ಜಿಲ್ಲಾ ಸುದ್ದಿ:
ಶಾಸಕರ ರೌಡಿ ಬೆಂಬಲಿಗರ ವಿರುದ್ದ ಕ್ರಮ ಕೈಗೊಳ್ಳಿ,ಸಾಗರ ಕ್ಷೇತ್ರದ ಮರ್ಯಾದೆ ಉಳಿಸಿ : ಗೋಪಾಲಕೃಷ್ಣ ಬೇಳೂರು
ಸಾಗರದಲ್ಲಿ ಬಿಜೆಪಿ ಪಕ್ಷದ ಯುವಮೋರ್ಚಾ ಅಧ್ಯಕ್ಷ ಅರುಣ್ ಕುಗ್ವೆ ರವರನ್ನು ಬಂಧಿಸುವಂತೆ ಒತ್ತಾಯಿಸಿ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ಮಾತನಾಡಿದ ಗೋಪಾಲಕೃಷ್ಣ ಬೇಳೂರು ಸಾಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇತ್ತೀಚೆಗೆ ಭೂಮಾಫಿಯ ಹೆಚ್ಚಾಗಿದ್ದು ಆಡಳಿತರೂಢ ಬಿಜೆಪಿ ಪಕ್ಷದ ಮುಖಂಡರುಗಳು ತಮ್ಮ ಶಾಸಕರ ಕುಮ್ಮಕ್ಕಿನಿಂದ ಭೂ ಮಾಫಿಯಾ ದಂಧೆ ಮಾಡುತ್ತಿದ್ದು ಇದರ ಬಗ್ಗೆ ಸಾಮಾನ್ಯ ಜನರು ಪ್ರಶ್ನೆ ಮಾಡಿದಲ್ಲಿ ಅಂಥವರ ಮೇಲೆ ಮಾರಣಾಂತಿಕ ಹಲ್ಲೆ…
ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವರದಿಯ ಫಲಶ್ರುತಿ : ರಾಷ್ಟ್ರೀಯ ಹಾಕಿ ಕ್ರೀಡಾಪಟು ಪೂಜಿತ ಗೌಡಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ರವರಿಂದ ಸನ್ಮಾನ
ಮಲೆನಾಡಿನ ಹೆಮ್ಮೆಯ ಪುತ್ರಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಪಟ್ಟಣದ ಬರುವೆ ಗ್ರಾಮದ ರಾಷ್ಟ್ರ ಮಟ್ಟದ ಹಾಕಿ ಕ್ರೀಡಾಪಟು ಪೂಜಿತ ಗೌಡಳಿಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸ್ವಗೃಹದಲ್ಲಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಕೂಟದಲ್ಲಿ 19 ಬಾರಿ ಭಾಗವಹಿಸಿದ ಪೂಜಿತ ಗೌಡ ಇದೇ ತಿಂಗಳು ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಖೇಲ್ ಇಂಡಿಯಾ ಹಾಕಿ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಹಾಕಿ ತಂಡದಿಂದ ಭಾಗವಹಿಸಿ ಅದ್ವಿತೀಯ…
ಬೆಳ್ಳೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ
ರಿಪ್ಪನ್‌ಪೇಟೆ : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿಯಲ್ಲಿ ಶುಕ್ರವಾರ ಬೆಳ್ಳೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ರವರು ಕಾರ್ಯಕ್ರಮ ಉದ್ಘಾಟಿಸಿ ನಾಗರಿಕರಿಂದ ಮನವಿ ಸ್ವೀಕರಿಸಿ ಅಹವಾಲುಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಬಕಾರಿ ,ಕೃಷಿ ,ಅರಣ್ಯ ,ಕಂದಾಯ ಇಲಾಖೆಗೆ ಸಂಬಂಧಪಟ್ಟ ದೂರುಗಳು ಅಧಿಕವಾಗಿದ್ದವು. ಸಂಧ್ಯಾ ಸುರಕ್ಷಾ, ಅಂಗವಿಕಲ, ವಿಧವಾ ವೇತನ ಇವುಗಳಿಗೆ ಸಂಬಂಧಪಟ್ಟಂತೆ ಸ್ಥಳದಲ್ಲಿ ಮಂಜೂರಾತಿ ಆದೇಶ ನೀಡಿದರು. ಗ್ರಾಮೀಣ ಪ್ರದೇಶದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಅವ್ಯಾಹತವಾಗಿ ನಡೆಯುತ್ತಿರುವ ಮದ್ಯ ಮಾರಾಟದ ಬಗ್ಗೆ…
ರಾಜಕೀಯ ನಾಯಕರು ಪಕ್ಷ ಕಟ್ಟೋ ಕೆಲಸ ಬಿಟ್ಟು – ಊರು ಕಟ್ಟೋ ಕೆಲಸ ಮಾಡಲಿ : ಜೆಡಿಎಸ್ ಯುವ ಮುಖಂಡ ಯಡೂರು ರಾಜಾರಾಮ್
ರಿಪ್ಪನ್‌ಪೇಟೆ: ರಾಜಕೀಯ ಎಂಬುದು ರಾಷ್ಟ್ರೀಯ ಪಕ್ಷಗಳಲ್ಲಿ ಕೇವಲ ವೈಟ್ ಕಾಲರ್ ನಾಯಕರಿಗೆ ಸೀಮಿತವಾಗಿದ್ದು, ಬರೀ ಪಕ್ಷ ಸಂಘಟನೆಯೇ ಇವರ ದ್ಯೇಯವಾಗಿದೆ. ಇದರಿಂದ ಊರು ಅಭಿವೃದ್ಧಿ ಕಾಣಲಿಲ್ಲ ಎಂದು ತೀರ್ಥಹಳ್ಳಿಯ ಮುಂದಿನ ವಿಧಾನ ಸಭಾ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಜೆಡಿಎಸ್ ಯುವ ಮುಖಂಡ ಯಡೂರು ರಾಜಾರಾಮ್ ಅಸಮದಾನ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜವಾದದ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ ಸಮಾಜವಾದಿ ಚಿಂತಕ ಗೋಪಾಲಗೌಡ ರವರ ಹೆಸರು ದುರ್ಬಳಕೆ ಮಾಡಿಕೊಂಡು ಎಲ್ಲಾ ರಾಷ್ಟ್ರೀಯ ಪಕ್ಷದ ರಾಜಕಾರಣಿಗಳು ಅಧಿಕಾರದ…
ಹೊಸನಗರ ಎಪಿಎಂಸಿ ವಿಲೀನ ಪ್ರಕ್ರಿಯೆ ಕೈ ಬಿಡಲಾಗಿದೆ : ಶಾಸಕ ಹರತಾಳು ಹಾಲಪ್ಪ ಸ್ಪಷ್ಟನೆ
ಹೊಸನಗರ ಎಪಿಎಂಸಿ ಮಾರುಕಟ್ಟೆಯನ್ನು ಸಾಗರ ಎಪಿಎಂಸಿಯೊಂದಿಗೆ ಸಂಯೋಜಿಸಿರುವ ಪ್ರಕ್ರೀಯೆಯನ್ನು ಕೈ ಬಿಡಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಸ್ಪಷ್ಟನೆ ನೀಡಿದ್ದಾರೆ. ಸಾಗರ – ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಒಟ್ಟುಗೂಡಿಸುವ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳು ಬಂದ ಕಾರಣ ಸರ್ಕಾರದೊಂದಿಗೆ ಚರ್ಚಿಸಿ ಪ್ರಸ್ತಾವನೆಯನ್ನು ಕೈಬಿಡುವಂತೆ ಕೋರಲಾಗಿತ್ತು ಈ ಹಿನ್ನಲೆಯಲ್ಲಿ ಸದರಿ ಪ್ರಸ್ತಾವನೆಯನ್ನು ಕೈಬಿಡಲು ಸರ್ಕಾರದಿಂದ ಸಮ್ಮತಿ ದೊರೆತಿದ್ದು, ಈ ಹಿಂದಿನಂತೆಯೆ ಸಾಗರ ಮತ್ತು ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಕರ್ತವ್ಯ ನಿರ್ವಹಿಸುತ್ತವೆ ಹಾಗು ಕೃಷಿ ಉತ್ಪನ್ನ…
ಹೊಸನಗರ ತಾಲೂಕ್ ಒಕ್ಕಲಿಗರ ವೇದಿಕೆ ವತಿಯಿಂದ ರಾಷ್ಟ್ರ ಮಟ್ಟದ ಹಾಕಿ ಕ್ರೀಡಾಪಟು ಪೂಜಿತ ಗೌಡ ರವರಿಗೆ ಸನ್ಮಾನ :
ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ರಿಪ್ಪನ್ ಪೇಟೆಯ ಪೂಜಿತ ಗೌಡ ರವರಿಗೆ ಹೊಸನಗರ ತಾಲೂಕ್ ಒಕ್ಕಲಿಗರ ವೇದಿಕೆ ವತಿಯಿಂದ ರಿಪ್ಪನ್ ಪೇಟೆ ಪಟ್ಟಣದ ವಿಶ್ವಮಾನವ ಸಭಾಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ರಿಪ್ಪನ್‌ಪೇಟೆಯ ವಿಶ್ವ ಮಾನವ ಸಭಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬರುವೆ ಗ್ರಾಮದ ನಿವಾಸಿಗಳಾದ ನಾಗೇಶ್ ಗೌಡ ಹಾಗೂ ಪೂರ್ಣಿಮಾ ದಂಪತಿಗಳ ಮಗಳಾದ ಪೂಜಿತ ರಾಷ್ಟ್ರಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಮಿಂಚುತ್ತಿದ್ದಾಳೆ.ಪೂಜಿತ ಪ್ರಸ್ತುತ ಕರ್ನಾಟಕ ಮಹಿಳಾ ಹಾಕಿ ತಂಡದ ಸಹ ಆಟಗಾರ್ತಿಯಾಗಿದ್ದಾಳೆ. ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ…
ಶಿವಮೊಗ್ಗ ಕೋರ್ಟ್ ನ ನ್ಯಾಯದೀಶರಿಗೆ ಹೃದಯಾಘಾತ : ಝೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ರವಾನೆ
ಶಿವಮೊಗ್ಗ ಕೋರ್ಟ್ ನ್ಯಾಯಾಧೀಶರಿಗೆ ಹೃದಯಘಾತವಾಗಿದ್ದು, ಝೀರೋ ಟ್ರಾಫಿಕ್ನಲ್ಲಿ ತುಮಕೂರು ಮೂಲಕ ಬೆಂಗಳೂರಿಗೆ ರವಾನಿಸಲಾಗುತ್ತಿದೆ. ನ್ಯಾಯಾಧೀಶ ಸದಾನಂದ ಎಂ ಕಲಾಲ್ (61) ರವರಿಗೆ ಹೃದಯಾಘಾತವಾಗಿದೆ. ಸದ್ಯ ಶಿವಮೊಗ್ಗದಿಂದ ಆಂಬ್ಯುಲೆನ್ಸ್ನಲ್ಲಿ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದ್ದು, ಮಾರ್ಗಮಧ್ಯೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ತಯಾರಿ ನಡೆಸಲಾಗಿದೆ. ನಂತರ ತುಮಕೂರು ನಗರದ ಮೂಲಕ ಬೆಂಗಳೂರಿಗೆ ಝೀರೋ ಟ್ರಾಫಿಕ್ನಲ್ಲಿ ರವಾನಿಸಲಾಗುತ್ತದೆ.
ಭದ್ರಾವತಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೆಡಿಯು ವತಿಯಿಂದ ಮನವಿ
ಭದ್ರಾವತಿ : ದಿವಂಗತ ಬಿ ವಿ ಗಿರೀಶ್ ಹೆಸರನ್ನು ತಿಮ್ಮಾಪುರ ರಸ್ತೆಗೆ ನಾಮಕರಣ ಮಾಡುವಂತೆ ಹಾಗೂ ಭದ್ರಾವತಿ ನಗರಸಭೆ ವ್ಯಾಪ್ತಿಯ 32ನೇ ವಾರ್ಡ್ ನಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಇರುವುದನ್ನು ಖಂಡಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ನಗರಸಭೆ ಆಯುಕ್ತರಿಗೆ ಒತ್ತಾಯಿಸಿದ್ದಾರೆ. ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು ಕನ್ನಡಪರ ಹೋರಾಟಗಾರ ಭೋವಿ ಸಮಾಜದ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ರಾಗಿದ್ದ ದಿವಂಗತ ಬಿ…
ಹೊಸನಗರ ಎಪಿಎಂಸಿ ವಿವಾದ : ಸಿಡಿದೆದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ,ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ. ——- ಎಪಿಎಂಸಿ ಮಾರುಕಟ್ಟೆಯನ್ನು ಸಾಗರಕ್ಕೆ ಸಂಯೋಜಿಸಿರುವ ಕ್ರಮವನ್ನು ಖಂಡಿಸಿ ರಿಪ್ಪನ್‌ಪೇಟೆಯಲ್ಲಿ ಜೆಡಿಎಸ್ ಪ್ರತಿಭಟನೆ
ಮಲೆನಾಡಿನ ತವರೂರು ಹೊಸನಗರಕ್ಕೆ ಶರಾವತಿಯ ಶಾಪ ಮುಗಿದರೂ, ರಾಜಕೀಯದ ಶಾಪ ಮಾತ್ರ ಇನ್ನೂ ಮುಗಿವಂತೆ ಕಾಣುತ್ತಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಹೊಸನಗರ ಅಭಿವೃದ್ಧಿಯಾಗುತ್ತಿಲ್ಲ. ಬದಲಾಗಿ ಅಲ್ಲಿರುವುದನ್ನೆಲ್ಲವೂ ಸ್ಥಳಾಂತರ ಮಾಡಲಾಗುತ್ತಿದೆ. ಅದು ಕೂಡ ಸಮರ್ಪಕ ಕಾರಣಗಳಿಲ್ಲದೆ. ಈ ಹಿಂದೆ ವಿಧಾನಸಭೆ ಕ್ಷೇತ್ರವನ್ನೆ ಕಿತ್ತುತೆಗೆದು,ಹೊಸನಗರ ತಾಲ್ಲೂಕನ್ನು ಬೇರೆ ಬೇರೆ ಕ್ಷೇತ್ರಗಳಿಗೆ ಚಾಕಲೇಟ್ ರೀತಿಯಲ್ಲಿ ಹಂಚಲಾಗಿತ್ತು. ಇದೀಗ, ತಾಲ್ಲೂಕಿನ ಎಪಿಎಂಸಿಯನ್ನು ಪಕ್ಕದ ಸಾಗರ ತಾಲ್ಲೂಕಿನ ಎಪಿಎಂಸಿ ಜೊತೆ ವಿಲೀನಗೊಳಿಸಲಾಗಿದೆ. ವಿಶೇಷ ಅಂದರೆ, ಇದಕ್ಕೆ ಯಾವುದೇ ಚರ್ಚೆ ನಡೆದಿಲ್ಲ ಎಂಬುದು ಹೊಸನಗರ ನಾಗರಿಕರ ಆರೋಪ. …
ಅಮೃತ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ರಾಜು ರಾಜೀನಾಮೆ….. ವಿನೋದ ಯೋಗೆಂದ್ರಪ್ಪನವರಿಗೆ ಒಲಿಯಲಿದೆಯ ಅದೃಷ್ಟ…???.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಅಮೃತ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ರಾಜು ರವರು ಇಂದು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆ. ಇಂದು ಸಾಗರ ಉಪವಿಭಾಗಧಿಕಾರಿಗಳ ಕಚೇರಿ ಯಲ್ಲಿ ಉಪವಿಭಾಗಾಧಿಕಾರಿ ನಾಗರಾಜ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ . ಮಂಜುಳಾ ರಾಜುರವರು ಹದಿನೇಳು ತಿಂಗಳ ಕಾರ್ಯಭಾರದ ನಂತರ ಇಂದು ರಾಜಿನಾಮೆ ನೀಡಿದ್ದಾರೆ. ಹದಿನೈದು ತಿಂಗಳ ಅವಧಿಗೆ ಮಾತಾಗಿತ್ತು ಎಂದು ಒಂದು ಬಣ, ಇಲ್ಲಾ ಇಲ್ಲಾ ಪೂರ್ತಿ ಮೂವತ್ತು ತಿಂಗಳಿಗೂ ಇವರೇ ಅಧ್ಯಕ್ಷರು ಎಂದು ಇನ್ನೊಂದು ಬಣದ…