ರಿಪ್ಪನ್ ಪೇಟೆ,ಶಿವಮೊಗ್ಗ ನಗರದಲ್ಲಿ ಭಾರಿ ಮಳೆ : ಜನಜೀವನ ಅಸ್ತವ್ಯಸ್ತ

ರಿಪ್ಪನ್ ಪೇಟೆ : ಪಟ್ಟಣದಲ್ಲಿ ಇಂದು ಸಂಜೆಯಿಂದ ಧಾರಾಕಾರ ಮಳೆ ಸುರಿದಿದೆ. ವಿನಾಯಕ ವೃತ್ತ ಸೇರಿ ಹಲವೆಡೆ ಚರಂಡಿ ನೀರು ರಸ್ತೆಯ ಮೇಲೆ ಹರಿದಿದ್ದು, ಜನರ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಪಟ್ಟಣದಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಗುಡುಗು ಸಹಿತ ಮಳೆ ಶುರುವಾಗಿದ್ದು, ಬಿಡುವು ಕೊಡದೆ ಸುರಿಯುತ್ತಿದೆ. ಭಾರಿ ಮಳೆಯಿಂದಾಗಿ ಪಟ್ಟಣದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧೆಡೆ ಇವತ್ತು ಸಂಜೆಯಿಂದ ಭಾರಿ ಮಳೆಯಾಗುತ್ತಿದೆ. ಮಳೆ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. …

Read More

ಕಾರ್ಗಲ್ ಗ್ರಾಮದಲ್ಲಿ ಕಲುಷಿತ ನೀರು,ಆಹಾರ ಸೇವನೆಯಿಂದ ಸುಮಾರು 80 ಕ್ಕೂ ಹೆಚ್ಚು ಜನ ಅಸ್ವಸ್ಥ : ಶಾಸಕ ಹರತಾಳು ಹಾಲಪ್ಪ ಭೇಟಿ

ಸಾಗರ : ತಾಲೂಕಿನ ಕಾರ್ಗಲ್ ಮತ್ತು ಜೋಗದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ  ಸುಮಾರು 80 ಜನ ಅಸ್ವಸ್ಥರಾಗಿ ಸಾಗರ ತಾಲೂಕು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾರ್ಗಲ್ ನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಆಹಾರ ಸೇವನೆ ಮಾಡಿದವರಲ್ಲಿ ವಾಂತಿ ಭೇದಿ, ಜ್ವರ ಕಾಣಿಸಿಕೊಂಡಿದೆ. ಜೋಗದಲ್ಲಿ ಮೆಸ್ ಮತ್ತು ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಈ ರೀತಿಯ ರೋಗ ಲಕ್ಷಣ ಕಂಡುಬಂದಿದೆ. ನ.11 ರಂದು ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಈ ರೀತಿ ವಾಂತಿ ಭೇದಿ ಮತ್ತು ಜ್ವರದ…

Read More

ರಸ್ತೆ ಮಧ್ಯದಲ್ಲಿಯೇ ಕುರ್ಚಿ ಹಾಕಿ ಕುಳಿತು ವಿನೂತನ ರೀತಿ ಪ್ರತಿಭಟನೆ ಮಾಡಿದ ಟಿ ಆರ್ ಕೃಷ್ಣಪ್ಪ

ರಿಪ್ಪನ್ ಪೇಟೆ : ಪಟ್ಟಣದ ವಿನಾಯಕ ವೃತ್ತದಲ್ಲಿ ಇರುವ ದೊಡ್ಡ ಗುಂಡಿಯನ್ನು ಕೂಡಲೇ ಮುಚ್ಚುವಂತೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ರಸ್ತೆ ಮಧ್ಯದಲ್ಲಿಯೇ ಕುರ್ಚಿ ಹಾಕಿ ವಿನೂತನ ರೀತಿಯಾಗಿ ಪ್ರತಿಭಟಿಸಿದ್ದಾರೆ. ರಾಜಧಾನಿ ಹಾಗೂ ಕರಾವಳಿಗೆ ನಡುವೆ ಸಂಪರ್ಕ ಕಲ್ಪಿಸುವ ಮುಖ್ಯ ವೃತ್ತ ಇದಾಗಿದ್ದು ಹಲವು ದಿನಗಳಿಂದ ರಸ್ತೆ ಹದಗೆಟ್ಟಿ,ದೊಡ್ಡ ಗುಂಡಿ ಬಿದ್ದಿದ್ದರು ಯಾವ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಸಾಮಾಜಿಕ ಹೋರಾಟಗಾರರಾದ ಟಿ ಆರ್ ಕೃಷ್ಣಪ್ಪ ಇಂದು ಗುಂಡಿ ಬಿದ್ದ ಜಾಗದಲ್ಲಿಯೇ ಕುರ್ಚಿ…

Read More

ಅಮೃತ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ. ಅರಣ್ಯ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ:ನ್ಯಾಯಧೀಶ ಕೆ ರವಿಕುಮಾರ್.

ರಿಪ್ಪನ್ ಪೇಟೆ :  ಅರಣ್ಯ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಅರಣ್ಯ ಸಂರಕ್ಷಣೆ ಮಾಡದಿದ್ದರೆ ಪ್ರಾಕೃತಿಕ ವಿಕೋಪಗಳು.ಭೂಕುಸಿತಗಳು ಉಂಟಾಗುತ್ತವೆ  ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಅರಣ್ಯ ಸಂರಕ್ಷಣೆಗೆ ಮುಂದಾಗಬೇಕೆಂದು ಹೊಸನಗರ ತಾಲೂಕ್ ಪ್ರಧಾನ ವ್ಯವಹಾರ ನ್ಯಾಯಧೀಶ  ಮತ್ತು ಪ್ರಾಧಿಕಾರದ  ಸದಸ್ಯ  ಕೆ.ರವಿಕುಮಾರ್ ಹೇಳಿದರು. ಅಮೃತ ಸರಕಾರಿ ಪದವಿಪೂರ್ವ ಕಾಲೇಜುನಲ್ಲಿ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆ, ಗ್ರಾಮಆಡಳಿತ ಅಮೃತ  ಹಾಗೂ ಅಮೃತ ಸರಕಾರಿ ಪದವಿ ಪೂರ್ವ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಅಜಾದಿ ಕಾ…

Read More

ಸಾಗರ ಕ್ಷೇತ್ರವನ್ನು ಇಲ್ಲಿನ ಶಾಸಕರು ಕುಡುಕರ ಸಾಮ್ರಾಜ್ಯ ಮಾಡಲು ಹೊರಟಿದ್ದಾರೆ : ಬೇಳೂರು ಗೋಪಾಲಕೃಷ್ಣ

ರಿಪ್ಪನ್‌ಪೇಟೆ:ಸಾಗರ ಕ್ಷೇತ್ರದ ಶಾಸಕರು ಸಾಗರ ಮತ್ತು ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೆ ಕೇವಲ ಕೊರೊನಾ ನೆಪದಲ್ಲಿ  ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಗಂಭೀರವಾಗಿ ಆರೊಪಿಸಿದರು.  ರಿಪ್ಪನ್‌ಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಳೆದ ತಿಂಗಳು ನಡೆದಂತಹ ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿಗಳಿಸುವ ಮೂಲಕ ನೈಜ ಮತದಾನ ಮಾಡುವ ಮೂಲಕ ಪಕ್ಷದ ಬಲವರ್ಧನೆಗೆ ಕಾರಣವಾಗಿದೆ. ಅದೆ…

Read More

ಮೇಗರವಳ್ಳಿ ಬಿಜೆಪಿ ಘಟಕದ ವತಿಯಿಂದ ಆರೋಗ್ಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಸನ್ಮಾನ

ತೀರ್ಥಹಳ್ಳಿ : ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕೋವಿಡ್ ಸಮಯದಲ್ಲಿ ವಹಿಸಿದ ಸೂಕ್ತ ಮುನ್ನೆಚ್ಚರಿಕೆ ಹಾಗೂ ವ್ಯಾಕ್ಸಿನ್ ನೀಡಿಕೆಯ ವೇಳೆಯಲ್ಲಿ ಮಾಡಿದ ಪ್ರಾಮಾಣಿಕ ಸೇವೆಯಿಂದ ದೇಶ ಇಂದು ಕೊರೋನಾ ಸೋಂಕಿನಿಂದ ಚೇತರಿಸಿಕೊಂಡು ಮತ್ತೆ ಜನಜೀವನ ಚುರುಕುಗೊಂಡಿದೆ. 100 ಕೋಟಿಗೂ ಅಧಿಕ ಲಸಿಕೆ ನೀಡಿ ಭಾರತವು ವಿಶ್ವ ದಾಖಲೆ ಬರೆಯುವಲ್ಲಿ  ಇವರ ಕೊಡುಗೆ ಅಪಾರ. ಈ ಹಿನ್ನೆಲೆಯಲ್ಲಿ ಮೇಗರವಳ್ಳಿ ಮಹಾಶಕ್ತಿ ಕೇಂದ್ರದ ವತಿಯಿಂದ ಆರೋಗ್ಯ ಅಧಿಕಾರಿಗಳಿಗೆ ಮತ್ತು ಅಲ್ಲಿಯ ಸಿಬ್ಬಂದಿ ವರ್ಗದವರಿಗೆ ಸನ್ಮಾನಿಸಿ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಯಿತು….

Read More

ರಿಪ್ಪನ್ ಪೇಟೆಯ ಸಾಮಿಲ್ ಡ್ರೈವರ್ ಗುಂಡಪ್ಪ ನಿಧನ

ರಿಪ್ಪನ್ ಪೇಟೆ : ಇಲ್ಲಿನ ಸಿದ್ದಪ್ಪನಗುಡಿ ಬಳಿಯ ಕೆರೆಹಳ್ಳಿ ನಿವಾಸಿ ಗುಂಡಪ್ಪ (67) ಅವರು ವಯೋಸಹಜ ಕಾಯಿಲೆಯಿಂದ ಇಂದು ನಿಧನರಾದರು. ರಿಪ್ಪನ್ ಪೇಟೆಯ ಪ್ರಸಿದ್ದ ನೆಹರು ಸಾಮಿಲ್ ನಲ್ಲಿ ಮಿಲ್ ಡ್ರೈವರ್ ಆಗಿ ಸುಮಾರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಇವರು ಪ್ರಸ್ತುತ ಆಯನೂರು ಸಾಮಿಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ ಸಿದ್ದಪ್ಪನಗುಡಿಯ ಸ್ಮಶಾನದಲ್ಲಿ ನಡೆಯುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಗುಂಡಪ್ಪರವರ ನಿಧನಕ್ಕೆ…

Read More

ರಿಪ್ಪನ್ ಪೇಟೆಯಲ್ಲಿ ನಡದಿದ್ದೇ 2 ವರ್ಷಗಳ ನಂತರ ಗ್ರಾಮಸಭೆ ಆದರೂ ಹಿರಿಯ ಪತ್ರಕರ್ತ ಧರಣಿ ನಡೆಸಿದ್ದೇಕೆ ? ಹಲವು ರೋಚಕ ಸನ್ನಿವೇಶಕ್ಕೆ ಸಾಕ್ಷಿಯಾಯಿತೇ ರಿಪ್ಪನ್ ಪೇಟೆಯ ಗ್ರಾಮಸಭೆ!!

ರಿಪ್ಪನ್ ಪೇಟೆ: ಬರೊಬ್ಬರಿ ಎರಡು ವರ್ಷಗಳ ನಂತರ  ರಿಪ್ಪನ್ ಪೇಟೆಯ ಕುವೆಂಪು ಸಭಾಂಗಣದಲ್ಲಿ  ಗ್ರಾಮಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆ ಹಲವು ರೋಚಕ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು. ಹೌದು,ಎರಡು ವರ್ಷಗಳ ನಂತರ ನಡೆಯುತ್ತಿದ್ದ ಗ್ರಾಮ ಸಭೆಯಲ್ಲಿ ರಿಪ್ಪನ್ ಪೇಟೆ  ಗ್ರಾಮ ಪಂಚಾಯತಿಯ ಆಡಳಿತ ಕಾರ್ಯ ವೈಖರಿ ಖಂಡಿಸಿ ಹಿರಿಯ ಪತ್ರಕರ್ತ ಹಾಗೂ ಬಿಜೆಪಿ ಹಿರಿಯ ಮುಖಂಡ ಸಭೆಯಲ್ಲಿ ಏಕಾಂಗಿ ಧರಣಿ ನಡೆಸಿದ ಪ್ರಸಂಗವು ನಡೆಯಿತು. ಈ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಬರೀಶ್ ನಗರದಲ್ಲಿ ಒಂದೇ ಕುಟುಂಬದ ಇಬ್ಬರ ನಡುವೆ ಇದ್ದ ಖಾತೆಗೆ…

Read More

ನೇರಲೆ ಮನೆ ದೇವಸ್ಥಾನದ ಜಾಗಕ್ಕೆ ಬೇಲಿ ಹಾಕಲು ಮುಂದಾದ ವ್ಯಕ್ತಿ !!! ಕೇಳಲು ಹೋದ ಗ್ರಾಮಸ್ಥರಿಗೆ ಕೊಲೆಬೆದರಿಕೆ ? ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು !!! ಹಾಗಾದರೆ ಆ ವ್ಯಕ್ತಿ ಯಾರು ??

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ನೇರಳಮನೆ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ದೇವಸ್ಥಾನಕ್ಕಾಗಿ ಮೀಸಲಿಟ್ಟಿದ್ದ 20ಗುಂಟೆ ಜಾಗವನ್ನು ಪ್ರಭಾವಿ ಖಾಸಗಿ ವ್ಯಕ್ತಿಯೊಬ್ಬ ತನ್ನ ಹಣದ ಪ್ರಭಾವ ಬಳಸಿ  ಬೇಲಿ ಹಾಕಲು ಮುಂದಾಗಿದ್ದು ತಡೆಯಲು ಹೋದ ಗ್ರಾಮಸ್ಥರನ್ನು ಅವಾಚ್ಯವಾಗಿ ನಿಂದಿಸಿ,ಕೊಲೆ ಬೆದರಿಕೆ ಹಾಕಿರುವ  ಘಟನೆ ನಡೆದಿದೆ. ಇಂದು ರಿಪ್ಪನ್ ಪೇಟೆ ಗ್ರಾಪಂ ಸಭಾಂಗಣದಲ್ಲಿ ಪತ್ರೀಕಾ ಗೋಷ್ಟಿ ನಡೆಸಿ ಮಾತನಾಡಿದ ನೇರಲಮನೆ ಗ್ರಾಮಸ್ಥರು ದೇವಸ್ಥಾನದ ಜಾಗವನ್ನು ಅಕ್ರಮಿಸಿಕೊಂಡಿರುವ ಬಗ್ಗೆ ನೇರಳಮನೆ ಗ್ರಾಮಸ್ಥರೆಲ್ಲಾ ಸೇರಿ ನಾಗೇಶ್ ಅಲಿಯಾಸ್ ಬಡ್ಡಿ ನಾಗೇಶ್ ಎಂಬ…

Read More

ಮಾರುತಿಪುರ :ಆಟವಾಡುತ್ತಿದ್ದ ಬಾಲಕನ ಜೀವನದಲ್ಲಿ ವಿಧಿಯ ಕ್ರೂರ ಆಟ : ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಬಡ ವಿದ್ಯಾರ್ಥಿ ,

ಹೊಸನಗರ : ಮಾರುತಿಪುರದಲ್ಲಿ ಎಂಟನೇ ತರಗತಿ ಓದುತ್ತಿರುವ ಬಾಲಕ  ಕೌಶಿಕ್ ಇದೇ ತಿಂಗಳ 4ರಂದು ಶಾಲೆಯಲ್ಲಿ ಆಡುತ್ತಿರುವಾಗ ಬಿದ್ದು ತಲೆಯ  ಬಲಬಾಗದಲ್ಲಿ ಬಲವಾಗಿ ಪೆಟ್ಟಾಗಿದ್ದು ಬ್ರೈನ್ ನಲ್ಲಿ ಬ್ಲಾಡ್ ಕ್ಲೋಟ್ ಆಗಿರುವ ಕಾರಣ  ಪ್ರಸ್ತುತ ಮೆಗ್ಗಾನ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ಗೆ ಮ್ಯಾಕ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಸುಮಾರು 2 ಲಕ್ಷ ಕ್ಕೂ ಹೆಚ್ಚು ಚಿಕಿತ್ಸಾ ವೆಚ್ಚವಾಗುವದೆಂದು ಆರೋಗ್ಯ ಸಿಬ್ಬಂದಿಗಳು ತಿಳಿಸಿರುತ್ತಾರೆ. ತಂದೆಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡಿರುವ ಈ ಬಾಲಕ ತಾಯಿ ವಿಶಾಲ ಜೊತೆ ವಾಸಿಸುತ್ತಿದ್ದು ಯಾವದೇ ಆದಾಯವಿರುವದಿಲ್ಲ, ಕೂಲಿ…

Read More