ಭೀಕರ ಕಾರು ಅಪಘಾತದಲ್ಲಿ ಫೋಟೋಗ್ರಾಫರ್ ಸಾವು

ಭೀಕರ ಕಾರು ಅಪಘಾತದಲ್ಲಿ ಫೋಟೋಗ್ರಾಫರ್ ಸಾವು

ಭೀಕರ ಕಾರು ಅಪಘಾತದಲ್ಲಿ ಫೋಟೋಗ್ರಾಫರ್ ಸಾವು

ಭೀಕರ ಕಾರು ಅಪಘಾತದಲ್ಲಿ ಫೋಟೋಗ್ರಾಫರ್ ಸಾವು

ಭೀಕರ ಕಾರು ಅಪಘಾತದಲ್ಲಿ ಫೋಟೋಗ್ರಾಫರ್ ಸಾವು

ಶಿವಮೊಗ್ಗ: ರಸ್ತೆಯಲ್ಲಿ ನಿಲ್ಲಿಸಿದ್ದ ಗೂಡ್ಸ್​ ವಾಹನಕ್ಕೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯ ಪಿಳ್ಳಂಗೆರೆ ಗ್ರಾಮದಲ್ಲಿ ನಡೆದಿದೆ.

ಭದ್ರಾವತಿ ತಾಲೂಕಿನ ಹನುಮಂತಾಪುರ ಗ್ರಾಮದ ನಿವಾಸಿ  ಚೇತನ್ ಹೆಚ್.ಪಿ (36) ಮೃತ ವ್ಯಕ್ತಿ.

ಫೋಟೋಗ್ರಾಫರ್ ಕೆಲಸ ಮಾಡಿಕೊಂಡಿದ್ದ ಮೃತ ಚೇತನ್ ತನ್ನ  ಸ್ನೇಹಿತನೊಂದಿಗೆ ಶಿವಮೊಗ್ಗಕ್ಕೆ ಹೋಗಿದ್ದರು. ಅಲ್ಲಿಂದ ವಾಪಸ್​ ಬರುವಾಗ ಶಿವಮೊಗ್ಗ- ಹೊಳೆಹೊನ್ನೂರು ರಸ್ತೆಯ ಪಿಳ್ಳಂಗೆರೆ ಬಳಿಯಲ್ಲಿ ನಿಲ್ಲಿಸಿದ್ದ ಗೂಡ್ಸ್ ವಾಹನಕ್ಕೆ ಚೇತನ್​ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಗಂಭೀರ ಗಾಯಗೊಂಡಿದ್ದ ಚೇತನ್​ ಆಸ್ಪತ್ರೆಗೆ ಸೇರಿಸುವ ಮುನ್ನವೇ ಸಾವನ್ನಪ್ಪಿದ್ದಾರೆ. ಅವರೊಡನೆ ಇದ್ದ ಕಾರು ಚಾಲಕ  ಶಿವು ಎಂಬುವವರಿಗೂ ಕೂಡ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಕಾರಿನ ಮುಂಬಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *