ರಿಪ್ಪನ್‌ಪೇಟೆ – ಹೊಟ್ಟೆ ನೋವು ತಾಳಲಾರದೇ ಗೃಹಣಿ ಆತ್ಮಹತ್ಯೆ
ರಿಪ್ಪನ್ ಪೇಟೆ : ಸಮೀಪದ ಅರಸಾಳು ರೈಲ್ವೆ ಗೇಟ್ ಬಳಿಯ ಸಾಗುವಾನಿ ಮರವೊಂದಕ್ಕೆ ಗೃಹಣಿ ಒಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.
ಮೃತ ಮಹಿಳೆ ಮಧ್ಯ ಪ್ರದೇಶದ ದಿಂಡೂರಿ ಜಿಲ್ಲೆಯ ಮಡಿಯರಸ್ಟ್ ಪೋಸ್ಟ್ ಡಾನ್ ಬಿಚೋಯ್ ಗ್ರಾಮದ ನಿವಾಸಿ ಊರ್ಮಿಳ ಬಾಯ್ (27) ಎನ್ನಲಾಗಿದೆ.
ಕಳೆದ 15 ದಿನಗಳ ಹಿಂದೆ ರೈಲ್ವೆ ಹಳಿ ಪಕ್ಕದ ಚರಂಡಿ ಸ್ವಚ್ಛತಾ ಕಾರ್ಯಕ್ಕೆ ದಿನಗೂಲಿ ಆಧಾರದಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದರು. ಗಂಡ ಸುಕ್ರತ್ ಅವರ ಕುಟುಂಬಸ್ಥರೊಂದಿಗೆ ಬಂದಿದ್ದರು.
ಮದುವೆಯಾಗಿ ಏಳು ವರ್ಷ ಕಳೆದರೂ ಮಕ್ಕಳಿಲ್ಲ ಎಂಬ ಚಿಂತೆಯಲ್ಲಿ ಮಧ್ಯ ಸೇವನೆಯ ದಾಸರಾಗಿದ್ದರು.
ಅತಿಯಾದ ಮಧ್ಯವ್ಯಸನ ದಿಂದ ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಗಂಡ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.