ಆ್ಯಪ್ ಮೂಲಕ ಸಾಲ ಪಡೆದ ಯುವಕನಿಗೆ ಪೊಲೀಸರ ಹೆಸರಿನಲ್ಲಿ ಕಿರುಕುಳ
ಶಿವಮೊಗ್ಗ : ಆ್ಯಪ್ ಮೂಲಕ ಸಾಲ ಪಡೆದ ಯುವಕನಿಗೆ ಪೊಲೀಸರ ಹೆಸರಿನಲ್ಲಿ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಹೌದು ಜಿಲ್ಲೆಯ ಭದ್ರಾವತಿ ತಾಲೂಕಿನ ಉಕ್ಕುಂದ ನಿವಾಸಿ, ಆಟೋ ಚಾಲಕ ಸತೀಶ್ ಆ್ಯಪ್ ವೊಂದರ ಮೂಲಕ ಕಳೆದ 4 ತಿಂಗಳ ಹಿಂದೆ 06 ಸಾವಿರ ಸಾಲ ಪಡೆದಿದ್ದರು. ಆದರೆ ಈ ವೇಳೆ ಸತೀಶನ ಕೈಗೆ ಸಿಕ್ಕಿದ್ದ ನಾಲ್ಕುವರೆ (4,500) ಸಾವಿರ ಮಾತ್ರ.
ಪಡೆದ ಲೋನ್ ಹಣಕ್ಕೆ ಸತೀಶ್ ಈಗಾಗಲೇ ಎರಡು ಸಾವಿರವನ್ನು ವಾಪಸ್ ಹಿಂತಿರುಗಿಸಿದ್ದಾರೆ. ಆದರೆ ಇನ್ನು 07 ಸಾವಿರ ಹಣ ನೀಡುವಂತೆ ಸಾಲ ನೀಡಿದ ಸಂಸ್ಥೆ ಕಿರುಕುಳ ನೀಡುತ್ತಿದೆ.
ಸಾಲ ಪಡೆದ ಹಣಕ್ಕಿಂತ ದುಪ್ಪಟ್ಟು ಹಣ ನೀಡುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಸಾಲ ನೀಡಿದ ಸಂಸ್ಥೆ ಪೊಲೀಸರ ಹೆಸರಿನಲ್ಲಿ ಪೋನ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ.
ಹಣ ಕಟ್ಟದಿದ್ದರೆ ಜೀಪ್ ತೆಗೆದುಕೊಂಡು ಬಂದು ಎತ್ತಾಕಿಕೊಂಡು ಹೋಗ್ತೇವೆ. ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಸತೀಶ್ ಆರೋಪಿಸಿದ್ದಾರೆ.