ರಿಪ್ಪನ್ ಪೇಟೆ : ಪಟ್ಟಣದಲ್ಲಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ 26 ಸಾವಿರ ಮೌಲ್ಯದ ಹಳೆ ಕಟ್ಟಡದ ಸಾಮಗ್ರಿಗಳಾದ ಮರ ಮುಟ್ಟು ಗಳನ್ನು ಹರಾಜಿನಲ್ಲಿ 1 ಕೋಟಿ ರೂಪಾಯಿಗೆ ಹರಾಜು ಕರೆದ ಪ್ರಸಂಗ ಇಂದು ರಿಪ್ಪನ್ ಪೇಟೆ ಪಟ್ಟಣದಲ್ಲಿ ನಡೆದಿದೆ.
ಹಳೆ ನಾಟಕ್ಕೆ ಸರ್ಕಾರಿ ಮೌಲ್ಯ 26,388 ನಿಗದಿ ಮಾಡಿತ್ತು.ಇಂದು ಹರಾಜು ಪ್ರಕ್ರಿಯೆಯಲ್ಲಿ ಮೊದಲು 2 ಸಾವಿರದಿಂದ ಹರಾಜು ಪ್ರಾರಂಭವಾಗಿ ಹರಾಜುದಾರರು 4 ಸಾವಿರ ಎಂದು ಕೂಗುತಿದ್ದಾಗ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಏಕಾಏಕಿ ಒಂದು ಕೋಟಿ ಮೊತ್ತಕ್ಕೆ ಹರಾಜು ಕೂಗಿದಾಗ ಅಧಿಕಾರಿಗಳು ಹಾಗೂ ಹರಾಜುದಾರರು ಒಂದು ಕ್ಷಣ ತಬ್ಬಿಬ್ಬಾದ ಘಟನೆ ನಡೆದಿದೆ.
ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷದಿಂದ ಯಾವುದೇ ರಕ್ಷಣೆ ಇಲ್ಲದೆ ಮಳೆಯಲ್ಲಿ ಬೇಕಾಬಿಟ್ಟಿ ಶೇಖರಣೆ ಮಾಡಿದ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ನಿಗದಿತ ಠೇವಣಿ ಕಟ್ಟಿದ ಸಾಮಾಜಿಕ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಒಂದು ಕೋಟಿಗೆ ಹರಾಜು ಕರೆದರು.ಇದನ್ನು ಆಲಿಸಿದ ಹರಾಜು ಪ್ರಕ್ರಿಯೆ ಅಧಿಕಾರಿಗಳು ತಬ್ಬಿಬ್ಬಾದರು.
ಇನ್ನುಳಿದ ಹರಾಜುದಾರರು ಮುಂದುವರೆದು ಬಿಡ್ ಕರೆಯದ ಕಾರಣ ಅಧಿಕಾರಿಗಳು ಈ ಬಗ್ಗೆ ಅಂತಿಮವಾಗಿ ಟಿ ಆರ್ ಕೃಷ್ಣಪ್ಪ ಕರೆದ ಹರಾಜು ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ತಿಳಿಸಿ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದರು.
ಇನ್ನುಳಿದ ಹರಾಜುದಾರರು ಮುಂದುವರೆದು ಬಿಡ್ ಕರೆಯದ ಕಾರಣ ಅಧಿಕಾರಿಗಳು ಈ ಬಗ್ಗೆ ಅಂತಿಮವಾಗಿ ಟಿ ಆರ್ ಕೃಷ್ಣಪ್ಪ ಕರೆದ ಹರಾಜು ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ತಿಳಿಸಿ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದರು.
ಹರಾಜು ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್ ಕೆ, ಸಹಾಯಕ ನಿರ್ದೇಶಕ ಇಕ್ಬಾಲ್, ಹೊಸನಗರದ ಕಾರ್ಯನಿರ್ವಣಾಧಿಕಾರಿ ಪ್ರವೀಣ್, ಹಾಸ್ಟೆಲ್ ವಾರ್ಡನ್ ರಾಘವೇಂದ್ರ ಕೆ.ಎಸ್ ಇನ್ನಿತರರಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇