w
Headlines

ರಿಪ್ಪನ್‌ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಇಬ್ಬರು ಗಾಯಾಳು ಮೆಗ್ಗಾನ್ ಗೆ ರವಾನೆ|accident

ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯಲ್ಲಿರುವ ಗುಡ್ ಶೆಫರ್ಡ್ ಚರ್ಚ್ ಮುಂಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಂಪೌಂಡ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿರುವ ಘಟನೆ ನಡೆದಿದೆ. ರಿಪ್ಪನ್‌ಪೇಟೆ ಕಡೆಯಿಂದ ಕೋಣಂದೂರು ಕಡೆಗೆ ತೆರಳುತಿದ್ದ ಮಾರುತಿ ಜೆನ್ ಕಾರು ಸೋಮವಾರ ರಾತ್ರಿ 11.00 ಗಂಟೆಯ ಸಮಯದಲ್ಲಿ ಚರ್ಚ್ ಮುಂಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಮರದ ದಿಬ್ಬಗಳಿಗೆ ಡಿಕ್ಕಿಯಾಗಿ ನಂತರ ಕಾಂಪೌಂಡ್ ಗೆ ಡಿಕ್ಕಿಯಾಗಿ ಮೂರು ಪಲ್ಟಿಯಾಗಿದೆ.ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.ಕಾರಿನಲ್ಲಿ ಇಬ್ಬರು ಪ್ರಯಾಣಿಸುತಿದ್ದರು ಎನ್ನಲಾಗುತ್ತಿದೆ. ಪಟ್ಟಣದಲ್ಲಿ ಜೆಸಿಬಿ…

Read Full News

ತೀರ್ಥಹಳ್ಳಿಯಲ್ಲಿ ಹನಿಟ್ರ್ಯಾಪ್ ..! ಸರ್ಕಾರಿ ಅಧಿಕಾರಿಗೆ ಬ್ಲಾಕ್ ಮೇಲ್ – ಯುವತಿ ಸೇರಿ ಮೂವರ ಬಂಧನ,ನಾಲ್ವರು ಪರಾರಿ|crime news

ತೀರ್ಥಹಳ್ಳಿ ತಾಲೂಕಿನಲ್ಲಿ ಅಶ್ಲೀಲ ವಿಡಿಯೋ ,ವೇಶ್ಯಾವಾಟಿಕೆ ಜಾಲ ಬಯಲು ಬಳಿಕ ಇದೀಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಆಮಿಷವೊಡ್ಡಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಹನಿಟ್ರ್ಯಾಪ್ ಎಂದು ಹೆಸರಿಡಲಾಗಿದ್ದು ಈ ಪ್ರಕರಣದಲ್ಲಿ ಮೂವರನ್ನ‌ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಹಿನ್ನಲೆ : ಅರಣ್ಯ ಇಲಾಖೆಯ ಅಧಿಕಾರಿಗೆ ಕರೆ ಮಾಡಿದ ಮಹಿಳೆಯೊಬ್ಬರು  ನೀವು ನಮ್ಮ ಸ್ಟುಡಿಯೋ ದಲ್ಲಿ ಫೋಟೊ ತೆಗೆಸಿಕೊಂಡಿದ್ದು ಫೋಟೋ ತೆಗೆದುಕೊಂಡು ಹೋಗಿ ಎಂದು ಕರೆ ಮಾಡಿರುತ್ತಾಳೆ.ಈ ಕರೆ ಅಧಿಕಾರಿ ಮತ್ತು ಮಹಿಳೆಯ ಜೊತೆ ಸಲುಗೆಯಿಂದ ಇರುವಂತೆ…

Read Full News

ರಿಪ್ಪನ್‌ಪೇಟೆ : ಮನೆಗಳ್ಳತನದ ಆರೋಪಿಗಳ ಬಂಧನ – ಕಳ್ಳರ ಜಾಡು ಪತ್ತೆ ಹಚ್ಚಿದ ಆ ಒಂದು ಸುಳಿವು|arrested

ಜೂನ್ ತಿಂಗಳ 8 ನೇ ತಾರೀಖಿನಂದು ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಗಂಧ್ರಳ್ಳಿ ಗ್ರಾಮದ ಗೋವಿಂದನಾಯ್ಕ್ ರವರ ಮನೆಯಲ್ಲಿದ್ದ ಆಭರಣ, ನಗದು ಕಳ್ಳತನ ನಡೆಸಿದ ಆರೋಪಿಗಳನ್ನು ರಿಪ್ಪನ್‌ಪೇಟೆ ಪೊಲೀಸರು ಬಂಧಿಸಿದ್ಧಾರೆ. ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನದ ಆಭರಣಗಳು ಮತ್ತು ನಗದು ಕಳ್ಳತನ ಮಾಡಿದ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜೂ 08 ರಂದು ಪ್ರಕರಣ ದಾಖಲಾಗಿತ್ತು. ಘಟನೆಯ ಬಗ್ಗೆ ತನಿಖೆ ಕೈಗೊಂಡ ಪಿಎಸ್ ಐ ಪ್ರವೀಣ್ ಎಸ್ ಪಿ ಮತ್ತು ಸಿಬಂದಿಗಳ ತಂಡವು ಶಿವಮೊಗ್ಗ ಜಿಲ್ಲೆಯ ಹೊಸನಗರ…

Read Full News

ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ: ಏಳು ಮಹಿಳೆಯರ ರಕ್ಷಣೆ|crime news

ಶಿವಮೊಗ್ಗ ನಗರದಲ್ಲಿ ಅರ್ಬನ್ ಪ್ರೊಫೆಷನ್ ಫ್ಯಾಮಿಲಿ ಸಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿ ದಂಧೆಯಲ್ಲಿ ತೊಡಗಿದ್ದ ಏಳು ಜನ ಮಹಿಳೆಯರನ್ನು ರಕ್ಷಿಸಿಸಲಾಗಿದೆ. ಶಿವಮೊಗ್ಗ ವಿನೋಬನಗರದಲ್ಲಿ ಸ್ಪಾ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಸುಳಿವು. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪಿಗಳು ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಐಪಿಎಸ್ ಬಿಂದುಮಣಿ ನೇತೃತ್ವದಲ್ಲಿ ಸ್ಪಾ ಮೇಲೆ ದಾಳಿ ನಡೆಸಿದ ಪೊಲೀಸರು. ಸದ್ಯ ಏಳು ಸಂತ್ರಸ್ತ ಮಹಿಳೆಯರನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ ಪೊಲೀಸರು ಜಿಲ್ಲೆಯಲ್ಲಿ ವೇಶ್ಯಾವಾಟಿಕೆ…

Read Full News

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಯುವಕರ ಮೇಲೆ ಹಲ್ಲೆ – ಆಸ್ಪತ್ರೆಗೆ ದೌಡಾಯಿಸಿದ ಹಿಂದೂ ಕಾರ್ಯಕರ್ತರು|assault

ಶಿವಮೊಗ್ಗ : ಕ್ಷುಲಕ ವಿಚಾರಕ್ಕೆ ಎರಡು ಕೋಮಿನ ಯುವಕರ  ಮಧ್ಯೆ ಟಿಪ್ಪು ನಗರದಲ್ಲಿ ಗಲಾಟೆಯಾಗಿ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.  ಈ ಘಟನೆ ಕೋಮು ಸ್ವರೂಪ ಪಡೆದಿತ್ತು. ರಸ್ತೆಯಲ್ಲಿ ಹೋಗುವಾಗ ಬೈಕ್‌ ಮತ್ತು ಆಟೋ ತಾಗಿವೆ. ಇದೆ ವಿಚಾರಕ್ಕೆ ಗಲಾಟೆಯಾಗಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ. ಸಂದೇಶ್‌ ಎಂಬಾತನ ಕಣ್ಣಿನ ಬಳಿ ಗಾಯವಾಗಿದೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ….

Read Full News

ಬೈಕ್ ಕಳ್ಳತನ ಮಾಡುತಿದ್ದ ಕೋಳಿ ಅರೆಸ್ಟ್|theft

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ  ಹಳೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಎಟಿಎಂ ಮುಂದೆ ನಡೆದಿದ್ದ ಬೈಕ್​ ಕಳ್ಳತನ ಪ್ರಕರಣವನ್ನು ಭದ್ರಾವತಿ ಪೊಲೀಸರು ಭೇದಿಸಿದ್ದಾರೆ.  ಇಲ್ಲಿನ ನಿವಾಸಿಯೊಬ್ಬರು ನಿಲ್ಲಿಸಿದ್ದ ಟಿವಿಎಸ್ ವಿಕ್ಟರ್ ಬೈಕ್​ ನ್ನು ಕಳ್ಳರು ಕಳ್ಳತನ ಮಾಡಿದ್ದರು  ಈ ಸಂಬಂಧ 379 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಪ್ರಕರಣ ಸಂಬಂಧ  ತನಿಖಾ ತಂಡವು ದಿನಾಂಕ:24/6/2023 ರಂದು ಆರೋಪಿಯನ್ನ ಬಂಧಿಸಿದ್ಧಾರೆ.  ಪ್ರಭು @ ಕೋಳಿ,  28 ವರ್ಷ, ಬೆಳಕಟ್ಟೆ ಗ್ರಾಮ ಶಿವಮೊಗ್ಗ ಬಂಧಿತ…

Read Full News

ರಿಪ್ಪನ್‌ಪೇಟೆ : ಸಾಲ ಭಾದೆಗೆ ತತ್ತರಿಸಿದ ರೈತ ವಿಷ ಸೇವಿಸಿ ಅತ್ಮಹತ್ಯೆ|crime news

ರಿಪ್ಪನ್‌ಪೇಟೆ : ಸಾಲ ಭಾದೆಗೆ ತತ್ತರಿಸಿ ರೈತ ವಿಷ ಸೇವಿಸಿ ಅತ್ಮಹತ್ಯೆ  ರಿಪ್ಪನ್‌ಪೇಟೆ;-ಕೆನರಾ ಬ್ಯಾಂಕ್ ಮತ್ತು ಸಹಕಾರ ಸಂಘ ಹಾಗೂ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಸುಮಾರು 8 ಲಕ್ಷ ರೂ ಸಾಲ ಮಾಡಿ ತಿರುವಳಿ ಮಾಡಲಾಗದೇ ಮನನೊಂದು ವಿಷ ಸೇವಿಸಿ ಆತ್ಯಹತ್ಯೆಗೆ ಶರಣಾದ ಘಟನೆ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ಅರಸಾಳು ಗ್ರಾಮದಲ್ಲಿ ನಡೆದಿದೆ. ಅರಸಾಳು ಗ್ರಾಮದ ಸುರೇಶ (55) ಎಂದು ಗುರುತಿಸಲಾಗಿದ್ದು ಮೃತನಿಗೆ ಪತ್ನಿ ಓರ್ವ ಗಂಡು ಮತ್ತು ಹೆಣ್ಣು ಮಕ್ಕಳಿದ್ದಾರೆನ್ನಲಾಗಿದೆ. ಕೆನರಾಬ್ಯಾಂಕ್ ಸಾಲಕ್ಕೆ ರೈತ ಸುರೇಶನಿಗೆ…

Read Full News

ರಿಪ್ಪನ್‌ಪೇಟೆ ಪೊಲೀಸರ ಮಿಂಚಿನ ಕಾರ್ಯಾಚರಣೆ : ಹದಿನೈದು ದಿನಗಳೊಳಗೆ ಮನೆ ಕಳ್ಳತನದ ಅರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು|theft

ರಿಪ್ಪನ್‌ಪೇಟೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ 15 ದಿನಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮಿಂಚಿನ ಕಾರ್ಯಾಚರಣೆಯ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ  ಸುದರ್ಶನ ಕೆ.ಎನ್  23 ವರ್ಷ, ಆದರ್ಶ ಎಸ್ 23 ವರ್ಷ,  ಮಧುಸೂದನ್ 30 ವರ್ಷ ಇವರನ್ನು ಬಂಧಿಸಿ ಐಪಿಸಿ ಸೆಕ್ಷನ್ 457.380 ರಡಿಯಲ್ಲಿ ಕೇಸ್ ದಾಖಲಿಸಿ ಆರೋಪಿತರಿಂದ ಕಳುವಾದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ತಿಂಗಳು 8 ರಂದು ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ…

Read Full News

ರಿಪ್ಪನ್‌ಪೇಟೆ – ಬಸ್ ನಿಲ್ದಾಣದಲ್ಲಿ ಅಪರಿಚಿತ ಶವ ಪತ್ತೆ|Rpet

ರಿಪ್ಪನ್‌ಪೇಟೆ : ಪಟ್ಟಣದ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ವಿನಾಯಕ ವೃತ್ತದಲ್ಲಿರುವ ಬಸ್ ನಿಲ್ದಾಣದಲ್ಲಿ ಸುಮಾರು 60 ವರ್ಷದ ಪಟ್ಟಣದಲ್ಲಿ ಛತ್ರಿ ರಿಪೇರಿ ಮಾಡಿಕೊಂಡಿದ್ದ ವ್ಯಕ್ತಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಸ್ಥಳಕ್ಕೆ ಪಿಎಸ್ ಐ ಎಸ್ ಪಿ ಪ್ರವೀಣ್ ಹಾಗೂ ಸಿಬ್ಬಂದಿ ಗಳು ಭೇಟಿ ನೀಡಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಮೃತನನ್ನು ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಾರೆಹೊಂಡದ ಗಂಗಪ್ಪ ಎನ್ನಲಾಗುತ್ತಿದೆ.

Read Full News

ಮನೆಯಲ್ಲಿಯೇ ಗಾಂಜಾ ಬೆಳೆದ ಮೆಡಿಕಲ್ ವಿದ್ಯಾರ್ಥಿಗಳು – ಹೈಟೆಕ್ ಕೃಷಿಗೆ ಪೊಲೀಸರೇ ಶಾಕ್|crime news

ಕರ್ನಾಟಕ ರಾಜ್ಯದ ನೂತನ ಸರ್ಕಾರ ಮಾದಕ ವಸ್ತುಗಳ ದಂಧೆಗೆ ಕಡಿವಾಣ ಹಾಕುವಂತೆ ಸೂಚಿಸಿದ ಬೆನ್ನಲ್ಲೆ ಶಿವಮೊಗ್ಗ ಪೊಲೀಸ್ ಕಾರ್ಯಾಚರಣೆಗೆ ಇಳಿದಿದ್ದಾರೆ.  ಈ ನಡುವೆ , ಶಿವಮೊಗ್ಗದಲ್ಲಿ ಈ ಹಿಂದೆ ಬೆಂಗಳೂರಿನಲ್ಲಿ ಕಂಡುಬಂದಂತೆ ವ್ಯಕ್ತಿಯೊಬ್ಬ, ಖುದ್ದು ತನ್ನ ಮನೆಯಲ್ಲಿ ಗಾಂಜಾ ಕೃಷಿ ಆರಂಭಿಸಿದ್ದರ ಬಗ್ಗೆ ವರದಿಯಾಗಿದೆ. ವಿದೇಶಿ ಹೂವುಗಳನ್ನ ಬೆಳಸಲು ನೆಟ್ ಹಾಕಿ ಫಾರ್ಮಿಂಗ್ ಮಾಡುವ ಹಾಗೆ, ಈತ ಮನೆಯಲ್ಲಿಯೇ ನೆಟ್ ಬಳಸಿ , ಫ್ಯಾನು ಲೈಟು ಅಳವಡಿಸಿ ಗಾಂಜಾವನ್ನು ಪಾಟ್​ಗಳಲ್ಲಿ ಬೆಳೆಯುತ್ತಿದ್ದ. ಸದ್ಯ ಈ ಬಗ್ಗೆ ಮಾಹಿತಿ…

Read Full News

ಬಸ್ಸು ಮತ್ತು ಕಾರಿನ ನಡೆವೆ ಭೀಕರ ಅಪಘಾತ – ಓರ್ವ ಗಂಭೀರ|accident

ಬಸ್ಸಿಗೆ ಡಿಕ್ಕಿ ಹೊಡೆದ ಕಾರು – ಒಬ್ಬರಿಗೆ ಗಂಭೀರ ಗಾಯ   ಶಿವಮೊಗ್ಗ : ಗಾಜನೂರು ಸಮೀಪ ಕಾರು ಮತ್ತು ಬಸ್‌ ಮುಖಾಮುಖಿ ಡಿಕ್ಕಿಯಾಗಿವೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಕಾರು, ತೀರ್ಥಹಳ್ಳಿಯಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ ಮಧ್ಯೆ ಅಪಘಾತವಾಗಿದೆ. ಗಾಜನೂರಿನ ಮೊರಾರ್ಜಿ ಶಾಲೆ ಬಳಿ ಓವರ್‌ ಟೇಕ್‌ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಒಬ್ಬರಿಗೆ ಗಂಭೀರ…

Read Full News

ರಿಪ್ಪನ್‌ಪೇಟೆ : ಅಕ್ರಮ ಗಣಿಗಾರಿಕೆ ಮೇಲೆ ದಾಳಿ – ಎರಡು ಲಾರಿ,ಟ್ರಾಕ್ಟರ್ ಮತ್ತು ಜಂಬಿಟ್ಟಿಗೆ ಕೊಯ್ಯುವ ಯಂತ್ರ ವಶಕ್ಕೆ|illegal mining

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ಮೇಲೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಯಂತ್ರ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಮದೂರು ಮತ್ತು ಹೊನಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಜಂಬಿಟ್ಟಿಗ್ಗೆ ಗಣಿಗಾರಿಕೆ ನಡೆಸುತಿದ್ದ ಪ್ರದೇಶಕ್ಕೆ ದಾಳಿ ನಡೆಸಿ ಎರಡು ಲಾರಿ ,ಒಂದು ಟ್ರಾಕ್ಟರ್ ಮತ್ತು ಜಂಬಿಟ್ಟಿಗ್ಗೆ ಕೊಯ್ಯುವ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಭೂ ಮತ್ತು ಗಣಿ…

Read Full News

ತೀರ್ಥಹಳ್ಳಿ ಪಟ್ಟಣದ ಮಧ್ಯ ಭಾಗದಲ್ಲೇ ವೇಶ್ಯಾವಾಟಿಕೆ : ತಡರಾತ್ರಿ ದಾಳಿ,ಮೂವರು ಮಹಿಳೆಯರ ರಕ್ಷಣೆ – ಹಲವರ ಬಂಧನ..??|TTH

ತೀರ್ಥಹಳ್ಳಿ: ರಾಜ್ಯಾದ್ಯಂತ ಸುದ್ದಿಯಾಗಿದ್ದ ಎಬಿವಿಪಿ ಅಧ್ಯಕ್ಷನ ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ ಪ್ರತೀಕ್ ಗೌಡನ ಮೇಲೆ ತೀರ್ಥಹಳ್ಳಿ ಪೊಲೀಸರು ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿ ಜೈಲಿಗೆ ಕಳುಹಿಸಿದ್ದಾರೆ. ಇದರ ನಡುವೆ ತೀರ್ಥಹಳ್ಳಿ ಪಟ್ಟಣದಲ್ಲಿ ಮತ್ತೊಂದು ವೇಶ್ಯಾವಾಟಿಕೆ ದಂಧೆ ಬುಧವಾರ ರಾತ್ರಿ ಬಯಲಾದ ಬಗ್ಗೆ ಮೂಲಗಳು ತಿಳಿಸಿವೆ. ಸಿಟಿ ಮದ್ಯದಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸಿದ ಪ್ರಕರಣದಲ್ಲಿ ಮೂವರು ಮಹಿಳೆಯರನ್ನು ರಕ್ಷಿಸಿದ್ದು ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸರಿಂದ ಮಾಹಿತಿ ಇನ್ನಷ್ಟೇ ತಿಳಿದು…

Read Full News

ಬೈಕ್ ಅಪಘಾತದಲ್ಲಿ LLB ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವು

ಶಿವಮೊಗ್ಗ: ಕಾಲೇಜು ಕಾರ್ಯಕ್ರಮದ ಸಿದ್ಧತೆ ಪೂರ್ಣಗೊಳಿಸಿ ಮನೆಕಡೆ ಹೊರಟಿದ್ದ ವಿದ್ಯಾರ್ಥಿಯೊಬ್ಬ ಬೈಕ್‌ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ 60 ಅಡಿ ರಸ್ತೆಯಲ್ಲಿ ಸಂಭವಿಸಿದೆ. ಮೃತ ವಿದ್ಯಾರ್ಥಿ ಗೌತಮ್‌ (21) ಎಂದು ಗುರುತಿಸಲಾಗಿದೆ. ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಈ ಘಟನೆ ಸಂಭವಿಸಿದೆ. ಕಾಲೇಜಿನ ಕಾರ್ಯಕ್ರಮದ ಸಿದ್ಧತೆ ಪೂರ್ಣಗೊಳಿಸಿ ಕಾಶಿಪುರದಲ್ಲಿರುವ ಮನೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ನಡೆದಿದ್ದೇನು??? ಇವತ್ತು ಬೆಳಗ್ಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಗರದ ಶುಭಮಂಗಳದ ಬಳಿಯಲ್ಲಿ ಗೌತಮ್​…

Read Full News

ಹೊಸನಗರ : ಚಲಿಸುತಿದ್ದ ಟ್ರಾಕ್ಟರ್ ಪಲ್ಟಿ – ನೀರುಗಂಟಿ ಸಾವು|Accident

ಚಲಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ನೀರುಗಂಟಿಯೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದನೂರಿನಲ್ಲಿ(ನಗರ) ನಡೆದಿದೆ. ಬಿದನೂರು ನಗರದ ಚಿಕ್ಕಪೇಟೆ ನಿವಾಸಿ ತುಕರಾಂ(46) ಎಂಬಾತ ಮೃತ ದುರ್ದೈವಿ. ಕುಡಿಯುವ ನೀರು ಪೂರೈಸುವ ಟ್ರಾಕ್ಟರ್ ಪಲ್ಟಿಯಾದ ಕಾರಣ ನೀರುಗಂಟಿ ಸಾವನ್ನಪ್ಪಿದ್ದಾನೆ. ನಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೀರುಗಂಟಿ ಕೆಲಸ ಮಾಡುತ್ತಿದ್ದ ತುಕರಾಂ.ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಮನೆಗಳಿಗೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲು ಮುಂದಾದಾಗ ಈ ಅವಘಡ ಸಂಭವಿಸಿದೆ. ನೀರು ಪೂರೈಸುವ ಟ್ರ್ಯಾಕ್ಟರ್…

Read Full News

ಆಗುಂಬೆ ಘಾಟ್ ನಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ‌ ಮುಖಾಮುಖಿ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು|Accident

ಆಗುಂಬೆ ಘಾಟಿಯ 11 ನೇ ತಿರುವಿನಲ್ಲಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಆಗುಂಬೆ ಘಾಟ್ ನ 11 ನೇ ತಿರುವಿನ ಸಮೀಪದಲ್ಲಿ ತೀರ್ಥಹಳ್ಳಿ ಕಡೆಯಿಂದ ಹೆಬ್ರಿ ಕಡೆಗೆ ತೆರಳುತಿದ್ದ ಖಾಸಗಿ ಬಸ್ ಹಾಗೂ ಸೋಮೇಶ್ವರದಿಂದ ಆಗುಂಬೆ ಕಡೆಗೆ ಬರುತಿದ್ದ ಕೆಟಿಎಮ್ ಬೈಕ್ಬ್ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ…

Read Full News

ಈಜಲು ತೆರಳಿದ್ದ ಖಾಸಗಿ ಕಾಲೇಜಿನ ಇಬ್ಬರು ಉಪನ್ಯಾಸಕರು ನೀರುಪಾಲು – ಓರ್ವನ ಶವ ಪತ್ತೆ|tunga

ತೀರ್ಥಹಳ್ಳಿ : ಇಲ್ಲಿನ ತೀರ್ಥಮತ್ತೂರಿನಲ್ಲಿ ಈಜಲು ಇಳಿದ ಇಬ್ಬರು ಪ್ರಾಧ್ಯಾಪಕರು ನೀರು ಪಾಲಾಗಿರುವ ಘಟನೆ ಇಂದು ನಡೆದಿದೆ. ತೀರ್ಥಮತ್ತೂರು ಬಳಿ 8-10 ಜನ ಪ್ರಾಧ್ಯಾಪಕರು ತುಂಗ ನದಿಗೆ ಇಳಿದಾಗ ಓರ್ವ ಪ್ರಾಧ್ಯಾಪಕರು ನೀರು ಪಾಲಾಗಿದ್ದು ಅವರನ್ನು ರಕ್ಷಿಸಲು ಮತ್ತೋರ್ವ ಪ್ರಾಧ್ಯಾಪಕರು ಮುಂದಾಗಿದ್ದು ಅವರೂ ಸಹ ನೀರು ಪಾಲಾಗಿದ್ದಾರೆ. ನಿಟ್ಟೆ ಕಾಲೇಜಿನ ಪ್ರಾಧ್ಯಾಪಕರಾದ ಪುನೀತ್ ಮತ್ತು ಬಾಲಾಜಿ ನೀರುಪಾಲಾದ ದುರ್ಧೈವಿಗಳಾಗಿದ್ದಾರೆ. ದಕ್ಷಿಣ ಕನ್ನಡದ ನಿಟ್ಟೆ ಕಾಲೇಜಿನ 8 ರಿಂದ ಹತ್ತು ಜನ ಪ್ರಾಧ್ಯಾಪಕರು ತೀರ್ಥಮತ್ತೂರಿನ ಯೋಗ ನರಸಿಂಹ ಮಠಕ್ಜೆ…

Read Full News

ತೀರ್ಥಹಳ್ಳಿ : ಅಶ್ಲೀಲ ವೀಡಿಯೋ ವೈರಲ್ ಪ್ರಕರಣ – ಯುವಕನ ಬಂಧನ|Arrested

ತೀರ್ಥಹಳ್ಳಿ : ಹಲವು ಯುವತಿಯರ ಜೊತೆಗೆ ಸಲುಗೆಯಿಂದ ಇದ್ದು, ವಿಡಿಯೋಗಳನ್ನು ರೆಕಾರ್ಡ್‌ ಮಾಡಿ ವೈರಲ್‌ ಮಾಡಿದ ಆರೋಪ ಸಂಬಂಧ ಯುವಕನ ವಿರುದ್ಧ ಪ್ರಕರಣ ದಾಖಲಾಗುತ್ತಿದೆ. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ತೀರ್ಥಹಳ್ಳಿಯ ಎಬಿವಿಪಿ ಸಂಘಟನೆಯ ನಾಯಕ ಕೆಲವು ಯುವತಿಯರ ಜೊತೆಗೆ ಸಲುಗೆಯಿಂದ ಇರುವ ವಿಡಿಯೋಗಳು ವೈರಲ್‌ ಆಗಿತ್ತು. ಇದರ ಬೆನ್ನಿಗೆ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿ ವಾಟ್ಸಪ್‌ ಮೂಲಕ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ…

Read Full News

ತೀರ್ಥಹಳ್ಳಿ : ವಿದ್ಯಾರ್ಥಿನಿಯ ಬೆತ್ತಲೆ ವಿಡಿಯೋ ಮಾಡಿ ಬ್ಲಾಕ್‌ಮೇಲ್: ABVP ಸಂಘಟನೆಯ ಅಧ್ಯಕ್ಷನ ಬಂಧನಕ್ಕೆ ಆಗ್ರಹ

ಕಾಲೇಜು ವಿದ್ಯಾರ್ಥಿನಿಯೊಬ್ಬರ ಬೆತ್ತಲೆ ವಿಡಿಯೋ ಮಾಡಿ ಹಣಕ್ಕಾಗಿ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ತೀರ್ಥಹಳ್ಳಿ ತಾಲೂಕು ಅಧ್ಯಕ್ಷನನ್ನು ಬಂಧಿಸಬೇಕೆಂದು ಎನ್‌ಎಸ್‌ಯುಐ ಒತ್ತಾಯಿಸಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಎಬಿವಿಪಿ ಅಧ್ಯಕ್ಷ ಪ್ರತೀಕ್ ಎಂಬಾತ ಯುವತಿಯೊಬ್ಬಳಿಗೆ ವಿಡಿಯೋ ಕಾಲ್‌ ಮಾಡಿ ನಗ್ನಳಾಗುವಂತೆ ಒತ್ತಾಯಿಸಿದ್ದಾರೆ. ಅದನ್ನು ವಿಡಿಯೋ ಮಾಡಿ ಹಣ ನೀಡುವಂತೆ ಬ್ಲಾಕ್‌ ಮಾಡಿದ್ದಾನೆ. ಹಣ ಕೊಡದಿದ್ದಾಗ ವಾಟ್ಸಾಪ್ ಗುಂಪುಗಳಲ್ಲಿ ವಿಡಿಯೋ ಷೇರ್ ಮಾಡಿ ವಿಕೃತಿ ಮೆರೆದಿದ್ದಾನೆ ಎಂದು ಆರೋಪಿಸಲಾಗಿದೆ. ಈ…

Read Full News

ಸಾರ್ವಜನಿಕ ಸ್ಥಳದಲ್ಲಿ ಪೊಲೀಸರು ಥಳಿಸಿದ್ದಕ್ಕೆ ಯುವಕನ ಆತ್ಮಹತ್ಯೆ!?ಅಷ್ಟಕ್ಕೂ ನಡೆದಿದ್ದೇನು?? ದೂರಿನಲ್ಲಿ ಏನಿದೆ!?Crime-news

ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಯುವಕನನ್ನ 112 ಪೊಲೀಸರು ಠಾಣೆಗೆ ಕರೆತಂದು ಆತನ ಪೊಷಕರ ಜೊತೆ ಕಳುಹಿಸಿದ್ದ ಪ್ರಕರಣ ಈಗ ತಿರುವು ಪಡೆದುಕೊಂಡಿದ್ದು ಘಟನೆ ನಡೆದು ನಾಲ್ಕು ದಿನಗಳ ಬಳಿಕ ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಮೃತನ ಪತ್ನಿ ಪೊಲೀಸರ ಟಾರ್ಚರ್ ಗೆ ಸಾವನ್ಬಪ್ಪಿರುವುದಾಗಿ ಆರೋಪಿಸಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾನುವಾರ ರಾತ್ರಿ ಹೊಳೆಹೊನ್ನೂರಿನಲ್ಲಿ ಕುಡಿದು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಎಂಬುವರನ್ನ 112 ಗೆ ಬಂದ ಕರೆಯ…

Read Full News

ಶಿವಮೊಗ್ಗ : ಮದುವೆಯಾಗುವುದಾಗಿ ನಂಬಿಸಿ ಯುವಕನಿಗೆ ಲಕ್ಷಾಂತರ ರೂ ವಂಚಿಸಿದ ನಟಿ – ಬಂಧನ|Arrested

ಶಿವಮೊಗ್ಗ : ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಆರೋಪದಲ್ಲಿ ಬೆಂಗಳೂರಿನ ಚಿತ್ರನಟಿ ಉಷಾ.ಆರ್ ಅವರನ್ನು ಬಂಧಿಸಲಾಗಿದೆ. ಶಿವಮೊಗ್ಗದ ಕಿರುತೆರೆ ನಟನಿಗೆ ವಂಚನೆ ಪ್ರಕರಣದಲ್ಲಿ ನಟಿಯನ್ನು ವಿನೋಬ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಟಿ ಉಷಾ ಎಂಬಾಕೆ ವಿರುದ್ಧ ವಾರೆಂಟ್‌ ಜಾರಿಯಾಗಿತ್ತು. ಬೆಂಗಳೂರಿನಲ್ಲಿ ನಟಿ  ಉಷಾಳನ್ನು ಬಂಧಿಸಿದ್ದ ವಿನೋಬನಗರ ಠಾಣೆ ಪೊಲೀಸರು, ಮೆಗ್ಗಾನ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನಟಿ ಉಷಾ ವಿರುದ್ಧ ಶಿವಮೊಗ್ಗದ ಶರವಣನ್‌ ಎಂಬಾತ ವಂಚನೆ ದೂರು ನೀಡಿದ್ದರು….

Read Full News

ಶಿವಮೊಗ್ಗದಲ್ಲಿ ಯುವಕನೊಬ್ಬನ ಕಗ್ಗೊಲೆ – ಆರೋಪಿಯ ಬಂಧನ|crime-news

ಶಿವಮೊಗ್ಗ: ತನ್ನ ಸೊಸೆಗೆ ಕಿರುಕುಳ ನೀಡಿದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ. ಸ್ನೇಹಿತನೇ ಕೊಲೆ ಮಾಡಿದ್ದಾನೆ. ಆಸೀಫ್ (25) ಕೊಲೆಯಾಗಿರುವ ಯುವಕ. ಆತನ ಸ್ನೇಹಿತ ಜಬೀ (25) ಎಂಬಾತ ಚಾಕುವಿನಿಂದ ಇರಿದು ಆಸೀಫ್‌ನ ಹತ್ಯೆ ಮಾಡಿದ್ದಾನೆ. ಶಿವಮೊಗ್ಗದ ಇಲಿಯಾಜ್ ನಗರದಲ್ಲಿ ಘಟನೆ ನಡೆದಿದೆ. ಮಂಡ್ಲಿಯ ನಿವಾಸಿ ಆಸೀಫ್​ ಎಂಬಾತ ಕೊಲೆಯಾದ ಯುವಕ!. 25 ವರ್ಷದ ಆಸೀಪ್​ ಜಬಿ ಎಂಬಾತನ ಸಹೋದರಿಯ ಮಗಳಿಗೆ ತೊಂದರೆ ಕೊಡುತ್ತಿದ್ದ ಎಂಬುದು ಪ್ರಾಥಮಿಕವಾಗಿ ತಿಳಿದಬಂದಿರುವ ಮಾಹಿತಿ. ಇದೇ ಕಾರಣಕ್ಕೆ ಸಿಟ್ಟಾದ ಜಭಿ,…

Read Full News

ಬಸ್ಸಿಗಾಗಿ ಕಾಯುತಿದ್ದ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕಳುವು|theft

ಶಿವಮೊಗ್ಗ ನಗರದ ಕೆಎಸ್​ಆರ್​ಟಿಸಿ ಬಸ್​ ಸ್ಟ್ಯಾಂಡ್​ನಲ್ಲಿ ಬಸ್​ಗೆ ಕಾಯುತ್ತಿದ್ದಾಗ ಮಹಿಳೆಯೊಬ್ಬರ ಚಿನ್ನಾಭರಣ ಕಳುವಾಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿದೆ ಅಲ್ಲದೆ ಈ ಸಂಬಂಧ IPC 1860 (U/s-379) ಅಡಿಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ. ಕಳೆದ 10 ನೇ ತಾರೀಖು ನಡೆದ ಘಟನೆ ಇದಾಗಿದ್ದು, ಈ ಸಂಬಂಧ ಹಿರೇಕರೂರು  ಮೂಲದ ಮಹಿಳೆಯೊಬ್ಬರು ದೂರು ನೀಡಿದ್ದಾರೆ.  ಶಿವಮೊಗ್ಗದಲ್ಲಿರುವ ತಮ್ಮ ಅಕ್ಕನ ಮನೆಗೆ ಬಂದಿದ್ದ ಮಹಿಳೆ ವಾಪಸಾಗಲು KSRTC ಬಸ್​ ಸ್ಟ್ಯಾಂಡ್​ನಲ್ಲಿ ಬಸ್​ ಹತ್ತಲು ಪ್ಲ್ಯಾಟ್ ಫಾರಂ ನಂಬರ್​…

Read Full News

ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ|accident

ಶಿವಮೊಗ್ಗ : ಸಾಗರ ರಸ್ತೆಯ ಪೆಸಿಟ್ ಕಾಲೇಜಿನ ಬಳಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಲಾರಿ ಡಿವೈಡರ್ ಗೆ ಡಿಕ್ಕಿ ಒಡೆದಿದೆ. ಲಾರಿಯ‌ ಮುಂಭಾಗ ನುಜ್ಜುಗುಜ್ಜಾಗಿದೆ ಶಿವಮೊಗ್ಗ ಕಡೆ ಹೊರಟಿದ್ದ ಲಾರಿ ಮತ್ತು ಆಯನೂರು ಕಡೆ ಹೊರಟಿದ್ದ ಲಾರಿ ಎರಡೂ ಮುಖಾಮುಖಿ ಡಿಕ್ಕಿ ಉಂಟಾಗಿದೆ. ಶಿವಮೊಗ್ಗದಿಂದ ಆಯನೂರು ಕಡೆ ಹೋಗುತ್ತಿದ್ದ ಕಾರು ಲಾರಿಯನ್ನ ಓವರ್ ಟೇಕ್ ಮಾಡುವ ವೇಳೆಯಲ್ಲಿ ಲಾರಿಗಳ ಚಾಲಕರಿಗೆ ಲಾರಿ ಚಾಲನೆಯ ನಿಯಂತ್ರಣ ತಪ್ಪಿದೆ. ಎರಡು ಲಾರಿ ಡಿಕ್ಕಿ ಹೊಡೆದಿದೆ. ಈ ಸಂಧರ್ಭದಲ್ಲಿ…

Read Full News

ರಿಪ್ಪನ್‌ಪೇಟೆ : ಬಾಳೂರು ತಿರುವಿನಲ್ಲಿ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಗಾಯಾಳುಗಳು ಮೆಗ್ಗಾನ್ ಗೆ ರವಾನೆ|accident

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಳೂರು ಗ್ರಾಮದ ಹರತಾಳು ತಿರುವಿನಲ್ಲಿ ನಡೆದಿದೆ. ರಿಪ್ಪನ್‌ಪೇಟೆಯಿಂದ ಗೇರುಬೀಸು ಕಡೆ ತೆರಳುತಿದ್ದ ಟಿವಿಎಸ್ ಸ್ಟಾರ್ ಸಿಟಿ ಬೈಕ್ ಹಾಗೂ ಬಾಳೂರು ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ತೆರಳುತಿದ್ದ ಬಜಾಜ್ ಡಿಸ್ಕವರ್ ಬೈಕ್ ನಡುವೆ ಬಾಳೂರು ತಿರುವಿನ ಬಳಿಯಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಗೇರುಬೀಸು ನಿವಾಸಿ ಮೋಹನ್(22) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಮತ್ತೊಂದು ಬೈಕ್ ನಲ್ಲಿದ್ದ ಶುಂಠಿ ಕೆಲಸಕ್ಕೆ…

Read Full News

ಕೆರೆ ಕಾಮಗಾರಿ ಹಣ ದುರ್ಬಳಕೆ – 6 ವರ್ಷ ಕಠಿಣ ಶಿಕ್ಷೆ ,20 ಸಾವಿರ ದಂಡ

ಕೆರೆ ಬಳಕೆದಾರರ ಸಂಘಗಳಿಗೆ ತಪ್ಪು ಮಾಹಿತಿ, ಚೆಕ್‌ಗಳಿಗೆ ಪೋರ್ಜರಿ ಸಹಿ ಮಾಡಿ ₹ 2.54 ಲಕ್ಷ ಹಣ ದುರುಪಯೋಗಪಡಿಸಿಕೊಂಡ ಜಲ ಸಂವರ್ಧನೆ ಯೋಜನಾ ಸಂಘದ ಸಾಮಾಜಿಕ ತಜ್ಞನಿಗೆ ಶಿಕಾರಿಪುರದ ಎರಡನೇ ಅಧಿಕ ಸಿಜೆ ಮತ್ತು ಜೆಎಂಎಫ್ ನ್ಯಾಯಾಲಯ ಆರು ವರ್ಷ ಕಠಿಣ ಶಿಕ್ಷೆ ಹಾಗೂ ₹ 20,000 ದಂಡ ವಿಧಿಸಿ ಆದೇಶಿಸಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿನೋದ್ ಎಲ್. ರಾಮದುರ್ಗ (29) ಶಿಕ್ಷೆಗೆ ಒಳಗಾದವರು. ವಿನೋದ್ 2011ರ ಮಾರ್ಚ್ 23ರಿಂದ 2013ರ ಮಾರ್ಚ್…

Read Full News

ಕೋಣಂದೂರು ಬಳಿ ಬಸ್ ಮತ್ತು ಬೈಕ್ ನಡುವೆ ಅಪಘಾತ!!!! ಓರ್ವನಿಗೆ ಗಂಭೀರ ಗಾಯ|accident

ಕೋಣಂದೂರು ಬಳಿ ಬಸ್ ಬೈಕ್ ಅಪಘಾತ!!!! ಓರ್ವನಿಗೆ ಗಂಭೀರ ಗಾಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಸುರಾನಿ ಬಳಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಕೋಣಂದೂರಿನಿಂದ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದ ರಾಜಲಕ್ಷ್ಮಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಗಾಯಾಳುವಿಗೆ  ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿ ಹೆಚ್ಚಿನ ಚಿಕಿತ್ಸೆಗೆ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಬೈಕ್ ಸವಾರನ ಬಗ್ಗೆ ಮಾಹಿತಿ…

Read Full News

ಹುಂಚದಕಟ್ಟೆಯಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಮೆಗ್ಗಾನ್ ಗೆ ರವಾನೆ|accident

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಗ್ರಾಮದಲ್ಲಿ ನಡೆದಿದೆ. ಕೊಪ್ಪದಿಂದ ಸಾಗರಕ್ಕೆ ತೆರಳುತಿದ್ದ ಟಿವಿಎಸ್ ಜುಪಿಟರ್ ಸ್ಕೂಟಿ ಹಾಗೂ ಗರ್ತಿಕೆರೆಯಿಂದ ಕೋಣಂದೂರು ಕಡೆಗೆ ತೆರಳುತಿದ್ದ ಬಜಾಜ್ CT 100 ಬೈಕ್ ನಡುವೆ ಹುಂಚದಕಟ್ಟೆ ಸರ್ಕಲ್ ಬಳಿಯಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಸಾಗರ ನಿವಾಸಿ ಶ್ರೀನಿವಾಸ್(61) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಕೈ ಮತ್ತು ಕಾಲು‌ ಮುರಿತವಾಗಿದೆ.ಮತ್ತೊಂದು ಬೈಕ್ ನಲ್ಲಿದ್ದ ಗರ್ತಿಕೆರೆ ಮೂಲದ ಅಭಿ(23)…

Read Full News

ರೈಲ್ವೆ ಟ್ರ್ಯಾಕ್ ನಲ್ಲಿ ವ್ಯಕ್ತಿಯ ಶವ ಪತ್ತೆ – ಆತ್ಮಹತ್ಯೆ ಶಂಕೆ|smg

ಶಿವಮೊಗ್ಗ ನಗರದ ಪಶು ವೈದ್ಯಕೀಯ ಕಾಲೇಜಿನ ಬಳಿಯ ರೈಲ್ವೆ ಟ್ರ್ಯಾಕ್ ನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.  ಮೃತರನ್ನು ಗುರುರಾಜ್ ಎಂದು ಗುರುತಿಸಲಾಗಿದೆ. ಶಿವಮೊಗ್ಗ ನಗರದ ಶುಭ ಮಂಗಳ ಕಲ್ಯಾಣ ಮಂದಿರದ ಎದುರಿನ ತಿರುವಿನ ನಿವಾಸಿಯಾಗಿದ್ದ ಗುರುರಾಜ್  ಎಪಿಎಂಸಿ ಯಾರ್ಡ್ ಗೆ ಹೋಗಿ ತರಕಾರಿ ತರುವುದಾಗಿ ಗುರುವಾರ ಬೆಳಗ್ಗಿನ ಜಾವ ಮನೆ ಬಿಟ್ಟು ಹೋಗಿದ್ದರು ಆದರೆ ಗುರುರಾಜ್ ನ ಮೃತ ದೇಹ ವೆಟನರಿ ಕಾಲೇಜು ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿದೆ. ಗುರುರಾಜ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು…

Read Full News

ಆಟೋಗೆ ಹಿಂಬದಿಯಿಂದ ಬೊಲೆರೋ ಜೀಪ್ ಡಿಕ್ಕಿ- ಐವರ ಕಾಲು ಮುರಿತ|ಆಸ್ಪತ್ರೆಗೆ ಸಂಸದ ಬಿವೈ ಆರ್ ದೌಡು|accident

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಬಳಿ ಅಪಘಾತ ಒಂದು ಸಂಭವಿಸಿದ್ದು ಐದಕ್ಕೂ ಹೆಚ್ಚು ಜನರಿಗೆ ಕಾಲು ಮುರಿದಿದೆ ಎಂದು ಮಾಹಿತಿ ತಿಳಿದು ಬಂದಿದೆ. ಜಕ್ಕನಹಳ್ಳಿ ಗ್ರಾಮದ ಬಳಿ ಅಪೇ ಆಟೋ ಲಾಗೇಜು ಗಾಡಿಯಲ್ಲಿ ಕಾಲು ಮುಂದೆ ಮಾಡಿಕೊಂಡು ಒಂದಿಷ್ಟು ಜನರು ಪ್ರಯಾಣಿಸುತ್ತಿದ್ದು ಹಿಂಬಂದಿಯಿಂದ ಬಂದ ಬೊಲೆರೋ ಗಾಡಿ ಗುದಿದ್ದ ಪರಿಣಾಮ 5-6 ಜನರಿಗೆ ತೀವ್ರ ಗಾಯವಾಗಿದ್ದು ಕಾಲುಗಳು ಮುರಿದು ಹೋಗಿದೆ ಎನ್ನಲಾಗಿದೆ. ಈ ಅಪಘಾತದಲ್ಲಿ 12ಕ್ಕೂ ಹೆಚ್ಚು ಜನರಿಗೆ ಗಾಯಗಳು ಆಗಿದ್ದು ಗಾಯಳುಗಳನ್ನು ಶಿವಮೊಗ್ಗಕ್ಕೆ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.