ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಇಡಿ ಪ್ರಕರಣದಲ್ಲಿ ಬಂಧನಕ್ಕೊಳಗಾದ ಸಂದರ್ಭದಲ್ಲಿ ಅವರು ಬಿಡುಗಡೆಯಾಗಿ ಬಂದರೆ ತನ್ನ ಮುಡಿಯನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಕೊಡುವುದಾಗಿ ಹರಕೆ ಕಟ್ಟಿಕೊಂಡಿದ್ದ ಅಭಿಮಾನಿಯೊಬ್ಬರು ಇಂದು ತನ್ನ ಮುಡಿಕೊಡುವ ಮೂಲಕ ಹರಕೆ ತೀರಿಸಿದ ವಿಶೇಷ ಪ್ರಸಂಗ ನಡೆದಿದೆ.
ಈ ರೀತಿ ಮಂಜುನಾಥಸ್ವಾಮಿಗೆ ಹರಕೆ ಮಾಡಿಕೊಂಡವರು ಬೇರೆ ಯಾರು ಅಲ್ಲ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಸಂಘಟನಾ ಕಾರ್ಯದರ್ಶಿ ಸೂಡೂರು ಶಿವಣ್ಣ(ಶಿವಕುಮಾರ್)
ಕೊವಿಡ್ ಮುಂತಾದ ಕಾರಣಕ್ಕಾಗಿ ಹರಕೆ ತೀರಿಸುವುದು ಹಾಗೇ ಬಾಕಿ ಉಳಿಸಿಕೊಂಡು ಬಿಟ್ಟಿದ್ದೆ. ಮೊನ್ನೆ ಮತ್ತೆ ಶಿವಕುಮಾರ್ ರವರಿಗೆ ನೋಟಿಸ್ ಕೊಟ್ಟಾಗ ನಾನು ಎಚ್ಚೆತ್ತುಕೊಂಡು ಹರಕೆ ಇನ್ನು ಮುಂದೂಡಬಾರದೆಂದು ಭಾವಿಸಿ ಇಂದು ಧರ್ಮಸ್ಥಳಕ್ಕೆ ಬಂದು ನನ್ನ ಹರಕೆಯನ್ನು ತೀರಿಸಿದ್ದೇನೆ. ಡಿ.ಕೆ.ಶಿವಕುಮಾರ್ ಸಾಹೇಬರಿಗೆ ಯಾವುದೇ ರೀತಿಯ ತೊಂದರೆಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎನ್ನುತ್ತಾರೆ ಶಿವಣ್ಣ.
ಮುಂದಿನ ದಿನಗಳಲ್ಲಿ ಡಿ ಕೆ ಶಿವಕುಮಾರ್ ರವರ ರಾಜಕೀಯ ಉನ್ನತ್ತಿಗೇರಲಿ ಎಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ ಎಂದರು