ಜಿಲ್ಲಾ ಸುದ್ದಿ:
ಕಸ್ತೂರಿ ಕನ್ನಡ ಸಂಘದ ಆರೋಪ ರಾಜಕೀಯ ಪ್ರೇರಿತ – ನಿರೂಪ್ ಕುಮಾರ್|Ripponpet
ರಿಪ್ಪನ್‌ಪೇಟೆ : ಪಟ್ಟಣದ ಕಸ್ತೂರಿ ಕನ್ನಡ ಸಂಘದವರು ಕಳೆದ 28 ವರ್ಷಗಳಿಂದ ನಾಡು- ನುಡಿ ಜಲಕ್ಕೆ ಶ್ರಮಿಸಿದ ಕಲಾ ಕೌಸ್ತುಭ ಕನ್ನಡ ಸಂಘದ ಮೇಲೆ ಆರೋಪಿಸಿರುವುದು ರಾಜಕೀಯ ಪ್ರೇರಿತ ಎಂದು ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ನಿರೂಪ್ ಕುಮಾರ್ ಹೇಳಿದರು. ಇಂದು ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಸ್ತೂರಿ ಕನ್ನಡ ಸಂಘದವರು ಇಂದು ಪತ್ರೀಕಾ ಗೋಷ್ಟಿ ನಡೆಸಿ ಕಲಾ ಕೌಸ್ತುಭ ಕನ್ನಡ ಸಂಘವು ಅನ್ಯ ಭಾಷೆಗಳ ವೈಭವಿಕರಿಸುತ್ತಿದೆ ಎಂದು ಹೇಳಿರುವುದು…
ರಿಪ್ಪನ್‌ಪೇಟೆ : ಮದನ್ ಗೋಪಾಲ್ ವರದಿ ಯಥಾವತ್ ಅನುಷ್ಟಾನಕ್ಕೆ ಮಧು ಬಂಗಾರಪ್ಪ ಆಗ್ರಹ|Congress
ರಿಪ್ಪನ್‌ಪೇಟೆ;-ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ಅವಧಿಯಲ್ಲಿ ಬಗರ್‌ಹುಕುಂ ರೈತರ ಮತ್ತು ಶರಾವತಿ ಮುಳಗಡೆ ಸಂತ್ರಸ್ಥ ರೈತರಿಗೆ ಭೂ ಒಡೆತನ ನೀಡುವ ಮಧನ್‌ಗೋಪಾಲ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ ಜಾರಿಗೊಳಿಸಬೇಕು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧುಬಂಗಾರಪ್ಪ ಅಗ್ರಹಿಸಿದರು. ರಿಪ್ಪನ್‌ಪೇಟೆಯ ಜ್ಯೋತಿ ಮಾಂಗಲ್ಯ ಮಂದಿರದಲ್ಲಿ ಅಯೋಜಿಸಲಾದ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಹಕ್ಕು ಪತ್ರ ಹಾಗೂ ಬಗರ್‌ಹುಕುಂ ರೈತರಿಗೆ ಹಕ್ಕು ಪತ್ರ ಸೇರಿದಂತೆ ಮಲೆನಾಡಿ ರೈತರ ಜನಾಕ್ರೋಶ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ…
ನವೆಂಬರ್ ತಿಂಗಳಿನಲ್ಲಿ ಅನ್ಯಭಾಷೆಗಳ ವೈಭವೀಕರಣ ಸಲ್ಲ – ಮೆಣಸೆ ಆನಂದ್|Ripponpet
ನವೆಂಬರ್ ತಿಂಗಳಲ್ಲಿ ಅನ್ಯ ಭಾಷೆಗಳ ವೈಭವೀಕರಣ ಸಲ್ಲ ರಿಪ್ಪನ್‌ಪೇಟೆ : ಕನ್ನಡ ಕಲರವದ ತಿಂಗಳಾದ ನವೆಂಬರ್ ನಲ್ಲಿ ಕನ್ನಡದ ಕಂಪು ರಾಜ್ಯಾದ್ಯಂತ ಮೇಳೈಸುತ್ತಿರುತ್ತದೆ.ಇಂತಹ ಸಂಧರ್ಭದಲ್ಲಿ ಕನ್ನಡ ಪರ ಸಂಘಟನೆಗಳು ಅನ್ಯ ಭಾಷೆಗಳ ವೈಭವಿಕರಿಸಿದರೆ ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಬಂದಂತಾಗುತ್ತದೆ ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಆನಂದ್ ಮೆಣಸೆ ಹೇಳಿದರು. ಇಂದು ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನೆಲ ಜಲ ಉಳಿವಿಗಾಗಿ ಹೋರಾಟ ಮಾಡುವುದು ಎಲ್ಲಾ ಕನ್ನಡ ಸಂಘಗಳ ಉದ್ದೇಶ. ಕಲಾ ಕೌಸ್ತುಭ…
ರಿಪ್ಪನ್‌ಪೇಟೆಯಲ್ಲಿ ನ.25,26 ರಂದು ಕಲಾಕೌಸ್ತುಭ ಕನ್ನಡ ಸಂಘದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ-ನ.27ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಭರದ ಸಿದ್ಧತೆ
ರಿಪ್ಪನ್‌ಪೇಟೆ : ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದ 29ನೇ ವರ್ಷದ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನವೆಂಬರ್ 25 ಮತ್ತು 26 ರಂದು ಭೂಫಾಳಂ ಸಭಾ ಭವನದಲ್ಲಿ ಹಾಗೂ ನವೆಂಬರ್ 27 ರಂದು ಸಂಜೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್ ಚಿನ್ನೇಗೌಡ ಕ್ರೀಡಾಂಗಣದಲ್ಲಿ “ಆಳ್ವಾಸ್ ಸಾಂಸ್ಕೃತಿಕ ವೈಭವ’’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಲಾಕೌಸ್ತುಭ ಕನ್ನಡ ಸಂಘದ ಕಾರ್ಯದರ್ಶಿ ರವಿಚಂದ್ರ ಮತ್ತು ಆಳ್ವಾಸ್ ನುಡಿಸಿರಿ ವಿರಾಸತ್ ಸಂಚಾಲಕ ಎನ್.ಸತೀಶ್ ಜಂಟಿ ಪತ್ರೀಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ನವೆಂಬರ್ 25…
ಅತ್ತೆಯ ಸಾವಿನ ಸುದ್ದಿ ತಿಳಿದು ಅಳಿಯ ಹೃದಯಾಘಾತದಿಂದ ನಿಧನ|sagara
ಹೃದಯಾಘಾತದಿಂದ ಸೋದರತ್ತೆಯ ಮೃತಪಟ್ಟ ಸುದ್ದಿ ತಿಳಿದು ಅಳಿಯ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ನಡೆದಿದೆ. ಲಕ್ಷಮ್ಮ(58) ಮತ್ತು ಅವರ ಅಳಿಯ ಗುಲ್ಫತ್ ಸಿಂಗ್(45) ಮೃತಪಟ್ಟರಾಗಿದ್ದಾರೆ. ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೊರಟಿದ್ದ ಲಕ್ಷಮ್ಮರನ್ನು ಗುಲ್ಫತ್ ಸಿಂಗ್ ಲಿಂಗನಮಕ್ಕಿಯಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಬಸ್ಸು ಆನಂದಪುರ ಸಮೀಪ ತಲುಪಿದಾಗ ಲಕ್ಷಮ್ಮರಿಗೆ ಹೃದಯಾಘಾತಕ್ಕೀಡಾಗಿದ್ದು, ಅವರು ಅಲ್ಲೇ ಮೃತಪಟ್ಟರೆನ್ನಲಾಗಿದೆ. ಈ ವಿಚಾರವನ್ನು ಬಸ್ ನಿರ್ವಾಹಕ ಲಕ್ಷಮ್ಮ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾನೆ. ಈ ಸುದ್ದಿಯನ್ನು ಸಂಬಂಧಿಕರು ಕರೆ ಮಾಡಿ…
ಮೆಗ್ಗಾನ್ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ – ಓರ್ವ ವಶಕ್ಕೆ|Assault on doctor
ಮೆಗ್ಗಾನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ರೋಗಿಯ ಕಡೆಯವರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಹಿನ್ನಲೆಯಲ್ಲಿ ಹಲ್ಲೆ ನಡೆಸಿದ ವ್ಯಕ್ತಿ ಮಮ್ತಕೀಮ್ ಎಂಬಾತನನ್ನು ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲವು ದಿನಗಳ ಹಿಂದೆ ಆಯನೂರಿನ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಬ್ದುಲ್ ರಶೀದ್ (65) ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ನಂತರ ಅವರನ್ನು ಮತ್ತೆ ಮೆಗ್ಗಾನ್ ಗೆ ದಾಖಲಿಸಿದ್ದರು ಆದರೆ ಭಾನುವಾರ ರಾತ್ರಿ ಅಬ್ದುಲ್ ರಶೀದ್…
ನಿದ್ದೆ ಬರುತ್ತಿಲ್ಲಾ ಎಂದು ಪೊಲೀಸ್ ಇಲಾಖೆಯ 112 ಗೆ ಕರೆ ಮಾಡಿದ ಭೂಪ – ಒಂದು ಗೊರಕೆಯ ಸ್ವಾರಸ್ಯಕರ ಕಥೆ!!! ಇಲ್ಲಿ ನೋಡಿ….
ತೀರ್ಥಹಳ್ಳಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಆಪತ್ಕಾಲದಲ್ಲಿ ಡಯಲ್ 112 ಹಾಗೂ 100 ಸೇವೆ ಒದಗಿಸಿದೆ.ಆದರೆ ಇಲ್ಲೊಬ್ಬ ಭೂಪ ರಾತ್ರಿ ನಿದ್ದೆ ಬರ್ತಿಲ್ಲಾ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ಹೌದು, ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಮಾಳೂರು ಪಟ್ಟಣ ಈ ವಿಚಿತ್ರ ಪ್ರಕರಣಕ್ಕೆ ಸಾಕ್ಷಿಯಾಗಿದೆ. ‘ನಿದ್ದೆ ಬರ್ತಿಲ್ಲಾ ಸಾರ್..’ ಎಂದು ಮಧ್ಯರಾತ್ರಿ ತುರ್ತು ಸೇವೆ 112 ನಂಬರ್‌ಗೆ ಇಂಥದ್ದೊಂದು ಕರೆ ಬಂದಾಗ ಪೊಲೀಸರು ತಲೆ ಚಚ್ಚಿಕೊಳ್ಳುವುದೊಂದೇ ಬಾಕಿ….
ಕನ್ನಡ ಭಾಷೆಗೆ ಮಡಿವಂತಿಕೆಯ ಬೇಲಿ ಬೇಡ – ಸರ್ಫ಼್ರಾಜ್ ಚಂದ್ರಗುತ್ತಿ|Ripponpet
ರಿಪ್ಪನ್‌ಪೇಟೆ : ಇಡೀ ಜಗತ್ತಿನಲ್ಲಿ ಕನ್ನಡ ತೆರೆದುಕೊಳ್ಳಬೇಕಾದರೆ ಕನ್ನಡಕ್ಕೆ ಮಡಿವಂತಿಕೆಯ ಬೇಲಿ ಬೇಡ ಎಂದು ಸಾಹಿತಿಗಳು ಹಾಗೂ ಉಪನ್ಯಾಸಕರಾದ ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು. ಪಟ್ಟಣದಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ರಿಪ್ಪನ್ ಪೇಟೆ ರೋಟರಿ ಕ್ಲಬ್ ಇವರ ಸಹಯೋಗದಲ್ಲಿ ಶನಿವಾರ ಸಂಜೆ ನಡೆದ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಪ್ರಸ್ತುತ ಆಧುನಿಕ ಕಾಲದಲ್ಲಿ ಸಂಶೋಧನೆ, ವೈದ್ಯಕೀಯ ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಸರಳವಾಗಿ ಬಳಸುವಂತಾಗಬೇಕು. ಹೊಸ ಕಾಲಕ್ಕೆ ಕನ್ನಡ ಕಟ್ಟುವ ಕೆಲಸವಾಗಬೇಕು,ಕನ್ನಡ ಭಾಷೆಯಲ್ಲಿ…
ವಿಸ್ತಾರ ನ್ಯೂಸ್ ವಿಸ್ತಾರವಾಗಿ ಬೆಳೆಯಲಿ : ಹರತಾಳು ಹಾಲಪ್ಪ|Vistara
ರಿಪ್ಪನ್‌ಪೇಟೆ : ಸರ್ಕಾರದ ನಾಲ್ಕು ಅಂಗಗಳಲ್ಲಿ ನಾಲ್ಕನೆಯ ಅಂಗವಾದ ಮಾದ್ಯಮ ರಂಗಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಈಗಿನ ಕಾಲಘಟ್ಟದಲ್ಲಿ ಮಾದ್ಯಮಗಳು ನಿಖರ ಸುದ್ದಿ ಮತ್ತು ಜ್ಞಾನವನ್ನು ಪ್ರಸರಿಸುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ.ಆ ನಿಟ್ಟಿನಲ್ಲಿ ವಿಸ್ತಾರ ಚಾನಲ್ ಗಮನ ಹರಿಸಿ ಒಳ್ಳೆಯ ಸುದ್ದಿ ಮಾದ್ಯಮವಾಗಿ ಹೊರಬರಲಿ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು. ಪಟ್ಟಣದ ಆಶ್ರೀತಾ ಸಭಾಭವನದಲ್ಲಿ ವಿಸ್ತಾರ ವಾಹಿನಿ ಕನ್ನಡ ಸಂಭ್ರಮ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಬದಲಾದ ದಿನಮಾನಗಳಲ್ಲಿ ಎಲ್ಲವೂ ಕಲುಷಿತಗೊಂಡಿದೆ ಎನ್ನುವ…
ಅಮ್ಮನ ಘಟ್ಟ ಜೇನುಕಲ್ಲಮ್ಮ ದೇವಸ್ಥಾನವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿಪಡಿಸಲಾಗುವುದು : ಹಾಲಪ್ಪ ಹೆಚ್ ಹರತಾಳು|Halappa
ರಿಪ್ಪನ್‌ಪೇಟೆ : ಪುರಾಣ ಪ್ರಸಿದ್ಧವಾದ ಕೋಡೂರಿನ ಜೇನುಕಲ್ಲಮ್ಮ ಘಟ್ಟವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಅಮ್ಮನಘಟ್ಟದ ಜೇನುಕಲ್ಲಮ್ಮ ಸಮುದಾಯ ಭವನದಲ್ಲಿ ಶನಿವಾರ ಮುಜರಾಯಿ ಮತ್ತು ಅಭಿವೃದ್ಧಿ ಸಮಿತಿಗಳ ಸಮನ್ವಯ ಸಭೆಯಲ್ಲಿ ಮಾತನಾಡಿ ದೇವಿಯ ದೇವಸ್ಥಾನವನ್ನು ಅಭಿವೃದ್ಧಿ ಪಡಿಸುವಲ್ಲಿ ಈ ಹಿಂದಿನ ಸಮಿತಿ ಕಾರ್ಯ ಪ್ರೌವೃತ್ತವಾಗಿತ್ತು. ಈಗಿನ ನೂತನ ಸಮಿತಿಯು ಅಭಿವೃದ್ಧಿಯ ಮುಂದಾಲೋಚನೆಯನ್ನು ಹೊಂದಿದ್ದು, ಯಾವುದೇ ಭಿನ್ನಾಭಿಪ್ರಾಯಗಳಿಲ್ಲದಂತೆ ಒಂದುಗೂಡಿ ಅಭಿವೃದ್ಧಿ ಕೆಲಸ ನಿರ್ವಹಿಸಲು ಸಲಹೆ ನೀಡಿದ್ದೇನೆ. ಸರ್ಕಾರದ…