ಜಿಲ್ಲಾ ಸುದ್ದಿ:
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಮಾಡಿದ ಶಾಸಕ ಹರತಾಳು ಹಾಲಪ್ಪ !!!
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಶಾಸಕ ಹರತಾಳು ಹಾಲಪ್ಪ ಸಾಗರ ಹಾಗೂ ಹೊಸನಗರ ಕ್ಷೇತ್ರದ ಮರಳು ಲಾರಿ ಮಾಲೀಕರಿಂದ ಅಕ್ರಮವಾಗಿ ಕಮಿಶನ್ ಪಡೆದಿದ್ದಾರೆಂದು ಆರೋಪ ಮಾಡಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ತಾವು ಆಣೆ ಮಾಡಬೇಕು ಹಣವನ್ನು ಪಡೆದಿಲ್ಲವೆಂದು ಎಂದು ಸವಾಲು ಎಸೆದಿದ್ದರು. ಇದರ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಶಾಸಕ ಹರತಾಳು ಹಾಲಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ ನಾವು ಯಾವುದೇ ಮರಳು ಲಾರಿ ಮಾಲೀಕರಿಂದ ಕಮೀಷನ್ ಹಾಗೂ ಹಣ ಪಡೆದಿಲ್ಲವೆಂದು ಪ್ರಮಾಣ ಮಾಡಿದ್ದಾರೆ. ಬೇಳೂರು ಮಾಡಿರುವ ಆರೋಪಗಳು…
ಶಾಸಕ ಹರತಾಳು ಹಾಲಪ್ಪ ವಿರುದ್ದ ಬೇಳೂರು ಗೋಪಾಲಕೃಷ್ಣ ಕೆಂಡಾಮಂಡಲ : ನಾಳೆಯೇ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಸಿದ್ದ
ಕಳೆದ ಹದಿನೈದು ದಿನಗಳಿಂದ ಸಾಗರ ವಿಧಾನಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಆಣೆ ಪ್ರಮಾಣದ ಜಟಾಪಟಿ ಕೊನೆಯ ಹಂತ ತಲುಪಿದ್ದು ನಾಳೆ ಧರ್ಮಸ್ಥಳದಲ್ಲಿ ಅಂತಿಮವಾಗಬಹುದೇ ? ಇಂದು ಸಾಗರದಲ್ಲಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಪತ್ರೀಕಾ ಹೇಳಿಕೆ ನೀಡಿದ್ದಾರೆ. ಹರತಾಳು ಹಾಲಪ್ಪ ವಿರುದ್ದ ಬೇಳೂರು ಗೋಪಾಲಕೃಷ್ಣ ಹೇಳಿದ್ದಾದರು ಏನು?? ಶಾಸಕ ಹಾಲಪ್ಪನವರೆ ಏನ್ ಹೇಳಿದ್ರಿ ನಾನು ಪಲಾಯನವಾದಿ ಅಂತಾನ?? ಹೇಳೋಕೆ ಮೊದಲು ಯೋಚನೆ ಮಾಡಿ ಧರ್ಮಸ್ಥಳದ ಆಣೆಪ್ರಮಾಣಕ್ಕೆ ನೀವು ಮೋದಲು…
ಸಾಗರದಲ್ಲಿ ಪ್ರತಿಭಟನಾ ನಿರತ “ಬ್ಯಾಂಕ್ ಮಿತ್ರ” ಉದ್ಯೋಗಿ ಆತ್ಮಹತ್ಯೆಗೆ ಯತ್ನ : ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬ್ಯಾಂಕ್ ಮಿತ್ರ ಉದ್ಯೋಗಿಗಳ ಪ್ರತಿಭಟನೆ
ಸಾಗರ ತಾಲ್ಲೂಕಿನ ಕೆಳದಿಯಲ್ಲಿ ಬ್ಯಾಂಕ್ ಮಿತ್ರರ ಸಂಘ ಮತ್ತು ಮಾನವ ಹಕ್ಕುಗಳ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ, ದೀವರ ಯುವ ವೇದಿಕೆ ಸಹಯೋಗದೊಂದಿಗೆ ಕೆಳದಿ ಕೆನರಾ ಬ್ಯಾಂಕ್ ನಿಂದ ಬ್ಯಾಂಕ್ ಮಿತ್ರರನ್ನು ವಜಾಗೊಳಿಸಿರುವ ನೀತಿ ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಪ್ರತಿಭಟನಾ ನಿರತ ಬ್ಯಾಂಕ್ ಮಿತ್ರ ಉದ್ಯೋಗಿ ಶಕುಂತಲಾ ಎಂಬುವವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಕೂಡಲೇ ಸಹೋದ್ಯೋಗಿಗಳು ತಕ್ಷಣ ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿಲಾಗಿತ್ತು,ಈಗ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ…
ಹೊಂಬುಜ ಶ್ರೀಗಳಿಂದ ಮುಖ್ಯಮಂತ್ರಿ ಭೇಟಿ :
ಜೈನ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ರವರು ಇಂದು ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮನವಿ ಪತ್ರವನ್ನು ನೀಡಿದರು. ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ನಾಡಿನ ವ್ಯಾಪ್ತಿಯಲ್ಲಿ ಜೈನ ಬಾಂಧವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೊಂಬುಜ ಅತಿಶಯ ಮಹಾಕ್ಷೇತ್ರ ಜಗನ್ಮಾತೆಯ ದರ್ಶನಕ್ಕಾಗಿ ಆಗಮಿಸುತ್ತಾರೆ. ಭಕ್ತರಿಗೆ ಮೂಲಭೂತ ಸಮಸ್ಯೆಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವಂತೆ ಮತ್ತು ಸಮುದಾಯದ ಏಳಿಗೆಗೆ ಸ್ಪಂದಿಸುವಂತೆ…
ಅಕ್ರಮ ಮರಳು ಮಾಫ಼ಿಯಾದಲ್ಲಿ ಶಾಸಕ ಹರತಾಳು ಹಾಲಪ್ಪ ರವರ ಕೈವಾಡವಿರುವುದು ನೂರಕ್ಕೆ ನೂರರಷ್ಟು ಸತ್ಯ : ಬಿ ಜಿ ನಾಗರಾಜ್
ಹೊಸನಗರ : ಮಾಜಿ ಶಾಸಕರು ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣ ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಹೊಸನಗರ ತಾಲ್ಲೂಕಿನಲ್ಲಿ ಮರಳು ಮಾಫೀಯ ನಡೆಯುತ್ತಿದೆ ಅದಕ್ಕೆ ಸಾಗರ – ಹೊಸನಗರ ತಾಲ್ಲೂಕಿನ ಹಾಲಿ ಶಾಸಕರಾಗಿರುವ ಹರತಾಳು ಹಾಲಪ್ಪರವರ ಕೈವಾಡವಿದೆ ಎಂದು ಹೇಳಿರುವುದು ಸತ್ಯ ಸಂಗತಿಯಾಗಿದೆ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ನಾಗರಾಜ್ ಹೇಳಿದರು. ಇಂದು ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಮರಳು ಗಣಿಗಾರಿಕೆ ಮಾಡುವ ಗುತ್ತಿಗೆದಾರರು ಅಥವಾ ಮರಳು…
ಶಿವಮೊಗ್ಗ ವಿಮಾನ ನಿಲ್ದಾಣ ಶೀಘ್ರದಲ್ಲೇ ಲೋಕಾರ್ಪಣೆ : ಸಂಸದ ಬಿ ವೈ ರಾಘವೇಂದ್ರ
ಶಿವಮೊಗ್ಗ ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಾದ ವಿಮಾನ ನಿಲ್ದಾಣವು ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದ 2ನೇ ಅತಿ ಉದ್ದದ ರನ್ ವೇ ಹೊಂದಿರುವಂತ ವಿಮಾನ ನಿಲ್ದಾಣ ಇದಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಸಂಸದ ಬಿ.ವೈ.ರಾಘವೇಂದ್ರ, ಇಂದು ಕೇಂದ್ರ ನಾಗರಿಕ ವಿಮಾನ ಖಾತೆಯ ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ ಇವರನ್ನು ಭೇಟಿ ಮಾಡಿದ್ದೇನೆ. ಶಿವಮೊಗ್ಗ ವಿಮಾನ ನಿಲ್ದಾಣ ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ, ಇದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದ ಎರಡನೇ ಅತಿ…
ಸಮಯಕ್ಕೆ ಸರಿಯಾಗಿ ಸಿಗದ ಆಂಬುಲೆನ್ಸ್ : 45 ದಿನದ ಮಗು ಸಾವು
ತುಮರಿ ಗ್ರಾಮ ಎಂಬ ಮಾನವ ನಿರ್ಮಿತ ದ್ವೀಪದಲ್ಲಿ 108 ಅವ್ಯವಸ್ಥೆ, ಹೊಸ ಆಂಬುಲೆನ್ಸ್ ಬಂದರೂ ಸಕಾಲಕ್ಕೆ ತುರ್ತು ಆರೋಗ್ಯ ವಾಹನ ಸಿಗದೆ 45 ದಿನಗಳ ಮಗು ಉಸಿರಾಟ ಸಮಸ್ಯೆಯಿಂದ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಬ್ಯಾಕೋಡು ಸಮೀಪದ ಸಸಿಗೊಳ್ಳಿಯಲ್ಲಿ ನಡೆದಿದೆ. ಕಳೆದ ನಾಲ್ಕು ದಿನದಿಂದ ದ್ವೀಪದ ಹೊಸ ಆಂಬುಲೆನ್ಸ್ ಸೇವೆಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಸಸಿಗೊಳ್ಳಿ ಸಮೀಪದ ಎಲ್ದಮಕ್ಕಿ ಹಳ್ಳಿಯ ಗೀತಾ ಮತ್ತು ಉಮೇಶ್ ದಂಪತಿಗಳ 45 ದಿನಗಳ ಹಸುಗೂಸಿಗೆ ಉಸಿರಾಟ ತೊಂದರೆಯಾಗಿ 108 ಅಲಭ್ಯತೆಯಿಂದ ತಡವಾಗಿ…
ಹರತಾಳು ಗ್ರಾಪಂ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿ ಉಪಾಧ್ಯಕ್ಷೆ ಸೇರಿದಂತೆ 7 ಜನ ಸದಸ್ಯರು ಕೆಡಿಪಿ ಸಭೆಗೆ ಗೈರು :
ಹರತಾಳು ಗ್ರಾಮ ಪಂಚಾಯ್ತಿಯಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಗ್ರಾಪಂ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿ ಉಪಾಧ್ಯಕ್ಷರು ಮತ್ತು 6 ಜನ ಸದಸ್ಯರು ಗೈರಾಗಿದ್ದರು. 8 ಸದಸ್ಯ ಬಲದ ಹರತಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಲ್ಲಿ ಯೋಗೇಂದ್ರಪ್ಪ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಹಮ್ಮಿಕೊಳ್ಳಲಾಗಿತ್ತು ಅಧ್ಯಕ್ಷರಾದ ಕಲ್ಲಿ ಯೋಗೇಂದ್ರಪ್ಪ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ವಸತಿ ಮನೆ ಹಂಚಿಕೆಯಲ್ಲಿ ತಾರತಮ್ಯ ಮಾಡುವ ಮೂಲಕ ಸದಸ್ಯ ಸ್ಥಾನಕ್ಕೆ ಹಕ್ಕು ಚ್ಯುತಿ ತರುವ ಪ್ರಯತ್ನ ಮಾಡಿದ್ದಾರೆ .ನರೇಗಾ ಯೋಜನೆ ಮತ್ತು…
ಶಿವಮೊಗ್ಗದ ಬಾಪೂಜಿ ಕಾಲೇಜಿನಲ್ಲಿ ನಿನ್ನೆ ಕೇಸರಿ ಧ್ವಜ ಹಾರಿಸಿದ್ದ ಧ್ವಜಸ್ತಂಭದಲ್ಲಿ ಇವತ್ತು ರಾಷ್ಟ್ರಧ್ವಜ ಹಾರಿಸಿದ NSUI
ಶಿವಮೊಗ್ಗದ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಎನ್ಎಸ್ಯುಐ ಕಾರ್ಯಕರ್ತರು ರಾಷ್ಟ್ರ ಧ್ವಜಾರೋಹಣ ಮಾಡಿದರು. ನಿನ್ನೆ ಹಿಜಾಬ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಇಲ್ಲಿ ಕೇಸರಿ ಧ್ವಜ ಹಾರಿಸಲಾಗಿತ್ತು. ನಿನ್ನೆ(ಮಂಗಳವಾರ) ಕೇಸರಿ ಧ್ವಜ ಹಾರಿಸಿದ್ದ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಮುಂಜಾನೆ ಭಾರತದ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟದ (ಎನ್ಎಸ್ಯುಐ) ಕಾರ್ಯಕರ್ತರು ರಾಷ್ಟ್ರಧ್ವಜ ಹಾರಿಸಿದರು. ನಿನ್ನೆ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಕಲ್ಲು ತೂರಾಟವೂ ನಡೆದಿತ್ತು. ಈ…
ಸ್ಮಶಾನದ ಅವಶ್ಯವಿರುವ ಗ್ರಾಮಗಳಿಂದ ಅರ್ಜಿ ಆಹ್ವಾನ :
ಶಿವಮೊಗ್ಗ, ಫೆಬ್ರವರಿ 08: ಜಿಲ್ಲೆಯ ಗ್ರಾಮಗಳಲ್ಲಿ ಸ್ಮಶಾನದ ಅವಶ್ಯಕತೆ ಇದ್ದಲ್ಲಿ ಸರ್ಕಾರದ ಜಮೀನು ಲಭ್ಯವಿರುವ ಕಡೆ 2 ಎಕರೆ ವಿಸ್ತೀರ್ಣದ ಜಮೀನನ್ನು ಕಾಯ್ದಿರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಪ್ರತ್ಯಾಯೋಜಿಸಲಾಗಿದ್ದು, ಸ್ಮಶಾನದ ಅವಶ್ಯಕತೆವಿರುವ ಗ್ರಾಮದ ಸಾರ್ವಜನಿಕರು ಸಂಬಂಧಪಟ್ಟ ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಕಂದಾಯ ಇಲಾಖೆಯು ತಿಳಿಸಿದೆ. ಹಾಗೂ ಸರ್ಕಾರಿ ಜಮೀನು, ಕೆರೆ, ಕಟ್ಟೆ, ಕುಂಟೆ, ಹಳ್ಳ, ಸರೋವರ ಮತ್ತು ಇನ್ನಿತರೆ ಜಲಕಾಯ/ ಜಲಮೂಲಗಳೆಂದು ವರ್ಗೀಕೃತವಾದ ಜಮೀನುಗಳು, ಗ್ರಾಮ ನಕಾಶೆಯಲ್ಲಿ ರಸ್ತೆ, ಬೀದಿ, ಬಂಡಿದಾರಿ, ಓಣಿ ಅಥವಾ ಹಾದಿ…