ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ಮಾತನಾಡುವ ನೈತಿಕತೆ ಬೇಳೂರು ಗೋಪಾಲಕೃಷ್ಣ ರಿಗೆ ಇಲ್ಲಾ – ಬಿಜೆಪಿ|Ripponpet

ರಿಪ್ಪನ್‌ಪೇಟೆ : ಎರಡು ಬಾರಿ ಶಾಸಕರಾಗಿದ್ದಾಗ ಶರಾವತಿ ಮುಳಗಡೆ ಸಂತ್ರಸ್ಥರ ಬಗ್ಗೆ ತುಟಿ ಬಿಚ್ಚದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಗೆ ಈಗ ಮುಳುಗಡೆ ಸಂತ್ರಸ್ಥರು ಧರ್ಮಸ್ಥಳಕ್ಕೆ ಹೋಗಿರುವುದನ್ನು ಟೀಕಿಸುವುದಕ್ಕೆ ಯಾವುದೇ ನೈತಿಕತೆ ಇಲ್ಲಾ ಎಂದು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ. ಮಂಜುನಾಥ ಆರೋಪಿಸಿದರು.




ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶರಾವತಿ ಸಂತ್ರಸ್ಥ ಮುಖಂಡರ ಜೊತೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಸಂತ್ರಸ್ಥರ ಹಕ್ಕಿಗಾಗಿ ಈಗಾಗಲೇ ಲೋಕಸಭೆಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರರವರು ಕೇಂದ್ರ ಸರಕಾರದ ಗಮನಸೆಳೆದಿದ್ದಾರೆ. ಶಾಸಕರಾದ ಹರತಾಳು ಹಾಲಪ್ಪ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರರವರು ರಾಜ್ಯ ಸರಕಾರದ ಅಧಿವೇಶನದಲ್ಲಿ ಮಾತನಾಡಿ ಪರಿಹಾರ ಕಾರ್ಯ ಕಂಡುಕೊಳ್ಳಲಿದ್ದಾರೆ ಎಂದರು.


ಶರಾವತಿ ಮುಳುಗಡೆ ಸಂತ್ರಸ್ಥರ ಮುಖಂಡ ಬಿಳಿಯನಾಯ್ಕ್ ಮಾತನಾಡಿ ಕಷ್ಟದ ಸಮಯದಲ್ಲಿ ಧರ್ಮಸ್ಥಳದ ಮಂಜುನಾಥೇಶ್ವರ ಸನ್ನಿಧಿಗೆ ಹೋಗಿ ಬರುವುದು ಮಲೆನಾಡ ಜನರ ವಾಡಿಕೆ.ಅದರಂತೆಯೇ ಬಹುಕಾಲದ ಸಮಸ್ಯೆಯಿಂದ ಬಳಲುತ್ತಿರುವ ನಾವುಗಳು  ಶಾಸಕರಾದ ಹರತಾಳು ಹಾಲಪ್ಪನವರೊಂದಿಗೆ ಇತ್ತೀಚೆಗೆ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದೇವೆ ಇದನ್ನೇ ದೊಡ್ಡ ವಿಷಯವೆಂದು ಮಾಜಿ ಶಾಸಕರು ಮುಳುಗಡೆ ಸಂತ್ರಸ್ಥರ ಬಗ್ಗೆ ಹಗುರವಾಗಿ ಟೀಕಿಸುತ್ತಿದ್ದಾರೆ. ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ತೀರ್ಥಹಳ್ಳಿಗೆ ಬಂದಾಗ ಎಲ್ಲಾ ಮುಳಗಡೆ ಸಂತ್ರಸ್ಥ ರೈತರು ಸಮಸ್ಯೆ ಪರಿಹರಿಸುವಂತೆ ಹಕ್ಕೊತ್ತಾಯ ಮಂಡಿಸಿದ್ದೆವು. ಇಷ್ಟೆಲ್ಲಾ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಮಾಜಿ ಶಾಸಕರು ಟೀಕಿಸುತ್ತಿರುವುದು ಮುಳುಗಡೆ ಸಂತ್ರಸ್ತರಿಗೆ ಬೇಸರ ತರಿಸುತ್ತದೆ ಎಂದರು.




ಬಿಜೆಪಿ ಮುಖಂಡ ಆನಂದ್ ಮೆಣಸೆ ಮಾತನಾಡಿ ಮುಳುಗಡೆ ಸಂತ್ರಸ್ಥರ ಬಗ್ಗೆ ಇಷ್ಟು ಕಾಲ ಕಾಳಜಿ ಇಲ್ಲದೆ ಈಗ ಬೇಳೂರುರವರಿಗೆ ಏಕಾ ಏಕಿ ಪ್ರಜ್ಞೆ ಬಂದಂತಿದೆ. ಮುಳಗಡೆ ಸಂತ್ರಸ್ಥರ ಸಮಸ್ಯೆಯ ಗಂಧಗಾಳಿ ಗೊತ್ತಿಲ್ಲದ ಗೋಪಾಲಕೃಷ್ಣ ಪ್ರಚಾರಕ್ಕಾಗಿ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಇವರಿಂದ ಕ್ಷೇತ್ರಕ್ಕಾಗಲೀ, ಜನರಿಗಾಗಲೀ ಯಾವ ಪ್ರಯೋಜನವೂ ಇಲ್ಲ. ಹುರುಳಿಲ್ಲದ ಆರೋಪವನ್ನು ಬಿಟ್ಟು ಮಾಡುತ್ತಿರುವ ಒಳ್ಳೆ ಕಾರ್ಯಕ್ಕೆ ಕೈಜೋಡಿಸಿ ಇಲ್ಲವಾದರೆ ನಿಮ್ಮನ್ನು ಜನ ಕ್ಷಮಿಸಲಾರರು ಎಂದು ಆಕ್ರೋಶವ್ಯಕ್ತಪಡಿಸಿದರು.





ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಆರ್ ಟಿ ಗೋಪಾಲ್, ರಮೇಶ್ ಹೆಬ್ಬುರುಳಿ ,ಹೆಡ್ತಿ ಷಣ್ಮುಖಪ್ಪ, ಸಂಗಣ್ಣಕೆರೆ ಹಿರಿಯಣ್ಣ, ಚಂದ್ರಕುಮಾರ, ಹೂವಪ್ಪ, ಮಹೇಶ ಇನ್ನಿತರರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *