ಜಿಲ್ಲಾ ಸುದ್ದಿ:
ಬಿಜೆಪಿಯ ಏಜೆಂಟ್ ರೀತಿ ಕಾರ್ಯ ನಿರ್ವಹಿಸುತ್ತಿರುವ ನಾಗೇಶ್ ಡೋಂಗ್ರೆ ಯನ್ನು ಕೂಡಲೇ ವಜಾ ಮಾಡಿ : ಗೋಪಾಲಕೃಷ್ಣ ಬೇಳೂರು
ಶಿವಮೊಗ್ಗ: ಸಹಕಾರ ಕ್ಷೇತ್ರದಲ್ಲಿ ನಾಗೇಶ್ ಡೋಂಗ್ರೆ ಎಂಬ ಭ್ರಷ್ಟ ಅಧಿಕಾರಿ ಸೇರಿಕೊಂಡಿದ್ದು, ಈತನನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ನಾಗೇಶ್ ಡೋಂಗ್ರೆ ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾನೆ. ಡಿಸಿಸಿ ಬ್ಯಾಂಕ್ ನ ನಿರ್ದೇಶಕರನ್ನು ವಜಾ ಮಾಡಲು ಹೊರಟಿದ್ದಾನೆ. ಹಾಲು ಒಕ್ಕೂಟದ ಚುನಾವಣೆಯಲ್ಲಿ ಮಾಡಲೇ ಇಲ್ಲ. ಈ ಹಿಂದೆ ಈತನ ಮೇಲೆ ಭ್ರಷ್ಟಾಚಾರದ ಆರೋಪ ಕೂಡ ಇದೆ. ಮುಂಬಡ್ತಿ…
ಕೇರಳದಿಂದ ಬಂದ 23 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೋವಿಡ್ ಪತ್ತೆ : ನಂಜಪ್ಪ ನರ್ಸಿಂಗ್ ಕಾಲೇಜ್ ಸೀಲ್ ಡೌನ್
ಶಿವಮೊಗ್ಗ: ನಂಜಪ್ಪ ನರ್ಸಿಂಗ್ ಕಾಲೇಜಿನ 23 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ವಿದ್ಯಾರ್ಥಿಗಳೆಲ್ಲರೂ ಕೇರಳದಿಂದ ವಾಪಸ್ಸಾಗಿದ್ದರು ಎಂದು ತಿಳಿದುಬಂದಿದೆ. ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಸೆಂಟರ್ನಲ್ಲಿ ಇರಿಸಲಾಗಿದೆ. ನಂಜಪ್ಪ ಲೈಫ್ ಕೇರ್ ಹಾಗೂ ನಂಜಪ್ಪ ನರ್ಸಿಂಗ್ ಕಾಲೇಜನ್ನು ಸೀಲ್ಡೌನ್ ಮಾಡಲಾಗಿದೆ. ಉಳಿದ ವಿದ್ಯಾರ್ಥಿಗಳ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ. ಜಿಲ್ಲೆಯಲ್ಲಿ ಶೂನ್ಯಕ್ಕೆ ಬಂದಿದ್ದ ಕೊರೊನಾ ಪ್ರಕರಣ ಇತ್ತೀಚಿನ ಪ್ರಕರಣಗಳಿಂದ ಏರಿಕೆಯಾಗುತ್ತಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ.
ಶಿವಮೊಗ್ಗದ ಕವಯತ್ರಿ ನಿತ್ಯಶ್ರೀ ಗೆ ಒಲಿದ ರಾಜ್ಯ ಮಟ್ಟದ ಉತ್ತಿಷ್ಟ ಸಾಧಕ ಪ್ರಶಸ್ತಿ :
ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಅನೇಕ ಕವಿ ಸಾಹಿತಿಗಳನ್ನು ನೀಡಿ ಕರ್ನಾಟಕ ರಾಜ್ಯದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದೆ. ಅದರಂತೆ ಶಿವಮೊಗ್ಗದ ಉದಯೋನ್ಮುಖ ಯುವ ಕವಯಿತ್ರಿ ಅಂಕಣಗಾರ್ತಿ, ಲೇಖಕಿ ಹಲವು ಜಿಲ್ಲೆಗಳ ಪತ್ರಿಕೆಯ ಬರಹಗಾರ್ತಿ ಕು. ನಿತ್ಯಶ್ರೀ ಆರ್ ಇವರಿಗೆ ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ “ಉತ್ತಿಷ್ಠ ಸಾಧಕ ರತ್ನ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಸುಜಾತಾ, ಗೌರಧ್ಯಕ್ಷರು ಶ್ರೀ…
ಶಿವಮೊಗ್ಗದ ಅಕ್ರಮ ಕಸಾಯಿಖಾನೆಗಳ ಮೇಲೆ ಪೊಲೀಸರ ಕಾರ್ಯಚರಣೆ :15 ಕೆಜಿ ಗೋಮಾಂಸ ವಶ :
ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ನಡೆದ ಅಕ್ರಮ ಗೋಸಾಗಾಣಿಕೆ ಹಾಗೂ ಗೋರಕ್ಷಕರ ಪ್ರತಿಭಟನೆ ಶಿವಮೊಗ್ಗ ಜಿಲ್ಲೆಯಲ್ಲಿ ಭರ್ಜರಿ ಸಂಚಲನ ಮೂಡಿಸಿದೆ. ಪೊಲೀಸರ ಕಾರ್ಯಾಚರಣೆಯಲ್ಲಿ ಅಕ್ರಮ ಕಸಾಯಿ ಖಾನೆಗಳನ್ನು ಬಂದ್ ಮಾಡಿಸಲಾಗಿದೆ. ಶಿವಮೊಗ್ಗದ ಎಲ್ಲಾ ಕಸಾಯಿ ಖಾನೆಗಳು ಅಕ್ರಮವಾಗಿದ್ದರೂ ಅವುಗಳು ಇದುವರೆಗೂ ರಾಜಕೀಯ ಪ್ರೇರಣೆಯಿಂದ ಎಗ್ಗಿಲ್ಲದೆ ನಡೆಯುತ್ತಿದ್ದವು. ದೊಡ್ಡಪೇಟೆ ಪೊಲೀಸರು ಅಕ್ರಮ ಕಸಾಯಿ ಖಾನೆಗಳ ಮೇಲೆ ದಾಳಿ ನಡೆಸುತ್ತಿದ್ದಂತೆ ನಗರದ ಇತರೆ ಅಕ್ರಮ ಕಸಾಯಿ ಖಾನೆಗಳು ಬಂದ್ ಆಗಿವೆ. ಇಲಿಯಾಸ್ ನಗರ 100 ಅಡಿ ರಸ್ತೆಯಲ್ಲಿರುವ ಎಸ್,ಎಫ್, ಕಾರ್…
ಗೃಹಸಚಿವರ ತವರೂರಲ್ಲಿ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆ ಮತ್ತು ರಸ್ತೆ ತಡೆ: ಗೋಕಳ್ಳರ ಹೆಡೆಮುರಿ ಕಟ್ಟುವಂತೆ ಆಗ್ರಹ
ತೀರ್ಥಹಳ್ಳಿ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರವಾದ ತೀರ್ಥಹಳ್ಳಿಯಲ್ಲಿ ಇಂದು ಹಿಂದೂ ಪರ ಸಂಘಟನೆಗಳು ಗೋ ಕಳ್ಳರ ಬೆನ್ನಟ್ಟಿ ಹಲ್ಲೆಗೊಳಗಾದ ಕಾರ್ಯಕರ್ತರು ಆಸ್ಪತ್ರೆಗೆ ಸೇರಿದ್ದು ಈ ರೀತಿ ಮುಂದೆ ಆಗಬಾರದು ಎಂಬ ಕಾರಣಕ್ಕೆ ರಸ್ತೆ ತಡೆ ನಡೆಸಿ ಹೋರಾಟ ನಡೆಸಿದ್ದು ಇದು ಇಡೀ ಮಲೆನಾಡಲ್ಲಿ ಸಂಚಲನ ಮೂಡಿಸಿದೆ ಘಟನೆಯನ್ನು ಖಂಡಿಸಿ ಹಾಗೂ ಕೆಲವು ಪೊಲೀಸರ ವಿರುದ್ಧವೇ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿ ಬೃಹತ್ ಹೋರಾಟ ಮಾಡಲಾಯಿತು. ಭಜರಂಗ ದಳ, ವಿಶ್ವ ಹಿಂದೂ ಪರಿಷತ್…
ಅನುದಾನ ಕೊರತೆ: ಗೃಹ ಸಚಿವರ ತವರು ಕ್ಷೇತ್ರದಲ್ಲಿಯೇ ವಿಧಾನ ಪರಿಷತ್ ಚುನಾವಣೆ ಬಹಿಷ್ಕಾರ
ತೀರ್ಥಹಳ್ಳಿ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರದ ಗ್ರಾಮ ಪಂಚಾಯತಿ ಸದಸ್ಯರು ವಿಧಾನ ಪರಿಷತ್ ಚುನಾವಣೆ ಬಹಿಷ್ಕರಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ನಾಲೂರು ಕೊಳಿಗೆ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಏಳು ಜನರು ಈ ಬಾರಿ ಮತದಾನ ಮಾಡದೆ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಾಲೂರು ಕೊಳಿಗೆ ಗ್ರಾಮ ಪಂಚಾಯತಿಗೆ ಈವರೆಗೆ 1.68 ಕೋಟಿ ರೂಪಾಯಿ ಸರ್ಕಾರದ ಅನುದಾನ ಬಂದಿಲ್ಲ. ನಾಲೂರು ಕೊಳಿಗೆ ವ್ಯಾಪ್ತಿಯ ಮೂರು ಮರಳು ಕ್ವಾರಿಗಳು ಸರ್ಕಾರಕ್ಕೆ ಕೋಟಿಗಟ್ಟಲೆ ಆದಾಯ…
ತೀರ್ಥಹಳ್ಳಿ ದನಗಳ್ಳರ ಹಿಟ್ & ರನ್ ನಿಂದ ಇಬ್ಬರು ಯುವಕರಿಗೆ ಗಂಭೀರ ಗಾಯ!! ಆಸ್ಪತ್ರೆಗೆ ಆಗಮಿಸಿದ ಗೃಹಸಚಿವ ಆರಗ ಜ್ಞಾನೇಂದ್ರ:
ತೀರ್ಥಹಳ್ಳಿ: ಮಲೆನಾಡ ಭಾಗದಲ್ಲಿ ದನಗಳ್ಳರ ಹಾವಳಿ ಮಿತಿ ಮೀರಿದ್ದು ಅದರಲ್ಲೂ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜೆಲ್ಲೆಯಲ್ಲಿ ದನ ಕಳ್ಳರ ಕೇಸ್ ದಾಖಲಾಗುತ್ತಲೇ ಇರುತ್ತಿದೆ. ತೀರ್ಥಹಳ್ಳಿಯ ಮೇಳಿಗೆಯಿಂದ ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುತ್ತಿರುವ ಕಳ್ಳರನ್ನು ತಡೆಯಲು ಯತ್ನಿಸಿದ ಇಬ್ಬರು ಯುವಕರ ಮೇಲೆ ಪಿಕ್ ಅಪ್ ವಾಹನವನ್ನು ಹತ್ತಿಸಿದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ತಾಲೂಕಿನ ಮೇಳಿಗೆಯಿಂದ ಅಪ್ ವಾಹನವನ್ನು ಫಾಲೋ ಮಾಡಿದ ಯುವಕರ ಮೇಲೆ ಬೆಜ್ಜವಳ್ಳಿಯಲ್ಲಿ ಪಿಕ್…
ಕಾಲೇಜು ವೇಳಾಪಟ್ಟಿ ಬದಲಾವಣೆಗೆ ವಿರೋದಿಸಿ ಸಾಗರ ಪದವಿ ವಿದ್ಯಾರ್ಥಿಗಳಿಂದ ದಿಡೀರ್ ಪ್ರತಿಭಟನೆ : ಕೂಡಲೇ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿ ಒಕ್ಕೂಟದ ಸಿ ಎಂ ಚಿನ್ಮಯ್ ಆಗ್ರಹ
ಸಾಗರ : ನಗರದ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಇಂದು ದಿಢೀರ್ ಪ್ರತಿಭಟನೆ ನಡೆಸಿದರು. ಕಾಲೇಜು ವೇಳಾಪಟ್ಟಿ ಬದಲಾವಣೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳ ಜೊತೆ ಚರ್ಚಿಸದೆ ಏಕಾಏಕಿ ತಿರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕಾಲೇಜಿನ ಎದುರು ಭಾಗದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸ್ಥಳಕ್ಕೆ ಶಾಸಕ ಹಾಲಪ್ಪ ಭೇಟಿ ನೀಡುವಂತೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಲೇಜು ವೇಳಾಪಟ್ಟಿ ಬದಲಾವಣೆ ಯನ್ನು ವಿದ್ಯಾರ್ಥಿಗಳ ಜೊತೆಗೆ ಸಮಾಲೋಚನೆ…
ಕರ್ನಾಟಕ ಕಾನೂನು ವಿವಿ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸುವಂತೆ ಸಿಬಿಆರ್ ರಾಷ್ಟ್ರೀಯ ಕಾನೂನು ವಿದ್ಯಾರ್ಥಿಗಳಿಂದ ಆಗ್ರಹ :
ಶಿವಮೊಗ್ಗ: ಕರ್ನಾಟಕ ಕಾನೂನು ವಿವಿ ನಿಗಧಿತ ವೇಳಾಪಟ್ಟಿಯಂತೆ ಪರೀಕ್ಷೆಗಳನ್ನು ನಡೆಸದೇ ಇರುವುದರಿಂದಾಗಿ ಮೂರು ಮತ್ತು ಐದು ವರ್ಷದ ಕಾನೂನು ವಿದ್ಯಾರ್ಥಿಗಳು ಕೋರ್ಸ್ ಮುಗಿಸಲು ಒಂದು ವರ್ಷ ಹೆಚ್ಚುವರಿಯಾಗಿ ಓದಬೇಕಾಗುತ್ತದೆ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಇಂದು ಸಿ.ಬಿ.ಆರ್. ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಮತ್ತು ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದರು. 2020ನೇ ಸಾಲಿನ ಡಿಸೆಂಬರ್ ನಲ್ಲಿ ನಿಗಧಿಯಾಗಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಕೋವಿಡ್ ಕಾರಣದಿಂದಾಗಿ 2021ರ ಮಾರ್ಚ್ನನಲ್ಲಿ…
ಕಾರು ಡಿಕ್ಕಿಯಾಗಿ ಬಾಲಕ ಸಾವು :ನಡು ರಸ್ತೆಯಲ್ಲೆ ಶವವಿಟ್ಟು ಪ್ರತಿಭಟನೆ ಮಾಡಿದ ಗ್ರಾಮಸ್ಥರು
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಹೆಚ್ಚುತ್ತಿದ್ದು ವಾಹನ ವೇಗ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕುಂಸಿ ಗ್ರಾಮಸ್ಥರು ಗುರುವಾರ ಅಪಘಾತದಿಂದ ಮೃತಪಟ್ಟ ಬಾಲಕನ ಶವವಿಟ್ಟು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ಸಾಗರ ಕಡೆಯಿಂದ ಬರುತ್ತಿದ್ದ ಕಾರು ಶಾಲೆಯಿಂದ ವಾಪಸು ಮನೆಗೆ ಬರುತ್ತಿದ್ದ ಕುಂಸಿ ಗ್ರಾಮದ ಚಿಕ್ಕಣ್ಣ ದಂಪತಿಗಳ ಪುತ್ರ 9 ವರ್ಷದ ಬಾಲಕ ವೇಣುಗೋಪಾಲ್ಗೆ ಡಿಕ್ಕಿ ಹೊಡೆದಿತ್ತು. ವೇಗವಾಗಿ ಬಂದ ಕಾರು ಬಾಲಕನಿಗೆ ಡಿಕ್ಕಿ ಹೊಡೆದ ನಂತರ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಹಾಗೂ…