ಜಿಲ್ಲಾ ಸುದ್ದಿ:
ಸಾಗರ ಉಪವಿಭಾಗಧಿಕಾರಿ ಡಾ.ಎಲ್ ನಾಗರಾಜ್ ವರ್ಗಾವಣೆ :
ಸಾಗರ ತಾಲ್ಲೂಕು ಉಪವಿಭಾಗಧಿಕಾರಿ ಎಲ್ ನಾಗರಾಜ್ ರವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸಾಗರ ಉಪವಿಭಾಗಧಿಕಾರಿಯಾಗಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಎಲ್. ನಾಗರಾಜ್ ರವರನ್ನು ಸರ್ಕಾರ ದಿಡೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಇನ್ನೂ ಯವುದೇ ಸ್ಥಳವನ್ನು ಸೂಚಿಸಿಲ್ಲ. ನೂತನವಾಗಿ ಸಾಗರ ಉಪವಿಭಾಗಧಿಕಾರಿಯಾಗಿ ರಾಘವೇಂದ್ರ ಬಿ. ಜಗಲಾಸರ್ ರವರು ಅಧಿಕಾರ ಸ್ವೀಕರಿಸಲಿದ್ದಾರೆ.ಇವರು ಧಾರವಾಡ ತಾಲೂಕ್ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಈಗ ಸಾಗರ ಉಪವಿಭಾಗಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ.
ಕನ್ನಡದ ಪ್ರಖ್ಯಾತ ನಟ ದಿಗಂತ್ ಸ್ಥಿತಿ ಗಂಭೀರ : ಕೆಲವೇ ಗಂಟೆಗಳಲ್ಲಿ ಗೋವಾದಿಂದ ಬೆಂಗಳೂರಿಗೆ ಏರ್ ಲಿಫ್ಟ್
ಮುಂಗಾರು ಮಳೆ, ಗಾಳಿಪಟ, ಮನಸಾರೆ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ನಟ ದಿಗಂತ್ ಅವರಿಗೆ ಚಿತ್ರೀಕರಣದ ವೇಳೆ ಅಪಘಾತವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ದಿಗಂತ್ ಗೋವಾದಲ್ಲಿ ಪ್ರವಾಸದಲ್ಲಿದ್ದಾಗ ಈ ಘಟನೆ ನಡೆದಿದ್ದು, ಗೋವಾದಲ್ಲಿ ನಟ ದಿಗಂತ್ ತನ್ನ ಆಪ್ತರು ಹಾಗೂ ಗೆಳೆಯರೊಡನೆ ಪ್ರವಾಸಕ್ಕೆ ತೆರಳಿದ್ದರು. ಟ್ರೆಕ್ಕಿಂಗ್ ಸೇರಿದಂತೆ ಇನ್ನಿತರೆ ಸಾಹಸ ಕ್ರೀಡೆಗಳಲ್ಲಿ ಅವರು ತೊಡಗಿಕೊಂಡಿದ್ದರು. ಸಾಹಸ ಕ್ರೀಡೆಗಳನ್ನು ಆಡುವ ವೇಳೆ ಅಚಾನಕ್ಕಾಗಿ ದಿಗಂತ್‌ರ ಕತ್ತಿಗೆ ತೀವ್ರ ಪೆಟ್ಟಾಗಿದೆ…
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ಅಮೃತ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ.
ರಿಪ್ಪನ್ ಪೇಟೆ: ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಅತ್ಯುನ್ನತ ಶ್ರೇಣಿ ಪಡೆದ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನ 31 ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು ಉಪನ್ಯಾಸಕ ವೃಂದ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯವರಿಂದ ಗೌರವಿಸಿ ಸನ್ಮಾನಿಸಿ ಅಭಿನಂದಿಸಲಾಯಿತು. ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇಂದು ನಡೆದ ಸರಳ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಮಹ್ಮದ್ ನಜ್ ಹತ್ ಉಲ್ಲಾ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ …
ಕನ್ನಡದ ಪ್ರಖ್ಯಾತ ನಟ,ನಿರ್ದೇಶಕ ರಿಷಬ್ ಶೆಟ್ಟಿ ರವರ ನೂತನ ಚಲನಚಿತ್ರಕ್ಕೆ ನಾಳೆ ಶಿವಮೊಗ್ಗದಲ್ಲಿ ಆಡಿಷನ್ :
ಶಿವಮೊಗ್ಗ: ಚಿತ್ರನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ರೊಡಕ್ಷನ್ಸ್ ನ ನೂತನ ಚಲನಚಿತ್ರಕ್ಕೆ ಕಲಾವಿದರ ಆಯ್ಕೆ ಮಾಡಿಕೊಳ್ಳಲು ಶಿವಮೊಗ್ಗ ನಗರದಲ್ಲಿ ಆಡಿಷನ್ ನಡೆಯಲಿದೆ. ಜೂ.21ರ ಮಂಗಳವಾರ ನಾಳೆ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಪಕ್ಕದ ಕೋಟೆ ಬಯಲು ರಂಗಮಂದಿರದಲ್ಲಿ ನಡೆಯುವುದು. 5 ರಿಂದ 10 ವರ್ಷದೊಳಗಿನ ಬಾಲ ಕಲಾವಿದರು, 20ರಿಂದ 30, 50 ರಿಂದ 65 ವರ್ಷದ ಪುರುಷರು ಪೋಷಕ ಪಾತ್ರಕ್ಕೆ ಹಾಗೂ 20 ರಿಂದ 35 ವರ್ಷದ ವಯಸ್ಸಿನ…
ಯೋಗ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಹಳ್ಳಿಗಾಡಿನ ಪ್ರತಿಭೆ : ಗರ್ತಿಕೆರೆ ಗ್ರಾಮದ ಕಾವ್ಯಾ ಳಿಗೆ ಒಲಿದ ರಾಷ್ಟ್ರ ಮಟ್ಟದ ಬೆಳ್ಳಿ ಪದಕ
ನವದೆಹಲಿಯಲ್ಲಿ ಸೋಮವಾರ ಮುಕ್ತಾಯಗೊಂಡ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಕಾವ್ಯ ಕೆ ಎನ್ ದ್ವಿತೀಯ ಸ್ಥಾನವನ್ನು ಗಳಿಸುವ ಮೂಲಕ ಬೆಳ್ಳಿ ಪದಕವನ್ನು ಗಳಿಸಿದ್ದು ಕರ್ನಾಟಕ ರಾಜ್ಯದ ಹೆಸರನ್ನು ಮೆರೆದಿದ್ದಾಳೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಕಾವ್ಯ ಕೆ ಎನ್ ಮೂರು ಬಾರಿ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಈ ಪ್ರತಿಭಾವಂತೆ ರಾಷ್ಟ್ರ ಮಟ್ಟದಲ್ಲಿ 5 ಬಾರಿ ಪ್ರಥಮ ಸ್ಥಾನವನ್ನು, 4…
ರಿಪ್ಪನ್ ಪೇಟೆ ಸುತ್ತಮುತ್ತ ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿಂದ ಆಕಾಶವನ್ನು ನೋಡುತ್ತಿರುವ ಮೊಬೈಲ್ ಗ್ರಾಹಕರುಗಳು….!ಸಿಡಿದೆದ್ದು ಮೊಬೈಲ್ ಸೇವಾ ಕೇಂದ್ರಗಳಿಗೆ ಬೀಗ ಜಡಿಯಲು ಸನ್ನದ್ಧರಾಗುತ್ತಿರುವ ಗ್ರಾಹಕರುಗಳು..!!???
ರಿಪ್ಪನ್ ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರಮುಖ ಪಟ್ಟಣಗಳಲ್ಲಿ ಒಂದಾದ ರಿಪ್ಪನ್ ಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮದ ಮೊಬೈಲ್ ಗ್ರಾಹಕರುಗಳು ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಆಕಾಶವನ್ನು ನೋಡುತ್ತಿದ್ದಾರೆ. ಗ್ರಾಹಕರ ಸಮಸ್ಯೆಗೆ ಸ್ಪಂದಿಸದ ಸೇವಾ ಕೇಂದ್ರಗಳು : ರಿಪ್ಪನ್ ಪೇಟೆ ಯಲ್ಲಿ ಖಾಸಗಿ ಮೊಬೈಲ್ ಕಂಪನಿಗಳಾದ ಏರ್ ಟೆಲ್, ಜಿಯೋ ಸೇರಿದಂತೆ ಬಿಎಸ್ಎನ್ಎಲ್ ಸೇವಾ ಕೇಂದ್ರಗಳು ಇದ್ದರೂ ಸಹ ದಿನನಿತ್ಯ ನೂರಾರು ಬಾರಿ ಮೊಬೈಲ್ ನೆಟ್ವರ್ಕ್ ಗಳ ಸಮಸ್ಯೆಗಳು ಉಂಟಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಸೇವಾಕೇಂದ್ರದ…
ಪೋಸ್ಟ್ ಮ್ಯಾನ್ ನ್ಯೂಸ್ ವರದಿಯ ಫಲಶ್ರುತಿ : ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಕೊನೆಗೂ ಬಂತು108 ಆಂಬ್ಯುಲೆನ್ಸ್…..!?
ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಹೆಗ್ಗಳಿಕೆ ಪಡೆದುಕೊಂಡಿರುವ ರಿಪ್ಪನ್ ಪೇಟೆ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ 108 ಆಂಬ್ಯುಲೆನ್ಸ್ ಇಲ್ಲದೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳು, ಮಹಿಳೆಯರು, ಅನಾರೋಗ್ಯವನ್ನು ಹೊಂದಿದ ಹಿರಿಯ ನಾಗರಿಕರುಗಳು ಹೈರಾಣಾಗಿ ಹೋಗಿದ್ದರು. ಹಲವಾರು ಬಾರಿ ಗ್ರಾಮಸ್ಥರು ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ 108 ವಾಹನ ಸೌಲಭ್ಯ ನೀಡುವಂತೆ ಮನವಿ ಸಲ್ಲಿಸಿದ್ದರು ಸಹ ವಾಹನದ ಸೌಲಭ್ಯವನ್ನು…
ಹೊಸನಗರ ತಾಲೂಕಿನ ಕುಗ್ರಾಮ ನಿಟ್ಟೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಪಿಯುಸಿ ಯಲ್ಲಿ ಶೇಕಡ 91.93 ಫಲಿತಾಂಶ.
ನಿಟ್ಟೂರು: ಗ್ರಾಮೀಣ ಪ್ರದೇಶದಲ್ಲಿ ಪ್ರತಿಭೆಗಳಿದ್ದಾರೆ ಆದರೆ ಅವಕಾಶಗಳಿಲ್ಲ. ಉತ್ತಮ ಅವಕಾಶ ದೊರೆತರೆ ಸಾಧನೆಯನ್ನು ಮಾಡುತ್ತಾರೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಹೊಸನಗರ ತಾಲೂಕಿನ ಕುಗ್ರಾಮದಲ್ಲಿರುವ ಸಂಪೆಕಟ್ಟೆ ನಿಟ್ಟೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2021 -22 ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಸ್ನೇಹಮಯಿ ಮತ್ತು ಕರ್ತವ್ಯ ನಿಷ್ಠೆ ಇರುವ ಉಪನ್ಯಾಸಕರುಗಳಿದ್ದು ಒಳ್ಳೆಯ ಮಾರ್ಗದರ್ಶನ ನೀಡಿದರೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡುತ್ತಾರೆ ಎನ್ನುವುದಕ್ಕೆ ನಿಟ್ಟೂರು ಸರಕಾರಿ…
ಪಿಯುಸಿ ಪಲಿತಾಂಶ 2022 : ಶಿವಮೊಗ್ಗ ಜಿಲ್ಲೆಯ ಟಾಪರ್ಸ್ ಗಳ ಪಟ್ಟಿ ಇಲ್ಲಿದೆ ನೋಡಿ
ಪಿಯುಸಿ ಪರೀಕ್ಷೆ ಫಲಿತಾಂಶ ಆನ್ ಲೈನ್ ನಲ್ಲಿ ಪ್ರಕಟವಾಗಿದ್ದು, ಶಿವಮೊಗ್ಗದಲ್ಲಿ 66.15% ಫಲಿತಾಂಶ ಬಂದಿರುವ ಬೆನ್ನಲ್ಲೇ ಜಿಲ್ಲೆಯ ಟಾಪರ್ಸ್ ಗಳ ಪಟ್ಟಿ ಪ್ರಕಟಗೊಂಡಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿ ಒಟ್ಟು 19033 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇದರಲ್ಲಿ 12590 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅದರಂತೆ ಪ್ರತಿ ಮೂರು ವಿಭಾಗದಲ್ಲಿ 10 ಜನ ಟಾಪರ್ಸ್ ಎಂದು ಗುರುತಿಸಲಾಗಿದೆ. ಕಲಾ ವಿಬಾಗ : ವಾಣಿಜ್ಯ ವಿಭಾಗ : ವಿಜ್ಞಾನ ವಿಭಾಗ :
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಳ್ಳಿ ಮಕ್ಕಳ ಅದ್ಭುತ ಸಾಧನೆ…ವಿಜ್ಞಾನ ವಿಭಾಗದಲ್ಲಿ 586 ಅಂಕ ಪಡೆದ ವಿದ್ಯಾರ್ಥಿ
ರಿಪ್ಪನ್ ಪೇಟೆ : ಈ ಬಾರಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಳ್ಳಿಗಾಡಿನ ಪ್ರದೇಶದ ವಿದ್ಯಾರ್ಥಿಗಳು ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿಜ್ಞಾನ ವಿಭಾಗದ ವಿದ್ಯಾರ್ಥಿ ಹರ್ಷ 586 ಅಂಕಗಳನ್ನು ಪಡೆದಿದ್ದು. ಅಮೃತ ಸರಕಾರಿ ಪದವಿ ಪೂರ್ವ ಕಾಲೇಜು ಶೇಕಡ 84 ಫಲಿತಾಂಶವನ್ನು ಪಡೆದರೆ. ಸರ್ಕಾರಿ ಪದವಿ ಪೂರ್ವ ಕಾಲೇಜು ರಿಪ್ಪನ್ ಪೇಟೆ 75.37 ಫಲಿತಾಂಶ ಪಡೆದಿದೆ. ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ …