w
Headlines
Home » ಹೃದಯಘಾತದಿಂದ 28ರ ಹರೆಯದ ಗೃಹಿಣಿ ಅಪಮೃತ್ಯು|heart attack

ಹೃದಯಘಾತದಿಂದ 28ರ ಹರೆಯದ ಗೃಹಿಣಿ ಅಪಮೃತ್ಯು|heart attack

ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಮರಣ ಹೊಂದಿದ ನಂತರದಲ್ಲಿ ರಾಜ್ಯದಲ್ಲಿ ಅತಿ ಕಿರಿ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನೆಲ್ಲುಂಡೆಯ ಗ್ರಾಮದ ಗೃಹಿಣಿ ಸುಪ್ರೀತಾ(28) ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.




ನೆಲ್ಲುಂಡೆಯ ರವೀಂದ್ರ ಮತ್ತು ಸುಧಾ ದಂಪತಿಗಳ ಪುತ್ರಿ 28ರ ಹರೆಯದ ಸುಪ್ರೀತಾ ಅಲ್ಪ ಕಾಲದ ಅನಾರೋಗ್ಯದಲ್ಲಿದ್ದು ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.

ಸುಪ್ರೀತಾರವರು ಕಳೆದ ನಾಲ್ಕು ವರ್ಷದ ಹಿಂದೆ ಕೊಡೂರಿನ ಆದರ್ಶ ಎಂಬವರೊಂದಿಗೆ ವಿವಾಹವಾಗಿದ್ದರು.




ಪಟ್ಟಣದ ಶಾರದಾ ಕೋ ಆಪರೇಟಿವ್ ಬ್ಯಾಂಕ್ ಶಾಖಾಧಿಕಾರಿ ಶಿವಶಂಕರ ರವರು ಸುಪ್ರೀತಾರ ಅವರ ಅಕಾಲ ಮರಣಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.