ಜಿಲ್ಲಾ ಸುದ್ದಿ:
ಹೊಸನಗರ ತಾಲೂಕಿನಲ್ಲಿ ಮಕ್ಕಳ ಅಪಹರಣಕ್ಕೆ ಪ್ರಯತ್ನ ಸುಳ್ಳು ಸುದ್ದಿ | ತಪ್ಪು ಸಂದೇಶ ರವಾನಿಸುವವರ ಮೇಲೆ ಕಠಿಣ ಕ್ರಮ : ಸಿಪಿಐ ಗಿರೀಶ್ ಖಡಕ್ ಎಚ್ಚರಿಕೆ
ಹೊಸನಗರ: ಹೊಸನಗರ ಗ್ರಾಮದಲ್ಲಿ ಮಕ್ಕಳ ಕಳ್ಳ ಸಿಕ್ಕಿಬಿದ್ದು ಓಡಿ ಹೋಗಿದ್ದಾನೆ ಈತ ಸಿಕ್ಕಿದರೆ ಪೊಲೀಸರಿಗೆ ತಿಳಿಸಿ ಎಂಬ ಮಾಹಿತಿ ಸಹಿತ ವ್ಯಕ್ತಿಯೊಬ್ಬನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಹೊಸನಗರ ಸರ್ಕಲ್ ಇನ್ಸಪೆಕ್ಟರ್ ಗಿರೀಶ್ ಬಿ ಸಿ ಸ್ಪಷ್ಟನೆ ನೀಡಿದ್ದು ಇಂತಹ ಯಾವುದೇ ಪ್ರಕರಣ ತಾಲೂಕಿನಲ್ಲಿ ನಡೆದಿಲ್ಲ ಎಂದು ತಿಳಿಸಿದ್ದಾರೆ. ಇಂತಹ ಮಾಹಿತಿಗಳ ಸತ್ಯಾಸತ್ಯತೆ ಅರಿಯಬೇಕು. ಮಾಹಿತಿ ಅರಿಯದೆ ಬೇರೆ ವ್ಯಕ್ತಿಗಳಿಗೆ, ಜಾಲತಾಣದ ಗ್ರೂಪ್ ಗಳಿಗೆ ಫಾರ್ ವರ್ಡ್ (FORWORD) ಮಾಡುವುದು…
ಜೆಸಿಐ ಹೊಸನಗರ ಕೊಡಚಾದ್ರಿ ವಲಯ ವತಿಯಿಂದ “ನಮಸ್ತೆ” ಸಪ್ತಾಹದಡಿ ವಿಭಿನ್ನ ಸಾಮಾಜಿಕ ಕಾರ್ಯಕ್ರಮ :. ನ್ಯಾಷನಲ್ ಬ್ಯೂಟಿ ಪೆಜೆನ್ಟ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ದೆಹಲಿಯತ್ತ ಪಯಣಿಸಿರುವ ಸೀಮಾಕಿರಣ್
ಜೆಸಿಐ ಹೊಸನಗರ ಕೊಡಚಾದ್ರಿ ವಲಯದ ವತಿಯಿಂದ “ನಮಸ್ತೆ”ಎಂಬ ಶೀರ್ಷಿಕೆಯಡಿ ಜೆಸಿಐ ಸಪ್ತಾಹದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸೆ. 9 ರಿಂದ 15 ರವರೆವಿಗೆ ಪ್ರತಿ ದಿನವೂ ವಿಭಿನ್ನ ಕಾರ್ಯಕ್ರಮ ಗಳನ್ನು ರೂಪಿಸಿಕೊಳ್ಳಲಾಗಿತ್ತು.ಸಪ್ತಾಹದ ಅಂಗವಾಗಿ ಅನಾಥಾಶ್ರಮದ ಬೇಟಿ, ಆಹಾರಧಾನ್ಯಗಳ ವಿತರಣೆ, ಆರೋಗ್ಯ ತಪಾಸಣೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರಣಗಿರಿ ಸರ್ಕಾರಿ ಶಾಲೆಯಲ್ಲಿ ಅಣುಕು ಪಾರ್ಲಿಮೆಂಟ್ ಮತ್ತು ಪ್ರಾಮಾಣಿಕ ಅಂಗಡಿ, ಬೇರೆ ಬೇರೆ ಶಾಲೆಗಳಲ್ಲಿ ವಿವಿಧ ವಿಚಾರಗಳ ಪ್ರಬಂಧ ಸ್ಪರ್ಧೆ ಗಳು,ಭಾವಗೀತೆ, ಜನಪದಗೀತೆ, ನೃತ್ಯ, ರಂಗೋಲಿ,ಹೊಸ ರುಚಿ, ಒಂದು ನಿಮಿಷದಲ್ಲಿ…
ಹೆಬ್ಬಂಡೆಯ ಆಲಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಕ್ತಸಾಗರ :
ರಿಪ್ಪನ್‌ಪೇಟೆ;-ಇತಿಹಾಸ ಪ್ರಸಿದ್ದ ಹೆಬ್ಬಂಡೆಯ ಅಲಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಕ್ತಜನಸಾಗರವೇ ಶ್ರದ್ದಾಭಕ್ತಿಯಿಂದಾ ಹರಿದು ಬಂದಿತು. ಅಮ್ಮನಘಟ್ಟ ಜಾತ್ರೆ ನಾಡಿನ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದ್ದು ಮಲೆನಾಡಿನ ಸಹ್ಯಾದ್ರಿಯ ಪರ್ವತ ತಪ್ಪಲಿನಲ್ಲಿ ವಿಶಿಷ್ಟ ಪ್ರಾಕೃತ್ತಿಕ ಸೌಂದರ್ಯದಲ್ಲಿ ಕಂಗೊಳಿಸುವ ಧಾರ್ಮಿಕ ಶ್ರದ್ದಾಕೇಂದ್ರವಾದ ಜೇನುಕಲ್ಲಮ್ಮ ಹಲವು ಜನಾಂಗಗಳ ಕುಲದೇವತೆಯಾಗಿ ನೆಲೆ ನಿಂತಿರುವ ದೇವಿಗೆ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ನೇತೃತ್ವದಲ್ಲಿ ಪುರೋಹಿತ ಬಳಗ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪಿತೃ ಪಕ್ಷದಲ್ಲಿ ಹುಣ್ಣಿಮೆಯಿಂದ ಅಮಾವಾಸ್ಯೆಯ ವರೆಗೆ ಎರಡು ಮಂಗಳವಾರ ಶುಕ್ರವಾರದೊಂದು…
ಅಕಾಲಿಕ ಮಳೆಗೆ ರಸ್ತೆ ಕುಸಿದು ಸಂಪರ್ಕ ಕಡಿತ : ದುರಸ್ತಿಗಾಗಿ ಗ್ರಾಮಸ್ಥರ ಒತ್ತಾಯ
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹಾರಂಬಳ್ಳಿ ಮಳವಳ್ಳಿ ಗಾಜಿನಗೋಡು ಗ್ರಾಮದ ಸಂಪರ್ಕ ರಸ್ತೆಯು ಇತ್ತೀಚೆಗೆ ಬಂದ ಅಕಾಲಿಕ ಭಾರಿ ಮಳೆಯಿಂದಾಗಿ ರಸ್ತೆ ಮಧ್ಯದಲ್ಲಿ ಅಳದ ಬೃಹತ್ ಹೊಂಡ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ರಸ್ತೆಯ ಮಾರ್ಗದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಮತ್ತು ಕೃಷಿ ಚಟುವಟಿಕೆಗಾಗಿ ಓಡಾಡುವ ಸಂಪರ್ಕ ರಸ್ತೆಯಾಗಿದ್ದು ಭಾರಿ ಮಳೆಯಿಂದಾಗಿ ಗುಡ್ಡದ ನೀರು ಏಕಾಏಕಿ ನುಗ್ಗಿ ಚರಂಡಿ ತುಂಬಿ ಉಕ್ಕಿ ಹರಿದ ಪರಿಣಾಮ ಸಂಪರ್ಕ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿ ಓಡಾಡಕ್ಕೆ ತುಂಬಾ…
ಗ್ರಾಮೀಣ ವಿದ್ಯಾರ್ಥಿಗಳ ಕನಸು ನನಸಾಗಿಸಲು ಪ್ರಾಯೋಗಿಕ ತರಗತಿಗಳು ಸಹಕಾರಿ : ಆರಗ ಜ್ಞಾನೇಂದ್ರ – 45 ದಿನಗಳ ಕಾಲ ನಡೆದ ಆಧುನಿಕ ತಾಂತ್ರಿಕ ಮತ್ತು ವೈಜ್ಞಾನಿಕ ಆವಿಷ್ಕಾರಗಳ ಪ್ರಾಯೋಗಿಕ ತರಗತಿಗಳ ಸಮಾರೋಪ ಕಾರ್ಯಕ್ರಮ
ಕೋಣಂದೂರು : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕನಸು ನಿರ್ಮಾಣಗೊಳ್ಳಲು ಪ್ರಾಯೋಗಿಕ ತರಗತಿಗಳು ಸಹಕಾರಿ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಇಲ್ಲಿನ ಸಮೀಪದ ಗುಡ್ಡೇಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೆಂಗಳೂರಿನ ಯುವಿಪೆಪ್ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ 45 ದಿನಗಳ ಕಾಲ ಆಯೋಜಿಸಿದ್ದ ಆಧುನಿಕ ತಾಂತ್ರಿಕ ಮತ್ತು ವೈಜ್ಞಾನಿಕ ಆವಿಷ್ಕಾರಗಳ ಪ್ರಾಯೋಗಿಕ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಶಾಲೆಯನ್ನು ಆಯ್ದುಕೊಂಡು ,ಆ ಮಕ್ಕಳಲ್ಲಿ ವಿಜ್ಞಾನದ ಅರಿವನ್ನು ಮೂಡಿಸಿ ಭವಿಷ್ಯದ ಆವಿಷ್ಕಾರಕ್ಕೆ ಅಣಿಗೊಳಿಸುವ…
ಅಧಿಕಾರದಲ್ಲಿದ್ದಾಗ ಒಂದೂ ಸೇತುವೆಯನ್ನು ಕಟ್ಟದೆ ಇದ್ದವರು ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ : ಹರತಾಳು ಹಾಲಪ್ಪ
ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬಕ್ಕೆ ನಾನು ಕಾರಣವಲ್ಲ. ಅನಗತ್ಯವಾಗಿ ನನ್ನ ಮೇಲೆ ಆರೋಪ ಹೊರಿಸುವ ಕೆಲಸವನ್ನು ಕಾಂಗ್ರೆಸ್ ಸೇರಿದಂತೆ ವಿರೋಧಿಗಳು ಮಾಡುತ್ತಿದ್ದಾರೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತಾಲೂಕಿನ ಹಸಿರುಮಕ್ಕಿ ಸೇತುವೆಯನ್ನು ಭಾನುವಾರ ವೀಕ್ಷಣೆ ಮಾಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ತಾವು ಅಧಿಕಾರದಲ್ಲಿದ್ದಾಗ ಒಂದೂ ಸೇತುವೆಯನ್ನು ಕಟ್ಟದೆ ಇದ್ದವರು ಈಗ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿ, ಶೀಘ್ರದಲ್ಲಿ ಎದುರಾಗಲಿರುವ ಚುನಾವಣೆಯಲ್ಲಿ ಲಾಭ ಗಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ…
ಮಲೆನಾಡಿನಲ್ಲೊಂದು ಸೋರುತ್ತಿರುವ ಸರ್ಕಾರಿ ಪ್ರೌಡ ಶಾಲೆ – ಮಳೆ ಬಂದರೆ ತರಗತಿಗಳಲ್ಲಿ ಅರಳುತ್ತವೆ ಬಣ್ಣ ಬಣ್ಣದ ಛತ್ರಿಗಳು
ರಿಪ್ಪನ್‌ಪೇಟೆ : ಇಲ್ಲಿನ ಚಿಕ್ಕಜೇನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಳೆ ಬಂದರೇ ಸಾಕು ವಿದ್ಯಾರ್ಥಿಗಳು ತರಗತಿ ಕೊಠಡಿಯಲ್ಲಿ ಬಣ್ಣ ಬಣ್ಣದ ಛತ್ರಿ ಹಿಡಿದು ಕುಳಿತುಕೊಳ್ಳುವುದರೊಂದಿಗೆ ಪಾಠ ಪ್ರವಚನ ಕೇಳುವ ದುಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಾಂತರ ಹಣ ವ್ಯಯ ಮಾಡುತ್ತಿದ್ದು ಶಾಲಾ ಕಾಲೇಜ್‌ಗಳ ಕಟ್ಟಡ ನಿರ್ಮಾಣಕ್ಕೂ ಹೆಚ್ಚು ಅನುದಾನ ನೀಡುತ್ತಿದ್ದರೂ ಕೂಡಾ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆ ಮಾತ್ರ ಕಣ್ಣಿಗೆ ಕಂಡಿಲ್ಲವೇನೂ ಎಂಬ ಅನುಮಾನ ಕಾಡುವಂತಾಗಿದೆ. 2006 ರಲ್ಲಿ…
ಶ್ರಮ ಸಂಸ್ಕೃತಿಯ ಪ್ರತೀಕ ವಿಶ್ವಕರ್ಮರು : ಡಾ.ಕೆ.ಶ್ರೀಪತಿ ಹಳಗುಂದ
ರಿಪ್ಪನ್ ಪೇಟೆ; ವಿಶ್ವಕರ್ಮ ಜನಾಂಗವು ಸೃಷ್ಟಿಯ ಪ್ರತಿನಿಧಿಯಾಗಿ ದೇವಶಿಲ್ಪಿ ಎಂದು ಕರೆಸಿ ಕೊಳ್ಳುವ ಮೂಲಕ ಶ್ರಮ ಸಂಸ್ಕೃತಿಯ ಪ್ರತೀಕವಾಗಿ ತಮ್ಮದೇ ಆದ ವೃತ್ತಿಯನ್ನು ಅವಲಂಬಿಸಿ ರುವುದು ಶ್ಲಾಘನೀಯ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕನ್ನಡ ಉಪನ್ಯಾಸಕ ಶ್ರೀಪತಿ ಹಳಗುಂದ ಅಭಿಪ್ರಾಯಪಟ್ಟರು . ಕೆರೆಹಳ್ಳಿ ಹೋಬಳಿಯ ವಿಶ್ವಕರ್ಮ ಸಮಾಜದ ವತಿಯಿಂದ ಶನಿವಾರ ರಾಮಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಮ್ಮಾರ. ಅಕ್ಕಸಾಲಿಗ, ಬಡಿಗ, ಎರಕ ಸೇರಿದಂತೆ ಪಂಚಲೋಹಗಳ ಮೂಲಕವೇ ಬಗೆ ಬಗೆಯ ವಸ್ತುಗಳನ್ನು ತಯಾರಿಸಿ…
ಮಾದಾಪುರದಲ್ಲಿ ಮನೆಗಳಿಗೆ ನುಗ್ಗಿದ ನೀರು-ಜನಪ್ರತಿನಿಧಿಗಳ ನಿರ್ಲಕ್ಷ ಧೋರಣೆಗೆ ಗ್ರಾಮಸ್ಥರ ಆಕ್ರೋಶ : ಸ್ಥಳಕ್ಕೆ ಭೇಟಿ ನೀಡಿದ ಬೇಳೂರು
ರಿಪ್ಪನ್‌ಪೇಟೆ;-ಚುನಾವಣೆಯಲ್ಲಿ ಮತ ಕೇಳಲು ಮಾತ್ರ ಗ್ರಾಮಕ್ಕೆ ಬರುತ್ತಾರೆ ಅದರೆ ಇಂತಹ ಸಮಸ್ಯೆಗಳು ಉದ್ಭವಿಸಿದರೆ ಯಾವ ಜನಪ್ರತಿನಿಧಿಗಳು ಇತ್ತ ತಲೆ ಸಹಹಾಕುವುದಿಲ್ಲ ಇಲ್ಲಿನ ಶಾಸಕರು ಕಳೆದ ನಾಲ್ಕುವರೆ ವರ್ಷದಲ್ಲಿ ಮಾದಾಪುರಕ್ಕೆ ಭೇಟಿ ನೀಡದೆ ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಬಳಿ ಗ್ರಾಮಸ್ಥರು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು. ಕಳೆದ ಒಂದು ವಾರದಿಂದ ಅಕಾಲಿಕವಾಗಿ ಭಾರಿ ಮಳೆ ಸುರಿದ ಪರಿಣಾಮದಿಂದಾಗಿ ತುಪ್ಪೂರು ತಟ್ಟೆಕೆರೆ ಕೋಡಿ ಒಡೆದು ಚರಂಡಿಗಳಲಿಲ್ಲದೆ ಮಾದಾಪುರದೊಳಗೆ ನೀರು ನುಗ್ಗಿ ಮನೆಯೊಳಗೆಲ್ಲಾ ನೀರೋ…
ಪ್ರಧಾನಿ ನರೇಂದ್ರ ಮೋದಿ 72ನೇ ಜನ್ಮದಿನ : ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ
ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನ್ಮ ದಿನಾಚರಣೆಯ ಅಂಗವಾಗಿ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ನೆರೆವೇರಿಸಲಾಯಿತು. ರಿಪ್ಪನ್‌ಪೇಟೆ-ಹುಂಚ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್ ಮಾತನಾಡಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಅಭಿಮಾನಪೂರ್ವಕ ಶುಭಕಾಮನೆಗಳು. ಆರೋಗ್ಯಪೂರ್ಣವಾಗಿ ಇನ್ನೂ ಬಹಳ ವರ್ಷಗಳ ಕಾಲ ಮೋದಿಯವರ ರಾಷ್ಟ್ರಸೇವೆ ಹೀಗೆಯೇ ಮುಂದುವರಿಯುವಂತೆ ದೇವರು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್…