ರಿಪ್ಪನ್‌ಪೇಟೆ ಸಮೀಪದ ಗಾಳಿಬೈಲು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ – ಚಿರತೆ ಹಿಡಿಯಲು ಅರಣ್ಯ ಅಧಿಕಾರಿಗಳಿಂದ ಬೋನ್ ಫಿಕ್ಸ್|leopard

ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಬೈಲು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಚಿರತೆ ಪ್ರತಿಕ್ಷವಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದರು.




ಚಿರತೆ ಪ್ರತ್ಯಕ್ಷ ಸುದ್ದಿ ತಿಳಿದ ಅರಸಾಳು ವಲಯ ಅರಣ್ಯ ಅಧಿಕಾರಿಗಳು ಇಂದು ಸ್ಥಳ ಪರಿಶೀಲನೆ ನಡೆಸಿ ಚಿರತೆ ಹಿಡಿಯಲು ಗಾಳಿಬೈಲಿನಲ್ಲಿ ಬೋನ್ ಫಿಕ್ಸ್ ಮಾಡಿದ್ದಾರೆ.




 ರಿಪ್ಪನ್ ಪೇಟೆ ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿವೆ : 

ಕಳೆದ ನಾಲ್ಕು ದಿನಗಳ ಹಿಂದೆ ರಿಪ್ಪನ್ ಪೇಟೆ- ತೀರ್ಥಹಳ್ಳಿ ರಾಜಹೆದ್ದಾರಿ ಸಮೀಪದ ಮಳವಳ್ಳಿ ಗ್ರಾಮದ  ಸಂಪರ್ಕ ರಸ್ತೆಯ ಅರಣ್ಯದಲ್ಲಿ ಚಿರತೆ ಒಂದು ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಈಗ ಮತ್ತೆ ಕೆಂಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಬೈಲ್ ನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ.

 ಈ ಕಾರ್ಯಾಚರಣೆಯಲ್ಲಿ ಅರಣ್ಯ ಅಧಿಕಾರಿಗಳಾದ ಸಿ ಮಹೇಶ್ ಉಪ ವಲಯ ಅರಣ್ಯಧಿಕಾರಿ ಬಸವರಾಜ್, ಬೀಟ್ ಫಾರೆಸ್ಟರ್ಅನಿಲ್ ರಾಠೋಡ್, ಬೀಟ್ ಫಾರೆಸ್ಟರ್ ಕಾಮನಾಯ್ಕ್
ಸಿಬ್ಬಂದಿಗಳು ಹಾಲಪ್ಪ ಯೋಗೇಂದ್ರ ಸುಧಾಕರ್ ಇನ್ನಿತರರಿದ್ದರು.



Leave a Reply

Your email address will not be published. Required fields are marked *