w
Headlines

ಪುರಾಣ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬ ದೇವಾಲಯ ವಿರೂಪಗೊಳಿಸಿದ ದುಷ್ಕರ್ಮಿಗಳು|chandragutti temple

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಾಲಯವನ್ನು ದುಷ್ಕರ್ಮಿಗಳು ವಿರೂಪ ಗೊಳಿಸಿದ್ದಾರೆ.  ದೇವಾಲಯದ ಬಾಗಿಲು ಒಡೆದು ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ಕಿಡಿಗೇಡಿಗಳು, ದೇವಾಲಯದ ಗರ್ಭಗುಡಿಯಲ್ಲಿ ಇರುವ ಮೂಲ ದೇವರ ಬೆಳ್ಳಿಯ ಹೊದಿಕೆಯನ್ನು ಹೊರ ಎಸೆದಿದ್ದಾರೆ. ಅಲ್ಲದೇ ದೇವಾಲಯದಲ್ಲಿರುವ ಹುಂಡಿ ಹಾಗೂ ಪೂಜಾ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿ ಗೊಳಿಸಿದ್ದಾರೆ. ದೇವರ ಬೆಳ್ಳಿ ಮುಖವಾಡವನ್ನು ಗರ್ಭಗುಡಿಯಿಂದ ದೇವಸ್ಥಾನದ ಹೊರಗಡೆ ವರಂಡದಲ್ಲಿ ಎಸೆದಿದ್ದು, ಕಳ್ಳತನ ಮಾಡುವ ಉದ್ದೇಶ ಇರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.  ದೇವಸ್ಥಾನದ ಕೆಳಭಾಗದಲ್ಲಿರುವ…

Read Full News

ಆರಗ ಜ್ಞಾನೇಂದ್ರ ರವರ ಮೇಲೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಲಿ – ಆರ್ ಎಂ ಮಂಜುನಾಥ್ ಗೌಡ|RMM

ಆರಗ ಜ್ಞಾನೇಂದ್ರ ರವರ ಮೇಲೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಲಿ – ಆರ್ ಎಂ ಮಂಜುನಾಥ್ ಗೌಡ ತೀರ್ಥಹಳ್ಳಿ : ಶಾಸಕರಾಗಿ ಅಥವಾ ಸಚಿವರಾದ ನಂತರ ಸಂವಿಧಾನದ ವಿಧಿ ವಿಧಾನಗಳಿಗೆ ಬದ್ಧವಾಗಿ ನಡೆದುಕೊಳ್ಳುತ್ತೇವೆ ಎಂದು ಪ್ರಮಾಣ ಮಾಡುತ್ತೇವೆ. ಆದರೆ ಇವರು ಸಂವಿಧಾನದ ವಿರುದ್ಧವಾಗಿ ಮಾತನಾಡಿದ್ದಾರೆ. ಎಲ್ಲವನ್ನು ಗೃಹ ಸಚಿವರಾದ ನಂತರ ಪ್ರಾರಂಭ ಮಾಡಿದ್ದರು. ಗೃಹ ಸಚಿವರಾದ ಸ್ವಲ್ಪ ದಿನದಲ್ಲೇ ಮೈಸೂರಿನ ಮಹಿಳೆಯೊಬ್ಬರ ಬಗ್ಗೆ ಮಾತನಾಡಿದ್ದರು. ಈಗ ರಾಷ್ಟ್ರ ಕಂಡಂತಹ ಎತ್ತರದ ಮನುಷ್ಯನ ಬಗ್ಗೆ  ವೈಯಕ್ತಿಕವಾಗಿ ನಿಂದನೆ ಮಾಡಿದ್ದಾರೆ…

Read Full News

ಓವರ್ ಟೇಕ್ ಮಾಡುವಾಗ KSRTC ಬಸ್ ಗೆ ಖಾಸಗಿ ಬಸ್ ಡಿಕ್ಕಿ

ಓವರ್ ಟೇಕ್ ಮಾಡುವಾಗ KSRTC ಬಸ್ ಗೆ ಖಾಸಗಿ ಬಸ್ ಡಿಕ್ಕಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಗಿಳಾಲಗುಂಡಿ ಸಮೀಪ ಖಾಸಗಿ ಬಸ್ಸೊಂದು ಕೆಎಸ್​ಆರ್​ಟಿಸಿ ಬಸ್​ಗೆ ಸೈಡ್​ನಿಂದ ಡಿಕ್ಕಿಹೊಡೆದ ಘಟನೆ ಸಂಭವಿಸಿದೆ.  ಸಾಗರ-ಶಿವಮೂಗ್ಗ ರೂಟ್​ನಲ್ಲಿ KSRTC  ಹಾಗೂ ಖಾಸಗಿ ಬಸ್​ ಸಂಚರಿಸುತ್ತಿತ್ತು. ಈ ವೇಳೆ ಸೀಟ್​ ಹಾಕುವ ವಿಚಾರಕ್ಕೆ ಖಾಸಗಿ ಬಸ್, ಕೆಎಸ್​ಆರ್​ಟಿಸಿ ಬಸ್​ನ್ನ ಓವರ್​ ಟೇಕ್​ ಮಾಡಲು ಮುಂದಾಗಿದ್ದು, ಈ ವೇಳೆ ಬಸ್​ನ ಹಿಂಬದಿ ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿಯಾಗಿದೆ.  ಒಂದೇ ರೂಟ್​ನಲ್ಲಿ, ಹೆಚ್ಚು ಕಮ್ಮಿ ಒಂದೇ…

Read Full News

ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರ ದಾಳಿ: ಕೋಳಿ ಸಮೇತ ಆರೋಪಿಗಳು ವಶಕ್ಕೆ!!!|arrested

ತೀರ್ಥಹಳ್ಳಿಯಲ್ಲಿ ಕೋಳಿ ಅಂಕದ ಆಟ ನಡೆಸ್ತಿದ್ದವರ ಮೇಲೆ ಪೊಲೀಸರ ದಾಳಿ ತೀರ್ಥಹಳ್ಳಿ: ತಾಲ್ಲೂಕಿನಲ್ಲಿ ಈಗ ಅನೇಕ ದಂಧೆ, ಅಕ್ರಮ ಚಟುವಟಿಕೆಗಳು ಶುರುವಾಗಿದೆ. ಒಂದು ಕಡೆ ಕಳ್ಳತನ, ಅತ್ಯಾಚಾರದಂತಹ ಚಟುವಟಿಕೆ ನಡುವೆ ಇದೀಗ ಕೋಳಿ ಪಡೆ, ಇಸ್ಪೀಟ್, ಆನ್ಲೈನ್ ಬೆಟ್ಟಿಂಗ್ ಹೆಚ್ಚಾಗಿದೆ. ಈಗಾಗಲೇ ಇದರಿಂದ ನೂರಾರು ಕುಟುಂಬಗಳು ಕಣ್ಣೀರು ಹಾಕುತ್ತಿವೆ.  ಈ ನಡುವೆ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸರು ಕೋಳಿ ಅಂಕ ನಡೆಸ್ತಿದ್ದವರ ಮೇಲೆ ದಾಳಿ ನಡೆಸಿದ್ದ ಹಲವರನ್ನ ವಶಕ್ಕೆ ಪಡೆದಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ಹಳ್ಳಿಬೈಲ್ ನಲ್ಲಿ ಕೋಳಿ…

Read Full News

ಹೊಸನಗರದ ಕಲ್ಲುಹಳ್ಳ ಸೇತುವೆಯಿಂದ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವು|kalluhalla bridge

ಹೊಸನಗರ ಕಲ್ಲುಹಳ್ಳ ಸೇತುವೆಯಿಂದ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವು| ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕಲ್ಲುಹಳ್ಳ ಸೇತುವೆ ಬಳಿ ಆಯತಪ್ಪಿ ಬಿದ್ದು ಯುವಕನೊಬ್ಬ ಮೃತಪಟ್ಟಿದ್ದಾನೆ. ಹೊಸನಗರ ಪೇಟೆ ಸಮೀಪ ಇರುವ ಕಲ್ಲುಹಳ್ಳ ಸೇತುವೆ ಬಳಿಯಲ್ಲಿ ಈ ಘಟನೆ ಸಂಭವಿಸಿದೆ.  ಮೃತ ಯುವಕನನ್ನ ಹೊಸನಗರ ದ್ಯಾವರ್ಸದ ನಿವಾಸಿ ರಾಘು ಎಂದು ತಿಳಿದುಬಂದಿದೆ.  ಇಂದು ಬೆಳಗ್ಗೆ ಯುವಕ ಸೇತುವೆ ಬಳಿ ನಡೆದುಕೊಂಡು ಹೋಗುವದನ್ನ ಸ್ಥಳೀಯರು ಗಮನಿಸಿದ್ದಾರೆ. ಆನಂತರ ಯುವಕ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದಾನೆ. ಘಟನೆ ಹೇಗೆ ನಡೆಯಿತು ಎಂಬುದು…

Read Full News

ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ – ಬಸ್ ಗೆ ವಿದ್ಯುತ್ ಪ್ರವಹಿಸಿ 35 ಪ್ರಯಾಣಿಕರು ಆಸ್ಪತ್ರೆಗೆ ದಾಖಲು – ಇಬ್ಬರು ವಿದ್ಯಾರ್ಥಿಗಳು ಮೆಗ್ಗಾನ್ ಗೆ..!!!

ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ – 35 ಪ್ರಯಾಣಿಕರು ಆಸ್ಪತ್ರೆಗೆ ದಾಖಲು ಸಾಗರ :  ಸಿಗಂದೂರು ಹೊಳೆಬಾಗಿಲಿನಿಂದ ಸಾಗರಕ್ಕೆ ಬರುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಗೆಣಸಿಕುಣಿ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ವಿದ್ಯುತ್ ವೈರ್ ಬಸ್ ಗೆ ತಾಗಿ ಒಟ್ಟು 45 ಪ್ರಯಾಣಿಕರಲ್ಲಿ 35 ಪ್ರಯಾಣಿಕರಿಗೆ ವಿದ್ಯುತ್ ಶಾಕ್ ಹೊಡೆದಿದೆ. ಈ ಬಸ್ ನಲ್ಲಿ ಒಟ್ಟು 45 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು,…

Read Full News

ಹೊಸನಗರ ಸಿಪಿಐ ಬಿ ಸಿ ಗಿರೀಶ್ ಸೇರಿದಂತೆ ಜಿಲ್ಲೆಯ ಏಳು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ :|transfer

ಹೊಸನಗರ ಸಿಪಿಐ ಬಿ ಸಿ ಗಿರೀಶ್ ಸೇರಿದಂತೆ ಜಿಲ್ಲೆಯ ಏಳು ಪಿ ಐ ಗಳ ವರ್ಗಾವಣೆ : ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಗಿರೀಶ್ ಬಿ ಸಿ ಸೇರಿದಂತೆ ಜಿಲ್ಲೆಯ  ಏಳು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿದೆ. ಸಿಪಿಐ ಗಿರೀಶ್ ರವರು ತುಮಕೂರು ಜಿಲ್ಲೆ ಪಾವಗಡ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಹೊಸನಗರದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಗುರಣ್ಣ ಎಸ್ ಹೆಬ್ಬಾಳ್ ನೂತನ ಸಿಪಿಐ ಆಗಿ ವರ್ಗಾವಣೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ವರ್ಗಾವಣೆಯಾದವರು ; ಗಿರೀಶ್‌…

Read Full News

ಸೈಕಲ್ ಗೆ ಕಾರು ಡಿಕ್ಕಿ – ಸೈಕಲ್ ಸವಾರ ಸ್ಥಳದಲ್ಲಿಯೇ ಸಾವು|accident

ಸೈಕಲ್ ಗೆ ಕಾರು ಡಿಕ್ಕಿ – ಸೈಕಲ್ ಸವಾರ ಸ್ಥಳದಲ್ಲಿಯೇ ಸಾವು ಸಾಗರ : ಸೈಕಲ್ ಸವಾರನಿಗೆ ಓಮಿನಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕೆಳದಿ ಗ್ರಾಮದಲ್ಲಿ ಜು.31ರ ಸೋಮವಾರ ಸಂಜೆ ನಡೆದಿದೆ. ಕೆಳದಿ ಗ್ರಾಮದ ಶ್ರೀಧರ್ (55) ಮೃತಪಟ್ಟ ವ್ಯಕ್ತಿ. ಶ್ರೀಧರ್ ಸೈಕಲ್‌ನಲ್ಲಿ ಸಮೀಪದಲ್ಲಿರುವ ತಮ್ಮ ಜಮೀನಿಗೆ ನೀರು ಕಟ್ಟಿ ವಾಪಾಸ್ ಬರುತ್ತಿದ್ದ ವೇಳೆ ಓಮಿನಿ ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಶ್ರೀಧರ್ ಅವರ ಪುತ್ರ…

Read Full News

ಹೊಸನಗರ : ಹುಲ್ಲಿನ ಬಣವೆಗೆ ತಗುಲಿದ ಬೆಂಕಿ – ನಷ್ಟ..!!|fire

ಹೊಸನಗರ : ಹುಲ್ಲಿನ ಬಣವೆಗೆ ತಗುಲಿದ ಬೆಂಕಿ – ನಷ್ಟ..!! ಹೊಸನಗರ ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳ್ಳಂಡ ಗ್ರಾಮದ ಹಾಲಪ್ಪ ಗೌಡ ಬಿನ್ ರುದ್ರಪ್ಪ ಗೌಡರಿಗೆ ಸೇರಿದ ಒಣ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಪಕ್ಕದಲ್ಲಿದ್ದ ಕೊಟ್ಟಿಗೆಗೂ ಬೆಂಕಿ ಹೊತ್ತಿದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದ್ದು ಸುಮಾರು ಅಂದಾಜು 50 ಸಾವಿರ ರೂಪಾಯಿಯಷ್ಟು ನಷ್ಟವಾಗಿದೆ. ಆಗ್ನಿ ಶಾಮಕ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ತಕ್ಷಣ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರಿಂದ…

Read Full News

ಕಸ್ತೂರಿ ರಂಗನ್ ವರದಿ ಜಾರಿಗೆ ತಂದ್ರೆ ಕರ್ನಾಟಕದಲ್ಲಿ ರಕ್ತ ಕ್ರಾಂತಿ ಆಗಲಿದೆ – ಆರಗ ಜ್ಞಾನೇಂದ್ರ|araga

ಕಸ್ತೂರಿ ರಂಗನ್ ವರದಿ ಜಾರಿಗೆ ತಂದ್ರೆ ಕರ್ನಾಟಕದಲ್ಲಿ ರಕ್ತ ಕ್ರಾಂತಿ ಆಗಲಿದೆ – ಆರಗ ಜ್ಞಾನೇಂದ್ರ  ತೀರ್ಥಹಳ್ಳಿ : ಬಿ ಎಸ್ ಯಡಿಯೂರಪ್ಪನವರ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕಸ್ತೂರಿ ರಂಗನ್ ವರದಿ ಜಾರಿಯನ್ನು ಒಪ್ಪುವುದಿಲ್ಲ ಎಂದು ಹೇಳಿತ್ತು. ಈಗ ಹೈಕೋರ್ಟ್ ನಾ ಗ್ರೀನ್ ಬೆಂಚ್ ಗೆ ಹೋಗಿ ಇಲ್ಲಿನ ಜನರ ಕುತ್ತಿಗೆಗೆ ಹಗ್ಗ ಹಾಕುವ ಕೆಲಸ ನೆಡೆಯುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು. ಮಂಗಳವಾರ ತಾಲೂಕು ಕಚೇರಿ ಎದುರು ಕಸ್ತೂರಿ ರಂಗನ್ ವರದಿ ಜಾರಿಯ…

Read Full News

ನಿದ್ದೆ ಮಂಪರಿನಲ್ಲಿದ್ದ ಕಾರು ಚಾಲಕನಿಂದ ಸರಣಿ ಅಪಘಾತ – ತಪ್ಪಿದ ಭಾರಿ ಅನಾಹುತ|accide

ನಿದ್ದೆ ಮಂಪರಿನಲ್ಲಿದ್ದ ಕಾರು ಚಾಲಕನಿಂದ ಸರಣಿ ಅಪಘಾತ – ತಪ್ಪಿದ ಭಾರಿ ಅನಾಹುತ ತೀರ್ಥಹಳ್ಳಿ: ನಿದ್ದೆ ಮಂಪರಿನಲ್ಲಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ ಡಿಕ್ಕಿಯಾಗಿ ನಂತರ ಕಾರು ಹಲಸಿನ ಮರಕ್ಕೆ  ಹೊಡೆದ ಘಟನೆ ತಾಲೂಕಿನ ರಾಮಕೃಷ್ಣಪುರ ಸಮೀಪದಲ್ಲಿ ಸೋಮವಾರ ಸಂಭವಿಸಿದೆ. ಜನನಿಬಿಡ ಪ್ರದೇಶವಾದ ಇಲ್ಲಿ ಅದೃಷ್ಟವಶಾತ್ ಅಪಘಾತ ನಡೆಯುವ ಸಂಧರ್ಭದಲ್ಲಿ ಯಾರು ಇಲ್ಲದೇ ಇದ್ದದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಕಮ್ಮರಡಿಯ ಮಾನಪ್ಪ ಎಂಬುವರ ಕಾರು ಅಪಘಾತಕ್ಕೆ ಒಳಗಾಗಿದ್ದು ಕಾರು…

Read Full News

ಡಿ ದರ್ಜೆ ನೌಕರನ ನಿವೃತ್ತಿಗೆ ಸ್ಪೆಷಲ್ ಗಿಫ಼್ಟ್ – ಉಪವಿಭಾಗಧಿಕಾರಿ ಕಾರಿನಲ್ಲಿ‌ ಮನೆಗೆ ಬೀಳ್ಕೊಡುಗೆ|Sagara news

ಡಿ ದರ್ಜೆ ನೌಕರನ ನಿವೃತ್ತಿಗೆ ಸ್ಪೆಷಲ್ ಗಿಫ಼್ಟ್ – ಉಪವಿಭಾಗಧಿಕಾರಿ ಕಾರಿನಲ್ಲಿ‌ ಮನೆಗೆ ಬೀಳ್ಕೊಡುಗೆ ಸಾಗರ : ತಮ್ಮ ಕಚೇರಿಯ ನೌಕರ ನಿವೃತ್ತಿಯಾದ ಹಿನ್ನೆಲೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ವಿಶೇಷ ಗೌರವದೊಂದಿಗೆ ಆತನಿಗೆ ಬೀಳ್ಕೊಡಿಗೆ ಕೊಟ್ಟಿದ್ದಾರೆ.  ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ನಿವೃತ್ತಿಯಾದ ನೌಕರ ಕೃಷ್ಣಪ್ಪ ಅವರನ್ನ ತಮ್ಮ ಸರ್ಕಾರಿ ವಾಹನದಲ್ಲಿ ಕೂರಿಸಿಕೊಂಡು ಹೋಗಿ ಮನೆಗೆ ಡ್ರಾಪ್‌ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡಿಗೆ ನೀಡಿದ್ದಾರೆ. ಸಾಗರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಕೃಷ್ಣಪ್ಪ ಅವರು ಸೋಮವಾರದಂದು…

Read Full News

ರಿಪ್ಪನ್‌ಪೇಟೆ : ಯುವ ಜನತೆಗೆ ನೇತ್ರದಾನದ ಅರಿವು ಮೂಡಿಸಬೇಕಿದೆ – ಡಾ|| ಬೃಂದಾ ನಾಯ್ಕ್|137 ವಿದ್ಯಾರ್ಥಿಗಳಿಂದ ನೇತ್ರದಾನಕ್ಕೆ ನೋಂದಣಿ

ರಿಪ್ಪನ್‌ಪೇಟೆ : ಯುವ ಜನತೆಗೆ ನೇತ್ರದಾನದ ಅರಿವು ಮೂಡಿಸಬೇಕಿದೆ – ಡಾ|| ಬೃಂದಾ ನಾಯ್ಕ್|137 ವಿದ್ಯಾರ್ಥಿಗಳಿಂದ ನೇತ್ರದಾನಕ್ಕೆ ನೋಂದಣಿ ರಿಪ್ಪನ್‌ಪೇಟೆ : ವ್ಯಕ್ತಿಯ ಮರಣಾನಂತರ ಆರೋಗ್ಯಯುತ ಕಣ್ಣುಗಳು ಇಬ್ಬರು ಅಂಧರ ಪಾಲಿಗೆ ಬೆಳಕಾಗುತ್ತವೆ. ಪ್ರಾಣಬಿಟ್ಟು ಆರು ಗಂಟೆಗಳೊಳಗಾಗಿ  ನೇತ್ರಗಳನ್ನು ಸುರಕ್ಷಿತವಾಗಿ ಶೇಖರಿಸಲು ಸಾಧ್ಯವಾದಲ್ಲಿ ನೇತ್ರ ಚಿಕಿತ್ಸೆಯ ಮೂಲಕ ಅಂಧರಿಗೆ ದೃಷ್ಟಿಭಾಗ್ಯ ಲಭಿಸುತ್ತದೆ. ಅದಕ್ಕಾಗಿ ನೇತ್ರದಾನದ ಅರಿವನ್ನು ವಿಶೇಷವಾಗಿ ಯುವಜನತೆಗೆ ಮೂಡಿಸುವ ಅಗತ್ಯವಿದೆ ಎಂದು ಶಿವಮೊಗ್ಗದ ಹರಕೆರೆ ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞರಾದ ಡಾ|| ಬೃಂದಾ ನಾಯ್ಕ್ ಅವರು…

Read Full News

ತಾಲೂಕ್ ಕಛೇರಿಗೆ ದಿಡೀರ್ ಭೇಟಿ ನೀಡಿದ ಆರಗ ಜ್ಞಾನೇಂದ್ರ – ಖಾಲಿ ಕುರ್ಚಿ ಕಂಡು ಆಕ್ರೋಶ|araga

ತೀರ್ಥಹಳ್ಳಿ : ಮಾಜಿ ಸಚಿವ ಆರಗ ಜ್ಞಾನೇಂದ್ರ ಇವತ್ತು ತೀರ್ಥಹಳ್ಳಿ ತಾಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳ ಕುರ್ಚಿಗಳು ಖಾಲಿ ಇದ್ದಿದ್ದನ್ನು ಕಂಡು ಆಕ್ರೋಶಗೊಂಡರು. ಸೋಮವಾರ ಸಂಜೆ 4.30ರ ಹೊತ್ತಿಗೆ ತಾಲೂಕು ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ಹಠಾತ್‌ ಭೇಟಿ ನೀಡಿದರು. ಈ ವೇಳೆ ವಿವಿಧ ಸೆಕ್ಷನ್‌ಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಇಲ್ಲದಿರುವುದನ್ನು ಕಂಡು ಸಿಟ್ಟಾದರು. ಕೂಡಲೆ ರಿಜಿಸ್ಟರ್‌ ತರಿಸಿಕೊಂಡು ಪರಿಶೀಲನೆ ನಡೆಸಿದರು. ಇನ್ನು, ಪರಿಶೀಲನೆ ವೇಳೆ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಶೇ.50ಕ್ಕಿಂತಲು…

Read Full News

ಹೊಸನಗರದ ಉಪನ್ಯಾಸಕ ಅಂಜನ್ ಕುಮಾರ್ ಗೆ ಬೆದರಿಕೆ – ಪ್ರಕರಣ ದಾಖಲು|thret

ಹೊಸನಗರ : ಕಾಲೇಜು ಉಪನ್ಯಾಸಕರೊಬ್ಬರ ಮನೆಯ ಕಾಂಪೌಂಡ್ ಆವರಣಕ್ಕೆ ಸಮಾರು 15 ಜನರ ಗುಂಪು ಅತಿಕ್ರಮಣ ಪ್ರವೇಶ ಮಾಡಿ, ಬೆದರಿಕೆ ಹಾಕಿದ ಘಟನೆ ಪಟ್ಟಣದ ಕ್ರಿಸ್ಟಿಯನ್ ಕಾಲೋನಿಯಲ್ಲಿ ನಡೆದಿದೆ. ಇಲ್ಲಿನ ಕೊಡಚಾದ್ರಿ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಜನ್‌ಕುಮಾರ್ ಎಂಬವವರಿದ್ದ ಬಾಡಿಗೆ ಮನೆಯ ಆವರಣಕ್ಕೆ ಶನಿವಾರ ತಡರಾತ್ರಿ ಪ್ರವೇಶಿಸಿ, ಉಪನ್ಯಾಸಕರಿಗೆ ಬೆದರಿಕೆ ಹಾಕಿದ್ದಾರೆ. ಮನೆ ಒಳಗಡೆ ಅನ್ಯಕೋಮಿನ ಮಹಿಳೆಯನ್ನು ಇರಿಸಿಕೊಂಡಿದ್ದೀಯ, ನಾವು ತಪಾಸಣೆ ಮಾಡಬೇಕು. ಬಾಗಿಲು ತೆಗೆಯದಿದ್ದರೆ, ಬಾಗಿಲು ಒಡೆದು ಒಳ ಪ್ರವೇಶಿಸುವುದಾಗಿ ತಿಳಿಸಿ…

Read Full News

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ – ತಪ್ಪಿದ ಭಾರಿ ಅನಾಹುತ|accident

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ – ತಪ್ಪಿದ ಭಾರಿ ಅನಾಹುತ ಮಾಸ್ತಿಕಟ್ಟೆ : ಇಲ್ಲಿನ ಸಮೀಪದ ಹುಲಿಕಲ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ತುಂಬಿದ್ದ ಲಾರಿ ಪಲ್ಟಿಯಾಗಿರುವ ಘಟನೆ ನಡೆದಿದೆ. ಹೊಸನಗರ ಕಡೆಯಿಂದ ಮಂಗಳೂರಿಗೆ ಸಿಮೆಂಟ್ ತುಂಬಿಕೊಂಡು ತೆರಳುತಿದ್ದ 12 ಚಕ್ರದ ಲಾರಿ (KA 19 AB 0933) ಹುಲಿಕಲ್ ಗ್ರಾಮದ ಬಾಬುರಾವ್ ಎಂಬುವವರ ಮನೆಯ ಸಮೀಪದಲ್ಲಿಯೇ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕದಲ್ಲಿ ಪಲ್ಟಿಯಾಗಿ ಉರುಳಿ ಬಿದ್ದಿದೆ.ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಂಭೀರ…

Read Full News

ಜಲಪಾತಕ್ಕೆ ಬಿದ್ದು ನಾಪತ್ತೆಯಾಗಿದ್ದ ಶರತ್ ಮೃತದೇಹ ವಾರದ ಬಳಿಕ ಪತ್ತೆ|falls

ಜಲಪಾತಕ್ಕೆ ಬಿದ್ದು ನಾಪತ್ತೆಯಾಗಿದ್ದ ಶರತ್ ಮೃತದೇಹ ವಾರದ ಬಳಿಕ ಪತ್ತೆ ವಾರದ ಹಿಂದೆ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ ವೀಕ್ಷಣೆ ವೇಳೆ ಆಕಸ್ಮಿಕವಾಗಿ ಬಿದ್ದು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆ.ಎಚ್ ನಗರ ಸುಣ್ಣದ ಹಳ್ಳಿ ನಿವಾಸಿ ಶರತ್ ಕುಮಾರ್ (23) ಮೃತಪಟ್ಟವರು. ಕಳೆದೆರಡು ದಿನಗಳಿಂದ ಪರಿಸರದಲ್ಲಿ ಮಳೆ ಇಳಿಮುಖವಾಗಿದ್ದು ನೀರಿನ ಹರಿವು ಕಡಿಮೆಯಾಗಿದೆ. ಇದರಿಂದಾಗಿ ಫಾಲ್ಸ್ ನಲ್ಲಿ ಶರತ್ ಬಿದ್ದ ಸಮೀಪದ ಕಲ್ಲು…

Read Full News

ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಅತಿಮುಖ್ಯ – ಸಂಸದ ಬಿ ವೈ ರಾಘವೇಂದ್ರ|press day

ಶಿವಮೊಗ್ಗ : ಪತ್ರಿಕಾ ಮಾಧ್ಯಮ ಯಾವತ್ತೂ ವಿರೋಧ ಪಕ್ಷದಂತೆ ಕೆಲಸ ಮಾಡಬೇಕು. ಹೀಗಾದಲ್ಲಿ ಆಳುವ ಸರಕಾರ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.  ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಅಭಿನಂದನೆ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಅತಿಮುಖ್ಯವಾಗಿರುತ್ತದೆ. ನಕಾರಾತ್ಮಕ ವರದಿಗಾರಿಕೆ ಮಾಡುವವರನ್ನು ಸಮಾಜ ಒಪ್ಪುವುದಿಲ್ಲ. ಸಮಾಜಮುಖಿಯಾದ ಸಕಾರಾತ್ಮಕ ಪತ್ರಿಕೋದ್ಯಮಕ್ಕೆ…

Read Full News

ಖಾಸಗಿ ವಿಡಿಯೊ ವೈರಲ್‌; ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ|self harming

ಖಾಸಗಿ ವಿಡಿಯೊ ವೈರಲ್‌; ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ ದಾವಣಗೆರೆ : ಸರ್ಕಾರಿ ಪದವಿ ಕಾಲೇಜಿನ ಕಟ್ಟಡದಲ್ಲಿ ಯುವಕ-ಯುವತಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ನಗರದ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರು ಮಹಡಿ ಮೇಲೆ ಏಕಾಂತದಲ್ಲಿ ಇದ್ದರು. ದಾವಣಗೆರೆ ಜಿಲ್ಲೆಯ ಕಾಲೇಜೊಂದರ ಕಟ್ಟಡದಲ್ಲಿ ಯುವಕ-ಯುವತಿಯ ಖಾಸಗಿ ಕ್ಷಣಗಳನ್ನು ಎದುರಿನ ಕಾಲೇಜು ಕಟ್ಟಡದಿಂದ ಯಾರೋ ಮೊಬೈಲ್ ನಲ್ಲಿ ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು….

Read Full News

ವಿದ್ಯುತ್ ತಂತಿ ತಗುಲಿ ಕುರಿಗಾಹಿ ಸಾವು|electric shock

ವಿದ್ಯುತ್ ತಂತಿ ತಗುಲಿ ಕುರಿಗಾಹಿ ಸಾವು ಶಿವಮೊಗ್ಗ : ವಿದ್ಯುತ್‌ ತಂತಿ ತಗುಲಿ ಕುರಿಗಾಹಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಮಲ್ಲಿಕಾರ್ಜುನ ನಗರ 3ನೇ ಕ್ರಾಸ್ ಬಳಿಯ ರಾಗಿಗುಡ್ಡದಲ್ಲಿ ನಡೆದಿದೆ. ಚಟ್ನಹಳ್ಳಿ ನಿವಾಸಿ ಗಿರೀಶ್ (27) ಮೃತು ಕುರಿಗಾಹಿ. ರಾಗಿಗುಡ್ಡದ ಚಾನಲ್‌ ಸಮೀಪ ಶುಕ್ರವಾರ ಮಧ್ಯಾಹ್ನ ಗಿರೀಶ ಕುರಿ ಮೇಯಿಸುತ್ತ ಬಂದಿದ್ದ. ಈ ವೇಳೆ ವಿದ್ಯುತ್‌ ಕಂಬದ ತಂತಿ ತಗುಲಿ ಕರೆಂಟ್‌ ಶಾಕ್‌ ಹೊಡೆದಿದೆ ಎಂದು ಶಂಕಿಸಲಾಗಿದೆ. ರಾತ್ರಿಯಾದರು ಗಿರೀಶ ಮನೆಗೆ ಬಾರದ ಹಿನ್ನೆಲೆ ಆತನ ಕುಟುಂಬದವರು…

Read Full News

ವಿಟಿಯು ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಹಾಗೂ 9ನೇ ರ‌್ಯಾಂಕ್ ಪಡೆದ JNNC ವಿದ್ಯಾರ್ಥಿನಿಯರು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ 2020-23 ನೇ ಸಾಲಿನ ವಿವಿಧ ಎಂಜಿನಿಯರಿಂಗ್ ವಿಭಾಗಗಳ ಪರೀಕ್ಷೆಗಳಲ್ಲಿ ಶಿವಮೊಗ್ಗ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಪಾರ್ವತಿ ಸಲೇರಾ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ. ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಸ್ಮೃತಿ.ಕೆ.ವಂತಕರ್ ರಾಜ್ಯಕ್ಕೆ ಒಂಬತ್ತನೆ ರ‌್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದನೆ…

Read Full News

ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ಅಧಿಕಾರ ಸ್ವೀಕಾರ|kuvempu university

ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ಅಧಿಕಾರ ಸ್ವೀಕಾರ ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ನೇಮಕಗೊಂಡಿದ್ದಾರೆ. ಈ ಹಿಂದೆ ಕುಲಸಚಿವರಾಗಿದ್ದ ಅನುರಾಧ ಅವರ ಸ್ಥಾನಕ್ಕೆ ಈಗ ಅಧಿಕೃತ ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ. 8 ತಿಂಗಳ ಹಿಂದೆ ಕುಲಸಚಿವರಾಗಿದ್ದ ಅನುರಾಧರವರು ವರ್ಗಾವಣೆಗೊಂಡು ಹೋದ ನಂತರ ಪ್ರಭಾರ ಕುಲಸಚಿವರನ್ನಾಗಿ ಸಿ ಗೀತಾರನ್ನ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. 8 ತಿಂಗಳ ಕಾಲ ಪ್ರಭಾರರನ್ನ ನೇಮಿಸಿದ್ದ ಸರ್ಕಾರ ಈಗ ಅವರ ಸ್ಥಾನಕ್ಕೆ ಅಧಿಕೃತವಾಗಿ ಪ್ರೊ.ಪಿ.ಕಣ್ಣನ್ ರನ್ನ ನೇಮಿಸಿ ಆದೇಶಿಸಿದೆ. ಕುವೆಂಪು ವಿಶ್ವವಿದ್ಯಾಲಯದ ನೂತನ…

Read Full News

ರಿಪ್ಪನ್‌ಪೇಟೆ : ಮಸೀದಿ ಮುಂಭಾಗದಲ್ಲಿ ಮದ್ಯದಂಗಡಿ ಅರಂಭಿಸುವುದನ್ನು ವಿರೋಧಿಸಿ ಮೌನ ಪ್ರತಿಭಟನೆಗೆ ಸಿದ್ದತೆ|ಮದ್ಯದಂಗಡಿ ಪ್ರಾರಂಭದ ಹುನ್ನಾರದಲ್ಲಿ ಪ್ರತಿಷ್ಠಿತ ಧರ್ಮದರ್ಶಿಯೊಬ್ಬರ ಹೆಸರು ದುರ್ಬಳಕೆ.???

“ಮಸೀದಿ ಬಳಿ ಮಧ್ಯದಂಗಡಿ ಅರಂಭಿಸುವುದನ್ನು ವಿರೋಧಿಸಿ ಮೌನ ಪ್ರತಿಭನೆಗೆ ಸಿದ್ದತೆ” ರಿಪ್ಪನ್‌ಪೇಟೆ;-ಸರ್ಕಾರದ ಅಬಕಾರಿ ನಿಯಮದಂತೆ ಮಸೀದಿ ಚರ್ಚ್ ದೇವಸ್ಥಾನ ಹಾಗೂ ಶಾಲೆ ಅಸ್ಪತ್ರೆಗೆ 100 ಮೀಟರ್ ಸುತ್ತಳಲೆತೆಯಲ್ಲಿ ಮಧ್ಯದಂಗಡಿ ತೆರೆಯಬಾರದೆಂಬ ನಿಯಮ ಜಾರಿಯಲ್ಲಿದ್ದರೂ ಕೂಡಾ ಇಲ್ಲಿನ ಹೊಸನಗರ ರಸ್ತೆಯ ಜುಮ್ಮಾಮಸೀದಿಯಿಂದ ಕೆಲವೇ ಅಂತರದಲ್ಲಿರುವ ರಾಯಲ್ ಕಂಪರ್ಟ್ ಕಟ್ಟಡದಲ್ಲಿ ಸಿ.ಎಲ್.ನಂ 7 ಬಾರ್ ಅಂಡ್ ರೆಸ್ಟೊರೆಂಟ್‌ಯನ್ನು ಆರಂಭಿಸುವ ಎಲ್ಲ ಸಿದ್ದತೆ ನಡೆದಿದ್ದು ಈ ಬಗ್ಗೆ ಇಂದು ಮುಸ್ಲಿಂ ಸಮುದಾಯದವರು ಶುಕ್ರವಾರದ ನಮಾಜ್ (ಪ್ರಾರ್ಥನೆ) ಮುಗಿಸಿ ಠಾಣೆಗೆ ತೆರಳಿ ಮಸೀದಿ ಬಳಿ…

Read Full News

ಆರ್ ಎಂ ಮಂಜುನಾಥ್ ಗೌಡ ಹಿಡಿತಕ್ಕೆ ಡಿಸಿಸಿ ಬ್ಯಾಂಕ್ – ಉಪಾಧ್ಯಕ್ಷರಾಗಿದ್ದ ಷಡಾಕ್ಷರಿ ಪ್ರಭಾರ ಅಧ್ಯಕ್ಷರಾಗಿ ಆಯ್ಕೆ..!!!|DCC

ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಆಗಿದ್ದು, 9 ನಿರ್ದೇಶಕರ ಬೆಂಬಲದೊಂದಿಗೆ ಮತ್ತೆ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಡಾ. ಆರ್.ಎಂ. ಮಂಜುನಾಥ ಗೌಡ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲಾ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಪರವಾಗಿ 9 ಮತಗಳೊಂದಿಗೆ, ಅವಿಶ್ವಾಸ ನಿರ್ಣಯಕ್ಕೆ ಜಯ ಸಿಕ್ಕಿದೆ. ಉಪಾಧ್ಯಕ್ಷರಾಗಿದ್ದ ಷಡಕ್ಷರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 13 ಸದಸ್ಯರಿದ್ದು ಈಗ ಗೌಡರ ಪಾಳಯ ಅಧಿಕಾರ ಹಿಡಿದಿದೆ. ಚುನಾವಣೆ ಅಧಿಕಾರಿಯಾಗಿ ಜೆಸಿ ವೆಂಕಟಾಚಲಪತಿ ನೇತೃತ್ವದಲ್ಲಿ ಗೌಪ್ಯ…

Read Full News

ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್‌ ಬುಕಿಂಗ್‌ ಆರಂಭ, ಎಷ್ಟಿದೆ ದರ? ಬುಕ್‌ ಮಾಡುವುದು ಹೇಗೆ?|Airport

ಬೆಂಗಳೂರು – ಶಿವಮೊಗ್ಗ ನಡುವೆ ವಿಮಾನದ ಟಿಕೆಟ್‌ ಬುಕಿಂಗ್‌ ಆರಂಭವಾಗಿದೆ. ಇಂಡಿಗೋ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಸೀಟ್‌ ಕಾಯ್ದಿರಿಸುವ ಅವಕಾಶ ಕಲ್ಪಿಸಿದೆ. ಆ.31ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭವಾಗಲಿದೆ. ಇಂಡಿಗೋ ವೆಬ್‌ಸೈಟ್‌ನಲ್ಲಿ ಇವತ್ತು ಸಂಜೆಯಿಂದ ಬುಕಿಂಗ್‌ ಆರಂಭವಾಗಿದೆ. ಆ.31ರಂದು ಬೆಳಗ್ಗೆ 9.50ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭವಾಗಲಿದೆ. ಬೆಳಗ್ಗೆ 11.05ಕ್ಕೆ ವಿಮಾನ ಶಿವಮೊಗ್ಗ ತಲುಪಲಿದೆ. 1 ಗಂಟೆ 15 ನಿಮಿಷದ ನಾನ್‌ ಸ್ಟಾಪ್‌ ಫ್ಲೈಟ್‌ ಇರಲಿದೆ ಎಂದು ಪ್ರಕಟಿಸಲಾಗಿದೆ. ಎರಡು ಬಗೆಯ ಟಿಕೆಟ್‌ ಮಾದರಿ…

Read Full News

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಸ್ ಕಂಡಕ್ಟರ್..!!bus conductor

ತೀರ್ಥಹಳ್ಳಿ : ಪಟ್ಟಣದ ತುಂಗಾ ಸೇತುವೆ ಸಮೀಪದ ಸರ್ಕಾರಿ ಕಚೇರಿಯ ಹೊರ ಭಾಗದಲ್ಲಿ ಗುರುವಾರ ಬೆಳಗ್ಗೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ನಾಗರಾಜ್(56) ಎಂದು ಗುರುತಿಸಲಾಗಿದೆ. ಕಮ್ಮರಡಿ ಮೂಲದವರು ಎಂಬುದಾಗಿ ತಿಳಿದು ಬಂದಿದ್ದು, ನಾಗರಾಜು ಅವರು  ಎನ್ ಆರ್ ಪುರ  ಭಾಗದಲ್ಲಿ ಖಾಸಗಿ ಬಸ್ ಕಂಡಕ್ಟರ್ ಆಗಿ  ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full News

ಕ್ಯಾಂಟೀನ್ ಮಾಲೀಕನಿಗೆ ಬೋಂಡಾ ತಯಾರಿಕೆಯ ಬಗ್ಗೆ ತರಬೇತಿ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ|beluru

ಕ್ಯಾಂಟೀನ್ ಮಾಲೀಕನಿಗೆ ಬೋಂಡಾ ತಯಾರಿಕೆಯ ಬಗ್ಗೆ ತರಬೇತಿ ನೀಡಿದ  ಶಾಸಕ ಬೇಳೂರು ಗೋಪಾಲಕೃಷ್ಣ. ರಿಪ್ಪನ್ ಪೇಟೆ : ಸರಳ ಸಜ್ಜನಿಕೆಯ ಮೂಲಕ ಜನಸಾಮಾನ್ಯರ ಶಾಸಕರಾಗಿ ಆಯ್ಕೆಯಾದ  ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಬೋಂಡಾ ತಯಾರಿಕೆಯ ಬಗ್ಗೆ ತರಬೇತಿ ನೀಡಿದ  ಘಟನೆ ಇಂದು ರಿಪ್ಪನ್ ಪೇಟೆ ಪಟ್ಟಣದಲ್ಲಿ ನಡೆದಿದೆ.  ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಅತಿವೃಷ್ಟಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸುವುದರ ಸಲುವಾಗಿ ಸಚಿವರು ಬರುವುದಕ್ಕಿಂತ ಮುಂಚಿತವಾಗಿ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದರು.ಈ…

Read Full News

ಆಗುಂಬೆ ಘಾಟಿಯಲ್ಲಿ ಸೆ.15 ರವರೆಗೆ ಭಾರಿ ವಾಹನಗಳ ನಿಷೇಧ

ಭಾರಿ ಮಳೆಯ ಕಾರಣಕ್ಕೆ ಆಗುಂಬೆ ಘಾಟಿ ಪ್ರದೇಶದಲ್ಲಿ ಘನವಾಹನಗಳ ಸಂಚಾರವನ್ನು ಉಡುಪಿ ಜಿಲ್ಲಾಡಳಿತ ನಿರ್ಬಂಧಿಸಿದೆ. ಸೆಪ್ಟೆಂಬರ್ 15ರವರೆಗೆ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಭಾರಿ ಮಳೆ ಮತ್ತು ಭಾರಿ ವಾಹನ ಸಂಚಾರದಿಂದ ರಾಷ್ಟ್ರೀಯ ಹೆದ್ದಾರಿ 169 ಎಯಲ್ಲಿ ಆಗುಂಬೆ ಘಾಟೆಯ 6,7 ಮತ್ತು 11ರಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು ರಸ್ತೆ ಕುಸಿಯುವ ಭೀತಿ ಉಂಟಾಗಿದೆ. ಆದ್ದರಿಂದ ಜುಲೈ 27 ರಿಂದ ಸೆಪ್ಟೆಂಬರ್ 15 ರವರೆಗೆ ಭಾರಿ ವಾಹನ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ತೀರ್ಥಹಳ್ಳಿ…

Read Full News

ರಿಪ್ಪನ್ ಪೇಟೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಮಳೆ ಹಾನಿಯ ಬಗ್ಗೆ ಸಮಾಲೋಚನಾ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ|Madhu bangarappa

ರಿಪ್ಪನ್ ಪೇಟೆಯಲ್ಲಿ ಜಿಲ್ಲಾ ಮಟ್ಟದ  ಅಧಿಕಾರಿಗಳ ಜೊತೆ ಮಳೆ ಹಾನಿಯ ಬಗ್ಗೆ  ಸಮಾಲೋಚನಾ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ.   ರಿಪ್ಪನ್‌ಪೇಟೆ;- ಹೊಸನಗರ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಎಡಬಿಡದೆ  ಸುರಿಯುತ್ತಿರುವ  ಮಳೆ- ಗಾಳಿಯಿಂದ  ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ  ಹಾನಿಗೊಳಗಾದ ನಷ್ಟದ ಕುರಿತು  ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.  ಪಟ್ಟಣದ ಗ್ರಾಮ ಪಂಚಾಯತಿ ಯ ಕುವೆಂಪುಸಭಾಭವನದಲ್ಲಿ ಇಂದು  ಆಯೋಜಿಸಿದ್ದ  ಸಭೆಯಲ್ಲಿ  ಅವರು ಮಾತನಾಡಿ, ಮಳೆಯಿಂದ…

Read Full News

ಜೆಸಿಬಿ ಮೂಲಕ ಎಟಿಎಂ ಯಂತ್ರ ಕಳವಿಗೆ ಯತ್ನ : ಶಿವಮೊಗ್ಗದಲ್ಲೊಂದು ವಿಚಿತ್ರ ಘಟನೆ!!!theft

ಶಿವಮೊಗ್ಗ : ಐನಾತಿ ಕಳ್ಳನೋರ್ವ, ಜೆಸಿಬಿ ಮೂಲಕ ಎಟಿಎಂ ಯಂತ್ರವನ್ನೇ ಕದ್ದೊಯ್ಯಲು ವಿಫಲ ಯತ್ನ ನಡೆಸಿದ ಸಿನಿಮೀಯ ಶೈಲಿಯ ಘಟನೆಯೊಂದು, ಶಿವಮೊಗ್ಗ ನಗರದ ವಿನೋಬನಗರದಲ್ಲಿ ತಡರಾತ್ರಿ ನಡೆದಿದೆ. 100 ಅಡಿ ರಸ್ತೆ ಶಿವಾಲಯ ಎದುರಿನ ಪೂರ್ಯಾನಾಯ್ಕ್ ಪೆಟ್ರೋಲ್ ಬಂಕ್ ಸಮೀಪದ ಕಟ್ಟಡವೊಂದರಲ್ಲಿರುವ, ಆಕ್ಸೆಸ್ ಬ್ಯಾಂಕ್ ಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ದುರಸ್ತಿ ಕಾರಣದಿಂದ, ಪೆಟ್ರೋಲ್ ಬಂಕ್ ಸಮೀಪ, ಕಳೆದ ಕೆಲ ದಿನಗಳಿಂದ ಜೆಸಿಬಿ ವಾಹನ ನಿಲ್ಲಿಸಲಾಗಿತ್ತು. ಕಿಡಿಗೇಡಿಯು ಸದರಿ ಜೆಸಿಬಿಯನ್ನು ನಕಲಿ ಕೀ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.