ಬಿ.ಜೆ.ಪಿ ಪಕ್ಷದ ಬೆಂಬಲದಲ್ಲಿ ಗೆದ್ದ ಗ್ರಾಮ ಪಂಚಾಯತಿ ಸದಸ್ಯರಿಗೆ ಮತಯಾಚಿಸುವ ಅಗತ್ಯವಿಲ್ಲ ಅವರೇ ಸ್ವಪ್ರೇರಣೆಯಿಂದ ಅನ್ಯ ಪಕ್ಷದ ಸದಸ್ಯರನ್ನು ಮನವೊಲಿಸಿ ಮತ ಹಾಕಿಸುತ್ತಾರೆ : ಕೆ ಎಸ್ ಈಶ್ವರಪ್ಪ

ರಿಪ್ಪನ್‌ಪೇಟೆಯ : ಬಿ.ಜೆ.ಪಿ ಪಕ್ಷದ ಬೆಂಬಲದಲ್ಲಿ ಗೆದ್ದ ಗ್ರಾಮ ಪಂಚಾಯತಿ ಸದಸ್ಯರಿಗೆ ಮತಯಾಚಿಸುವ ಅಗತ್ಯವಿಲ್ಲ ಅವರೇ ಸ್ವಪ್ರೇರಣೆಯಿಂದ ಅನ್ಯ ಪಕ್ಷದ ಸದಸ್ಯರನ್ನು ಮನವೊಲಿಸಿ ಮತ ಹಾಕಿಸುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ವಿನಾಯಕ ಸರ್ಕಲ್‌ನಲ್ಲಿರುವ ಸತ್ಕಾರ್ ಕಾಂಪ್ಲೆಕ್ಸ್ ನಲ್ಲಿ ಬಿ.ಜೆ.ಪಿ ಕಛೇರಿಯನ್ನು ಉದ್ಘಾಟಿಸಿ ನಂತರ ಗ್ರಾಮ ಪಂಚಾಯತಿ ಸದಸ್ಯ ಮತದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನರೇಗಾ ಮತ್ತು ಜನಜೀವನ ಯೋಜನೆ ಅನುಷ್ಠಾನದಲ್ಲಿ…

Read More

ಬಿಜೆಪಿ ಆಡಳಿತ ಈಗಾಗಲೇ ಜನಕ್ಕೆ ವಾಕರಿಕೆ ಬಂದಂತಾಗಿದೆ : ಮಾಜಿ ಶಾಸಕ ಮಧು ಬಂಗಾರಪ್ಪ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ವಿಧಾನಪರಿಷತ್ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಧು ಬಂಗಾರಪ್ಪನವರು  ಆರ್ ಪ್ರಸನ್ನಕುಮಾರ್ ಅತ್ಯುತ್ತಮ ಅಭ್ಯರ್ಥಿಯಾಗಿದ್ದರೆ ಪ್ರಾಮಾಣಿಕವಾಗಿ ಈಗಾಗಲೇ ಕೆಲಸವನ್ನ ಮಾಡಿದ್ದಾರೆ ಹಾಗಾಗಿ ಅವರನ್ನು ಸರ್ವಾನುಮತದಿಂದ ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಬಿಜೆಪಿಯ ಆಡಳಿತ ಈಗಾಗ್ಲೇ ಜನಕ್ಕೆ ವಾಕರಿಕೆ ಬಂದಂತಾಗಿದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ಕಾರ್ಯಗಳು ನಡಿತಲ್ಲಾ ಮನೆ ಕೊಡದೆ ಇರುವವರು ಹಾಗೂ ಎನರ್ಜಿಯ ಹಣ ಬಿಡುಗಡೆ ಮಾಡದೆ ಇರುವವರು  ಬಿಜೆಪಿಯವರು. ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕನ್ನು ಮೊಟಕು ಗೊಳಿಸಿದ…

Read More

ಆಲುವಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ವಾಲಿಬಾಲ್ ಪಂದ್ಯಾವಳಿ : ಸೋಲು, ಗೆಲುವು ಮುಖ್ಯವಲ್ಲ. ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ಭಾಗವಹಿಸುವುದೇ ಮುಖ್ಯ : ವೀರೇಶ್ ಆಲುವಳ್ಳಿ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಆಲುವಳ್ಳಿ ಗ್ರಾಮದಲ್ಲಿ ಶ್ರೀ ಸಿದ್ದಿವಿನಾಯಕ ಗೆಳೆಯರ ಬಳಗ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಹೊಸನಗರ ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ಉದ್ಘಾಟಿಸಿದರು. ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಆಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ಭಾಗವಹಿಸುವುದೇ ಮುಖ್ಯ. ಸೋಲು ಗೆಲುವಿನ ಮೊದಲ ಮೆಟ್ಟಿಲು ಎಂಬುದನ್ನು ಅರಿತು ಆಟಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಸಿದ್ದಿ ವಿನಾಯಕ ಗೆಳೆಯರ ಬಳಗಕ್ಕೆ ಈ ಬಾರಿ ಕೊಟ್ಟಂತಹ ಸಲಹೆ ಸಹಕಾರವನ್ನು ಮುಂದಿನ ಬಾರಿಯು ನೀಡುತ್ತೇನೆ…

Read More

ರಿಪ್ಪನ್ ಪೇಟೆಯಲ್ಲಿ ನೂತನವಾಗಿ ಶುಭಾರಂಭಗೊಂಡ ಸ್ತ್ರೀ ಮತ್ತು ಮಕ್ಕಳ ಕ್ಲಿನಿಕ್ : ಮಾಜಿ ಶಾಸಕರಿಂದ ಉದ್ಘಾಟನೆ

ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಸ್ತ್ರೀ ಮತ್ತು ಮಕ್ಕಳ ಕ್ಲಿನಿಕ್ ಮತ್ತು ಪರಮೇಶ್ ಮೆಡಿಕಲ್ ಇಂದು ರಿಪ್ಪನ್ ಪೇಟೆಯ ತೀರ್ಥಹಳ್ಳಿ ರಸ್ತೆಯಲ್ಲಿ ಶುಭಾರಂಭಗೊಂಡಿದೆ. ಇಂದು ಬೆಳಿಗ್ಗೆ ಸಾಗರದ ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರು ಉದ್ಘಾಟಿಸಿ ಶುಭ ಹಾರೈಸಿದರು.ಮಾಜಿ ಶಾಸಕ ಹಾಗೂ ವೈದ್ಯಕೀಯ ಕ್ಷೇತ್ರದ ಹಿರಿಯರಾದ ಡಾ ಜಿ ಡಿ ನಾರಾಯಣಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ರಿಪ್ಪನ್ ಪೇಟೆ ಹಾಗೂ ಸುತ್ತ ಮುತ್ತಲ ಭಾಗಗಳ ಜನರಿಗೆ ಅದರಲ್ಲೂ…

Read More

ಹರಿದ್ರಾವತಿ ಸರ್ಕಾರಿ ವೈದ್ಯರನ್ನು ಬದಲಾಯಿಸುವಂತೆ ಬೃಹತ್ ಪ್ರತಿಭಟನೆ : ಪ್ರತಿಭಟನೆಗೆ ಮಣಿದ ತಾಲ್ಲೂಕು ಆರೋಗ್ಯಧಿಕಾರಿ

ಹರಿದ್ರಾವತಿ : ಇಲ್ಲಿನ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಕಳೆದ ಎರಡು ತಿಂಗಳಿನಿಂದ ನಿರಂತರ ಗೈರಾಗಿರುವ ವೈದ್ಯಧಿಕಾರಿಗಳ ಬದಲಿಗೆ ಬೇರೆ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ನಡೆದ ಪ್ರತಿಭಟನೆಗೆ ಸ್ಪಂದಿಸಿರುವ ತಾಲ್ಲೂಕು ವೈದ್ಯಾಧಿಕಾರಿಗಳು ಸೋಮವಾರದಿಂದಲೇ ಬದಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇಂದು ಹರಿದ್ರಾವತಿ ಪ್ರಾಥಮಿಕ ಅರೋಗ್ಯ ಕೇಂದ್ರದ ಎದುರು ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಹಳ್ಳಿ ಬಟ್ಟೆಮಲ್ಲಪ್ಪ -ಆಲಗೇರಿಮಂಡ್ರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಡಾ. ಸುರೇಶ್…

Read More

ನ್ಯಾಯಲಯದ ತೀರ್ಪು ಸತ್ಯಕ್ಕೆ ಸಂದ ಜಯವಾಗಿದೆ : ಮಹಾಲಕ್ಷ್ಮಿ ಅಣ್ಣಪ್ಪ

ರಿಪ್ಪನ್‌ಪೇಟೆ: ಕಳೆದ ವರ್ಷ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯ ಸಂದರ್ಭದಲ್ಲಿ ಬರುವೆ 1ನೇ ವಾರ್ಡ್ ನಲ್ಲಿ ನಡೆದ ಮತದಾನದಲ್ಲಿ ಅಕ್ರಮವಾಗಿದೆ ಎಂದು ದಾಖಲಾಗಿದ್ದ ಮೊಕದ್ದಮೆಯನ್ನು ಹೊಸನಗರ ಜೆ ಎಂಎಫ್ ಸಿ ನ್ಯಾಯಾಲಯ ವಜಾ ಮಾಡಿದೆ. ಘಟನೆಯ ಹಿನ್ನಲೆ:  ಒಬ್ಬನೇ ವ್ಯಕ್ತಿ ಎರಡು-ಮೂರು ವಾರ್ಡ್‌ಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಮತದಾನದ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನಕ್ಕೆ ಬರುವೆ 1ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಪರಾಜಿತ ಅಭ್ಯರ್ಥಿ ಮೆಣಸೆ ಆನಂದ್ ರವರು ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ…

Read More

ಸಂಘದ ಕಾರ್ಯವೈಖರಿಗೆ ಬೇಸತ್ತು ಭಂಡಾರಿ ಸಮಾಜದ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ !!!

ರಿಪ್ಪನ್ ಪೇಟೆ : ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳನ್ನೊಳಗೊಂಡ ಭಂಡಾರಿ ಸಮಾಜದ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದೇವರಾಜ್ ಭಂಡಾರಿ ಬಾಳೂರು ರಾಜಜೀನಾಮೆ ನೀಡಿದ್ದಾರೆ.  ಡಿ,3 ಶುಕ್ರವಾರ ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನ ಸಿದ್ದಪ್ಪನ ಗುಡಿ ದೇವಸ್ಥಾನ ಇಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಸಂಘದ ಕಾರ್ಯವೈಖರಿಗೆ ಬೇಸತ್ತು ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿ ಸಂಘದ ಅಧ್ಯಕ್ಷ ಹಿರಿಯಣ್ಣ ಭಂಡಾರಿ ಯವರಿಗೆ ರಾಜೀನಾಮೆಯನ್ನು ಸಲ್ಲಿಸಿದರು. ಈ ಸಭೆಯಲ್ಲಿ ಭಂಡಾರಿ ಸಮಾಜದ ಮುಖಂಡರಾದ ನಾಗರಾಜ್ ಭಂಡಾರಿ ಅರಸಾಳು,ವಾಸು ಎಂ,ಬಾಲು ದೂನ,ಪಾಂಡುರಂಗ…

Read More

ಆರ್ಯ ಈಡಿಗ ನೌಕರರ ಕ್ರಿಯಾವೇದಿಕೆಯಿಂದ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಆರ್ಥಿಕ ನೆರವು :

ರಿಪ್ಪನ್ ಪೇಟೆ : ಕಳೆದ ಎರಡು ತಿಂಗಳ ಹಿಂದೆ ರಿಪ್ಪನ್ ಪೇಟೆ ಪಟ್ಟಣದ ಮೇರಿ ಮಾತಾ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಭರತ್ ಬೆಳ್ಳಿ (14)ಎಂಬ ವಿದ್ಯಾರ್ಥಿ ಆಕಸ್ಮಿಕವಾಗಿ ಕಾಲುಜಾರಿ ತಮ್ಮ ಮನೆಯ ಸಮೀಪದಲ್ಲಿರುವ ಹಳ್ಳಕ್ಕೆ ಬಿದ್ದು ಮೃತನಾಗಿದ್ದ.  ಮೃತನ ತಂದೆ ವಾಸು ರವರು ರಿಪ್ಪನ್ ಪೇಟೆಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುಟುಂಬಕ್ಕೆ ಹೊಸನಗರ ತಾಲೂಕು ಆರ್ಯ ಈಡಿಗ ನೌಕರರ ಕ್ರಿಯಾ ವೇದಿಕೆಯ ವತಿಯಿಂದ 31 ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ನೀಡಿದರು. …

Read More

ಅಪ್ಪು ನಮನ ಕಾರ್ಯಕ್ರಮದಲ್ಲಿ ಇಡೀ ಊರೂರಿಗೆ ಬಾಡೂಟ ಬಡಿಸಿ ಅಭಿಮಾನ ಮೆರೆದ ಚನ್ನಶೆಟ್ಟಿಕೊಪ್ಪ ಗ್ರಾಮಸ್ಥರು :

ಕರ್ನಾಟಕದ ಪವರ್ ಸ್ಟಾರ್ ಅಪ್ಪು ನಮ್ಮನ್ನ ಅಗಲಿ ಈಗಾಗಲೇ ಒಂದೂವರೆ ತಿಂಗಳು ಕಳೆದಿದೆ ಆದರೆ ಅವರ ಸಾಧನೆ ಸಾರ್ಥಕತೆ ಹಾಗೂ ಅವರ ದಾನ ಧರ್ಮದ ಕಾರ್ಯಗಳು ಎಂದು ಕೂಡ ನಮ್ಮ ಹೃದಯದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಕರ್ನಾಟಕದ ದೊಡ್ಮನೆ ಹುಡುಗನ ಹೆಸರಿನಲ್ಲಿ ಇದೀಗ ರಾಜ್ಯಾದ್ಯಂತ ಗಲ್ಲಿಗಲ್ಲಿಗಳಲ್ಲಿ ಸರ್ಕಲ್ ಸರ್ಕಲ್ ಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಪ್ಪು ಹೆಸರನ್ನು ನಾಮಕರಣ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಚೆನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಅಪ್ಪು ಅಭಿಮಾನಿಗಳು ಇದೀಗ ಚನ್ನಶೆಟ್ಟಿಕೊಪ್ಪ ವೃತ್ತಕ್ಕೆ ಪುನೀತ್…

Read More

ಡಿಸೆಂಬರ್ 4 ರ ಶನಿವಾರ ಆನಂದಪುರ ಸಮೀಪದ ಮುರುಘಾಮಠದಲ್ಲಿ ಅಧ್ಧೂರಿಯಾಗಿ ನೆರವೇರಲಿದೆ ಶರಣ ಸಾಹಿತ್ಯ ಭಾವೈಕ್ಯ ಸಮ್ಮೇಳನ ಹಾಗೂ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ

ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದಲ್ಲಿ ಇತಿಹಾಸದಲ್ಲೇ ಗೌರವಕ್ಕೆ ಪಾತ್ರವಾದಂತಹ ಸ್ಥಳ ಆನಂದಪುರ ಸಮೀಪದ ಮುರುಘಾಮಠ ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ವಾಗಿ ಮುಂದುವರೆದ ಮಠಗಳಲ್ಲಿ ಒಂದಾಗಿದ್ದು ಕೆಳದಿ  ಅರಸರ ಗೌರವ, ಪ್ರೀತಿ, ಪ್ರತಿಷ್ಠೆಗೆ ಪಾತ್ರವಾದಂತಹ ಮಠ ಇದಾಗಿದ್ದು ದಾನ ಧತ್ತಿಗಳನ್ನು ಪಡೆದುಕೊಂಡು ಬಂದಿದೆ.ಕಲೆ ಸಾಹಿತ್ಯ ಸಂಸ್ಕೃತಿಗೆ ತನ್ನದೇ ಆದಂತಹ ಪ್ರಾಮುಖ್ಯತೆ ನೀಡಿದ ಮಠ ಇದಾಗಿದೆ. ಇದೇ ಡಿಸೆಂಬರ್ 4 ರ ಶನಿವಾರದಂದು ಪ್ರತಿವರ್ಷದಂತೆ ಈ ವರ್ಷವೂ ಕೂಡ ಮುರುಘಾ ಮಠದಲ್ಲಿ ಶರಣ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನ ಕಾರ್ತಿಕ…

Read More