ್ಕ ಜೊತೆ ಗಲಾಟೆ ಮಾಡಿದ್ದನು. ಹೀಗೆ ಪದೇ ಪದೇ ತನ್ನ ದಾರಿಗೆ ಮುಳ್ಳಾಗಿದ್ದ ಚಂದ್ರಾ ನಾಯ್ಕ ಮತ್ತು ಅಕ್ಕನ ಗಂಡ ಶಂಕರ್ ನಾಯ್ಕ ಇಬ್ಬರ ಕಥೆ ಮುಗಿಸಲು ಮಂಜಾ ನಾಯ್ಕ ಸ್ಕೇಚ್ ಹಾಕಿದ್ದನು. ಅದರಂತೆ ಇಬ್ಬರನ್ನು ಕೊಲೆ ಮಾಡಿ ಅದನ್ನು ಅಪಘಾತ ರೀತಿಯಲ್ಲಿ ಬಿಂಬಿಸಲು ಪ್ಲ್ಯಾನ್ ಮಾಡಿಕೊಂಡಿದ್ದನು.

ಇದೀಗ ಶಿರಾಳಕೊಪ್ಪ ಪೊಲೀಸರು ಹಂತಕ ಮಂಜಾ ನಾಯ್ಕ್​ನನ್ನು ಬಂಧಿಸಿದ್ದಾರೆ. ಆತ ಕೊಲೆಗೆ ಬಳಿಸಿದ ಕಾರ್ ಸೀಜ್ ಮಾಡಿದ್ದಾರೆ. ಇನ್ನು ಚಂದ್ರಾ ನಾಯ್ಕ ಮದುವೆಯಾಗಿ ಒಂದೂವರೆ ವರ್ಷ ಆಗಿತ್ತು. 10 ತಿಂಗಳ ಗಂಡು ಮಗು ಕೂಡ ಇದೆ. ಈ ನಡುವೆ ಚಂದ್ರ ನಾಯ್ಕನ ಕೊಲೆಯಾಗಿದ್ದು ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ. ಅಕ್ಕನ ಸಂಸಾರ ಉಳಿಸಿಕೊಳ್ಳಲು ಹೋದ ಸಹೋದರನು ತನ್ನ ಪ್ರಾಣ ಕಳೆದುಕೊಂಡಿದ್ದಾನೆ.

Leave a Reply

Your email address will not be published. Required fields are marked *