Headlines

ಸಕ್ರೆಬೈಲಿನಲ್ಲಿ ಬೋಟಿಂಗ್ ಸ್ಪೋರ್ಟ್ಸ್ ಆರಂಭ : ಏನೆಲ್ಲಾ ಇರಲಿದೆ ಗೊತ್ತಾ…??? ಈ ಸುದ್ದಿ ನೋಡಿ

ಸಕ್ರೆಬೈಲು ಆನೆ ಬಿಡಾರದ ತುಂಗಾ ಹಿನ್ನೀರಿನಲ್ಲಿ ಜಂಗಲ್ ರೇಸಾರ್ಟ್ ವತಿಯಿಂದ ಇಂದು ಬೋಟ್ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಸಂಸದ ಬಿ.ವೈ.ರಾಘವೇಂದ್ರ ರವರು ನೂತನ ಬೋಟ್ ಗೆ ಚಾಲನೆ ನೀಡಿದರು. ನಂತರ ಸಂಸದರು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಂಗಲ್ ರೇಸಾರ್ಟ್ ನ ನಿರ್ದೆಶಕ ರಾಜೇಶ್ ಕಾಮತ್ ಸೇರಿದಂತೆ ಇತರರು ಬೋಟ್ ನಲ್ಲಿ ವಿಹರಿಸಿದರು. ನಂತರ ಮಾತನಾಡಿದ ಸಂಸದರು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಬೋಟಿಂಗ್ ವ್ಯವಸ್ಥೆ ಉಪಯುಕ್ತವಾಗಲಿದೆ ಎಂದರು.  ಸಕ್ರೆಬೈಲು…

Read More

ಬಿದರಹಳ್ಳಿ ಶಾಲೆಗೆ ಜಿಲ್ಲಾ ಮಟ್ಟದ ಸ್ವಚ್ಚತಾ ಶಾಲಾ ಪ್ರಶಸ್ತಿ :

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈ ಬಾರಿಯ ಶಿವಮೊಗ್ಗ ಜಿಲ್ಲಾ ಮಟ್ಟದ “ಸ್ವಚ್ಚತಾ ವಿದ್ಯಾಲಯ” ಪ್ರಶಸ್ತಿ ಲಭಿಸಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ರವರು ತಮ್ಮ ಕಛೇರಿಯಲ್ಲಿ ಬಿದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ದೇವೆಂದ್ರಪ್ಪರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂಧರ್ಭದಲ್ಲಿ ಬಿದರಹಳ್ಳಿ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಪದ್ಮರಾಜ್, ಶಾಲೆಯ ಶಿಕ್ಷಕರಾದ ಮಧುಕುಮಾರ್,ದಿನೇಶ್ ರವರು ಉಪಸ್ಥಿತರಿದ್ದರು. ಬಿದರಹಳ್ಳಿ ಶಾಲೆಯ ಹಿನ್ನೋಟ :…

Read More

ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: ಶಿವಮೊಗ್ಗದಲ್ಲಿ 18 ಕಡೆ ದಾಳಿ ನಡೆಸಿದ NIA

ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ ತಂಡ ಮತ್ತೆ ಶಿವಮೊಗ್ಗಕ್ಕೆ ಭೇಟಿ ನೀಡಿದೆ. ನಾಲ್ಕು ರಾಜ್ಯಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ಎನ್​ಐಎ ತಂಡ ನಿನ್ನೆ ರಾತ್ರಿ ಶಿವಮೊಗ್ಗಕ್ಕೆ ಭೇಟಿ ನೀಡಿದೆ. ಜಿಲ್ಲೆಯ ಅಧಿಕಾರಿಗಳನ್ನೂ ಸೇರಿ ಒಟ್ಟು 90 ಅಧಿಕಾರಿಗಳನ್ನೊಳಗೊಂಡ ತಂಡ ಇಂದು ಬೆಳಗ್ಗೆ ಐದು ಗಂಟೆಯಿಂದ ತನಿಖೆ ಆರಂಭಿಸಿದ್ದು, ಜಿಲ್ಲೆಯ 18 ಕಡೆಗಳಲ್ಲಿ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ. ಮುಂಜಾನೆಯಿಂದ ನಿರಂತರವಾಗಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ…

Read More

ಜುಲೈ 4 ರ ಸೋಮವಾರ ಕಾಂಗ್ರೆಸ್ ಪಕ್ಷದ ವತಿಯಿಂದ ರಿಪ್ಪನ್‌ಪೇಟೆಯಲ್ಲಿ ಪಾದಯಾತ್ರೆ ಮತ್ತು ಬೃಹತ್ ಪ್ರತಿಭಟನೆ :

ರಿಪ್ಪನ್ ಪೇಟೆ :  ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ರವರ ನೇತೃತ್ವದಲ್ಲಿ ಜುಲೈ 4 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಗವಟೂರು ಗ್ರಾಮದಲ್ಲಿ ಸಮುದಾಯ ಆಸ್ಪತ್ರೆಗೆ ಕಾಯ್ದಿರಿಸಿರುವ ಸ್ಥಳದಿಂದ ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿ ಪಿ ರಾಮಚಂದ್ರ ಹೇಳಿದರು. ಪಟ್ಟಣದಲ್ಲಿ ಇಂದು ಪೂರ್ವಭಾವಿ…

Read More

ಪಂಪ್ ಹೌಸ್ ನಲ್ಲಿ ಪ್ರತ್ಯಕ್ಷವಾದ 13 ಅಡಿ ಉದ್ದದ ಕಿಂಗ್ ಕೋಬ್ರಾ :

ಸುಮಾರು 13 ಅಡಿ ಉದ್ದದ ಅಂದಾಜು 12 ವರ್ಷದ ಕಿಂಗ್ ಕೋಬ್ರಾ ಹಾವು ಪಂಪ್ ಹೌಸ್ ನಲ್ಲಿ ಕಾಣಿಸಿಕೊಂಡಿದ್ದು ಕೆಲಕಾಲ ಆತಂಕ ಉಂಟು ಮಾಡಿತ್ತು. ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಕಿಮ್ಮನೆ ಗಾಲ್ಫ್ ಕ್ಲಬ್ ನಲ್ಲಿ 13 ಅಡಿ‌ ಕಿಂಗ್ ಕೋಬ್ರಾವೊಂದು ಕಾಣಿಸಿಕೊಂಡಿದೆ. ಗಾಲ್ಫ್ ಕ್ಲಬ್ ನ ಪಂಪ್ ಹೌಸ್ ನಲ್ಲಿ ಈ ಕಿಂಗ್ ಕೋಬ್ರಾ ಕಾಣಿಸಿಕೊಂಡಿತ್ತು.ತಕ್ಷಣವೇ ಸ್ನೇಕ್ ಕಿರಣ್ ರವರಿಗೆ ಕರೆ ಮಾಡಿದ ಹಿನ್ನಲೆಯಲ್ಲಿ ಅರಣ್ಯ ಅಧಿಕಾರಿಗಳ ಅನುಮತಿ ಮೇರೆಗೆ ಸ್ನೇಕ್ ಕಿರಣ್ ಸೆರೆ ಹಿಡಿದು ಶೆಟ್ಟಿಹಳ್ಳಿ…

Read More

ಮನುಕುಲದ ವಿರೋಧಿ ಮತಾಂಧರನ್ನು ಹೆಕ್ಕಿ ತೆಗೆದು ಶಿಕ್ಷೆ ನೀಡಬೇಕು : ಹರತಾಳು ಹಾಲಪ್ಪ

ಸಾಗರ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ನಯ್ಯ ಕೊಲೆ ಪ್ರಕರಣ ಖಂಡಿಸಿ ಸಾಗರ ನಗರ ಬಿಜೆಪಿಯಿಂದ ಸಾಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ ಇಂತಹ ಅಮಾನವೀಯ ಘಟನೆ ಮಾನವ ಕುಲ ಒಪ್ಪುವಂತಹದಲ್ಲ,ಎಲ್ಲೇ ಆಗಲಿ ಇಂತಹ ವಾತವರಣ ನಿರ್ಮಾಣವಾದಲ್ಲಿ ಜಾತಿ,ಮತ,ಪಕ್ಷ ಭೇದ ಮರೆತು ಅಂತಹ ಮತಾಂಧರನ್ನು ಹೆಕ್ಕಿ ಹೆಕ್ಕಿ ತೆಗೆದು ಶಿಕ್ಷೆ ನೀಡಬೇಕು.ಸಮಾಜದಲ್ಲಿ  ಇಂತಹ ಮನುಕುಲದ ವಿರೋಧಿಗಳನ್ನು ಹೆಕ್ಕಿ ತೆಗೆದು ಶಿಕ್ಷೆ ನೀಡುವುದರ ಮೂಲಕ ಅವರ ನೆಲೆಯನ್ನು ಧ್ವಂಸಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಹೇಡಿಗಳ…

Read More

ಯುವ ಕಾಂಗ್ರೆಸ್ ವತಿಯಿಂದ ರಾಜಭವನ ಮುತ್ತಿಗೆ ಯತ್ನ : ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ -ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ನಿಹಾಲ್ ಬಂಧನ

ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಕೇಂದ್ರ ಬಿಜೆಪಿ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ರಾಜಭವನ್ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೊಸನಗರ ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ ಹಾಗೂ ಜಿಲ್ಲಾ ಯುವ  ಕಾಂಗ್ರೆಸ್ ಕಾರ್ಯದರ್ಶಿ ಮೊಹಮ್ಮದ್ ನಿಹಾಲ್ ರವರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಯಿತು.  ಬೆಂಗಳೂರು ಕೆಪಿಸಿಸಿ ಕಛೇರಿಯಿಂದ ರಾಜಭವನಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ನಲಪಾಡ್ ರವರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡಿ ರಾಜಭವನ ಮುತ್ತಿಗೆ ಹಾಕುವ ಸಂದರ್ಭದಲ್ಲಿ  ಯುವ ಕಾಂಗ್ರೆಸ್ ನ ಹಲವಾರು ನಾಯಕರನ್ನು…

Read More

ಅಮೃತ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಮಂಜುಳಾ ರಾಘವೇಂದ್ರ ಆಚಾರ್ ಅವಿರೋಧವಾಗಿ ಆಯ್ಕೆ

ರಿಪ್ಪನ್‌ಪೇಟೆ: ಅಮೃತ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ಮಂಜುಳಾ ರಾಜು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಮಂಜುಳಾ ರಾಘವೇಂದ್ರ ಆಚಾರ್ ಆಯ್ಕೆಯಾಗಿದ್ದಾರೆ. 11 ಜನ ಸದಸ್ಯರಿರುವ ಗ್ರಾಮ ಪಂಚಾಯತಿ 2 ಕಾಂಗ್ರೆಸ್ ಸದಸ್ಯರಿದ್ದು 9 ಸ್ಥಾನ ಬಿಜೆಪಿ ಪಾಲಾಗಿತ್ತು. ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರರವರ ನೇತೃತ್ವದಲ್ಲಿ ಇಂದು ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಂಜುಳಾ ರಾಘವೇಂದ್ರ ಆಚಾರ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ರಿಪ್ಪನ್‌ಪೇಟೆ- ಹುಂಚಾ ಬಿಜೆಪಿ ಮಹಾಶಕ್ತಿ…

Read More

ಅಗ್ನಿಪಥ್ ಯೋಜನೆ ಹಿಂಪಡೆಯುವಂತೆ ಆಗ್ರಹಿಸಿ ಕಿಮ್ಮನೆ ರತ್ನಾಕರ್ ನೇತ್ರತ್ವದಲ್ಲಿ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ :

ತೀರ್ಥಹಳ್ಳಿ : ತಾಲೂಕಿನಲ್ಲಿ ಲಂಚವಿಲ್ಲದೆ ಎಲ್ಲೂ ಕೂಡ ಕೆಲಸ ನೆಡೆಯುತ್ತಿಲ್ಲ. ಜ್ಞಾನೇಂದ್ರರವರ ಇಲಾಖೆಯ ಪಿಎಸ್ಐ ನೇಮಕಾತಿಯಲ್ಲೂ ಹಗರಣ ಮಾಡಿ ಮೋಸ ಮಾಡಿದರು ಎಂದು ಆರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನೆಡೆಸಿದರು. ಪಟ್ಟಣದ ತಾಲೂಕು ಕಚೇರಿ ಎದುರು ಕೇಂದ್ರ ಬಿಜೆಪಿ  ಸರ್ಕಾರದ ಅವೈಜ್ಞಾನಿಕ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ  ನೆಡೆದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿ ಭಾರತೀಯ ಸೇನೆಯಲ್ಲಿ ನೇಮಕಾತಿ ಸಂಬಂಧ ಕೇಂದ್ರದ ಬಿಜೆಪಿ ಸರ್ಕಾರ ಇತ್ತೀಚಿಗೆ ಅನುಷ್ಠಾನಗೊಳಿಸಿರುವ ಅಗ್ನಿಪಥ್ ಯೋಜನೆ ಜನವಿರೋಧಿಯಾಗಿದ್ದು ದೇಶದ ಯುವಜನತೆಯ ನಿರುದ್ಯೋಗ ಸಮಸ್ಯೆಯನ್ನು…

Read More

ಸಾಗರದಲ್ಲಿ ಇಂಜೆಕ್ಷನ್‌ ಪಡೆದ 14 ಮಕ್ಕಳು ಅಸ್ವಸ್ಥ : ಸ್ಥಳಕ್ಕೆ ದೌಡಾಯಿಸಿದ ಶಾಸಕ ಹರತಾಳು ಹಾಲಪ್ಪ

ಸಾಗರ : ಜ್ವರ, ಕೆಮ್ಮು, ನೆಗಡಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದ 14  ಮಕ್ಕಳು ಅಸ್ವಸ್ಥಗೊಂಡ ಘಟನೆ ರವಿವಾರ ಸಂಜೆ ನಡೆದಿದೆ. ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಿಗೆ ಸಂಜೆ ವೇಳೆ ಆಸ್ಪತ್ರೆಯ ದಾದಿ ಆಂಟಿಬಯೋಟಿಕ್ ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ಕೊಟ್ಟ ತಕ್ಷಣ ಮಕ್ಕಳು ಚಳಿ ಚಳಿ ಎಂದು ನಡುಗುತ್ತ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ.  ಕರ್ತವ್ಯದಲ್ಲಿದ್ದ ವೈದ್ಯರು ಅಸ್ವಸ್ಥಗೊಂಡ 14 ಮಕ್ಕಳಲ್ಲಿ 4 ಮಕ್ಕಳನ್ನು ಆ್ಯಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನುಳಿದ ಮಕ್ಕಳಿಗೆ ಉಪವಿಭಾಗೀಯ ಆಸ್ಪತ್ರೆಯಲ್ಲೇ ಚಿಕಿತ್ಸೆ…

Read More