ರಿಪ್ಪನ್ ಪೇಟೆ , ಸಿಂಗನ ಮನೆ ಹಾಗೂ ತುಮರಿ ಗ್ರಾಪಂ ನ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ :

ಶಿವಮೊಗ್ಗ : ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಗ್ರಾ.ಪಂ ಗ್ರಂಥಾಲಯಗಳಿಗೆ ಗ್ರಂಥಾಲಯ ಮೇಲ್ವಿಚಾರಕರನ್ನು ಗೌರವ ಸಂಭಾವನೆ ಆಧಾರದ ಮೇಲೆ ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ. ತೀರ್ಥಹಳ್ಳಿ ತಾಲ್ಲೂಕು ಬಾಂಡ್ಯಕುಕ್ಕೆ(ಪರಿಶಿಷ್ಟ ಜಾತಿ ಗ್ರಾಮೀಣ ಅಭ್ಯರ್ಥಿ), ಹೊಸನಗರ ತಾಲ್ಲೂಕು ರಿಪ್ಪನಪೇಟೆ(ಸಾಮಾನ್ಯ ಅಭ್ಯರ್ಥಿ), ಭದ್ರಾವತಿ ತಾಲ್ಲೂಕು ಸಿಂಗನಮನೆ(ಸಾಮಾನ್ಯ ಅಭ್ಯರ್ಥಿ), ಸಾಗರ ತಾಲ್ಲೂಕು ತುಮರಿ(ಸಾಮಾನ್ಯ ಅಭ್ಯರ್ಥಿ) ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಗ್ರಂಥಾಲಯ ಮೇಲ್ವಿಚಾರಕರನ್ನು ಮಾಸಿಕ ಗೌರವ ಸಂಭಾವನೆ ರೂ.12,000 ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಗ್ರಾಮ ಪಂಚಾಯ್ತಿ…

Read More

ಹೊಸನಗರ : ಅಭಿಮಾನಿಗಳ ನೆಚ್ಚಿನ ಆಟೋರಾಜ ಶಂಕರ್ ನಾಗ್ ಜನ್ಮದಿನ ವಿಶೇಷವಾಗಿ ಆಚರಣೆ :

ಹೊಸನಗರ: ಕನ್ನಡ ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲಿ ತನ್ನದೇ ಆದ ಚಾಪು ಮೂಡಿಸಿ, ಕಣ್ಮರೆಯಾದ ಅಭಿಮಾನಿಗಳ ನೆಚ್ಚಿನ ಆಟೋ ರಾಜ ಶಂಕರ್ ನಾಗ್​ ಅವರ ಹುಟ್ಟುಹಬ್ಬ ಇಂದು. ಕನ್ನಡ ಚಿತ್ರ ರಂಗವನ್ನು ಹಾಲಿವುಡ್ ಸಿನಿಮಾ ಮಟ್ಟಿಗೆ ಬೆಳೆಸಬೇಕು ಎಂದು ಶಂಕರ್ ನಾಗ್ ಕನಸು ಕಂಡಿದ್ದರು. ಆದರೆ, ಅದು ನನಸಾಗುವ ಮೊದಲೇ ಕರಾಟೆ ಕಿಂಗ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಶಂಕರ್ ನಾಗ್ ನಮ್ಮೊಂದಿಗೆ ಇದ್ದಿದ್ದರೆ, ಇಂದು 67ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಹೊಸನಗರದ ಚೌಡಮ್ಮ ರಸ್ತೆಯ…

Read More

ಶವ ಸಾಗಿಸಲು ರಸ್ತೆ ಸಂಪರ್ಕ ಇಲ್ಲದೆ ಮೌನಿಯಾಯಿತೆ ಬಡ ಕುಟುಂಬ ? ಗೌತಮಪುರ ದಲ್ಲೊಂದು ಹೃದಯ ವಿದ್ರಾವಕ ಘಟನೆ!!!

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಗೌತಮಪುರ ಗ್ರಾಮ ಇದೀಗ ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಯಿತು. ಬಲಿಪಾಡ್ಯಮಿಯ ದಿನ ನಿನ್ನೆ ರಾಜಮ್ಮ 70  ವರ್ಷ ವಯೋ ಸಹಜತೆಯಿಂದ ಸಾವಿಗೀಡಾಗಿದ್ದಾರೆ  ಸುಮಾರು ಇಪ್ಪತ್ತು ವರ್ಷದಿಂದ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ರಸ್ತೆ ತಡೆ ಹಾಕಿದ್ದು ನಂತರ  ಗ್ರಾಮಸಭೆಯಲ್ಲಿ ತೀರ್ಮಾನವಾದರೂ  ರಸ್ತೆ ತೆರವುಗೊಳಿಸಲು ಆದೇಶ ನೀಡಿದ್ದರೂ ಗ್ರಾಮಾಡಳಿತವಾಗಲಿ ಅಥವಾ ತಾಲ್ಲೂಕು ಆಡಳಿತವಾಗಲೀ ಈ ಕೆಲಸಕ್ಕೆ ಮುಂದಾಗಲಿಲ್ಲ. ಇದರ ಪರಿಣಾಮ ರಾಜಮ್ಮ ಮರಣಹೊಂದಿ 24 ಘಂಟೆ ಯಾದರೂ ಕೂಡ ಶವ ಸಾಗಿಸಲು…

Read More

ದೀಪಾವಳಿ ನೋನಿಗೆ ಸಾವಿರ ಹಣ್ಣು ಕಾಯಿ ನೈವೇದ್ಯ ಬಯಸುವ ಮಲೆನಾಡಿನ ದೈವ ! ಹಾಗಾದರೆ ಇದು ಯಾವ ಗ್ರಾಮದ ದೇವತೆ ? ಒಮ್ಮೆ ಈ ಸುದ್ದಿ ನೋಡಿ

ಬೆಳಕಿನ ಹಬ್ಬ ದೀಪಾವಳಿ ಎಂದರೆ ಅದೇನೋ ಸಡಗರ ಅದೆಷ್ಟೋ ಸಂಭ್ರಮ ಮಲೆನಾಡಿನಲ್ಲಂತೂ ಹಬ್ಬದ ಸಡಗರ ಸಂಭ್ರಮ ಹೇಳತೀರದು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಐಗಿನಬೈಲು ಗ್ರಾಮದಲ್ಲಿ ಗಾಮೇಶ್ವರ ದೈವವು ವಿಶಿಷ್ಟವಾದಂತಹ  ಶಕ್ತಿಯನ್ನು ಹೊಂದಿದ್ದು ಪ್ರತಿ ವರ್ಷವೂ ನೋನಿ ಹಬ್ಬದಂದು ಈ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.ನೂರಾರು  ವರ್ಷಗಳ ಇತಿಹಾಸವಿರುವ   ಈ ಗಾಮೇಶ್ವರ ದೈವ ವೃಕ್ಷಕ್ಕೆ ಗ್ರಾಮದ ಪ್ರತಿ ಕುಟುಂಬದ ಪುರುಷರು ಉಪವಾಸ ವ್ರತದೊಂದಿಗೆ ಆಗಮಿಸಿ ದೈವಕ್ಕೆ ನಮಿಸಿ ಸಾವಿರಾರು ಹಣ್ಣುಕಾಯಿ ಸಮಪಿ೯ಸುವಂತಹ ಪ್ರತೀತಿಯಿದೆ.  ಐಗಿನಬೈಲು…

Read More

ರಿಪ್ಪನ್ ಪೇಟೆ : ಶ್ರದ್ದಾ ಭಕ್ತಿಯಿಂದ ನೆರವೇರಿದ ಲಕ್ಷ್ಮಿಪೂಜೆ

ರಿಪ್ಪನ್ ಪೇಟೆ: ದೀಪಾವಳಿ ಹಬ್ಬದ ಸಂಭ್ರಮ ಇಂದು ಪಟ್ಟಣದೆಲ್ಲೆಡೆ ಕಂಡು ಬಂದಿದೆ. ವಿಶೇಷವಾಗಿ ಇಂದು ಲಕ್ಷ್ಮಿ ಪೂಜೆ ನೆರವೇರಿಸಲಾಗುತ್ತಿದೆ. ಅಂಗಡಿಗಳು, ಶೋರೂಮ್ ಗಳು, ಗ್ಯಾರೇಜ್ ಗಳು, ಕಚೇರಿಗಳು, ಸೇರಿದಂತೆ ಹಲವರು ಲಕ್ಷ್ಮಿ ಪೂಜೆ ಮಾಡಿದ್ದಾರೆ. ದೀಪಾವಳಿಯ ಅಮವಾಸ್ಯೆಯ ದಿನವಾದ ಇಂದು ಲಕ್ಷ್ಮೀ ಪೂಜೆಯನ್ನು ಶ್ರದ್ದಾಭಕ್ತಿಯಿಂದ ಇಲ್ಲಿನ ಅಂಗಡಿ, ಹೋಟೆಲ್ ಇನ್ನಿತರ ಉದ್ಯಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಮುತ್ತೈದೆಯರು ಸೇರಿದಂತೆ ಬಂಧು-ಬಳಗದವರು ಪೂಜೆಯೊಂದಿಗೆ ಸಂಭ್ರಮಿಸಿದರು. ಇಂದು ಕೂಡ ಪಟ್ಟಣದಲ್ಲಿ ಜನಜಂಗುಳಿ ಕಂಡು ಬಂದಿತು. ದಿನಸಿ, ಬಟ್ಟೆ ಅಂಗಡಿಗಳು, ಪಟಾಕಿ ಸ್ಟಾಲ್…

Read More

ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ: ರಿಪ್ಪನ್ ಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ :

ರಿಪ್ಪನ್ ಪೇಟೆ : ಹಾನಗಲ್ ವಿಧಾನಸಬೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ  ಜಯಭೇರಿ ಬಾರಿಸಿದ ವಿಚಾರ ತಿಳಿಯುತ್ತಿದ್ದಂತೆ ರಿಪ್ಪನ್ ಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಟ್ಟಣದ ವಿನಾಯಕ ವೃತ್ತದಲ್ಲಿ ಹೆಚ್ಚಿನ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು.ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಆಸೀಪ್ ಭಾಷಾಸಾಬ್ ಮಾತನಾಡಿ, ಕಾಂಗ್ರೆಸ್‌ನ ಜನಪರ ಕಾರ್ಯಗಳು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಭಾರಿ ಬಹುಮತದಿಂದ ವಿಜೇತರನ್ನಾಗಿಸಿದ ಹಾನಗಲ್ ವಿಧಾನ…

Read More

ತೀರ್ಥಹಳ್ಳಿಯಲ್ಲಿ ರಾಜ್ಯೋತ್ಸವದ ಸಂಭ್ರಮಾಚರಣೆ,ಹಬ್ಬದ ವಾತಾವರಣ: ಮಾಧ್ಯಮಕ್ಕೆ ಮಾಹಿತಿ ನೀಡದೇ ತಾಲೂಕು ಆಡಳಿದಿಂದ ನಿರ್ಲಕ್ಷ್ಯ

ತೀರ್ಥಹಳ್ಳಿ: ತಾಲೂಕು ಆಡಳಿತ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಸಹಕಾರದಲ್ಲಿ ನಡೆಯುವ ರಾಜ್ಯೋತ್ಸವವನ್ನು ಸೋಮವಾರ ವಿಶಿಷ್ಠವಾಗಿ ಆಚರಿಸಲಾಗುತ್ತಿದೆ. ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ಹಬ್ಬದ ವಾತಾವರಣಕ್ಕೆ ಸಾಂಸ್ಕೃತಿಕ ಸ್ಪರ್ಶವನ್ನು ನೀಡಲಾಗಿದೆ.  ಕೊರೊನಾ ಸೋಂಕಿನ ಕಾರಣ ಎರಡು ವರ್ಷಗಳಿಂದ ಅಷ್ಟೊಂದು ಸಂಭ್ರಮಾಚರಣೆ ಇರಲಿಲ್ಲ. ಈ ವರ್ಷ ಉತ್ತಮವಾಗಿ ಆಚರಿಸಬೇಕು ಎನ್ನುವ ಆಶಯ ತಾಲೂಕಿನ ಜನತೆಯಲ್ಲಿತ್ತು. ಆದರೆ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಸಮಾರಂಭ ತಾಲೂಕಿನಲ್ಲಿ ಆಚರಿಸುತ್ತಿದ್ದು ಈ ಬಾರಿಯೂ ಸಮಾರಂಭ ಹಮ್ಮಿಕೊಂಡಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಜನತೆಗೆ ಮಾಹಿತಿಯನ್ನು ನೀಡುವ…

Read More

ಪರಂಪರೆಯ ಜಾಡನ್ನು ವಿಶಿಷ್ಟವಾಗಿ ಶೋಧಿಸುವ ಕೃತಿ ‘ಬೇರು ಬಿಳಲು’ – ಡಾ. ಎ. ಬಿ. ರಾಮಚಂದ್ರಪ್ಪ.

ರಿಪ್ಪನ್ ಪೇಟೆ :ಪುರಾಣ ಇತಿಹಾಸ ಜಾನಪದದ ಬೇರುಗಳು ಕಾಲ ದೇಶಗಳ ಗತಿಯಲ್ಲಿ ಪಡೆದುಕೊಂಡ ರೂಪಾಂತರಗಳನ್ನು ಮತ್ತು ವರ್ತಮಾನದಲ್ಲಿ ಅವುಗಳ ಬಿಳಲುಗಳು ವಿಸ್ತಾರಗೊಂಡ  ವಿಶಿಷ್ಟತೆಯನ್ನು, ಸೂಕ್ಷ್ಮ ಸಂವಾದಕ್ಕೆ ಒಳಪಡಿಸಿರುವ ಕೃತಿ ‘ಬೇರು ಬಿಳಲು’ ಎಂದು ಚಿಂತಕರಾದ ಡಾ. ಎ. ಬಿ. ರಾಮಚಂದ್ರಪ್ಪ ಹರಿಹರ ಅವರು ಹೇಳಿದರು. ಸಾರ ಕೇಂದ್ರ ದೊಂಬೆಕೊಪ್ಪ, ವಂಶಿಪ್ರಕಾಶನ ಬೆಂಗಳೂರು, ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್,ಹೊಸನಗರ.ಸಹಮತ ವೇದಿಕೆ,ತುಮರಿ. ಕಲಾ ಸಿಂಚನ, ಸಾಗರ. ರೇಣುಕಪ್ಪಗೌಡ ಪ್ರತಿಷ್ಠಾನ ಮಸರೂರು ಇವರುಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ; ಡಾ….

Read More

ರಿಪ್ಪನ್ ಪೇಟೆ : ಯುವ ಕ್ರಿಕೆಟರ್ ತಂಡದ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ :

ರಿಪ್ಪನ್ ಪೇಟೆ : ಕನ್ನಡದ ಯುವರತ್ನ  ಪವರ್‌ ಸ್ಟಾರ್‌ ಪುನೀತ್ ರಾಜ್ ಕುಮಾರ್  ರವರ ಅಕಾಲಿಕ ಮರಣದಿಂದ ಇಡೀ ಕರುನಾಡೇ ಇದೀಗ ದುಃಖದಲ್ಲಿ ಮರುಗಿದೆ.ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ ಕನ್ನಡದ ರಾಜಕುಮಾರನಿಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಟೇತಾರಿಗದಲ್ಲಿ ಯುವ ಕ್ರಿಕೆಟರ್ಸ್ ಶೆಟ್ಟಿಬೀಡು ಇವರ ವತಿಯಿಂದ ಬೃಹತ್ ಆಕಾರದ ಕಟೌಟ್ ಗೆ ಹೂವಿನ ಹಾರ ಹಾಕಿ  ಮೌನಾಚರಣೆಯೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿ ಅಗಲಿದ ನಾಯಕನಿಗೆ ಕಂಬನಿ ಮಿಡಿದರು. ಈ ಸಂಧರ್ಭದಲ್ಲಿ ಯುವ ಕ್ರಿಕೆಟರ್ ತಂಡದ ನಾಗರಾಜ್ ಎ,ರಾಜೇಶ್ ಎ,ಅಭಿ…

Read More

ಪುನೀತ್ ರಾಜ್‍ಕುಮಾರ್ ಗೆ ಶ್ರದ್ದಾಂಜಲಿ : ರಿಪ್ಪನ್ ಪೇಟೆ ಸಂಪೂರ್ಣ ಬಂದ್

ರಿಪ್ಪನ್​​​​ಪೇಟೆ : ಪುನೀತ್ ರಾಜ್​ಕುಮಾರ್ ಅಗಲಿಕೆಯಿಂದ ಇಡೀ ರಾಜ್ಯ ಶೋಕ ಸಾಗರದಲ್ಲಿ ಮುಳುಗಿದೆ. ಈ ನಡುವೆ ರಿಪ್ಪನ್​​ಪೇಟೆ ನಗರ ಸಂಪೂರ್ಣ ಬಂದ್ ಆಗಿದೆ. ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿ ಬಂದ್ ಮಾಡಿದ್ದು, ಪಟ್ಟಣ ಖಾಲಿ ಖಾಲಿಯಾಗಿದೆ. ಪಟ್ಟಣದ ಸರ್ಕಲ್​​​​​ನಲ್ಲಿ ಪುನೀತ್ ರಾಜ್​​ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಲಾಗಿದೆ. ಪಟ್ಟಣದ ಮೆಡಿಕಲ್ ಶಾಪ್​​​ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಬಂದ್ ಮಾಡಲಾಗಿದ್ದು, ಕೇವಲ ಬೆರಳೆಣಿಕೆಯ ಬಸ್​​ ಸಂಚಾರ ಮಾಡುತ್ತಿವೆ. ಕನ್ನಡ ಚಲನಚಿತ್ರರಂಗದ ಮೇರುನಟ ಪವರ್ ಸ್ಟಾರ್ ಪುನೀತ್…

Read More