ಜೂನ್4 ರಂದು ಇತಿಹಾಸ ಪ್ರಸಿದ್ದ ಅಮ್ಮನಘಟ್ಟಶ್ರೀ ಜೇನುಕಲ್ಲಮ್ಮದೇವಸ್ಥಾನದ ನೂತನ ಶಿಲಾಮಯ ದೇವಸ್ಥಾನ ಲೋಕಾರ್ಪಣೆ

ಜೂನ್4 ರಂದು ಇತಿಹಾಸ ಪ್ರಸಿದ್ದ ಅಮ್ಮನಘಟ್ಟ
ಶ್ರೀ ಜೇನುಕಲ್ಲಮ್ಮದೇವಸ್ಥಾನದ ನೂತನ ಶಿಲಾಮಯ ದೇವಸ್ಥಾನ ಲೋಕಾರ್ಪಣೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಅಮ್ಮನಘಟ್ಟಜೇನುಕಲ್ಲಮ್ಮದೇವಸ್ಥಾನ ಸುಮಾರು 5 ಕೋಟಿ ರೂ ವೆಚ್ಚದ  ನೂತನ ಶಿಲಾಮಯ ದೇವಸ್ಥಾನ ಕಟ್ಟಡ ಜೂನ್೪ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಆಧ್ಯಕ್ಷ ಬಿ.ಸ್ವಾಮಿರಾವ್ ಹೇಳಿದರು.

ಅಮ್ಮನಘಟ್ಟದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಲೆನಾಡಿನ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜನಕಲಮ್ಮ ಶಿಲಾಮಯ ದೇವಸ್ಥಾನ  ಜೂನ್ 4ರಂದು ಲೋಕಾರ್ಪಣೆಗೊಳ್ಳಲಿದೆ. ಲೋಕಾರ್ಪಣೆ ಮತ್ತು ಧರ್ಮಸಭೆಯ ದಿವ್ಯ ಸಾನಿಧ್ಯವನ್ನು ಅನಂದಪುರ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ ವಹಿಸಿ ಆಶಿರ್ವಚನ ನೀಡುವರು.ಮಹಾದ್ವಾರವನ್ನು ಹಾವೇರಿ ಜಿಲ್ಲೆ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಪೀಠಾಧ್ಯಕ್ಷ ಜಗದ್ಗುರು ಶ್ರೀಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ ಎಂದರು.

ತೀರ್ಥಹಳ್ಳಿ ತಾಲೂಕಿನ  ನಿಟ್ಟೂರು ನಾರಾಯಣಗುರು ಮಹಾಸಂಸ್ಥಾನ ಪೀಠಾಧ್ಯಕ್ಷರಾದರೇಣುಕಾನಂದ ಸ್ವಾಮಿಜಿ ಮತ್ತು ಶಿವಯೋಗಾಶ್ರಮ ಮೂಲೆಗದ್ದೆ ಮಠದ ಶ್ರೀ ಆಭಿನವಚನ್ನಬಸವ ಮಹಾಸ್ವಾಮಿಜಿ ಸಮ್ಮುಖ ವಹಿಸುವರು.ದೇವಸ್ಥಾನಕ್ಕೆ೧೦೮ ಸುಸಜ್ಜಿತ ಶಾಶ್ವತ ಮೆಟ್ಟಿಲುಗಳ ನಿರ್ಮಾಣಕ್ಕೆ ಸಂಸದ ಬಿ.ವೈ.ರಾಘವೇಂದ್ರ  ಶಿಲಾನ್ಯಾಸ ನೆರವೇರಿಸುವರು.
ಶಾಸಕ ಹಾಗೂ ರಾಜ್ಯಅರಣ್ಯಕೈಗಾರಿಕಾಭಿವೃದ್ದಿ ನಿಗಮ ಆಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸಮಾರಂಭದಆಧ್ಯಕ್ಷತೆ ವಹಿಸುವರು ಎಂದರು.

ಮುಖ್ಯಅತಿಥಿಗಳಾಗಿ ಜಿಲ್ಲಾಉಸ್ತುವಾರಿ ಮತ್ತುರಾಜ್ಯ ಪ್ರಾಥಮಿಕ ಪ್ರೌಢಶಿಕ್ಷಣ ಸಚಿವರಾದ ಮಧುಬಂಗಾರಪ್ಪ, ಭದ್ರವತಿ ಶಾಸಕ ಬಿ.ಕೆ.ಸಂಗಮೇಶ, ತೀರ್ಥಹಳ್ಳಿ ಶಾಸಕ ಆರಗಜ್ಞಾನೇಂದ್ರ, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್.ಭೋಜೆಗೌಡರು, ಎಸ್.ಭಾರತಿ ಶೆಟ್ಟಿ, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಲ್ಕೀಶ್‌ಭಾನು, ಮತ್ತುಕೋಡೂರುಗ್ರಾಮ ಪಂಚಾಯ್ತಿ ಪ್ರಕಾಶಶೆಟ್ಟಿ, ಮಾರುತಿಪುರಗ್ರಾಮ ಪಂಚಾಯ್ತಿ ಅಧ್ಯಕ್ಷೆವ್ಜಯಮ್ಮ ಮತ್ತು ಮುಂಭಾರು ಗ್ರಾಮ ಪಂಚಾಯ್ತಿ ಆಧ್ಯಕ್ಷ ಎನ್.ಕುಮಾರ್ ಜಿಲ್ಲೆಯ ತಾಲ್ಲೂಕಿನ ಇನ್ನಿತರ ರಾಜಕೀಯ ಮುಖಂಡರು ಪಾಲ್ಗೊಳುವರು
ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸುದೀರ್‌ಭಟ್, ಕಟ್ಟಡಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಕೋಡೂರು ವಿಜೇಂದ್ರ, ಕೋಡೂರುಗ್ರಾಮ ಪಂಚಾಯ್ತಿ ಆಧ್ಯಕ್ಷಕೋಡೂರುಜಯರಾಮ ಶೆಟ್ಟರು, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದಪುಟ್ಟಪ್ಪ,ದೇವರಾಜ,ಹರೀಶಕಲ್ಯಾಣಪ್ಪಗೌಡರು,ಶ್ರೀನಿವಾಸಹಿಂಡ್ಲಮನೆ,ರತ್ನಮ್ಮ, ದೇವಸ್ಥಾನದ ಪ್ರಧಾನಅರ್ಚಕ ಭಾಸ್ಕರ್‌ಜೋಯ್ಸ್,  ಇನ್ನಿತರ ರಿದ್ದರು


Leave a Reply

Your email address will not be published. Required fields are marked *