ಜಿಲ್ಲಾ ಸುದ್ದಿ:
ಬೆನವಳ್ಳಿ : ನರೇಗಾ ಕಾಮಗಾರಿಗೆ ತಡರಾತ್ರಿ ಟ್ರ್ಯಾಕ್ಟರ್ ಬಳಕೆ : ಗ್ರಾಮಸ್ಥರ ತಡೆ
ರಿಪ್ಪನ್‌ಪೇಟೆ : ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆನವಳ್ಳಿ ಸರ್ಕಾರಿ ಪಾಠಶಾಲೆಯ ಆಟದ ಮೈದಾನ ಸಮತಟ್ಟು ಕಾಮಗಾರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ಮಂಜಾರಾಗಿದ್ದು ಕಳೆದ ಒಂದು ತಿಂಗಳಿಂದ ಕೂಲಿಗಳ ಮೂಲಕ ಕಾಮಗಾರಿ ನಿರ್ವಹಿಸಲಾಗುತ್ತಿತ್ತು. ಆದರೆ ಸೋಮವಾರ ಮಧ್ಯರಾತ್ರಿಯಲ್ಲಿ ಏಕಾಏಕಿ ಟ್ರ್ಯಾಕ್ಟರ್ ತಂದು ನರೇಗ ಕಾಮಗಾರಿ ನಿರ್ವಹಿಸುವುದನ್ನು ಖಂಡಿಸಿ ಅಧಿಕಾರಿಗಳು ಬರುವವರೆಗೂ ಟ್ರ್ಯಾಕ್ಟರ್ ಹೊರ ಬಿಡದೇ ಪಟ್ಟು ಹಿಡಿದು ಬೆನವಳ್ಳಿಯ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಸುಮಾರು 15 ರಿಂದ 20 ಜನ ಮಹಿಳಾ…
ಅಮ್ಮನಘಟ್ಟವನ್ನು ಪ್ರವಾಸಿ ತಾಣವನ್ನಾಗಿಸಲಾಗುವುದು : ಆರಗ ಜ್ಞಾನೇಂದ್ರ
ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುರಾಣ ಪ್ರಸಿದ್ಧ ಅಮ್ಮನಘಟ್ಟವನ್ನು ಪ್ರವಾಸಿ ತಾಣವನ್ನಾಗಿಸುವುದರೊಂದಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಅಧ್ಯತೆ ನೀಡುವುದಾಗಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದರು. ಸಮೀಪದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಎರಡನೇ ದಿನದ ವಿಶೇಷ ಪೂಜಾ ಕಾರ್ಯದಲ್ಲಿ ಭಾಗವಹಿಸಿ ದೇವಸ್ಥಾನ ಸಮಿತಿಯವರೊಂದಿಗೆ ಸಮಾಲೋಚನಾ ಸಭೆ ನಡೆಸಿ ಇದೊಂದು ಧಾರ್ಮೀಕ ಐತಿಹಾಸಿಕ ಕ್ಷೇತ್ರವಾಗಿದ್ದ ವರ್ಷಧಲ್ಲಿ ಭಾದ್ರಪದ ಮಾಸದ ಪಿತೃಪಕ್ಷದಲ್ಲಿ ಮಂಗಳವಾರ ಮತ್ತು ಶುಕ್ರವಾರದ ಜಾತ್ರಾಮಹೋತ್ಸವ ಮತ್ತು ನಾಡಿನ ಮೈಸೂರು…
ಬೈಕ್ ಅಪಘಾತ : ಗಾಯಾಳುವಿಗೆ ಸ್ಪಂದಿಸಿ ಮಾನವೀಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ
ಹುoಚದ ಕಟ್ಟೆ: ಇಲ್ಲಿನ ಸಮೀಪದ ಗುಂಡಿಬೈಲಿನ ಸಮೀಪದಲ್ಲಿ ಚಲಿಸುತ್ತಿದ್ದ ಬೈಕ್ ಗೆ ಹಸು ಅಡ್ಡ ಬಂದು ವ್ಯಕ್ತಿಯೊಬ್ಬರಿಗೆ ಗಾಯವಾದ ಘಟನೆ ನಡೆದಿತ್ತು. ಇದೇ ಸಂಧರ್ಭದಲ್ಲಿ ಅದೇ ದಾರಿಯಲ್ಲಿ ಸಾಗುತಿದ್ದ ಕರ್ನಾಟಕ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತಕ್ಷಣ ವಾಹನವನ್ನು ನಿಲ್ಲಿಸಿ ಗಾಯಾಳುವನ್ನು ಸಂತೈಸಿ ಕೂಡಲೇ ಹೆಚ್ಚಿನ ಚಿಕಿತ್ಸೆಗೆ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ತಮ್ಮ ಬೆಂಗಾವಲು ವಾಹನದಲ್ಲಿ ಕಳುಹಿಸಿಕೊಟ್ಟರು. ಸಾಗರದ ಬರದಹಳ್ಳಿಯ ಹಾಲಸ್ವಾಮಿ ಎನ್ನುವ ವ್ಯಕ್ತಿ ಅಪಘಾತವಾಗಿದ್ದು ಇವರನ್ನು ಹೆಚ್ಚಿನ ಚಿಕಿತ್ಸೆಗೆ ಸಚಿವ ಆರಗ ಜ್ಞಾನೇಂದ್ರ ರವರ…
ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ತಡರಾತ್ರಿ PFI ,SDPI ಕಾರ್ಯಕರ್ತರ ಮನೆ ಮೇಲೆ ದಾಳಿ : ಐವರು ವಶಕ್ಕೆ
ಶಿವಮೊಗ್ಗ : ಪಿಎಫ್‌ಐ ಸಂಘಟನೆ ಮುಖಂಡರು, ಕಾರ್ಯಕರ್ತರ ಮನೆಗಳ ಮೇಲೆ ದಾಳಿ ಮುಂದುವರೆದಿದೆ. ಇವತ್ತು ಬೆಳಗಿನ ಜಾವ ಶಿವಮೊಗ್ಗ ನಗರ ಮತ್ತು ಭದ್ರಾವತಿಯಲ್ಲಿ ದಾಳಿ ನಡೆದಿವೆ. ಶಿವಮೊಗ್ಗ ನಗರದ ಎರಡು ಕಡೆ ಮತ್ತು ಭದ್ರಾವತಿಯಲ್ಲಿ ಮೂರು ಕಡೆ ದಾಳಿ ನಡೆಸಲಾಗಿದೆ. ಈಗಾಗಲೇ ಐವರನ್ನು ವಶಕ್ಕೆ ಪಡೆದಿರುವ ಕುರಿತು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇನ್ನು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕಡೆ ಕಾರ್ಯಾಚರಣೆ ನಡೆಸಲಾಗಿದೆ. ಬೆಳಗಿನ ಜಾವ 3 ಗಂಟೆ ಹೊತ್ತಿಗೆ ಪೊಲೀಸರು…
ಅನಾರೋಗ್ಯ ಪೀಡಿತ ವ್ಯಕ್ತಿಗೆ ಆರ್ಥಿಕ ನೆರವು ನೀಡಿದ ಶಾಸಕ ಹರತಾಳು ಹಾಲಪ್ಪ
ಹೊಸನಗರ ತಾಲೂಕ್ ವೀರಶೈವ ಲಿಂಗಾಯಿತ ಪರಿಷತ್ ನ ಮಾಸಿಕ ಸಭೆ ಆಲಗೇರಿ ಮಂಡ್ರಿಯ ದಯಾಕರ ಎಂಬುವವರ ಮನೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೊಸನಗರ ತಾಲೂಕ್ ವೀರಶೈವ ಲಿಂಗಾಯತ ಪರಿಷತ್ ನಡೆಸುತ್ತಿರುವ ಸಮಾಜಮುಖಿ ಕಾರ್ಯವನ್ನು ಪ್ರಶಂಸಿದರು. ನಂತರ ಇತ್ತೀಚೆಗೆ ಕೃಷಿ ಕಾರ್ಯದಲ್ಲಿ ತೊಡಗಿದ್ದಾಗ ಅಕಸ್ಮಿಕವಾಗಿ ಅವಘಡ ಸಂಭವಿಸಿ ಓಡಾಡದಂತಹ ಸ್ಥಿತಿಯಲ್ಲಿರುವ ರೈತ ಉಮೇಶ್ ಎಂಬುವರಿಗೆ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ವೈಯಕ್ತಿಕವಾಗಿ…
ಕಾಂಗ್ರೆಸ್ ಪಕ್ಷಕ್ಕೆ ರಾಜು ತಲ್ಲೂರು ರಾಜೀನಾಮೆ : ಮುಂದಿನ ನಡೆ ಬಗ್ಗೆ ಗೌಪ್ಯತೆ…!!!!!
ಶಿವಮೊಗ್ಗ: ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ತಾನು ಇವತ್ತು ರಾಜಿನಾಮೆ ನೀಡುತ್ತಿರುವುದಾಗಿ ಸೊರಬ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ರಾಜು ತಲ್ಲೂರು ಘೋಷಿಸಿದ್ದಾರೆ. ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಸಂಪೂರ್ಣ ನಿಷ್ಕ್ರಿಯ ರಾಗಿದ್ದಾರೆ. ಜಿಲ್ಲೆಯಲ್ಲಿ ಅವರಿಂದ ಪಕ್ಷ ಚೇತರಿಕೆ ಕಾಣದು. ವ್ಯಕ್ತಿಪೂಜೆಯಲ್ಲಿ ಅವರು ನಿರತರಾಗಿದ್ದಾರೆ. ಪಕ್ಷಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಿಸಿಲ್ಲ ಎಂದು ಆರೋಪಿಸಿದರು. ಜಿಲ್ಲಾ ಕಾಂಗ್ರೆಸಿನಲ್ಲಿ ಒಗ್ಗಟ್ಟಿಲ್ಲ. ಈ ಬಗ್ಗೆ ರಾಜ್ಯದ ಮುಖಂಡರಿಗೆ ಮಾಹಿತಿ ನೀಡಿದ್ದೆ. ಕೆಲಸ ಮಾಡಲು ಮನಸ್ಸಿಲ್ಲದವರು ಪಕ್ಷದಲ್ಲಿದ್ದಾರೆ. ಇದರಿಂದ…
ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಸಾವು : ಜಮೀನು ಮಾಲೀಕ ವಶಕ್ಕೆ….
ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕು ಶೆಟ್ಟಿಹಳ್ಳಿ ಕಾಡಿನ ಆನೆ ವನ್ಯಜೀವಿ ವಲಯದಲ್ಲಿ ನಡೆದಿದೆ. ರವಿವಾರ ಬೆಳಗಿನ ಜಾವ ಆಹಾರ ಅರಸಿ ಬಂದ ಎರಡು ಗಂಡು ಕಾಡಾನೆಗಳು ಸಮೀಪದ ಆನೆಸರದ ಮೂಲಕ ಚನ್ನಹಳ್ಳಿಯ ಹೊಲಕ್ಕೆ ಹೋಗಿವೆ.ಅಲ್ಲಿ ವನ್ಯಜೀವಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಕಟ್ಟಿದ್ದಾರೆನ್ನಲಾದ ಐಬಿಕ್ಸ್ ವಿದ್ಯುತ್ ತಂತಿಯನ್ನು ಆನೆಗಳು ತುಳಿದು ವಿದ್ಯುತ್ ಪ್ರವಹಿಸಿದೆ ಎಂದು ತಿಳಿದು ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಜಮೀನು ಮಾಲಕ ಚಂದ್ರನಾಯ್ಕ್…
ಹುಂಚಾ ಕೃಷಿ ಪತ್ತಿನ ಸಹಕಾರ ಸಂಘ 7 ಲಕ್ಷ ರೂ ನಿವ್ವಳ ಲಾಭ | ಗೊಂದಲಗಳ ನಡುವೆ ಸುಖಾಂತ್ಯಗೊಂಡ ವಾರ್ಷಿಕ ಸರ್ವ ಸದಸ್ಯರ ಸಭೆ
ರಿಪ್ಪನ್‌ಪೇಟೆ;- ಹುಂಚಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2021-22 ನೇ ಸಾಲಿನಲ್ಲಿ 4.22 ಕೋಟಿ ರೂ ವ್ಯವಹಾರ ನಡೆಸುವುದರೊಂದಿಗೆ 7.72.109 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಕೃಷಿ ಸಹಕಾರ ಬ್ಯಾಂಕ್ ಅಧ್ಯಕ್ಷ ಹೆಚ್.ಎಸ್.ಯದುಕುಮಾರ್ ಹೊಂಡಲಗದ್ದೆ ತಿಳಿಸಿ ಮುಂದಿನ ದಿನಗಳಲ್ಲಿ ಸಂಘವನ್ನು ಉತ್ತುಂಗಕ್ಕೆ ತರುವ ಬಗ್ಗೆ ಹಲವು ಅಶೋತ್ತರಗಳನ್ನು ಇಟ್ಟುಕೊಂಡಿದ್ದು ಸಂಘದ ಸದಸ್ಯರು ಪ್ರೋತ್ಸಾಹಿಸಿದಲ್ಲಿ ಸಂಘವನ್ನು ಲಾಭದತ್ತ ತರುವ ಗುರಿ ನಮ್ಮದಾಗಿದೆ ಎಂದರು. ರಿಪ್ಪನ್‌ಪೇಟೆ ಸಮೀಪದ ಹುಂಚಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ…
ವಿಶೇಷ ಪ್ರಕಟಣೆ : 108 ಆಂಬ್ಯುಲೆನ್ಸ್ ಸಂಪರ್ಕಕ್ಕೆ ಪರ್ಯಾಯ ದೂರವಾಣಿ ಸಂಖ್ಯೆ ಕಲ್ಪಿಸಿದ ಆರೋಗ್ಯ ಇಲಾಖೆ
ತಾಂತ್ರಿಕ ದೋಷದಿಂದಾಗಿ ರಾಜ್ಯಾದ್ಯಂತ ಸೆಪ್ಟೆಂಬರ್ 24ರ ರಾತ್ರಿಯಿಂದ 108 ಆಯಂಬುಲೆನ್ಸ್ ಸೇವೆ ಸ್ಥಗಿತಗೊಂಡಿದೆ. ಜಿವಿಕೆ ಏಜೆನ್ಸಿ ನಡೆಸುತ್ತಿರುವ 108 ಸಹಾಯವಾಣಿಗೆ, ಆರೋಗ್ಯ ಎಮರ್ಜನ್ಸಿ ಎಂದು ಯಾರೇ ಕರೆಮಾಡಿದರೂ ಅದನ್ನು ಸ್ವೀಕರಿಸುತ್ತಿಲ್ಲ.ಹೀಗಾಗಿ ಅನೇಕ ರೋಗಿಗಳು ಪರದಾಡುವಂತಾಗಿದೆ. ಆಂಬುಲೆನ್ಸ್ಗಳು ಸಿಗದೆ ಕಷ್ಟಪಡುವಂತಾಗಿದೆ. ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿರುವ ಆರೋಗ್ಯ ಇಲಾಖೆ ಆಯಾ ಆಯಾ ತಾಲೂಕುಗಳಿಗೆ ಪರ್ಯಾಯ ದೂರವಾಣಿ ಸಂಖ್ಯೆಯನ್ನು ಕಲ್ಪಿಸಿದೆ. Due to non functional of 108 call centre,District has made an alternative arrangements for…
ರಾಜ್ಯಾದ್ಯಂತ ಸೆ.24 ರ ರಾತ್ರಿಯಿಂದ 108 ಆಂಬ್ಯುಲೆನ್ಸ್ ಸೇವೆ ಸ್ಥಗಿತ : 108 ನಂಬರ್ ಗೆ ಕರೆ ಮಾಡಿದರೆ ಇಲ್ಲಾ ರೆಸ್ಪಾನ್ಸ್
ರಾಜ್ಯಾದ್ಯಂತ ಸೆಪ್ಟೆಂಬರ್ 24ರ ರಾತ್ರಿಯಿಂದ 108 ಆಂಬುಲೆನ್ಸ್ ಸೇವೆ ಸ್ಥಗಿತಗೊಂಡಿದೆ. ಜಿವಿಕೆ ಏಜೆನ್ಸಿ ನಡೆಸುತ್ತಿರುವ 108 ಸಹಾಯವಾಣಿಗೆ, ಆರೋಗ್ಯ ಎಮರ್ಜನ್ಸಿ ಎಂದು ಯಾರೇ ಕರೆಮಾಡಿದರೂ ಅದನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ಅನೇಕ ರೋಗಿಗಳು ಪರದಾಡುವಂತಾಗಿದೆ. ಆಂಬುಲೆನ್ಸ್ಗಳು ಸಿಗದೆ ಕಷ್ಟಪಡುವಂತಾಗಿದೆ. ಹೀಗೆ ಆಂಬುಲೆನ್ಸ್ ಸೇವೆ ಸ್ಥಗಿತಗೊಳ್ಳಲು ತಾಂತ್ರಿಕ ದೋಷವೇ ಕಾರಣ ಎಂದು ಹೇಳಲಾಗಿದೆ. 108 ತುರ್ತು ಸೇವೆಗೆ ದಿನವೊಂದಕ್ಕೆ ಏನಿಲ್ಲವೆಂದರೂ ರಾಜ್ಯದೆಲ್ಲೆಡೆಯಿಂದ 20 ಸಾವಿರ ಕರೆಗಳು ಬರುತ್ತದೆ. ಆದರೆ ನಿನ್ನೆ ರಾತ್ರಿಯಿಂದ 108ಕ್ಕೆ ಕರೆ ಮಾಡಿದರೆ ಫೋನ್ ಸಂಪರ್ಕ ಸಿಗುತ್ತಿಲ್ಲ. …