ರಿಪ್ಪನ್ ಪೇಟೆಯಲ್ಲಿ ನೂತನವಾಗಿ ಶುಭಾರಂಭಗೊಂಡ ಸ್ತ್ರೀ ಮತ್ತು ಮಕ್ಕಳ ಕ್ಲಿನಿಕ್ : ಮಾಜಿ ಶಾಸಕರಿಂದ ಉದ್ಘಾಟನೆ

ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಸ್ತ್ರೀ ಮತ್ತು ಮಕ್ಕಳ ಕ್ಲಿನಿಕ್ ಮತ್ತು ಪರಮೇಶ್ ಮೆಡಿಕಲ್ ಇಂದು ರಿಪ್ಪನ್ ಪೇಟೆಯ ತೀರ್ಥಹಳ್ಳಿ ರಸ್ತೆಯಲ್ಲಿ ಶುಭಾರಂಭಗೊಂಡಿದೆ.

ಇಂದು ಬೆಳಿಗ್ಗೆ ಸಾಗರದ ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರು ಉದ್ಘಾಟಿಸಿ ಶುಭ ಹಾರೈಸಿದರು.ಮಾಜಿ ಶಾಸಕ ಹಾಗೂ ವೈದ್ಯಕೀಯ ಕ್ಷೇತ್ರದ ಹಿರಿಯರಾದ ಡಾ ಜಿ ಡಿ ನಾರಾಯಣಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.
ರಿಪ್ಪನ್ ಪೇಟೆ ಹಾಗೂ ಸುತ್ತ ಮುತ್ತಲ ಭಾಗಗಳ ಜನರಿಗೆ ಅದರಲ್ಲೂ ಮಕ್ಕಳು ಹಾಗೂ ಮಹಿಳೆಯರಿಗೆ ಗುಣಮಟ್ಟದ ಆರೋಗ್ಯ ಕಾಳಜಿ ಸೇವೆಯು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ರಿಪ್ಪನ್ ಪೇಟೆಯಲ್ಲಿ ಧನ್ವಂತರಿ ಕ್ಲಿನಿಕ್ ನ್ನು ಆರಂಭಿಸಲಾಗಿದೆ ಎಂದು ವೈದ್ಯರಾದ ಡಾ ಗಾನವಿ ಕೆ ಟಿ ತಿಳಿಸಿದ್ದಾರೆ.

ಇಂದಿನ ಅನಿಶ್ಚಿತ ಹಾಗೂ ಸಂದಿಗ್ಧ ಪರಿಸ್ಥಿತಿಯಲ್ಲಿ ಉತ್ತಮ ಆರೋಗ್ಯ ಕಾಳಜಿ ಸೇವೆಯನ್ನು ಪಡೆಯುವುದು ಬಹುಮುಖ್ಯ ಅಗತ್ಯವಾಗಿದ್ದು, ಈ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ಈ ನೂತನ ಧನ್ವಂತರಿ ಕ್ಲಿನಿಕ್ ಬಹುಮುಖ್ಯ ಪಾತ್ರವನ್ನು ನಿರ್ವಹಿಸಲಿದೆ. ಈ ಮೂಲಕ ರಿಪ್ಪನ್ ಪೇಟೆ ಭಾಗದ ಜನತೆ ಗುಣಮಟ್ಟದ ಚಿಕಿತ್ಸೆಗಾಗಿ ಜಿಲ್ಲೆಯ ಕೇಂದ್ರ ಸ್ಥಾನಕ್ಕೆ ಪ್ರಯಾಣಿಸುವ ಅನಿವಾರ್ಯತೆ ತಪ್ಪಲಿದ್ದು, ರಿಪ್ಪನ್ ಪೇಟೆ ಪಟ್ಟಣದಲ್ಲಿಯೇ ಮಲ್ಟಿ ಡಿಸಿಪ್ಲಿನರಿ ಆರೋಗ್ಯ ಸೇವೆಗಳು ಲಭ್ಯವಾಗಲಿವೆ,” ಎಂದು ಹೇಳಿದರು.

ಧನ್ವಂತರಿ ಕ್ಲಿನಿಕ್ ನ ವೈದ್ಯರಾದ ಡಾ ಗಾನವಿ ಕೆ ಟಿ ರವರು ಮೂಲತಃ ರಿಪ್ಪನ್ ಪೇಟೆ ಸಮೀಪದ ಕಲ್ಲೂರು ಗ್ರಾಮದವರು ಇವರು ಶಿವಮೊಗ್ಗದ ಪ್ರಖ್ಯಾತ ಖಾಸಗಿ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಇದರ ಜೊತೆಯಲ್ಲಿಯೇ ರಿಪ್ಪನ್ ಪೇಟೆಯ ಸಹಕಾರಿ ಧುರೀಣ ಎಂಎಂ ಪರಮೇಶ್ ರವರ ಒಡೆತನದ ಪರಮೇಶ್ ಮೆಡಿಕಲ್ ಕೂಡ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ.

Leave a Reply

Your email address will not be published. Required fields are marked *